ಧಾರಾವಾಹಿ ಸಂಗಾತಿ-38
ಸವಿತಾ ದೇಶಮುಖ

ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ
ಗಡಿಭಾಗ ಕನ್ನಡತಿಯ ಕೂಗು

ನಡುನಾಡ ಅಣ್ಣಂದಿರೆ,ಗಡಿ ಭಾಗದವರಿಗ
ಕಡಿಗಣ್ಣಿಲಿ ನೋಡಬ್ಯಾಡರಿ, ನಾವೆಲ್ಲ
ಒಡಹುಟ್ಟೀದ ಕನ್ನಡ ಮಕ್ಕಳು*
ಬೇಲೂರಿನಿಂದ ಮೈಸೂರಿನವರೆಗೆ ಅಖಂಡ ಕರ್ನಾಟಕದ ಬಗ್ಗೆ ಮಾತನಾಡುವುದು ಅಂದರೆ ಒಂದು ಸಂಧಿಗ್ಧ ಪರಿಸ್ಥಿತಿ ಉಂಟು ಮಾಡುವುದೆನ್ನುವ ಸಮಯದಲ್ಲಿ ಜಯದೇವಿ ತಾಯಿಯವರು ನಿರ್ಭೀತೆಯಿಂದ ಪ್ರಚಾರ ಮಾಡಿದ್ದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
*೨೫-೫-೧೯೫೨-ಕರ್ಮವೀರ*
೧೯೫೨ರ ಬೇಲೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಮುಖ್ಯಮಂತ್ರಿಗಳಾದ ಕೆಂಗಲ ಹನುಮಂತಯ್ಯ ನವರು ತಮ್ಮ ಭಾಷಣದಲ್ಲಿ ಏಕೀಕರಣದ ಬಗ್ಗೆ ಒಂದು ಶಬ್ದವನ್ನೇ ಎತ್ತಲಿಲ್ಲ… ಇದರಿಂದ ಜನ ನಿರಾಶರಾಗಿದ್ದಾರೆ. ಬೇಲೂರಿನ ಸಮ್ಮೇಳನದ ಮಹಿಳಾ ಪರಿಷತ್ತಿನಲ್ಲಿ ಭಾಗವಹಿಸಿದ್ದ ಜಯದೇವಿ ತಾಯಿ ಅವರು ಕರ್ನಾಟಕದ ಗತವೈಭವವನ್ನು ಸ್ಮರಿಸಿ ಕೊಳ್ಳುತ ಸಂತೃಪ್ತರಾಗದೆ ನಾಡಿನ ಐಕ್ಯತೆಗೆ ಭದ್ಧರಾಗಬೇಕೆಂದು ಕರೆ ನೀಡಿದರು.
*೨೧-೫-೧೯೫೨-ಪ್ರಜಾವಾಣಿ ವರದಿ*
“ನಮ್ಮ ನಾಡಿನವರು ನಮ್ಮ ಸಂಸ್ಕೃತಿಯವರೆಂದು ನಾನು ಗಡಿಭಾಗವಾದ ಸೊಲ್ಲಾಪುರದಿಂದ ಮೈಸೂರಿಗೆ ಪ್ರವಾಸ ಕೈಗೊಂಡೆ, ಆದರೆ ಇಲ್ಲಿ ಮರಾಠರಿಗಿಂತ ಹೆಚ್ಚಿನ ವಿರೋಧಕರನ್ನು ಕಂಡೆ, ಮರಾಠಿಗರು ವಿರೋಧಿಸುವುದು ಸ್ವಾಭಾವಿಕ ಆದರೆ ನಮ್ಮ ಬಗ್ಗೆ ಮೈಸೂರಿನವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ….
