ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಎತ್ತ ಸಾಗುತ್ತಿದೆ” ಎತ್ತ ಸಾಗುತ್ತಿದೆ ನವ ಸಮಾಜಸಮಾನತೆ ಗಾಳಿಗೆ ತೂರಿನಾಗರಿಕತೆಯ ಕುರುಹುಗಳ ಅರಿಯದೆಮಾನವೀಯತೆಯ ಬೆತ್ತಲಾಗಿಸಿದೆ . ಅರೆಬೆತ್ತಲೆ ಮೈ ಮನಮನಸಾ ಇಚ್ಛೆಯ ಮೆರವಣಿಗೆಸಾಮರಸ್ಯ ಕುರುಡಾಗಿಸಿವಿಕೃತ ಮನಸ್ಸಿನ ಅನಾವರಣ. ನಶೆಯ ಗುಂಗಲಿಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದುಜವಾಬ್ದಾರಿ ಮರೆತುಕರುಳ ಕುಡಿಗಳು ಹೊಂಚು ಹಾಕುತ್ತಿವೆ. ಬಿಕೋ ಎನ್ನುತ್ತಿವೆ ಹಳ್ಳಿ ಹಾಡುಹೂಬಳ್ಳಿ ಗಳು ಮುಳ್ಳು ಮೊನಚಾಗಿಹಿರಿಯ ಜೀವಗಳು ಹಪಹಪಿಸುತ್ತಿವೆಜೀವ ಕೊಂಡಿ ಕಳಚುತಿದೆ. ಎಲ್ಲೆಂದರಲ್ಲಿ ಕಾರ್ಖಾನೆಕೆಲಸದ  ಆಸೆಗೆ ಭೂಮಿ ಮಾರಿಕೊಂಡುಉಸಿರಾಡಲು ಕಲುಷಿತ ಗಾಳಿಹೊಟ್ಟೆ ಹೊರೆಯಲು ಜೀತದಾಳು. ರಕ್ತ ಸಂಬಂಧಕೆ  ಆಗುಂತಕರಾಗಿತಮ್ಮವರನೆ ಹೆಣವಾಗಿಸಿಮನೆಯಲ್ಲಿ ಹೂಳುವರೆಲ್ಲವಿಕೃತ ಮನಸುಗಳು. ಉಡ್ವೇಗಕೆ ತಲೆದೂಗಿಹಸುಳೆಗಳು ನರಳಾಟಕಾಮಂಧತೆಯ ಅನಾವರಣಅಕ್ರಮ ದಂದೆಗಳ ತಾಣ. ಮದ್ದು ಗುಂಡುಗಳ ಹಾವಳಿಕೆಂಡ ಮಂಡಲ ವಾಗಿಸಿದೆನೆತ್ತರು ಹರಿಸಿಒತ್ತರಿಸಿದ ನೋವು ಕೇಳುವವರಾರು. ಪ್ರಾರ್ಥನೆಯಲು ಹಿಂಸಾಚಾರಬೋಧನೆಯಲು ಭಿನ್ನಾಚಾರಉಂಡ ಮನೆಗೆ ಕನ್ನ ಹಾಕುವ ವಿಚಾರ ತಿಳಿಯುತ್ತಿಲ್ಲ ನವ ಸಮಾಜಕೆಹರುಕ ಬಟ್ಟೆ ತೊಟ್ಟುಮೈ ತೋರಿಸುತಬದ್ಧತೆ ಇಲ್ಲದ ಪರಿಪಾಠತರಾವರಿ ಮೋಹಕೆ ಬಲಿಯಾಗುತಿದೆ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನರಕದ ಬೆಂಕಿ” ಓ…ಅಹಂಕಾರಿ ಮನುಜನೀನೆಂದೂ ಚಿರಂಜೀವಿಯಲ್ಲ,!    ನಿನ್ನ ಅಧಿಕಾರದ ದರ್ಪ   ನೀನಗೆಂದೂ ಅದು ಶಾಶ್ವತವಲ್ಲ,! ಧರ್ಮದ ಮಧವೇರಿಸಿಅನ್ಯ ಧರ್ಮಗಳ ನೀ ಕೆಣಕದಿರು,!    ರಾಜಕೀಯ ಪ್ರೇರಿತನಾಗಿ   ದ್ವೇಷದ ಜಪವನು ಮಾಡದಿರು,! ಮತಾಂಧರನು ನೀನಾಗದೆಮಾನವ ಕುಲದ ಸುಪುತ್ರನಾಗು,!    ಮರಣದ ಕುಣಿಕೆ ಹಿಡಿದು   ಯಮ ನಿನ್ನ ಬೆನ್ನಟ್ಟುತ್ತಿರುವನು! ಸತ್ತು ಮಣ್ಣಾಗುವ ಮುನ್ನಮಂದಿಯ ಮನಸ್ಸಿಗೆ ಅರಸನಾಗು.!    ಕೆಡುಕಿನ ದಾರಿಗಳ ಹಿಡಿದು   “ನರಕದ ಬೆಂಕಿ”ಗೆ ಆಹುತಿ ಆಗದಿರು.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ” Read Post »

ಕಾವ್ಯಯಾನ

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ!

