“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ
ಆರೋಗ್ಯ ಸಂಗಾತಿ ಗಾಯತ್ರಿ ಸುಂಕದ “ವಿಶ್ವ ಆರೋಗ್ಯ ದಿನಾಚರಣೆ” ನಮ್ಮ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 22ರಂದು ವಿಶ್ವ ಆರೋಗ್ಯ ದಿನಾರಣೆ ಆಚರಿಸಲಾಗುತ್ತಿದೆ.Sound mind in sound body. ಅನ್ನುವ ಹಾಗೆ ಆರೋಗ್ಯಕರ ಶರೀರದಲ್ಲಿ ಮಾತ್ರ ಆರೋಗ್ಯಕರ ಮನಸ್ಸು ಇರಲು ಸಾಧ್ಯ. ಇದರ ಬಗ್ಗೆ ಜಾಗೃತಿ. ಮೂಡಿಸಲು ವಿಶ್ವ ಆರೋಗ್ಯ ದಿನಾಚಣೆ ಆಚರಿಸಲಾಗುತ್ತಿದೆ.ದೈಹಿಕ ಆರೋಗ್ಯ ;- ಯೋಗ,ಧ್ಯಾನ ಪ್ರಾಣಾಯಾಮ, ಉತ್ತಮ ಮತ್ತು ಮಿತವಾದ. ಆಹಾರ ನಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಇಡುತ್ತದೆ.ಮಾನಸಿಕ ಆರೋಗ್ಯ;- ವಿನಾ ಕಾರಣ ಇನ್ನೊಬ್ಬರ ಮೇಲೆ ದ್ವೇಷ ಇಟ್ಟು ಕೊಂಡರೆ ಅದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಉತ್ತಮ ಸಂಗೀತ,ಓದು,ಬರವಣಿಗೆ, ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಸಾಮಾಜಿಕ ಆರೋಗ್ಯ ;- ಮನುಷ್ಯನು ಮೂಲತಃ ಸಂಘ ಜೀವಿ. ಇಲ್ಲಿ ಮನುಷ್ಯನು ಸಂಭಂಧಗಳೊಡನೆ ಬದುಕುತ್ತಾನೆ.ಉತ್ತಮ ತಿಳುವಳಿಕೆ,ಸಹಕಾರ, ನಮ್ಮನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುತ್ತವೆ. ಸಾಮಾಜಿಕ ಜಾಲತಾಣ ಗಳಲ್ಲಿ ಬರೆಯುವುದು, ಓದುವುದು, ಪರಸ್ಪರ ಚರ್ಚಿಸುವುದು ನಮ್ಮಲ್ಲಿ ಹೊಸತನ ತುಂಬುತ್ತವೆ. ನಮ್ಮಲ್ಲಿದ್ದ ಒಂಟಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ.ಎಷ್ಟೋ ಜನರು ತಮ್ಮ ಒಂಟಿತನ ಹೋಗಲಾಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಖುಷಿ ಕಂಡು ಕೊಳ್ಳುತ್ತ್ತಾರೆ.ಸಾಂಸ್ಕೃತಿಕ ಆರೋಗ್ಯ ;- ಉತ್ತಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು ನಮ್ಮಲ್ಲಿ ಕ್ರಿಯಾ ಶೀಲತೆ ತುಂಬುತ್ತವೆ.ಬನ್ನಿ, ಉತ್ತಮ ಆರೋಗ್ಯ ಅಳವಡಿಸಿ ಕೊಳ್ಳೋಣ. ಗಾಯತ್ರಿ ಸುಂಕದ
“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ Read Post »



