ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್  

ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್   “ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ” *”ವಿಧಿಯೇ ನಿನಷ್ಟು ಕ್ರೂರಿ, ಮುಂದೆ ಕನಸುಗಳನ್ನು ತೋರಿಸಿ ಹಿಂದೆ ಇರಿಯುವೆ ಚೂರಿ”* ಎಂಬ ಮಾತು ಕೇಳಿದಾಗ, ಅದು ಕೇವಲ ಒಂದು ಸಾಲು ಎಂದು ಅನಿಸುವುದಿಲ್ಲ. ಜೀವನದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡವರ ಹೃದಯದ ಮೌನದ ಕಿರುಚಾಟದಂತೆ ಭಾಸವಾಗುತ್ತದೆ. ಆದರೆ ಜೀವನದ ಸತ್ಯ ಇನ್ನೂ ಆಳವಾಗಿದೆ. ವಿಧಿ ಕೆಲವೊಮ್ಮೆ ನಮ್ಮ ಕನಸುಗಳನ್ನು ಮುರಿಯಬಹುದು; ಆದರೆ ನಮ್ಮೊಳಗಿನ ಧೈರ್ಯವನ್ನು ಮುರಿಯಲು ಸಾಧ್ಯವಿಲ್ಲ. ಒಂದು ರೈತನನ್ನು ಕಲ್ಪಿಸಿಕೊಳ್ಳಿ. ಅವನು ಸಾಲ ಮಾಡಿ ಉತ್ತಮ ಬೀಜ ಖರೀದಿಸುತ್ತಾನೆ. ಹೊಲ ಉಳುಮೆ ಮಾಡುತ್ತಾನೆ. ಮಳೆಯ ನಿರೀಕ್ಷೆಯಲ್ಲಿ ಪ್ರತಿದಿನ ಆಕಾಶದತ್ತ ನೋಡುತ್ತಾನೆ. ಆದರೆ ಒಂದು ವರ್ಷ ಬರಗಾಲ ಬರುತ್ತದೆ. ಬೆಳೆ ಹಾಳಾಗುತ್ತದೆ. ಆ ದಿನ ಅವನ ಕನಸುಗಳೂ ಒಣಗಿದಂತೆ ಕಾಣುತ್ತದೆ. ಆದರೂ ಮುಂದಿನ ವರ್ಷ ಮತ್ತೆ ಅದೇ ಹೊಲಕ್ಕೆ ಬೀಜ ಬಿತ್ತುತ್ತಾನೆ. ಏಕೆ? ಏಕೆಂದರೆ ಆಶೆಯನ್ನು ಕಳೆದುಕೊಂಡ ರೈತ ಎಂದಿಗೂ ಬೆಳೆಯನ್ನು ಕಾಣಲಾರನು. ಇದೇ ಬದುಕಿನ ಮೊದಲ ಪಾಠ. ಒಬ್ಬ ವಿದ್ಯಾರ್ಥಿ ವರ್ಷಪೂರ್ತಿ ಶ್ರಮಿಸಿ ಪರೀಕ್ಷೆ ಬರೆಯುತ್ತಾನೆ. ಆದರೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ಕೆಲವರು ಅಲ್ಲಿ ನಿಲ್ಲುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ತಪ್ಪುಗಳನ್ನು ಅರಿತು ಮತ್ತೊಮ್ಮೆ ಪ್ರಯತ್ನಿಸುತ್ತಾರೆ. ಎರಡನೇ ಪ್ರಯತ್ನದಲ್ಲೇ ಯಶಸ್ಸನ್ನು ಗಳಿಸುತ್ತಾರೆ. ಸೋಲೇ ಅವರ ಅಂತ್ಯವಾಗಿದ್ದರೆ, ಆ ಯಶಸ್ಸು ಹುಟ್ಟುತ್ತಿರಲಿಲ್ಲ. ಒಂದು ಮಣ್ಣಿನ ಕುಂಭವನ್ನು ನೋಡಿ. ಅದು ಸುಂದರವಾಗುವುದಕ್ಕೆ ಮೊದಲು ಕುಂಬಾರನ ಕೈಯಲ್ಲಿ ಅನೇಕ ಬಾರಿ ತಿರುಗುತ್ತದೆ. ನಂತರ ಬೆಂಕಿಯ ಉರಿಯನ್ನು ಸಹಿಸುತ್ತದೆ. ಆ ಕಷ್ಟದ ನಂತರವೇ ಅದು ಎಲ್ಲರ ಮನೆಗೆ ಅಲಂಕಾರವಾಗುತ್ತದೆ. ಕಷ್ಟವನ್ನು ಸಹಿಸದ ಮಣ್ಣು ಎಂದಿಗೂ ಕುಂಭವಾಗುವುದಿಲ್ಲ. ಒಂದು ಮರವನ್ನು ಕಡಿಯಬಹುದು. ಅದರ ಕೊಂಬೆಗಳು ಮುರಿಯಬಹುದು. ಎಲೆಗಳು ಉದುರಬಹುದು. ಆದರೆ ಬೇರು ಜೀವಂತವಾಗಿದ್ದರೆ ಮತ್ತೆ ಚಿಗುರುತ್ತದೆ. ಹಾಗೆಯೇ ಮನುಷ್ಯನ ಮನಸ್ಸಿನಲ್ಲಿರುವ ಭರವಸೆ ಜೀವಂತವಾಗಿದ್ದರೆ, ಜೀವನ ಮತ್ತೆ ಅರಳುತ್ತದೆ. ಇಂದಿನ ಸಮಾಜದಲ್ಲಿ ನಾವು ಒಂದು ಅಪಾಯಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಜನರು ಮೊಬೈಲ್‌ನಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದಿದ್ದಾರೆ; ಆದರೆ ಮನಸ್ಸು ಬಿಚ್ಚಿ ಮಾತನಾಡಲು ಒಬ್ಬ ಸ್ನೇಹಿತನೂ ಇಲ್ಲ. ದೊಡ್ಡ ಮನೆಗಳಿವೆ; ಆದರೆ ಮನೆಯಲ್ಲಿ ಮಾತುಗಳಿಲ್ಲ. ಹಣವಿದೆ; ಆದರೆ ನೆಮ್ಮದಿ ಇಲ್ಲ. ಶಿಕ್ಷಣವಿದೆ; ಆದರೆ ಮಾನವೀಯತೆ ಕಡಿಮೆಯಾಗುತ್ತಿದೆ. ಒಮ್ಮೆ ಒಂದು ವೃದ್ಧ ದಂಪತಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ವೈದ್ಯರು ಔಷಧಿ ಕೊಟ್ಟರು. ಆದರೆ ಅವರನ್ನು ಹೆಚ್ಚು ಸಮಾಧಾನಪಡಿಸಿದ್ದು ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಒಂದು ಮಾತು—”ಚಿಂತಿಸಬೇಡಿ, ಎಲ್ಲವೂ ಒಳ್ಳೆಯದಾಗುತ್ತದೆ.” ಆ ಮಾತು ಔಷಧಿಗಿಂತ ಹೆಚ್ಚು ಧೈರ್ಯ ನೀಡಿತು. ಇದರಿಂದ ತಿಳಿಯುವುದು, ಕೆಲವೊಮ್ಮೆ ಮಾತುಗಳೇ ಔಷಧಿಯಾಗುತ್ತವೆ. ನಾವು ಮಕ್ಕಳಿಗೆ ಉತ್ತಮ ಶಾಲೆ ಕೊಡುತ್ತೇವೆ. ಆದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯವನ್ನು ಕಲಿಸುತ್ತೇವೆಯೇ? ಸ್ಪರ್ಧೆಯಲ್ಲಿ ಗೆಲ್ಲಲು ಹೇಳುತ್ತೇವೆ. ಆದರೆ ಸೋತವರನ್ನು ಎಬ್ಬಿಸಲು ಹೇಳುತ್ತೇವೆಯೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕ, ಶಿಕ್ಷಕ ಮತ್ತು ಸಮಾಜದ ಮುಂದೆ ನಿಲ್ಲಬೇಕು. ಒಂದು ದೀಪವನ್ನು ಗಮನಿಸಿ. ಅದು ತನ್ನನ್ನು ತಾನೇ ಸುಟ್ಟುಕೊಂಡು ಇತರರಿಗೆ ಬೆಳಕು ನೀಡುತ್ತದೆ. ಒಂದು ನದಿಯನ್ನು ನೋಡಿ. ಅದು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ; ಬೇರೆಯವರ ದಾಹ ನೀಗಿಸುತ್ತದೆ. ಒಂದು ಮರ ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ; ಇತರರಿಗೆ ನೀಡುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ತ್ಯಾಗವನ್ನು ಕಲಿಸುತ್ತದೆ. ಮನುಷ್ಯ ಮಾತ್ರ ಸ್ವಾರ್ಥವನ್ನು ಕಲಿಯಬಾರದು. ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳು ಸುಖದಲ್ಲಿ ಬೆಳೆದವರಲ್ಲ. ಅನೇಕ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ದಾರಿದೀಪರಾದವರು. ಆದ್ದರಿಂದ ಕಷ್ಟ ಬಂದಾಗ “ಏಕೆ ನನಗೆ?” ಎಂದು ಕೇಳುವುದಕ್ಕಿಂತ, “ಇದರಿಂದ ನಾನು ಏನು ಕಲಿಯಬಹುದು?” ಎಂದು ಕೇಳುವುದು ಬದುಕನ್ನು ಬದಲಾಯಿಸುತ್ತದೆ. *ಕೊನೆಯಲ್ಲಿ ಒಂದು ಸತ್ಯ—* ವಿಧಿ ನಿಮ್ಮ ದಾರಿಯನ್ನು ತಿರುಗಿಸಬಹುದು.ಸಮಯ ನಿಮ್ಮನ್ನು ಪರೀಕ್ಷಿಸಬಹುದು.ಜನರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ಇರಬಹುದು. *ಆದರೆ ನಿಮ್ಮ ಧೈರ್ಯ, ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ಮಾನವೀಯತೆ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.* *ಮನುಷ್ಯನ ಜೀವನದ ನಿಜವಾದ ಯಶಸ್ಸು ಅವನು ಎಷ್ಟು ಸಂಪಾದಿಸಿದನೆಂಬುದಲ್ಲ; ಎಷ್ಟು ಹೃದಯಗಳಿಗೆ ಧೈರ್ಯ ತುಂಬಿದನೆಂಬುದರಲ್ಲಿ ಇದೆ.* ಕೆ.ಎಂ. ಕಾವ್ಯ ಪ್ರಸಾದ್    