ಕಾವ್ಯ ಸಂಗಾತಿ ಗೌರಾ ಹಾಲಭಾವಿ.    ಯುದ್ಧ ಯುದ್ಧ ಯುದ್ಧ! ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ  ಮನಸ್ಸಿನ  ಉನ್ಮಾದ!ಯಾಕಿಷ್ಟು ಮಮಕಾರ  ಈ ಯುದ್ಧ ಎಂಬ ಮಾರಿಯ ಮೇಲೆ ನಿನಗೆ  ಏ ಮನುಷ್ಯ ಜೀವಿಯೇ?ಯಾರಿಗಾಗಿ?ಏನು ಸಾಧಿಸಿದೆ?ಯಾರಿಗಾಯಿತು ಪ್ರಯೋಜನ?ನಿನಗಾಗಿ , ನಿನ್ನ  ಅಹಂಕಾರಕ್ಕಾಗಿ,ನಿನ್ನ ಕೀರ್ತಿಗಾಗಿ,ನೀನು ಎಲ್ಲರನ್ನು ನಿನ್ನ  ಆಧೀನದಲ್ಲಿ ಇರಿಸುವದಕ್ಕಾಗಿ!ಎಲ್ಲದರ ಮೇಲಿನ ಅಧಿಪತ್ಯಕ್ಕಾಗಿ ,ನಿನ್ನ ಪ್ರತಿಷ್ಠೆಗಾಗಿ , ಹಠಕ್ಕಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ,ಹೊನ್ನಿಗಾಗಿ!ಏನು ಮಾಡಿದೆ ?ಏನು ಮಾಡಿದೆ  ಹಿಂತಿರುಗಿ  ನೋಡೊಮ್ಮೆ!ಯಾವುದು  ನಿನಗೆ  ಸುಖ  ಕೊಟ್ಟಿತು?ಯಾವದು ನಿನ್ನೊಡನೆ  ಬಂದಿತು  ಉಸಿರೊಮ್ಮೆ!ರಾಮಾಯಣದ ರಾಮ  ರಾವಣರ  ಯುದ್ಧ, ಮಹಾಭಾರತದ ಪಾಂಡವ ಕೌರವರ  ಮಹಾಯುದ್ಧದಿಂದ,ಶುರುವಾದ  ಈ ಯುದ್ಧವೆಂಬ ಮಹಾ ಪಿಡುಗು  ,ಇಂದು ಎಲ್ಲರ  ಮನೆಯ  ಬಾಗಿಲಿಗೆ ಬಂದು  ನಂತಿತಲ್ಲ!ಸತ್ತವರೆಷ್ಟೋ,  ನೊಂದವರೆಷ್ಟೋ,ಕಳೆದುಕೊಂಡವರೆಷ್ಟೋ,ಕಳೆದುಹೋದವರೆಷ್ಟೋ,ಅನಾಥರಾದವರೆಷ್ಟೋ?ಯಾರಿಗೆ ಗೊತ್ತು ,ಯಾರಿಟ್ಟಿದ್ದಾರೆ ಲೆಕ್ಕ ?ಗೆದ್ದವರ  ಲೆಕ್ಕ ಇದೆ,ಸೋತವರದ್ದೂ  ಇದೆ ಲೆಕ್ಕ!ನಿಜವಾಗಿ  ಹೋರಾಡಿ  ಜೀವ ಕಳೆದುಕೊಂಡು ,ಏನನ್ನೂ  ಪಡೆಯದವರ  ಲೆಕ್ಕ  ಎಲ್ಲಿದೆ?ಒಂದಲ್ಲ  ಎರಡಲ್ಲ , ಸಾಲು  ಸಾಲು,ಸಾವಿರಾರು.ಎಷ್ಟೆಲ್ಲ  ಯುದ್ಧಗಳು,ಏನೆಲ್ಲ  ಸಾಧಿಸಿವೆ?ಜಗದ ಜನರ ವಿಚಾರ ಬದಲಾಯಿತಾ?ಮತ್ತೆ  ಮತ್ತೆ ಅದೇ ಪುನರಾವರ್ತನೆ.ಯಾಕೆ  ಕೆಡುಕಿನ ಉನ್ಮಾದ  ಮನುಷ್ಯ  ಮನದಲ್ಲಿ?ಎರಡು ಮಹಾಯುದ್ಧದಿಂದ  ಪಾಠ  ಕಲಿತಿಲ್ಲ!ಈಗ ರಷ್ಯಾ ಉಕ್ರೇನ ಯುದ್ಧ!ಮುಗಿಯಲಿಲ್ಲ,ಮುಗಿಯುವ ಲಕ್ಷಣ ಇಲ್ಲ ಇನ್ನೂ!ನಿನ್ನ  ನಾಶ ನನ್ನ  ಗುರಿ!ಎನೀ  ಸಾಧನೆ?ಈ ಪ್ರಶ್ನೆಯ  ಕೊನೆ  ಎಲ್ಲಿ?ಗೊತ್ತಿಲ್ಲ.ಬಹುಶಃ  ಮನುಷ್ಯ  ಇರುವವರೆಗೆ!ಮನುಷ್ಯ ಕುಲ ಅಳಿಯುವವರೆಗೆ !ಬಗೆಹರಿಯದ  ಸಮಸ್ಯೆ!!ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ ಈ ಮನಸ್ಸಿನ  ಉನ್ಮಾದ! ಗೌರಾ ಹಾಲಭಾವಿ.   

