ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ”

ಕಾವ್ಯ ಸಂಗಾತಿ ಕಾವ್ಯ ಸುಧೆ “ಮಾಯಾಜಾಲ” ನಿನ್ನೊಲುಮೆ ಭಾವದ ತೇರನು ಏರುತಾಹಾದಿಗುಂಟ ಹೂವ ಹಾಸಿ ಕಾದೆನುಇರುಳ ಒಂದು ಜಾವ ಕಳೆಯಲುನೆಟ್ಟ ನೋಟ ನಿನ್ನ ಜಾಡ ಅರಿಯದೆಮೂಕ ಮನದಿ ಮೌನ ರೋದನೆ ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣ, ಬೇಕು ಬೇಡಎನದೆ ಹೋದೆ ಕಾಣದಾಗೆ ತಲ್ಲಣನಿನ್ನ ಮಧುರ ನೆನಪು ಮರುಕಳಿಸಿಈಟಿಯಂಗಿರಿದು ಎದೆಗೆ ನೋವ ಬಿತ್ತರ ಭಾವಗೀತೆಯಂತೆ ನಲಿದ ಬಾಳಿನಲ್ಲಿತೊರೆದು ಹೋದೆ ಇರಿಸಿ ಬಾಧೆಮಾಯವಾದೆಯೇಕೆ ಮಾಯಾಮೃಗದಂತೆಕೈಗೆ ಸಿಗದೆ ಸುಳಿವು ಕೂಡ ನೀಡದೆ ಹೋದೆಕೆಣಕಿ ಶೋಧೆ ಸಿಲುಕಿಸೆನ್ನ ಜಾಲದಲಿ…..!! ಕಾವ್ಯ ಸುಧೆ.

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ” Read Post »

ಇತರೆ

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಸ್ಟಿಸ್ ಸಂದೀಪ್ ಮೆಹತಾ ಅವರು ನಿಮ್ಮ ಪತ್ನಿ ನಿಮ್ಮ ಕೆಲಸದಾಕೆ ಖಂಡಿತವಾಗಿಯೂ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. 21ನೇ ಶತಮಾನದತ್ತ ಕಾಲಿಡುತ್ತಿರುವ ಭಾರತೀಯ ಕೌಟುಂಬಿಕ ಬದುಕಿನಲ್ಲಿ ಈ ಹೇಳಿಕೆಯು ಅತ್ಯಂತ ಮಹತ್ವದ್ದೆ೦ದು ದಾಖಲಿಸಬಹುದು.ಅವರ ಈ ಹೇಳಿಕೆಯು ಮದುವೆ ಎನ್ನುವುದು ಗಂಡ ಮತ್ತು ಹೆಂಡತಿ ಇಬ್ಬರ ಪರಸ್ಪರರ ಸಾಂಗತ್ಯದ ಬದುಕು… ಇದನ್ನು ಪರಸ್ಪರರಿಗೆ ಗೌರವ ನೀಡುವ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ದಂಪತಿಗಳು ನಿರ್ವಹಿಸಬೇಕೇ ಹೊರತು 21ನೇ ಶತಮಾನಕ್ಕೆ ಅಥವಾ ಪ್ರಸ್ತುತ ದಿನಮಾನಗಳಿಗೆ ಹೊಂದದ ಲಿಂಗ ಸಂಬಂಧಿ ಜವಾಬ್ದಾರಿಗಳಂತೆ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.ಅವರ ಈ ಹೇಳಿಕೆಯು ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳು ಹಾಗೂ ಅದು ನಮ್ಮ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಕಾರಣ ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳದು ಎಂಬ ಪುರುಷ ಪಾರಮ್ಯದ ಭಾರತ ದೇಶದ ಲಿಖಿತ ನಿಯಮಗಳ ಕುರಿತು ಪ್ರಶ್ನೆ ಮಾಡುತ್ತಿದೆ. ಕಾನೂನಾತ್ಮಕ ಚೌಕಟ್ಟುಗಳು ಬದಲಾಗುತ್ತಿರುವ ಅಭಿವೃದ್ಧಿಪರ ಸಾಮಾಜಿಕ ಮೌಲ್ಯಗಳ ಜೊತೆಗೆ  ಹೊಂದಿಕೊಂಡು ನಡೆಯುತ್ತಿವೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನುಡಿಗಳು ಪ್ರತಿಪಾದಿಸುತ್ತಿದ್ದು ಪಿತೃ ಸತ್ತಾತ್ಮಕ ಯೋಚನೆಯ ಆಳವಾದ ಬೇರುಗಳನ್ನು ಬುಡ ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು ಸಾಮಾಜಿಕ ಕಾರ್ಯಕರ್ತರು ಈ ವಿಷಯವನ್ನು ಎತ್ತಿ ಹಿಡಿದಿದ್ದಾರೆ.ಸಮಾಜದಲ್ಲಿ ನಿಜವಾದ ಲಿಂಗ ಸಮಾನತೆಯನ್ನು ತರಬೇಕು ಎಂದರೆ ಗೃಹ ಕೃತ್ಯದಲ್ಲಿ ಇರುವ ಘನತೆಯನ್ನುಉಳಿದವರೆಗೂ ಗೊತ್ತು ಮಾಡಿಕೊಡಬೇಕು ಹಾಗೂ ಗೃಹ ಕೃತ್ಯ ಎಂಬುದು ಕೇವಲ ಹೆಣ್ಣು ಮಕ್ಕಳ ಕರ್ತವ್ಯವಲ್ಲ ಬದಲಾಗಿ ಭೂಮಿಯ ಮೇಲೆ ಇರುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಇದಾಗಿದೆ ಹಾಗೂ ಇದನ್ನು ಪಾಲಿಸುವುದನ್ನು ನಾವು ಕಲಿಯಲೇಬೇಕು… ಅದೆಷ್ಟೇ ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಕೌಟುಂಬಿಕವಾಗಿ ಗೃಹ ಕೃತ್ಯಗಳನ್ನು ಸಂಭಾಳಿಸಿಕೊಂಡು ನಡೆದರೆ ಮಾತ್ರ ಪುರುಷ ಈ ಜಗತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.ಆಹಾರವನ್ನು ಸೇವಿಸುವ, ಬಟ್ಟೆ ಬರೆಗಳನ್ನು ಧರಿಸುವ, ಮನೆಯೆಂಬ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಪ್ರತಿಯೊಬ್ಬರು ಕೂಡ ಈ ಮೂಲಭೂತ ಅವಶ್ಯಕತೆಯನ್ನು ಬದುಕಿನ ಭಾಗವಾಗಿ  ತಮ್ಮದಾಗಿಸಿಕೊಳ್ಳಲೇಬೇಕು.ಹೆಣ್ಣು ಮಕ್ಕಳ ಮೇಲೆ ಗೃಹಕೃತ್ಯದ ಭಾರವನ್ನು ಹೊರೆಸಿರುವ ಸಂಪ್ರದಾಯವಾದಿಗಳ ಮೇಲೆ ಸವಾಲೆಸೆಯುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದ್ದು ಗೃಹ ಕೃತ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲಿನ ಅನಗತ್ಯ ಹೊರೆಯನ್ನು ನಿವಾರಿಸಲು ಪ್ರಯತ್ನಿಸಲೇಬೇಕು. ನೋಡಿದಿರಾ ಸ್ನೇಹಿತರೆ! ಅಜ್ಞರ ನೂರಾರು ಮಾತುಗಳಿಗಿಂತ ಪ್ರಾಜ್ಞರ ಒಂದು ಮಾತು, ಒಂದು ವಾಕ್ಯ ಬೀರುವ ಪರಿಣಾಮ ಬಹಳ ಮೌಲಿಕವಾದದ್ದು ಗುರುತರವಾದದ್ದು. ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಒಂದು ಪ್ರಶ್ನೆ ಸಾಮಾಜಿಕ ವಲಯದಲ್ಲಿ ಚಿಂತನೆಯ ಒಂದು ಕಿಡಿಯನ್ನು ಹಬ್ಬಿಸಿದ್ದು  ಹೆಣ್ಣು ಮಕ್ಕಳ ಹಿತರಕ್ಷಣೆಯ ಕಾನೂನುಗಳನ್ನು ರಕ್ಷಿಸುವಲ್ಲಿ  ಪರಸ್ಪರರ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ನ್ಯಾಯಯುತವಾದ, ಸೌಹಾರ್ದತೆಯಿಂದ ಕೂಡಿದ ಹಾಗೂ ಸಮತೋಲನದಿಂದ ಕೂಡಿದ ಸಾಂಗತ್ಯದ ವೈವಾಹಿಕ  ಬಂಧನಗಳು ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಬಲ್ಲವು.