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್   Read Post »

ಕಾವ್ಯಯಾನ

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ”

ಕಾವ್ಯಸಂಗಾತಿ ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” ಅಮಾಯಕರ ಜೀವ ಹಿಂಡುವ ಅಧಿಕಾರಕೊಡಲಿಲ್ಲ ಯಾರಿಗೂ ಪ್ರೀತಿಯ ಸಹಕಾರಮೆರೆದರು ತೋರಿಸಿ ಹಣದ ಅಹಂಕಾರಮರೆತರು ಸೊಕ್ಕಿನಲಿ ಪ್ರೇಮದ ಮಮಕಾರ ಕೊನೆಗಾಲದ ನೋವ ನೀ ಅನುಭವಿಸುವೆಹುಟ್ಟು ಸಂಭ್ರಮ ಸಾವು ನಿಗೂಢ ಅರಿವೆಸಾವಿನಲಿ ಕಾಯುವುದಿಲ್ಲ ನಿನ್ನ ಹಣವೇಒಂದು ದಿನ ಶವವಾಗಿ ಮಣ್ಣಲ್ಲಿ ಕೊಳೆಯುವೆ ಹೊತ್ತೋಯ್ಯುವುದಿಲ್ಲ ಮರಣದ ಕೊನೆಯಲ್ಲಿಬೆಳಕಾಗು ದೀನ ದಲಿತರ ಸೇವೆಯಲಿಕಾಯಕದಿ ಕೈಲಾಸ ನೋಡುವೆ ನೀನಿಲ್ಲಿದುರಹಂಕಾರದಿ ಮಣ್ಣು ಲೋಕದ ಬಯಲಲಿ ದುರಾಸೆಯ ಬದುಕಿನಲಿ ಮಾನವನ ಜೀವನಅತಿ ಆಸೆಯಲಿ ಮಾಡದಿರು ಮೋಸತನಕಾಣಬೇಕಿದೆ ನೂತನ ಜೀವನ ಪಾವನಲಂಚಾವತಾರದ ನೀಚ ರಕ್ಕಸರಿಗೆ ಈ ಕವನ ಡಾ.ಲತಾ ಎ. ಆರ್ ಬಾಳೆಹೊನ್ನೂರು

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” Read Post »

ಪುಸ್ತಕ ಸಂಗಾತಿ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ

ಪುಸ್ತಕ ಸಂಗಾತಿ ಶೋಭಾ ನಾಗಭೂಷಣ ಎಂ.ಬಿ.ಸಂತೋಷ್‌ ಅವರ ಕೃತಿ, “ವಚನ ಸುಧೆ”ಗೊಂದು ಮುನ್ನುಡಿ,  ಪ್ರಥಮವಾಗಿ ತಮ್ಮ ನಲವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ ಏಳನೇ ಆಧುನಿಕ ವಚನ ಸಂಕಲನವಾದ ‘ವಚನ ಸುಧೆ’ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವ  ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರಿಗೂ ಹಾಗೂ ಗುರುಮಾತೆಯಾದ ಶ್ರೀಮತಿ ರೇಖಾ ಸಂತೋಷ್ ಅವರಿಗೂ ವಿವಾಹ ವಾರ್ಷಿಕ ಮಹೋತ್ಸವಕ್ಕೆ ಶುಭಾಷಯಗಳನ್ನು ಕೋರುತ್ತೇನೆ.  ತಮ್ಮ ಈ ವಚನ ಸುಧೆ ಕೃತಿಗೆ ಮುನ್ನುಡಿ ಬರೆಯಬೇಕೆಂದು ಸೂಚಿಸಿ ಗುರುಗಳು ನನ್ನ ಸಾಹಿತ್ಯ ಕೃಷಿಗೆ ಆಶೀರ್ವದಿಸಿದ್ದಾರೆ. ಈ ವಚನ ಸುಧೆಗೆ ಮುನ್ನುಡಿಯನ್ನು ಬರೆಯುವುದು ನನಗೆ ಗರ್ವ ಮತ್ತು ಗೌರವ ಎರಡನ್ನೂ ಸಹ ತಂದುಕೊಟ್ಟಿದೆ. ನಾನು ಅವರಿಗೆ ಸದಾ ಕೃತಜ್ಞಳಾಗಿದ್ದೇನೆ.  ಮನುಜನ  ಜೀವನವು ಅನೇಕ ಅನುಭವಗಳ ಅಲೆಯಲ್ಲಿ ತೇಲುವ ಒಂದು ನಿರಂತರ ಪಯಣ.  