ನಮಗೆ ಬೇರೆಯವರದು ಬೇಕಿಲ್ಲ ನಮಗೆ ಬರಬೇಕಾಗಿದ್ದನ್ನು ಉಳಿಸಿಕೊಳ್ಳೋಣ ನಮ್ಮ ಸೋಲಾಪುರ ಹೋಗುವ ಅಂಚಿನಲ್ಲಿ ಇದೆ… ಆದರೆ ಬೇಲೂರು ಹೋದಿತು… ಮೈಸೂರಿನವರು ಎಚ್ಚರದಿಂದ ಇರಲಿ ಮರಾಠಿಗರಿಗೆ ಇರುವ ತಾಯಿ ನುಡಿಯ ನಿಷ್ಠೆ ನಮ್ಮಲ್ಲಿ ಬರೆಯಿಲಿ…..!!!ಎಂದು ಅಂಗಲಾಚಿದರು.
“ಕನ್ನಡಿಗರೇ ಜಾಗೃತರಾಗಿ ಸ್ವತಂತ್ರ ನಾಡವನ್ನು ಕಟ್ಟಬೇಕು ಇಲ್ಲವಾದರೆ ನಮಗೆ ಉಳಿಗಾಲವಿಲ್ಲ ಎಂದು ಜಯದೆವಿತಾಯಿಯವರು ತಮ್ಮ ಭಾಷಣದಲ್ಲಿ ಹೇಳುತ್ತ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಎಂದಿಗೂ ಮರೆಯುತ್ತಿರಲಿಲ್ಲ.
ಹೈದರಾಬಾದ ರಾಜ್ಯದ ತಳವಾಡದಲ್ಲಿ ನಡೆದ ಅಖಿಲ ಕನ್ನಡಿಗರ ಸಭೆಯಲ್ಲಿ ಹೈದರಾಬಾದಿನ ಮುಖ್ಯಮಂತ್ರಿ ಬಿ ರಾಮಕಿಶನರಾವ ಅವರು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯದೇವಿ ತಾಯಿ ಲಿಗಾಡೆಯವರು ಒಹಿಸಿಕೊಂಡಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಬಿ ರಾಮ ಕಿಸರಾವ ಅವರನ್ನು ಒತ್ತಾಯಿಸುವ ಮೂಲಕ ಗೊತ್ತುವಳಿಯು ಸ್ವೀಕರಿಸಲಾಯಿತು.
ಕನ್ನಡ ಶಿಕ್ಷಕರು ಹೈದರಾಬಾದ ರಾಜ್ಯದಲ್ಲಿ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಜಯದೇವಿ ತಾಯಿಯವರು….ನಾಲ್ಕು ನೂರು ಜನ ಶಿಕ್ಷಕರನ್ನು ನೇಮಿಸಿದರು.ಅವರು ಮುಖ್ಯವಾಗಿ ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುತ್ತಿದ್ದರು. ಅದೇ ಕಾಲಕ್ಕೆ ಸೊಲ್ಲಾಪುರ ಕೆಲ ಭಾಗದಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲಿ ನೇಮಕರಾದ ಶಿಕ್ಷಕರ ಖರ್ಚನ್ನು ತಾಯಿಯವರೇ ವಹಿಸುತ್ತಿದ್ದರು.
೧೯೫೩ ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಮಿತಿಯಲ್ಲಿ ಪಾಸಾದ ಗೊತ್ತುವಳಿಯ ಪ್ರಕಾರ ಪ್ರಾಂತ ಪುನರ ರಚನಾ ಆಯೋಗವು ೨೯-೧೨-೫೩ ರಲ್ಲಿ ನಿಯಮಿಸಲ್ಪಟ್ಟಿತು.
ಪ್ರಾಂತ ಪುನರ್ರಚನಾ ಆಯೋಗದ ಎದುರು ಸಾಕ್ಷಿಯಾಗಿ ನುಡಿಯುವ ಆಯೋಗದಲ್ಲಿ ಜಯದೇವಿ ತಾಯಿಯವರು ಶ್ರೇಷ್ಠ ಸದಸ್ಯರಾಗಿದ್ದರು. ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ಜಯದೇವಿ ತಾಯಿಯವರಿಗೆ ದಿಲ್ಲಿಯವರೆಗೆ ಹೋಗಲಾಗಲಿಲ್ಲ .