ಹೊಸ ಬಗೆಯ ವಿವಾಹಗಳು ಲಿಂಗ ಸಮಾನತೆಯನ್ನು ಹೊಂದಿದ್ದು ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ಹಂಚಲ್ಪಡುವ ನಿಟ್ಟಿನಲ್ಲಿ ಭಾರತ ದೇಶವು ಬದಲಾಗುತ್ತಿರುವುದು ಸ್ವಾಗತಾರ್ಹವಾಗಿದೆ.ಲಿಂಗ ಸಮಾನತೆಯ ಕೂಗು ಕಳೆದ ಎರಡು ಮೂರು ದಶಕಗಳಿಂದ ಕೇಳಿ ಬರುತ್ತಿದ್ದರು ಕೂಡ ಈ ಕುರಿತು ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ…. ಪ್ರಸ್ತುತ ದಿನಮಾನಗಳಲ್ಲಿ ಪುರುಷನಷ್ಟೇ ವಿದ್ಯಾರ್ಹತೆಯನ್ನು ಹೊಂದಿರುವ ಮಹಿಳೆ  ಆತನಷ್ಟೇ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿ ತನ್ನ ಮೇಲೆ ಅಧಿಕಾರ ಚಲಾಯಿಸುವ ಗಂಡನಾಗದೆ, ಬದುಕನ್ನು ಹಂಚಿಕೊಳ್ಳುವ ಸಂಗಾತಿಯಾಗಲಿ ಎಂದು ಆಕೆ ಬಯಸುತ್ತಾಳೆ. ತನ್ನ ಹಕ್ಕುಗಳ ಕುರಿತು ಸಂಪೂರ್ಣ ಅರಿವನ್ನು ಹೊಂದಿರುವ ಆಕೆ ಪುರುಷ ಪ್ರಧಾನ ಸಮಾಜದ ಬಹುತೇಕ  ರೀತಿ ನೀತಿಗಳನ್ನು ಈಗಾಗಲೇ ಧಿಕ್ಕರಿಸುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾನತೆಯ ಬದುಕನ್ನು ಹಂಚಿಕೊಂಡು ಬಾಳಲು ಇಚ್ಚಿಸುತ್ತಿದ್ದಾಳೆ. ಇದರ ನಿಜವಾದ ತತ್ವವನ್ನು ಅರಿತಿರುವ ಬುದ್ಧಿಜೀವಿಗಳು ಕೂಡ ಇದನ್ನು ಅನುಮೋದಿಸಿದ್ದು  ಇದೀಗ ಸುಪ್ರೀಂ ಕೋರ್ಟ್ ಇದಕ್ಕೆ  ತನ್ನದೇ ಆದ ರೀತಿಯಲ್ಲಿ ಒಪ್ಪಿಗೆಯ ಮುದ್ರೆಯನ್ನು ಒತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವೀಣಾ ಹೇಮಂತಗೌಡ ಪಾಟೀಲ್

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಕಾವ್ಯಯಾನ

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ಅವ್ವ ನೀನಿನ್ನು ಇರಬೇಕಿತ್ತು.” ಮಕ್ಕಳೆಲ್ಲ ತವರಿಗೆ ಬಂದರೆಏನ್ ಸಡಗರ ಈ ಅವ್ವಗವಯಸ್ಸು ಮರುತ ಸಣ್ಣ ಹುಡುಗಿ ಆಗಿಬಿಡುತ್ತಿದ್ಲುರವೆ ಉಂಡೆ ಖಾರದ ಮಂಡಾಳ ಮುಂದಿಟ್ಟು ತಿನ್ನು ತಿನ್ನು ಅಂತಒಂದೇ ವರಾತ ಹಚ್ಚತಿದ್ಲು ಅವ್ವ ಅದಕ್ಕೆ ನೀನು ಇನ್ನಷ್ಟು ದಿನ ಇರಬೇಕಿತ್ತು. ಈಗ ಅಲ್ಲಿ ರವೆ ಉಂಡಿನೂ ಇಲ್ಲ ಮಂಡಾಳನು ಇಲ್ಲ ಬರೀ ಶೂನ್ಯ ನಿನ್ನ ಕೈ ರುಚಿ ತಿನ್ನೋ ಭಾಗ್ಯನು ಇನ್ನಿಲ್ಲ ಏನ್ ಚಂದ ನಿನ್ ಮಾತು ಏನ್ ಚೆಂದ ನಿನ್ನ  ನಗುಹಣೆ ತುಂಬಾ ಕುಂಕುಮ ತಲೆ ತುಂಬಾ ಸೆರಗು ತುರುಬಿನಲ್ಲಿ ಸದಾ ಹೂವಿನ ಮಾಲೆ. ನಿನ್ ನೋಡೋದೇ ಒಂದು ಸಡಗರ. ಅವ್ವ ಅದಕ್ಕೆ  ನೀನಿನ್ನು ಇರಬೇಕಿತ್ತು. ಆಷಾಢ ಮಾಸಾ ಶ್ರಾವಣ ಮಾಸ ಅಂತಉಡಿ ತುಂಬಿ ಹರಿಸಿ ಹಾರೈಸಿ ಕಳಿಸ್ತಿದ್ದೆನಿನ್ನಲ್ಲಿರೋದನ್ನೆಲ್ಲ ಮಕ್ಕಳಿಗೆ ಕೊಟ್ಟು ಪ್ರೀತಿಯ  ಅಮೃತದಾರೆ ಹರಿಸುತ್ತಿದ್ದೆ.ಅವ್ವ ನಿನ್ನ ಆಶೀರ್ವಾದ ಬಲದಿಂದ ಅಸಾಧ್ಯವೆಲ್ಲ ಸಾಧ್ಯವಾಗಿದ್ದು ಸತ್ಯ  ಅವ್ವ ಅದಕ್ಕೆ ನೀನಿನ್ನು  ಇರಬೇಕಿತ್ತು. ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ನಿನ್ನ ಸಂಭ್ರಮಕ್ಕೆ ಮಿತಿಯೇ ಇಲ್ಲ  ನಿನ್ನ ಜೀವನ ಪ್ರೀತಿಗೆ ಸಾಟಿಯೇ ಇಲ್ಲ. ನೀನು ಇಷ್ಟು ಬೇಗ ಅಗಲಿ ಅಂತ ನಾವೆಲ್ಲ ಅಂದುಕೊಂಡೆ ಇರಲಿಲ್ಲ ಅಪ್ಪನಗಲಿ ಒಂದು ದಿನ ಇದ್ದವಳಲ್ಲ ಈಗ ಅಪ್ಪ ಆಕಾಶ ದಿಟ್ಟಿಸತ್ತಾ ಮೌನವಾಗಿ ಕಣ್ಣೀರ್ ಆಗ್ತಾರೆ .  ಅವ್ವ ಅದಕ್ಕೆ ನೀನಿನ್ನು ಇರಬೇಕಿತ್ತು.  ಅವ್ವ ಎಲ್ಲರ ಸ್ಥಾನ ತುಂಬುತ್ತಾಳೆ  ಆದ್ರೆ ಅವ್ವನ ಸ್ಥಾನ ಯಾರು ತುಂಬೋಕಾಗಲ್ಲ ಅಂತ ಅರ್ಥ ಆಗಿದೆ.ನೀನಿಲ್ಲದ ಮನೆ ಮನೆಯೇ ಅಲ್ಲ ನೀರಿಲ್ಲದ ಕೆರೆಗೆ ಕರು ಹೋಗಿ  ಬಂದಂತೆ ಆಗಿದೆ ಮಕ್ಕಳ ಸ್ಥಿತಿ.  ನಿನ್ನ ಬಳೆಗಳ ಸದ್ದಿಲ್ಲದ ಅಡುಗೆ ಮನೆ ಮೌನವಾಗಿ ಮಲಗಿದೆ.ತಾಯಿ ಇದ್ರೆ ತವ್ರೆಚ್ಚು ಅದಕ್ಕೆ  ನೀನಿನ್ನು ಇರಬೇಕಿತ್ತು ಅವ್ವ. ಫೋನ್ ಹಚ್ಚಿ ಕೊಡಿ ಹಚ್ಚಿ ಕೊಡಿ ಅಂತ ಅಪ್ಪಗ ದುಂಬಾಲು ಬೀಳ್ತಿದ್ದೆ.ಫೋನ್ ಹಚ್ಚಿ ಕೊಟ್ರೆ ಮುಗಿಯಿತು ಗಂಟೆಗಟ್ಟಲೆ ಎಲ್ಲವನ್ನು ವಿಚಾರಸ್ತಿದ್ದೆ.ಈಗ್ ನಿನ್ ಫೋನು ಮಾತು ನಗುನಿನ್ನ ಸಾಮಿಪ್ಯ ಎಂದೆಂದಿಗೂ ದೂರಾದವು.ಅವ್ವ ಅದಕ್ಕೆ ನೀನು ಇನ್ನಷ್ಟು ದಿನ  ಇರಬೇಕಿತ್ತು. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.” Read Post »

ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಶಶಿಕಾಂತ್‌ ಪಟ್ಟಣ ರಾಮದುರ್ಗ ಷಟ್ಪದಿಯ ಕವಿ ರಾಘವಾಂಕ ರಾಘವಾಂಕನು ಹರಿಹರನ ಸೋದರಳಿಯ ಮತ್ತು ಶಿಷ್ಯ ತನ್ನ ಸಾಹಿತ್ಯ ರಚನೆಯ ಆರಂಭದಲ್ಲಿ ರಾಘವಾಂಕನು ಕೇವಲ ವೈಷ್ಣವ ಪರಂಪರೆಯ ಕಾವ್ಯಗಳನ್ನು ರಚಿಸಿದನೆಂದು ಮತ್ತು ತನ್ನ ಗುರು