ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎತ್ತ ಸಾಗುತ್ತಿದೆ ನವ ಸಮಾಜ
ಸಮಾನತೆ ಗಾಳಿಗೆ ತೂರಿ
ನಾಗರಿಕತೆಯ ಕುರುಹುಗಳ ಅರಿಯದೆ
ಮಾನವೀಯತೆಯ ಬೆತ್ತಲಾಗಿಸಿದೆ .

ಅರೆಬೆತ್ತಲೆ ಮೈ ಮನ
ಮನಸಾ ಇಚ್ಛೆಯ ಮೆರವಣಿಗೆ
ಸಾಮರಸ್ಯ ಕುರುಡಾಗಿಸಿ
ವಿಕೃತ ಮನಸ್ಸಿನ ಅನಾವರಣ.

ನಶೆಯ ಗುಂಗಲಿ
ಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದು
ಜವಾಬ್ದಾರಿ ಮರೆತು
ಕರುಳ ಕುಡಿಗಳು ಹೊಂಚು ಹಾಕುತ್ತಿವೆ.

ಬಿಕೋ ಎನ್ನುತ್ತಿವೆ ಹಳ್ಳಿ ಹಾಡು
ಹೂಬಳ್ಳಿ ಗಳು ಮುಳ್ಳು ಮೊನಚಾಗಿ
ಹಿರಿಯ ಜೀವಗಳು ಹಪಹಪಿಸುತ್ತಿವೆ
ಜೀವ ಕೊಂಡಿ ಕಳಚುತಿದೆ.

ಎಲ್ಲೆಂದರಲ್ಲಿ ಕಾರ್ಖಾನೆ
ಕೆಲಸದ  ಆಸೆಗೆ ಭೂಮಿ ಮಾರಿಕೊಂಡು
ಉಸಿರಾಡಲು ಕಲುಷಿತ ಗಾಳಿ
ಹೊಟ್ಟೆ ಹೊರೆಯಲು ಜೀತದಾಳು.

ರಕ್ತ ಸಂಬಂಧಕೆ  ಆಗುಂತಕರಾಗಿ
ತಮ್ಮವರನೆ ಹೆಣವಾಗಿಸಿ
ಮನೆಯಲ್ಲಿ ಹೂಳುವರೆಲ್ಲ
ವಿಕೃತ ಮನಸುಗಳು.

ಉಡ್ವೇಗಕೆ ತಲೆದೂಗಿ
ಹಸುಳೆಗಳು ನರಳಾಟ
ಕಾಮಂಧತೆಯ ಅನಾವರಣ
ಅಕ್ರಮ ದಂದೆಗಳ ತಾಣ.

ಮದ್ದು ಗುಂಡುಗಳ ಹಾವಳಿ
ಕೆಂಡ ಮಂಡಲ ವಾಗಿಸಿದೆ
ನೆತ್ತರು ಹರಿಸಿ
ಒತ್ತರಿಸಿದ ನೋವು ಕೇಳುವವರಾರು.

ಪ್ರಾರ್ಥನೆಯಲು ಹಿಂಸಾಚಾರ
ಬೋಧನೆಯಲು ಭಿನ್ನಾಚಾರ
ಉಂಡ ಮನೆಗೆ ಕನ್ನ ಹಾಕುವ ವಿಚಾರ

ತಿಳಿಯುತ್ತಿಲ್ಲ ನವ ಸಮಾಜಕೆ
ಹರುಕ ಬಟ್ಟೆ ತೊಟ್ಟು
ಮೈ ತೋರಿಸುತ
ಬದ್ಧತೆ ಇಲ್ಲದ ಪರಿಪಾಠ
ತರಾವರಿ ಮೋಹಕೆ ಬಲಿಯಾಗುತಿದೆ.


About The Author

Leave a Reply

You cannot copy content of this page

Scroll to Top