ಅದನ್ನು ತುಂಬಾ ವಿಷಾದದಿಂದ ಶ್ರೀ ನಿಜಲಿಂಗಪ್ಪನವರು ಹೇಳ್ತಾರೆ…. ತಾಯಿಯವರು ಅಲ್ಲಿಯವರಿಗೆ ಬಂದಿದ್ದರೆ ಅವರ ಉಪಸ್ಥಿತಿಯು ಅತ್ಯಂತ ಫಲದಾಯಕವಾಗಿರುತ್ತಿತ್ತು ಎಂದು ಉದ್ಗರಿಸಿದರು. ಶ್ರೀ ಕೆ.ಎಫ್ ಪಾಟೀಲ, ನಿಜಲಿಂಗಪ್ಪ, ಹಳ್ಳಿಕೇರಿ, ಕಂಠಿ ಇವರು ಯಾರೇ ಬಂದರೂ ಸೊಲ್ಲಾಪುರದಲ್ಲಿ ಜಯದೇವಿ ತಾಯಿಯವರ ಹತ್ತಿರ ಬರದೆ ಚರ್ಚಿಸದೆ ಅವರ ಸಲಹೆ ಪಡೆಯದೆ ಯಾವ ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ.
ಮುಂದೆ ೧೯೫೪ ಕೆ.ಪಿ.ಸಿ.ಸಿ ಮುಂದೆ ಕರ್ನಾಟಕದ ಬೇಡಿಕೆಯನ್ನು ಮಂಡಿಸಲು ನಿಯುಕ್ತರಾದ ಉಪಸಮಿತಿಯವರು… ‘ವಿಜಾಪುರ ಜಿಲ್ಲೆಯ ಗಡಿ ಸಮಿತಿ’ ಎಂದು ಗುರುತಿಸಿದ ಎಂಟು ಜನರಲ್ಲಿ ಜಯದೇವಿ ತಾಯಿಯವರು ಪ್ರಮುಖ ರಾಗಿದ್ದರು.
ಅಷ್ಟರಲ್ಲಿ ಗಡಿಭಾಗದ ಮರಾಠಿ ಮುಖಂಡರ ಗಮನವು ಗಡಿಭಾಗದ ಕನ್ನಡಿಗರ ಮೇಲೆ ಬಿತ್ತು… ಹೀಗಾಗಿ ಸೊಲ್ಲಾಪುರ ಬೆಳಗಾವಿ ನಿಪ್ಪಾಣಿ ಖಾನಾಪುರ ನಂದಗಡ ಜತ್ತ ಅಕ್ಕಲಕೋಟೆ ಅಂತಹ ಮಹತ್ವದ ಕನ್ನಡ ಪ್ರದೇಶಗಳನ್ನು ಪಡೆಯಲು ಮುಂದಾದರು ಮರಾಠಿಗರು ಸಮಿತಿ ರೂಪಿಸಿದರು.
ಮುಖ್ಯಮಂತ್ರಿ ಆಗಿದ್ದರು ಸೊಲ್ಲಾಪುರ ನಗರವನ್ನು ಒಳಗೊಂಡಿದ್ದ ಸೊಲ್ಲಾಪುರ ಕೆಲವು ತಾಲೂಕುಗಳಲ್ಲಿ ನೂರಕ್ಕೆ 90ರಷ್ಟು ಕನ್ನಡಿಗರಿಂದ ಕೂಡಿತ್ತು.. ಸೊಲ್ಲಾಪುರ ನಗರ ಮಾತ್ರ ಮಿಶ್ರ ಭಾಸಿಕರಿಂದ ಕೂಡಿತ್ತು. ಈ ಮಿಶ್ರ ನುಡಿಯಲ್ಲಿಯೇ ಕನ್ನಡಿಗರು ತೆಲುಗು ಉರ್ದು ಮರಾಠಿ ಭಾಷಿಕರು ಇದ್ದರು. ಇದರಲ್ಲಿ ಅತ್ಯಧಿಕ ಸಂಖ್ಯೆ ಕನ್ನಡಿಗರದಾಗಿತ್ತು. ಅನ್ಯ ಭಾಷಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಈ ಕಾರಣದಿಂದ ಮರಾಠಿ ಮುಖಂಡರು ಸೊಲ್ಲಾಪುರ ತಾಲೂಕನ್ನು ಒಡೆದು ನೇರ ಮರಾಠಿ ತಾಲೂಕಿನಿಂದ ಸಣ್ಣಪುಟ್ಟ೪0 ಮರಾಠಿ ಪ್ರಾಧಾನ್ಯ ಹಳ್ಳಿಗಳನ್ನು ಸೋಲಾಪುರ ನಗರಕ್ಕೆ ಜೋಡಿಸಿದರು .
