ನಾಮದೇವ ಕಾಗದಗಾರ ಅವರ “ನೆಲದ ರೋಧನೆ”
ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನೆಲದ ರೋಧನೆ” ಜೀವಂತಿಕೆ ಇಲ್ಲದ ಮಣ್ಣು;ಭೂಮಿಯನ್ನು ನಾವೇಕೊಂದು ನೇತು ಹಾಕಿದ್ದೇವೆ ***ಕೊಡಲಿಯ ಅಲಗಿನಲಿಮರಗಳ ಒಡಲು:ಭೂಮಿ ಬೆತ್ತಲೆ..! ಬೇಯುತ್ತಿದೆ ***ಎಲ್ಲ ಬದಲಾಗಿದೆ;ಊರುಕೇರಿ ಜೊತೆಗೆಮನುಷ್ಯರೂ ಕೂಡಾ ***ಸೂರ್ಯ ಸತ್ತು ಕತ್ತಲಾಗಿದೆಜಗತ್ತು ಬೆತ್ತಲು;ನಾವು ಕಪ್ಪು ಚುಕ್ಕಿಗಳು ***ಮರಗಳು ಪದೇ-ಪದೇಕೊಡಲಿಗೇ ಓಟು ಹಾಕುತ್ತಿದ್ದವು!ಭೂಮಿ ಬರಡಾಗಿದೆ ***ಮೌನದಲಿ ಆರಿದ ದೀಪ,ಹೊಂಬಿಸಲಾಗಿ ಬಾನಿಗೆಲ್ಲ ಹರಡಿದೆಬಣ್ಣಗಳ ಗರಿಬಿಚ್ಚಿ ಭೂಮಿ ಅಪ್ಪಿದೆ ***ಗಾಯಗೊಂಡ ಜಾಗೆಯಲ್ಲಿ ರಕ್ತಕಣ್ಣೀರು;ಚಿತ್ರ ಬಿಡಿಸುತ್ತಾ ರೂಪ ಕಳೆದುಕೊಂಡ ಪರಿಸರ,ಭೂಮಿ ರೋಧಿಸುತ್ತಿದೆ! ನಾಮದೇವ ಕಾಗದಗಾರ
ನಾಮದೇವ ಕಾಗದಗಾರ ಅವರ “ನೆಲದ ರೋಧನೆ” Read Post »