ಮತ್ತು ಸೋದರ ಮಾವನಿಗೆ ಆ ಪುರಾಣಗಳನ್ನು ತೋರಿಸಿದಾಗ ಸಿಟ್ಟಿಗೆದ್ದ  ಹರಿಹರ  ತನ್ನ ಶಿಷ್ಯ ಮತ್ತು ಸೋದರಳಿಯನಿಗೆ ಬಾಯಿಯ ಮೇಲೆ ಬಡಿದನೆಂದು  ಆಗ ಐದು ಹಲ್ಲುಗಳು ಉದರಿದವೆಂದು  ಮುಂದೆ ನೀನು ಶರಣರ ಜೀವನಾಧಾರಿತ ಕೃತಿಗಳನ್ನು ಬರೆಯಬೇಕು ಅಂದರೆ ಮಾತ್ರ ನಿನಗೆ ಉದುರಿ ಹೋದ ಹಲ್ಲುಗಳು ಮರಳಿ ಬರುತ್ತವೆ ಎಂದು ಆಜ್ಞಾಪಿಸಿದನಂತೆ.  ಆಗ  ರಾಘವಾಂಕ 1ಸಿದ್ಧರಾಮ ಪುರಾಣ2.ಸೋಮನಾಥ ಚರಿತೆ3. ವೀರೇಶ ಚರಿತೆ4.ಶರಭ ಚಾರಿತ್ರ5.ಹರಿಹರ ಮಹತ್ವ ಎಂಬ ಶರಣರ ಲಿಂಗಾಯತ ತತ್ವಗಳ ಚರಿತೆಯನ್ನು ಬರೆದನಂತೆ ಮತ್ತೆ ಹಲ್ಲುಗಳು ಕಾಣಿಸಿಕೊಂಡವು ಎಂಬ  ಪ್ರತೀತಿ ಇದೆ. ಇದು ಹರಿಹರನ ಸಾತ್ವಿಕ ಕೋಪ ಮತ್ತು  ರಾಘವಾಂಕನ ಗುರು ಭಕ್ತಿಯನ್ನು ತೋರುತ್ತದೆ.  ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ  ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು.ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ , ಹರಡಿಕೊಂಡಿವೆ.ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವಾಗಿ ಮಾಡಿಕೊಂಡ ಸಿದ್ದನಂಜೇಶನ ರಾಘವಾಂಕ ಚಾರಿತ್ರ ಒಂದು  ವಿಶೇಷ ರೀತಿಯ ಕೃತಿಯಾಗಿದೆ. ಜನನ ಮತ್ತು ಜೀವನ            ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . ‘ಉಭಯಕವಿ ಕಮಲರವಿ’ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ ‘ಕವಿಶರಭಭೇರುಂಡ’ ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ. ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತ್ರೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಹೆಸರು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ.ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು ಅನಂತರ ರಾಘವಾಂಕನು ಶೈವಕೃತಿ ಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು. ಕೃತಿಗಳುರಾಘವಾಂಕನ ಕಾವ್ಯಗಳು ಆರು  ಕೃತಿಗಳು೧.ಹರಿಶ್ಚಂದ್ರ ಕಾವ್ಯ.೨.ಸಿದ್ಧರಾಮ ಪುರಾಣ೩.ಸೋಮನಾಥ ಚರಿತೆ೪. ವೀರೇಶ ಚರಿತೆ೫.ಶರಭ ಚಾರಿತ್ರ೬.ಹರಿಹರ ಮಹತ್ವ – ಈ ಕೃತಿ ಇನ್ನೂ ಸಿಕ್ಕಿಲ್ಲ.            ಇವಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ.ಶರಭ ಚಾರಿತ್ರ ಹಾಗೂ ಹರಿಹರ ಮಹತ್ವ ಇನ್ನೂ ದೊರೆತಿಲ್ಲ.ಇದೂ ಅಲ್ಲದೆ “ದೇವಾಂಗ ದಾರಿಮಯ್ಯನ ಪುರಾಣ”ಎಂಬ ಸಾಂಗತ್ಯ ಗ್ರಂಥವೊಂದು ದೊರಕಿದ್ದು , ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೇ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ತಿಳಿಯಬೇಕಾಗಿದೆ. ವಿಮರ್ಶೆ:ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ.’ ಜನ ಬದುಕಬೇಕೆಂದು ಕಾವ್ಯಮುಖದಿಂಪೇಳ್ದನನಪೇಕ್ಶೆಯಿಂದ’ ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ , ವರಸುತನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು ತನ್ನದೇ ಆದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ.ತನಗೆ ಹಿನ್ನೆಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ವದ ಸಾಧನೆ.ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತೊಬ್ಬ ಕವಿ ರಾಘವಾಂಕ.ಹರಿಶ್ಚಂದ್ರಕಾವ್ಯಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೇ ಶ್ರೇಷ್ಥವಾದುದು ಮಾತ್ರವಲ್ಲ . ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ.ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕಾರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶಸೃಷ್ಟಿ , ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ ಎನ್ನುವ ತತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ.. ಇದರಲ್ಲಿ ಹದಿನಾಲ್ಕು ಸ್ಥಳಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ.ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೂರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿಹದ , ನಾಟ್ಯಮಯವಾದ ಸನ್ನಿವೇಶಗಳು , ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ , ಇವೆಲ್ಲವನ್ನೂ ವ್ಯಾಪಿಸಿರುವ ದರ್ಶನ ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು. ಸಿದ್ಧರಾಮ ಪುರಾಣ‘ಕಾಯಕವೇ ಕೈಲಾಸ’ ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ . ‘ ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ’ ಎಂಬ ಸೂತ್ರವೆ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ವ. ಇದು ರಾಘವಾಂಕನ ಧರ್ಮ ಶ್ರದ್ಧೆಯ ಸಾತ್ವಿಕ ಪ್ರತಿನಿಧಿಯಾಗಿದೆ.ಸೋಮನಾಥ ಚರಿತೆಸೌರಾಶ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಶ್ಟ್ರದ ಸೋಮನಾಥನನ್ನು ಅಲ್ಲಿಯ ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೆಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ.ವೀರೇಶ ಚರಿತೆ ಹಾಗೂ ಶರಭ ಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ.ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ.ಶಿವನ ಅವತಾರದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರೆ ದೇವತೆಗಳಿಗಿಂತ ಶಿವನೇ ಶ್ರೇಶ್ಠ ಎಂಬುದನ್ನು ಸಾರುವ ಉದ್ದೇಶ ಇಲ್ಲಿದೆ.ಶರಭ ಚಾರಿತ್ರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ.    ವಚನ ರಗಳೆಯ ನಂತರದ ನಡುಗನ್ನಡದ  ಸಾಹಿತ್ಯದ ಯುಗ ಪ್ರವರ್ತಕನೆಂದು  ಪ್ರತೀತಿ ಪಡೆದ ಹೊಸ ಪ್ರತಿಮೆಗಳನ್ನು ಬಳಸಿದ ಜ್ಞಾನವುಳ್ಳ ಕವಿಯಾಗಿದ್ದಾನೆ.ಸಿದ್ಧರಾಮನ ಚರಿತೆಯಲ್ಲಿ ಕಂಡು ಬೆರಗಾದರಾ ಪುಣ್ಯ ದಂಪತಿಗಳು ಎನ್ನುವ ಕಾವ್ಯದಲ್ಲಿಬಾಲಕನು ಮಲ್ಲಯ್ಯನನ್ನು ಕಾಣುವ ಹಂತದಲ್ಲಿ ಅಳುತ್ತ ಗುಹೆ ಗವ್ವರಗಳ ಮುಂದೆ ಮರಳಿನ ಹುಡಿಯಲ್ಲಿ ಬಿಕ್ಕುತ್ತಿರುವಾಗ ತರು ಗುಲ್ಮ ಲತೆಗಳೆದ್ದು ಅಳುತಿರ್ದವು, ಗುಹೆ ಗವ್ವರಗಳು ಬಾಲಕ ಸಿದ್ಧರ್ಮಯ್ಯನ ಅಳುವಿನ ಆಕ್ರಂದನವನ್ನು ಮಾರ್ದನಿಸುತ್ತಿದ್ದವು ಎಂದು ಸೊಗಸಾಗಿ ವರ್ಣಿಸಿದ್ದಾನೆ. ಶರಣರ ಆಶಯಗಳನ್ನು ಅರ್ಥೈಸಿಕೊಂಡು ನ್ಯಾಯ ಒದಗಿಸಲು ಶ್ರಮಿಸಿದ ದಿಟ್ಟ ಕವಿ ರಾಘವಾಂಕ. ರಾಘವಾಂಕರ ಹೆಸರಿನಲ್ಲಿ ಕೆಲ ಪ್ರಕ್ಷಿಪ್ತ ಚರಿತ್ರೆಗಳು ಸೊಲ್ಲಾಪೂರ ಭಾಗದಲ್ಲಿ ಹುಟ್ಟಿಕೊಂಡು ಸಾಹಿತ್ಯ ಮತ್ತು ಶರಣರ ಚರಿತ್ರೆಗೆದ್ರೋಹ ಮಾಡಿವೆ.————————————————————————– ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top