ಅದಕ್ಕೆ ಉತ್ತರ ಸೋಲಾಪುರ ತಾಲೂಕ ಎಂದು ಹೆಸರಿಟ್ಟರು .ಉಳಿದ ಸೋಲಾಪುರ ಭಾಗಕ್ಕೆ ದಕ್ಷಿಣ ಸೋಲಾಪುರ ವೆಂದು ಹೆಸರಿಡಲಾಯಿತು.
ಇಂದಿಗೂ ಈ ಎರಡು ತಾಲೂಕು ಸೋಲಾಪುರ ನಗರದಲ್ಲಿ ಬೇರೆ ಬೇರೆಯಾಗಿವೆ. ಈ ವಿಂಗಡಣೆಯ ಮುಖ್ಯ ಉದ್ದೇಶ ತಾಲೂಕನ್ನು ಘಟಕವಾಗಿ ಹಿಡಿದರೆ.. ಅನಿವಾರ್ಯವಾಗಿ ಮಹಾರಾಷ್ಟ್ರಕ್ಕೆ ಸೇರಿದರೂ ದಕ್ಷಿಣ ಸೋಲಾಪುರ ಮಾತ್ರ ಮೈಸೂರಿಗೆ ಸೇರಬೇಕು. ಈ ರೀತಿಯ ಪೂರ್ವುದೇಶದಿಂದ ನಡೆದ ಸಮಿತಿಗಳ ಕಾರ್ಯ ಸೊಲ್ಲಾಪುರ ಕರ್ನಾಟಕದಿಂದ ಕೈತಪ್ಪಿತುವಂತೆ ಮಾಡಿದವು.
*ನುಡಿ ನಾಡ ಕಟ್ಟುವಾಗ ಗಡಿಭಾಗ
ಮರಿಬ್ಯಾಡರಿ ತೊಡಕೆ ಇಡಬೇಡಿರಿ
ಕಡೆ ತನಕ ಬೇಡುವೆ ಸರಕಾರಕ*
ಜಯದೇವಿ ತಾಯಿಯವರ ಈ ಮಾತುಗಳಲ್ಲಿ ಅಖಂಡ ಕರ್ನಾಟಕದ ಕನಸು, ಗಡಿಭಾಗದ ಕನ್ನಡಿಗರ ನೋವು ತೋಡಿಕೊಂಡರು.
ಕನ್ನಡ ಭಾಷೆಯ ಆಧಾರದ ಮೇಲೆ , ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲಾ ಒಂದಾಗಿ ಸೇರಿಸಬೇಕು ಎಂಬುದು ತಾಯಿಯವರ ಆಶಯ.
ನಾಡಿನ ಗಡಿಯಲ್ಲಿ ಇರುವ ಕನ್ನಡಿಗರನ್ನು ಮಾತ್ರ ಮರೆಯಬೇಡಿ. ಸೊಲ್ಲಾಪುರ, ಅಕ್ಕಲಕೋಟೆ, ಜತ್, ಮೀರಜ್, ಜಮಖಂಡಿ ಮುಂತಾದ ಗಡಿ ಪ್ರದೇಶಗಳಲ್ಲಿ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬದುಕುತ್ತಿದ್ದಾರೆ. ಅವರನ್ನೂ ಅಖಂಡ ಕರ್ನಾಟಕದ ಭಾಗವೆಂದು ಪರಿಗಣಿಸಬೇಕು ಎಂದರು.
ಗಡಿಭಾಗದ ಕನ್ನಡ ಪ್ರದೇಶಗಳು ಕರ್ನಾಟಕದೊಂದಿಗೆ ಒಂದಾಗಲು ಯಾವುದೇ ಅಡ್ಡಿ ಅಥವಾ ತೊಡಕು ಉಂಟುಮಾಡಬಾರದು. ಭಾಷೆ ಮತ್ತು ಜನರ ಹಕ್ಕಿನ ಆಧಾರದ ಮೇಲೆ ಅವರ ಆಶಯವನ್ನು ಗೌರವಿಸಬೇಕು ಎಂಬ ಆಗ್ರಹಿಸಿದರು.
ಇದು ಕೇವಲ ಒಂದು ದಿನದ ಮನವಿಯಲ್ಲ. ಸರ್ಕಾರವು ಗಡಿಭಾಗದ ಕನ್ನಡಿಗರ ಸಮಸ್ಯೆಯನ್ನು ಪರಿಹರಿಸುವವರೆಗೂ, ಕೊನೆಯವರೆಗೂ ನಾನು ಈ ಬೇಡಿಕೆಯನ್ನು ಮುಂದಿಡುತ್ತೇನೆ ಎಂಬ ಜಯದೇವಿ ತಾಯಿಯವರ ಅಚಲ ಸಂಕಲ್ಪವನ್ನು ತೋರಿದರು.
ಜೀವನಚರಿತ್ರೆಯಲ್ಲಿ ಬಳಸಬಹುದಾದ ಭಾವನಾತ್ಮಕ
ಜಯದೇವಿ ತಾಯಿಯವರು ಗಡಿಭಾಗದಲ್ಲಿ ಬದುಕುತ್ತಿದ್ದ ಕನ್ನಡಿಗರ ಪರವಾಗಿ ಕೇಳಿಬಂದ ಒಬ್ಬ ಕನ್ನಡ ತಾಯಿಯ ಹೃದಯದ ಮೊರೆಯಾಗಿತ್ತು.
ಅಖಂಡ ಕರ್ನಾಟಕದ ನಕ್ಷೆಯನ್ನು ರೂಪಿಸುವಾಗ ಅದರ ಗಡಿಯಲ್ಲಿ ನಿಂತಿರುವ ಕನ್ನಡಿಗರನ್ನು ಮರೆಯಬಾರದು ಎಂಬುದು ಅವರ ಕಳಕಳಿ. ಭಾಷೆ, ನೆಲ ಮತ್ತು ನಾಡಿನ ಬಂಧದಿಂದ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದ ಜನರನ್ನು ಯಾವುದೇ ರಾಜಕೀಯ ಗಡಿರೇಖೆ ಬೇರ್ಪಡಿಸಬಾರದು ಎಂಬುದು ಅವರ ಹೋರಾಟದ ಆಶಯವಾಗಿತ್ತು.
ಅದಕ್ಕಾಗಿ ಅವರು ಸರ್ಕಾರವನ್ನು ಪದೇಪದೇ ಎಚ್ಚರಿಸುತ್ತಿದ್ದರು“ಗಡಿಭಾಗವನ್ನು ಮರೆಯಬೇಡಿ ಎಂದಿದ್ದರು ಕನ್ನಡ ನಾಡನ್ನು ಕಟ್ಟುವಾಗ ಗಡಿಭಾಗ ಕನ್ನಡಿಗರನ್ನೂ ಒಳಗೊಳ್ಳುವಿಕೆಯ ಮನವಿ ಅವರ ಜೀವನದ ಕೊನೆಯವರೆಗೂ ಮುಂದುವರಿದ ಅಖಂಡ ಕರ್ನಾಟಕದ ಬದ್ಧತೆಯ ಪ್ರತಿಧ್ವನಿಯಾಗಿತ್ತು
ಸವಿತಾ ದೇಶಮುಖ




