ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” ವಸಂತ ಕಾಲದಲಿ ಹಸಿರಾದ ಕಾಡಿನಲಿ,ದಿನವೂ ಹಾಡುತಿದ್ದ ಕೋಗಿಲೆಯೊಂದು.ಇಂದು  ಮೌನವಾಗಿದೆ,ಸ್ವರ ಬಿಟ್ಟು ಮುಗಿಲುಸೇರಿತು ಮೆಲ್ಲಗೆ  ಯಾರ ದೃಷ್ಟಿ ಬಿತ್ತೋ ಚಂದದ ಧ್ವನಿಗೆ?ಯಾವ ಬೇಸರವಾಯಿತು ಮುಗ್ಧ ಮನಕೆ?ಹಾಡು ನಿಲ್ಲಿಸಿದ ಕೋಗಿಲೆಯ ಕಂಡು,ಕರೆದ ಕಾಗೆಯೂ ಮೂಕ ಪ್ರೇಕ್ಷಕ ದುಃಖದ ಕಡಲು . ಚಿಲಿಪಿಲಿ ಹಕ್ಕಿಗಳ ಕಲರವವೂ ನಿಂತಿದೆ,ತಂಗಾಳಿ ಬೀಸದೆಮಸಣ ಮೌನ.ಮರಗಿಡ ಕಾನನ ಕಣ್ಣೀರು ಇಡುತಿವೆ,ನಿನ್ನ ಗಾನ ಸುಧೆಗೆ  ಮತ್ತೆ ಕಾಯುತಿವೆ. ಕೋಗಿಲೆಯೇ ಏಕೆ  ಮೌನ?ಶಿಖರ ಬಾಗಿವುದು  ನಿನ್ನ ಸಾಧನ.ನಿನ್ನ  ಜಂಟಿ ಸ್ವರದ  ಕೂಗು,ಹಸಿರಾಗಿಸಲಿ ಒಣಗಿದ ತೋಟದಲಿ ಹೋಗಿ ಬಾ ತಾಯಿನಿನಗಿದೆ ಶೋಕದ ವಿದಾಯಜಗವ ಗೆದ್ದ ಜಾನಕಿನೀನಿಲ್ಲದೆ ಬಡವಾಯಿತುಸ್ವರ ಸಂಗೀತ ಮೂಕಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕೋಗಿಲೆ ಕರಗಿತು” ಕೋಗಿಲೆ ಕರಗಿತುಕಾಡು ಮೌನವಾಗಲಿಲ್ಲ;ಅವಳ ಕಂಠದಿಂದ ಹರಿದರಾಗಗಳುಇನ್ನೂ ಗಾಳಿಯ ಎದೆಯಲಿ ತೇಲುತ್ತಿವೆ. ಸ್ವರವೆಂಬ ಗಂಗೆಯಲ್ಲಿಭಾವದ ದೀಪ ಹಚ್ಚಿದವಳುನೀನು;ನಗುವಿಗೂ ನಾದ ಕೊಟ್ಟೆ,ಅಳುವಿಗೂ ಆಲಾಪನೆಯರೂಪ ಕೊಟ್ಟೆ. ನಿನ್ನ ಕಂಠದ ಜೇನಿನಹನಿಗಳುಕೋಟಿ ಹೃದಯಗಳದಾಹ ನೀಗಿಸಿದವು;ಮುಗ್ಧ ಮಗುವಿನಲಾಲಿಯಾಗಿ,ತಾಯಿಯ ಮಮತೆಯತೊಟ್ಟಿಲಾಗಿ,ಪ್ರೇಮಿಗಳ ಕನಸಿನ ಭಾವವಾಗಿಭಕ್ತರ ಪ್ರಾರ್ಥನೆಯದೀಪವಾಗಿಅಮರಳಾದೆ ನೀನು. ನೀ ಹಾಡಿದಾಗಚಂದ್ರನು ಬೆಳದಿಂಗಳ ಹರಡಿದಮಲ್ಲಿಗೆ ತನ್ನ ಪರಿಮಳ ಸೂಸಿತು;ಗಾಳಿ ನಿಂತು ನಿನ್ನಆಲಾಪನೆಯನ್ನು ಆಲಿಸಿತು;ನದಿಯ ಅಲೆಗಳೂನಿನ್ನ ತಾಳಕ್ಕೆ ತಲೆದೂಗಿದವು. ನಿನ್ನ ರಾಗದ ಅಲೆಗಳಲ್ಲಿವಿರಹವು ಕಣ್ಣೀರಮುತ್ತಾಯಿತು;ಸಂತೋಷವು ನಗುವಿನ ಹೂವಾಯಿತು;ವೇದನೆಯೂ ಸಂಗೀತವಾಗಿ ಅರಳಿತು;ಮೌನವೂ ಮಧುರಗೀತೆಯಾಗಿ ಮೊಳಗಿತುಕಲ್ಲಿನ ಮೇಲೆ ಹೆಸರುಬರೆದವಳಲ್ಲಹೃದಯಗಳ ಮೇಲೆಸ್ವರಗಳಿಂದ ಶಾಶ್ವತ ಅಚ್ಚು ಹಾಕಿದವಳು ಕೋಗಿಲೆ ಕರಗಿತುಎನ್ನುವುದುಕಾಲದ ಮಾತು ಮಾತ್ರ;ಆದರೆ ನಿನ್ನ ಗಾನ ಬೆಳಗಿನ ಮೊದಲಹಕ್ಕಿಯ ಕೂಗಿನಂತೆ,ಸಂಜೆಯ ಮೃದುವಾದಗಾಳಿಯಂತೆ,ಮಳೆಹನಿಯ ಸಂಗೀತದಂತೆ,ಭಕ್ತಿಯ ದೀಪದಜ್ಯೋತಿಯಂತೆಯುಗಯುಗಕೂ     ಮೊಳಗುತ್ತಲೇ ಇರುವುದು. ಓ ಗಾನಸರಸ್ವತಿಯೇ!ನಿನ್ನ ಕಂಠ ಮೌನವಾದರೂನಿನ್ನ ಸ್ವರ ಅಮರವಾಗಿದೆ;ನಿನ್ನ ದೇಹ ದೂರವಾದರೂನಿನ್ನ ಸಂಗೀತನಮ್ಮ ಉಸಿರಾಗಿದೆ. ಕೋಗಿಲೆ ಕರಗಲಿಲ್ಲ…ಜಾನಕಿ ರಾಗವಾಗಿಆಕಾಶದಲ್ಲಿ ಬೆರೆತಳು;ಭಾವವಾಗಿ ಮನಗಳಲ್ಲಿನೆಲೆಸಿದಳು;ಸಂಗೀತವಾಗಿ ಕಾಲಾತೀತಳಾದಳು. ನಿನ್ನ ಅಮರ ಗಾನಕ್ಕೆಶತಶತ ನಮನಗಳು. ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು” Read Post »

ಇತರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಪ್ರೇಮ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಒಲವಿನ ಸ್ನೇಹದ ಪ್ರೀತಿ” ಒಲವಿನ ಸ್ನೇಹದ ಪ್ರೀತಿ ಅಂದ್ರೆ  ಬೆಳಗ್ಗೆ ಎದ್ದು “ಚಹ ಕುಡಿದೆಯಾ?”ಅಂತ ಕೇಳೋ ಸ್ನೇಹಿತ/ತೆನೀನು ಸುಮ್ನೆ ಇದ್ದಾಗ “ಏನಾಯ್ತು?”ಅಂತ ಅರ್ಥ ಮಾಡ್ಕೊಳ್ಳೊ ಮೌನ.   ಒಲವಿನ ಪ್ರೀತಿ ಸ್ನೇಹ ಅಂದ್ರೆ  ನೀನು ಸೋತಾಗ “ಪರವಾಗಿಲ್ಲ,ಮತ್ತೆ ಪ್ರಯತ್ನಿಸು” ಅಂತ ಹೇಳೋ ಧೈರ್ಯನೀನು ಗೆದ್ದಾಗ ಮೊದಲು ಚಪ್ಪಾಳೆ ತಟ್ಟುವ ಕೈ.   ಅದು ಹೂವಿನ ಹಾಗೆ ಗೊತ್ತಾ ನಿನಗೆ ಜೋರಾಗಿ ಕೂಗಲ್ಲ, ಆದ್ರೆ ಅದರ ವಾಸನೆಗೆ ಮನಸ್ಸು ಹಗುರ ಆಗುತ್ತೆಅದು ದೇವರ ಮುಂದೆ ಹಚ್ಚಿದ ದೀಪದ ಹಾಗೆ,ಜೋರಾಗಿ ಉರಿಯಲ್ಲ,ಆದ್ರೆ ಕತ್ತಲಲ್ಲಿ ದಾರಿ ತೋರಿಸುತ್ತೆ.   ಒಲವಿನ ಪ್ರೀತಿ ಕೇಳಲ್ಲ ಏನೂ,  ಸ್ನೇಹಕ್ಕೆ ಕೊಡೋದಷ್ಟೇ ಗೊತ್ತುಮನಸ್ಸು ತುಂಬಾ ಇದ್ದಾಗ ಹಂಚಿಕೊಳ್ಳೋಕೆ ಭುಜ, ಮನಸ್ಸು.ಖಾಲಿ ಇದ್ದಾಗ ತುಂಬೋಕೆ ಮಾತು.   ಆ ಪ್ರೀತಿ ಇದ್ದರೆ ಸಾಕು ಸಖಿ/ಖ ಬದುಕು ಎಷ್ಟೇ ಕಷ್ಟ ಆದ್ರೂ ಎದೆಯ ಒಂದು ಬೆಚ್ಚಗಿನ ಮೂಲೆಯಲ್ಲಿ  ನಾನು ಸುರಕ್ಷಿತವಾಗಿರುತ್ತೇನೆಎಂಬ ಭಾವ ಸ್ನೇಹಿತ/ತೆ ಎನಿಸಿಕೊಂಡ ಎಲ್ಲರಿಂದಲೂ ಪಡೆಯಲು ಸಾಧ್ಯವಿಲ್ಲ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

You cannot copy content of this page

Scroll to Top