ಈ ಪಯಣದಲ್ಲಿ ಕೆಲವೊಮ್ಮೆ ಸಂತೋಷದ ಹೊಳೆ ಹರಿದರೆ, ಮತ್ತೊಮ್ಮೆ ಸಂಕಟಗಳ ನೆರಳು ಆವರಿಸುತ್ತದೆ. ಇಂತಹ ಬದುಕಿನ ತಿರುವುಗಳಲ್ಲಿ ದಾರಿತೋರುವ ದೀಪವಾಗಿ, ಮನಸ್ಸಿನ ಮೌನಕ್ಕೆ ಮಾತಾಗುವ ಚಿಂತನೆಯಾಗಿ ಮೌಲ್ಯಗಳ ಮಣ್ಣಿನಲ್ಲಿ ಅರಳುವ ಜ್ಞಾನಪುಷ್ಪವಾಗಿ ನಮ್ಮೊಂದಿಗೆ ಸಾಗುವವು ವಚನಗಳು. ವಚನವೆಂದರೆ ಕೇವಲ ಪದಗಳ ಜೋಡಣೆಯಲ್ಲ; ಅದು ಬದುಕಿನ ಸತ್ಯಕ್ಕೆ ಸಾಕ್ಷಿಯಾದ ಅನುಭವದ ನಾದ, ಅಂತರಂಗದ ಅರಿವಿಗೆ ದಾರಿಯಾದ ಚಿಂತನೆಯ ಚಿಲುಮೆ.  ಕಾಲ ಬದಲಾಗುತ್ತಿದೆ. ಬದುಕಿನ ವೇಗ ಹೆಚ್ಚುತ್ತಿದೆ. ತಂತ್ರಜ್ಞಾನದ ಬೆಳಕಿನಲ್ಲಿ ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಹಾದಿಯಲ್ಲಿ ಸಾಗುತ್ತಿದ್ದರೂ, ತನ್ನೊಳಗಿನ ಮನುಷ್ಯತ್ವವನ್ನು ಅರಸುವ ಪ್ರಯತ್ನ ಕೆಲವೊಮ್ಮೆ ಮಸುಕಾಗುತ್ತಿದೆ. ಸಂಬಂಧಗಳು ಯಾಂತ್ರಿಕವಾಗುತ್ತಿರುವ, ಮೌಲ್ಯಗಳು ಪ್ರಶ್ನಿಸಲ್ಪಡುತ್ತಿರುವ, ಆತ್ಮಸಂತೋಷವನ್ನು ಹುಡುಕಾಡುತ್ತಿರುವ ಸಂದರ್ಭದಲ್ಲಿ ವಚನಸಾಹಿತ್ಯದ ಪ್ರಸ್ತುತತೆ ಇನ್ನಷ್ಟು ಗಾಢವಾಗುತ್ತವೆ. ಏಕೆಂದರೆ ವಚನಗಳು ಕೇವಲ ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿ ಬೋಧಿಸಲ್ಪಟ್ಟವುಗಳಲ್ಲ, ಅವು ಸಮಾನತೆ, ಮಾನವೀಯತೆ, ಸತ್ಯನಿಷ್ಠೆ ಹಾಗೂ ಬದುಕಿನ ಶುದ್ಧತೆಗೆ ಕರೆ ನೀಡುವ ಆತ್ಮಧ್ವನಿಗಳಾಗಿವೆ.   ಪೂಜ್ಯ ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರ ಏಳನೇ ಆಧುನಿಕ ವಚನಸಂಕಲನವಾದ ಈ ವಚನ ಸುಧೆ ಕೃತಿಯು, ಅಮೃತಧಾರೆಯನ್ನು ಇಂದಿನ ಓದುಗರ ಮನಗಳಿಗೆ ತಲುಪಿಸುವ ವಿನಮ್ರ ಸಾಹಿತ್ಯರತ್ನವಾಗಿದೆ. ಈ ಕೃತಿಯಲ್ಲಿ ಅಡಕವಾಗಿರುವ ಪ್ರತಿಯೊಂದು ವಚನವೂ ಜೀವನದ ಯಾವುದೋ ಒಂದು ಮೌಲ್ಯವನ್ನು ಅನಾವರಣಗೊಳಿಸುವ ಕನ್ನಡಿಯಾಗಿದೆ. ಕೆಲವೊಮ್ಮೆ ಅವು ಪ್ರಶ್ನಿಸುತ್ತವೆ, ಕೆಲವೊಮ್ಮೆ ಎಚ್ಚರಿಸುತ್ತವೆ, ಕೆಲವೊಮ್ಮೆ ಕಿವಿಮಾತನ್ನು ಹೇಳುತ್ತಾ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಮಾತುಗಳಾಗುತ್ತವೆ. ಜೀವನದ ಗೊಂದಲಗಳ ನಡುವೆ ಅರ್ಥಪೂರ್ಣವಾದ ಬದುಕಿನ ದಿಕ್ಕನ್ನು ತೋರಿಸುವ ಶಕ್ತಿಯನ್ನು ವಚನಗಳು ಹೊಂದಿವೆ.    *ವಚನಸುಧೆ* – ‘ಸುಧೆ’ ಎಂದರೆ ಅಮೃತ. ಅಮೃತವು ನಿರ್ಜೀವದ ಸ್ಥಿತಿಗೆ ಜೀವಂತಿಕೆಯನ್ನು ನೀಡುವಂತಹದ್ದು. ಹಾಗೆಯೇ ಈ ವಚನ ಸುಧೆಯು ಮನಸ್ಸಿಗೆ ಅಮರತ್ವವನ್ನು ನೀಡುವಂತಹ ಅದೆಷ್ಟೋ ಜೀವನದ ಸತ್ಯಗಳನ್ನು ತಿಳಿಸುತ್ತಾ ಬದುಕನ್ನು ಮುನ್ನಡೆಸಲು ದೀವಟಿಗೆಯಾಗಿ ನಿಲ್ಲುತ್ತದೆ. ಬುದ್ಧಿ, ಮಾತು, ಹೆಣ್ಣು, ತಾಯಿ, ಸಂಸಾರ, ದಾಂಪತ್ಯ, ಮಾನವ ಸಂಬಂಧ, ಮೂಢನಂಬಿಕೆ ಹೀಗೆ ಇನ್ನೂ ಹಲವು ವಿಷಯಗಳ ಹಾಗೂ ಜೀವನದ ಸತ್ಯಗಳನ್ನು ತಿಳಿಸುವ ವಚನಗಳು ಈ ವಚನ ಸುಧೆಯಲ್ಲಿ ಹನಿ ಹನಿಯಾಗಿ ಕೂಡಿವೆ. ‘ಜಗದೀಶ’ ಎನ್ನುವ ಅಂಕಿತದೊಂದಿಗೆ ಸಾವಿರಾರು ವಚನಗಳನ್ನು ರಚಿಸಿರುವ ಶ್ರೀ ಎಂ ಬಿ ಸಂತೋಷ್ ಅವರು ತಮ್ಮ ಅಮೂಲ್ಯವಾದ ವಚನಗಳಿಂದ ಅದೆಷ್ಟೋ ಶರಣ ಸಹೃದಯರಿಗೆ ಸುಧೆಯನ್ನು ಉಣಬಡಿಸಿದ್ದಾರೆ. ಬಲವಂತದಿಂದ ಪಡೆದದ್ದುಬಹುಕಾಲ ಉಳಿಯುವುದಿಲ್ಲಇನ್ನೊಬ್ಬರ ಮನವ ನೋಯಿಸಿ ಪಡೆದದ್ದುನಮ್ಮನ್ನು ಹಾಳು ಮಾಡದೆ ಬಿಡುವುದಿಲ್ಲಕಷ್ಟಪಟ್ಟು ದುಡಿದದ್ದು ಎಂದಿಗೂ  ನಮ್ಮನ್ನು ಬಿಟ್ಟು ಹೋಗುವುದಿಲ್ಲ-ಜಗದೀಶ  ಈ ವಚನವು ದುಡಿಮೆಯ ಮಹತ್ವವನ್ನು ತಿಳಿಸುತ್ತದೆ. ಹತ್ತನೆಯ ಶತಮಾನದಿಂದಲೂ ಬಸವಣ್ಣನವರಾದಿಯಾಗಿ ದುಡಿಮೆಯ ಅಂದರೆ ಕಾಯಕದ ಮಹತ್ವವನ್ನು ಸಾರುತ್ತಲೇ ಬಂದಿದ್ದಾರೆ. ಕಾಯಕದ ಮೂಲಕವೇ ನಾವು ಕೈಲಾಸವನ್ನು ಕಾಣಬೆಕು ಎನ್ನುವ ಆದ್ಯ ವಚನಕಾರರ ಸಂದೇಶವನ್ನು ತಿಳಿಸುವ ಮತ್ತೊಂದು ವಚನ ಇಲ್ಲಿ ಮೂಡಿಬಂದಿದೆ. ನಾವು ಯಾವಾಗಲೂ ದುಡಿದು ತಿನ್ನಬೇಕೇ ಹೊರತು ಮತ್ತೊಬ್ಬರಿಂದ ಬಲವಂತವಾಗಿ ಕಿತ್ತು ತಿನ್ನುವ ಬುದ್ಧಿಯನ್ನು ಬಿಡಬೇಕು. ‘ಪರರ ಸ್ವತ್ತು ಪಾಶಾಣ’ ಎನ್ನುವುದನ್ನು ಅರಿಯಬೇಕು. ಬೇರೆಯವರನ್ನು ನೋಯಿಸಿ ಅವರ ಸ್ವತ್ತನ್ನು ಕಿತ್ತು ಅನುಭವಿಸಿದರೆ ಅವರ ನಿಟ್ಟುಸಿರು ನಮ್ಮನ್ನು ತಟ್ಟಿಯೇ ತೀರುತ್ತದೆ. ಈ ಸತ್ಯವು ಇಂದಿನ ಜನಮನಕ್ಕೆ ತಿಳಿದಿದ್ದರೂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೇ ಪಾಪ ಪುಣ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ತಾನು ಬದುಕುವುದಕ್ಕಾಗಿ ಸ್ವಾರ್ಥತೆಯಿಂದ ಕೊಲೆ, ಸುಲಿಗೆ, ದರೋಡೆಗಳನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ಅಂತಹ ಮನಸ್ಥಿತಿಗೆ ಈ ವಚನ ಕಿವಿ ಹಿಂಡಿ ಬುದ್ಧಿ ಹೇಳುತ್ತದೆ. ಆದಿ ಮತ್ತು ಅಂತ್ಯನೀನೇ ಆಗಿರುವಾಗಹೇ ದೇವ; ನನ್ನದೇನಿದೆನೀ ತೋರಿದ ದಾರಿಯಲ್ಲಿನಡೆಯುವುದಷ್ಟೇ ನನ್ನ ಕೆಲಸವಾಗಿದೆ – ಜಗದೀಶ   ಇಲ್ಲಿ ಮನುಷ್ಯ ತಾನು ಏನೇ ಸಾಧಿಸಿದ್ದರೂ ಸಹ ಸೃಷ್ಟಿ ನಿಯಮದಡಿ ಆ ದೈವ ಮಹಿಮೆಯ ಮುಂದೆ ಅವನು ಅಲ್ಪನೇ. ಜೀವನದ ಆದಿ ಅಂತ್ಯಗಳನ್ನು ನಿರ್ಧರಿಸುವವನು ಅವನೇ. ಹುಟ್ಟು ಉಚಿತ ಸಾವು ಖಚಿತ ಎನ್ನುವಂತೆ; ಹುಟ್ಟು ಎನ್ನುವ ಪ್ರಕೃತಿಯ ನಿಯಮವನ್ನು ಮೀರಿ ತನಗೆ ಬೇಕಾದ ಹಾಗೆ ನಿರ್ಧರಿಸಲು ಸಾಧ್ಯವೇ ಇಲ್ಲ. ಈಗ ಐವಿಎಫ್‌ನಂತಹ ತಂತ್ರಜ್ಞಾನದ ಮೂಲಕ ಅಥವಾ ಟೆಸ್ಟ್ ಟ್ಯೂಬ್ ಬೇಬಿ ಎನ್ನುವ ಪರಿಕಲ್ಪನೆ ಇದ್ದರೂ ಸಹ ಅದೂ ಕೂಡ ದೈವ ಕೃಪೆಯ ಜೀವಾಣುಗಳಿಂದ ಸೃಷ್ಟಿಸಲು ಸಾಧ್ಯವೇ ಹೊರತು ಜೀವಾಣುಗಳನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲ. ಹಾಗೆಯೇ ಸುದೀರ್ಘ ಆಯಸ್ಸಿಗಾಗಿ ಮನುಷ್ಯ ತನ್ನ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳಲು ಏನೇ ಕಸರತ್ತು ಮಾಡಿದರೂ, ಇತ್ತೀಚಿನ ಹಲವಾರು ಅಕಾಲಿಕ ಮರಣಗಳ ಉದಾಹರಣೆಗಳನ್ನು ನಾವು ಕಾಣಬಹುದು. ಹೀಗಿರುವಾಗ ಸಿಕ್ಕಿರುವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾ ದೇವರು ತೋರಿದ ಹಾದಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಾಗುವುದಷ್ಟೇ ನಮ್ಮ ಕಾಯಕವಾಗಬೇಕು ಎನ್ನುವ ಅಪೂರ್ವವಾದ ಸಂದೇಶವನ್ನು ತಿಳಿಸುವ ಈ ವಚನವು ಸಕಾಲಿಕವಾಗಿದೆ. ಸಂಬಂಧಗಳು ಹೇಗಿರಬೇಕೆಂದರೆಶ್ರೀಗಂಧದಂತೆ ಸುವಾಸನೆ ಬೀರಬೇಕುಸಂಬಂಧಗಳನ್ನು ಮುರಿಯುವ ಪ್ರಯತ್ನಯಾರೇ ಮಾಡಿದರೂ ಸುವಾಸನೆ ಮಾತ್ರಹಾಗೇ ಉಳಿಯಬೇಕು- ಜಗದೀಶ  ಇತ್ತೀಚೆಗೆ ವಿಭಕ್ತ ಕುಟುಂಬಗಳೇ ಹೆಚ್ಚುತ್ತಿರುವ ಈ ಜಗತ್ತಿನಲ್ಲಿ ಪರಸ್ಪರ ಮಾನವನ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಿದೆ ಅಥವಾ ಈ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ ಎಂದೇ ಹೇಳಬಹುದು. ಗಂಡ ಹೆಂಡತಿ ಮಗು ಮಾತ್ರ ಜೊತೆಗಿದ್ದರೇ ಅದೇ ಅವಿಭಕ್ತ ಕುಟುಂಬ ಎನ್ನುವ ಕಾಲ ಇದಾಗಿದೆ. ಇಲ್ಲಿ ತಂದೆ-ತಾಯಿ-ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಅತ್ತೆ-ಸೊಸೆ ಎನ್ನುವ ಸಂಬಂಧವು ಅದರ ಬೆಲೆಯನ್ನು ಕಳೆದುಕೊಂಡಿದೆ. ಕೇವಲ ಹಣದ ದಾಹ ಆಸ್ತಿಯ ಮೋಹವು ಈ ಎಲ್ಲಾ ಸಂಬಂಧವನ್ನು ದೂರ ಮಾಡುತ್ತಿದೆ. ಸಂಪತ್ತಿನ ಹಿಂದೆಯೇ ಓಡುತ್ತಿರುವ ಈ ಜಗತ್ತು ಸಂಬಂಧದ ಕಡೆಗೆ ಕಣ್ಪಟ್ಟಿಯನ್ನು ಕಟ್ಟಿಕೊಂಡಿದೆ. ಹಣಕ್ಕಾಗಿ, ಪತಿಷ್ಟೆಗಾಗಿ ಈ ಸಂಬಂಧಗಳು ಕಚ್ಚಾಡುವುದಷ್ಟೇ ಅಲ್ಲ ಜೀವ ತೆಗೆಯುತ್ತಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ ಅನೈತಿಕ ಸಂಬಂಧಗಳ ಅಟ್ಟಹಾಸವು ಇಂದು ಅನಾಚಾರಗಳಿಗೆ ಎಡೆಮಾಡಿಕೊಡುತ್ತಿವೆ. ಇಂತಹ ಸಂಬಂಧದಲ್ಲಿ ಶ್ರೀಗಂಧದಹಾಗೆ ಸುವಾಸನೆ ಬೀರುಂತೆ ಸಂಬಂಧಗಳು ಇರಬೇಕು ಎನ್ನುವ ವಚನಗಾರರ ಭಾವ ನಿಜಕ್ಕೂ ಸಂದರ್ಭೋಚಿತವಾಗಿದೆ. ಹೆಸರಿಗೆ ಮಾತ್ರ ಹಣ ಆಸ್ತಿಗಾಗಿ ಮಾತ್ರ ಸಂಬಂಧಗಳನ್ನು ನಿಭಾಯಿಸುತ್ತಾ ಬಾಳುವ ಜನರಿಗೆ ಪಾಠ ಹೇಳುವ ಮತ್ತೂ ಕೆಲವು ವಚನಗಳು ಕೂಡ ಇಲ್ಲಿವೆ. ಅಂತಹದ್ದೇ ಮತ್ತೊಂದು ವಚನವನ್ನು ನೋಡುವುದಾದರೆ, ಇಂದು ನಮ್ಮಲ್ಲಿರುವ ಸಂಪತ್ತುನಾಳೆ ಇಲ್ಲದೇ ಇರಬಹುದುಇಲ್ಲದ ಸಂಪತ್ತು ನಾಳೆಒಂದು ವೇಳೆ ಸಿಕ್ಕರೂ ಸಿಗಬಹುದುಆದರೆ ಪ್ರೀತಿ, ವಿಶ್ವಾಸ, ನಂಬಿಕೆಒಮ್ಮೆ ಕಳೆದುಕೊಂಡರೆ ಮತ್ತೆಜೀವನದಲ್ಲಿಬಾರದು- ಜಗದೀಶ  ಇಲ್ಲಿ ವಚನಕಾರರು ಇಂದಿನ ಪೀಳಿಗೆಯವರಿಗೆ ಜೀವನದಲ್ಲಿ ಯಾವುದು ಪ್ರಮುಖ ಎನ್ನುವುದರ ಬಗೆಗೆ ಕಿವಿಮಾತನ್ನು ಹೇಳುತ್ತಿದ್ದಾರೆ. ಹಣದ ಹಿಂದೆಯೇ ಬಿದ್ದಿರುವ ಜಗತ್ತಿಗೆ ಸಂಪತ್ತು ಎನ್ನುವುದು ಕ್ಷಣಿಕವಾದದ್ದು ಎನ್ನುತ್ತಾರೆ. ಸಂಪತ್ತು ಇಂದು ನಮ್ಮ ಬಳಿ ಅಗಾಧವಾಗಿರುತ್ತದೆ. ಆದರೆ ನಾಳೆ ಇಲ್ಲದೇ ಹೋಗಬಹುದು ಅಥವಾ ಇಂದು ಬಡವನಾದವನು ನಾಳೆ ಬಲ್ಲಿದನಾಗಬಹುದು. ನಾವು ನಮ್ಮ ಬಳಿ ಇರುವ ಸಂಪತ್ತನ್ನು ಕಳೆದುಕೊಂಡರೆ  ಯಾವುದೇ ನಷ್ಟವಿಲ್ಲ ಆದರೆ, ಜನರ ನಡುವೆ ಬದುಕುತ್ತಿರುವ ನಾವು ಅವರೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಹೊಂದಿರಬೇಕು. ಏಕೆಂದರೆ ಒಮ್ಮೆ ನಾವು ಇವುಗಳನ್ನು ಕಳೆದುಕೊಂಡರೆ ಎಂದಿಗೂ ಮತ್ತೆ ಪಡೆಯಲು ಸಾಧ್ಯವಿಲ್ಲ. ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಂಡಿರಬೇಕು ಎಂದು ಹೇಳುವ ಈ ವಚನವು ಸಮಯೋಚಿತವಾದದ್ದು. ಸಾವಿರ ತಪ್ಪುಗಳನ್ನು ಮಾಡಿದ್ದರೂಕ್ಷಮಿಸುವ ಮತ್ತು ಬೆಳೆಸುವಗುಣವಿರುವುದು ಕೇವಲ ಜನ್ಮಕೊಟ್ಟತಂದೆ ತಾಯಿಗೆ ಮಾತ್ರ ಹಾಗಾಗಿತಂದೆ ತಾಯಿಯನ್ನು ಗೌರವಿಸುವಜವಾಬ್ದಾರಿ ನಮ್ಮದಾಗಬೇಕು- ಜಗದೀಶ   ಆಧುನಿಕತೆಯ ಈ ಜಗತ್ತಿನಲ್ಲಿ ಇಂದು ಸಾಂಪ್ರದಾಯಿಕ ಮನಸ್ಸಿನ ತಂದೆ ತಾಯಿ ಆಧುನಿಕತೆಯ ಸೋಗಿನಲ್ಲಿರುವ ಮಕ್ಕಳು ಇಂದು ತಂದೆ ತಾಯಿಯರನ್ನು ಹಲವಾರು ರೀತಿಯಲ್ಲಿ ದೂರುವುದನ್ನು ಕಾಣುತ್ತೇವೆ. ಮಕ್ಕಳು ಹುಟ್ಟಿದಾಗಿನಿಂದ ಏನೇ ತಪ್ಪುಮಾಡಿದ್ದರೂ, ಎಷ್ಟೇ ಕಷ್ಟಗಳನ್ನು ನೀಡಿದ್ದರೂ ತಂದೆ ತಾಯಿಯರು ಮಕ್ಕಳನ್ನು ಕ್ಷಮಿಸುತ್ತಾ, ಹೊಂದಾಣಿಕೆ ಮಾಡಿಕೊಳ್ಳುತ್ತಾ ತಾವು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾ ಅವರ ಏಳಿಗೆಗಾಗಿಯೇ ತಮಗೆ ಎಷ್ಟೇ ಕಷ್ಟವಾದರೂ ಶ್ರಮಿಸುತ್ತಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಯಶಸ್ಸನ್ನು ಕಾಣುವಲ್ಲಿ ತಮ್ಮ ಸ್ವಂತ ಸುಖವನ್ನೇ ಮರೆಯುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕಿದ ನಂತರ ವೃದ್ದಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎನ್ನುವ ಒಂದೇ ಒಂದು ನಿರೀಕ್ಷೆಯಷ್ಟೇ ಅವರದ್ದಾರುತ್ತದೆ. ಇಂದಿನ ಝೆನ್ ಜೀ ಮಕ್ಕಳು ಇದನ್ನು ಅರ್ಥಮಾಡಿಕೊಂಡರಷ್ಟೇ ಸಾಕು. ಆದರೆ, ಈಗ ನಡೆಯುತ್ತಿರುವುದಾದರೂ ಏನು? ತಂದೆ ತಾಯಿಯ ಕನಸನ್ನು ಈಡೇರಿಸಬೇಕಾಗಿದ್ದ ಮಕ್ಕಳು ತಾವು ವಿದ್ಯಾವಂತರಾಗಿ ಒಳ್ಳೆಯ ಕೆಲಸಕ್ಕೆ ಸೇರಿ ಹೆಚ್ಚು ಹಣಸಂಪಾದಿಸಿದ ನಂತರ ತಂದೆ ತಾಯಿಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮಕ್ಕಳು ಇಂದು ಅವರಿಗೆ ಎರಡು ಹೊತ್ತಿನ ಊಟ ಹಾಕಲೂ ಕೂಡ ಹಿಂದೆ ಮುಂದೆ ನೋಡುತ್ತಿರುವ ಮಕ್ಕಳನ್ನು ನೋಡುತ್ತಿದ್ದೇವೆ.  ಮಕ್ಕಳ ದೊಡ್ಡ ನಗರ ಜೀವನದ ವ್ಯಾಮೋಹ ಅಥವಾ ವಿದೇಶೀ ವ್ಯಾಮೋಹದಿಂದ ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿ ಅಥವಾ ಅವರನ್ನು ಒಂಟಿಯಾಗಿ ಬಿಟ್ಟು ಕಡೆಗಣಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರಿಗೆ ಬುದ್ಧಿವಾದ ಹೇಳುವಂತಹ ವಚನ ಇದಾಗಿದೆ. ಈ ವಚನದಲ್ಲಿ ತಂದೆ ತಾಯಿಯ ಜೀವನದ ಬಗ್ಗೆ ಆತಂಕವಿದೆ. ವೃದ್ಧಾಪ್ಯದ ಬಗ್ಗೆ ಕಾಳಜಿ ಇದೆ. ಇದರ ಮೂಲಕ ಸಮಾಜವನ್ನು ತಹಬದಿಗೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ನೀತಿಯುಕ್ತ ಜೀವನವನ್ನು ನಡೆಸುವ ಮಾರ್ಗದರ್ಶನವನ್ನು ತಮ್ಮ ವಚನಗಳಲ್ಲಿ ಮಾಡಿದ್ದಾರೆ. ಪ್ರೀತಿ ವಿಶ್ವಾಸವಿರಲಿನೋವು-ನಲಿವಾಗಲಿ ಪತಿ-ಪತ್ನಿಇಬ್ಬರೂ ಗೌರವದಿಂದ ಸಮನಾಗಿಹಂಚಿಕೊಂಡಾಗಲೇ ನಮ್ಮೀ ಬದುಕುಸುಂದರವಾಗುವುದಲ್ಲವೇ – ಜಗದೀಶ      ತಮ್ಮ ನಲವತ್ತನೇ ವರ್ಷದ ದಾಂಪತ್ಯದ ತುಂಬು ಜೀವನವನ್ನು ಸಂಭ್ರಮಿಸುತ್ತಿರುವ ಆಧುನಿಕ ವಚನಕಾರರಾದ ಶ್ರೀ ಎಂ.ಬಿ.ಸಂತೋಷ್ ಅವರು ದಾಂಪತ್ಯದ ಬಗ್ಗೆ ಹಲವು ಸಲಹೆಗಳು ಹಾಗೂ ಮಾರ್ಗದರ್ಶನವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಬೆಳಿಗ್ಗೆ ಮದುವೆ ಸಂಜೆ ವಿಚ್ಚೇದನ ಎಂದಿರುವ ಈ ಕಾಲದಲ್ಲಿಗಂಡ ಹೆಂಡತಿಯರ ನಡುವಿನ ಸಂಬಂಧವು ಬೀದಿಗೆ ಬಂದು ನಿಂತಿದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಸುಳ್ಳಾಗಿದೆ. ಇಂದು ಪ್ರೀತಿ ಪ್ರೇಮ ಮದುವೆಗಳು ನಡೆಯುವಷ್ಟೇ ವೇಗವಾಗಿ ವಿಚ್ಛೇದನಗಳು ನಡೆಯುತ್ತಿವೆ.  ಅಲ್ಲದೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ಅಹಂ ಭಾವ, ಸಂದೇಹ, ಮದುವೆಯಾಚೆಗಿನ ಅನೈತಿಕ ಸಂಬಂಧಗಳು, ಹಣದಾಸೆ ಇವೆಲ್ಲವೂ ಹೆಚ್ಚಾಗಿದೆ. ಇದರಿಂದ ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ದಾರುಣವಾಗಿ ಕೊಲೆಗೈಯ್ಯಲೂ ಸಹ ಹಿಂಜರಿಯದೇ ಇರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ. ಇಂತಹ ಘಳಿಗೆಯಲ್ಲಿ ಯುವ ಜನತೆಗೆ ದಾಂಪತ್ಯ ಎನ್ನುವುದು ಯಶಸ್ವಿಯಾಗಬೇಕಾದರೆ ಪ್ರೀತಿ-ವಿಶ್ವಾಸ, ನೋವು ನಲಿವು ಇವೆಲ್ಲದರಲ್ಲಿಯೂ ಪತಿ-ಪತ್ನಿ ಪರಸ್ಪರ ಗೌರವದಿಂದ ಸಮಾನತೆಯಿಂದ ಬದುಕಿದಾಗಲೇ ಈ ಬದುಕು ಸುಂದರ ಎನ್ನುವ ಮಾರ್ಗದರ್ಶನ ಮಾಡುವವರ ಅವಶ್ಯಕತೆ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಂಗಳ ಹೊಳಪು” ಹೂವಿನ ಪರಿಮಳ ಬಣ್ಣದಲ್ಲಿರದೆಸುಗಂಧವನೇ ಸೂಸುತಿದೆಸಹನೆಯ ತೊರೆದು ನಡೆಯಲು ಜಗದಲ್ಲಿಪ್ರೀತಿಯೇ ಸೋಲುತಿದೆ. ಕಾಡಿನ ದಾರಿಯು ನಾಡನು ಸೇರಲು ಪ್ರಕೃತಿಯೇ ನಗುತಲಿದೆತಿರುಗುವ ಮನುಜನ ಕಂಡು ಭೂಮಿಯೂ ತಿರುಗುತ ನೋಡುತಿದೆ. ಕಂಗಳ ಹೊಳಪಿಗೆ ಮುತ್ತನು ಹುಡುಕಲುಮನಸ್ಸು ಕಡಲಾಳಕ್ಕೆ ಇಳಿಯುತಿದೆಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತಿದೆ. ಸ್ವರಗಳು ಪ್ರಾಸವ ಸೇರಿ ಛಂದಸ್ಸಿನಲ್ಲಿ ಅಡಗುತಿವೆಭಾವಗಳೆಲ್ಲವೂ ಲಯದಲ್ಲಿ ಸೇರಿ ಸಾಹಿತ್ಯವನ್ನು ನೀಡುತಿವೆ. ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು” Read Post »

You cannot copy content of this page

Scroll to Top