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ! Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಶತಕದ ಸಾಧಕ ಪುಲಿಗೆರೆ ಸೋಮನಾಥ ಕನ್ನಡ ಸಾಹಿತ್ಯ ಪರಂಪರೆ ಕನ್ನಡ ಸಾಹಿತ್ಯ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾದ ಸಂಪ್ರದಾಯವಾಗಿದೆ. ಭಾರತದ ಅತ್ಯಂತ ಹಳೆಯ ಸಾಹಿತ್ಯ ಸಂಪ್ರದಾಯಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳೊಂದಿಗೆ ಬೆರೆತು ವಿಕಸನಗೊಂಡಿದೆ. ಕನ್ನಡ ಭಾಷೆ ಹಲ್ಮಡಿ ಶಾಸನದಲ್ಲಿ ಕಂಡು ಬಂದರೂ ಸಹಿತ ಅದಕ್ಕಿಂತ  ಮೂರು ಶತಮಾನಕ್ಕೂ ಅಧಿಕವಾದ ಪ್ರಾಚೀನ ಭಾರತೀಯ ದ್ರಾವಿಡ ಭಾಷೆಯಾಗಿದೆ. ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲ (ಜೈನ ಯುಗ / ಪಂಪ ಯುಗ) ಕ್ರಿ.ಶ. ೫ ನೇ ಶತಮಾನದ ಹಲ್ಮಿಡಿ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದೆ. ಕ್ರಿ.ಶ. ೮೫೦ ರ ಸುಮಾರಿನ ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ನಮಗೆ ದೊರೆತಿರುವ ಮೊದಲ ಸಾಹಿತ್ಯಿಕ ಗ್ರಂಥವಾಗಿದೆ. ಪಂಪ ಯುಗ: ೧೦ ನೇ ಶತಮಾನವನ್ನು ಕನ್ನಡ ಸಾಹಿತ್ಯದ ‘ಚಿನ್ನದ ಯುಗ’ ಎನ್ನಲಾಗುತ್ತದೆ. ರತ್ನತ್ರಯರು: ಆದಿಕವಿ ಪಂಪ (ವಿಕ್ರಮಾರ್ಜುನ ವಿಜಯ, ಆದಿಪುರಾಣ), ಪೊನ್ನ ಮತ್ತು ರನ್ನ ಕನ್ನಡದ ಮಹಾಕವಿಗಳಾಗಿದ್ದಾರೆ. ಶೈಲಿ: ಈ ಕಾಲದಲ್ಲಿ ‘ಚಂಪೂ’ (ಗದ್ಯ ಮತ್ತು ಪದ್ಯ ಮಿಶ್ರಿತ) ಶೈಲಿಯು ಪ್ರಸಿದ್ಧವಾಗಿತ್ತು. ೨. ನಡುಗನ್ನಡ ಕಾಲ (ವಚನ ಮತ್ತು ವೈಷ್ಣವ ಯುಗ) ೧೨ ನೇ ಶತಮಾನದಿಂದ ಕನ್ನಡ ಸಾಹಿತ್ಯವು ರಾಜಾಶ್ರಯದಿಂದ ಹೊರಬಂದು ಸಾಮಾನ್ಯ ಜನರ ಭಾಷೆಯಾಗಿ ಮಾರ್ಪಟ್ಟಿತು.ವಚನ ಸಾಹಿತ್ಯ: ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ವಚನ ಚಳವಳಿ ಆರಂಭವಾಯಿತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ವಚನಕಾರರು ಸರಳ ಕನ್ನಡದಲ್ಲಿ ಬದುಕಿನ ತತ್ವಗಳನ್ನು ಬರೆದರು. ಹರಿಹರ ಮತ್ತು ರಾಘವಾಂಕ: ಹರಿಹರನು ‘ರಗಳೆ’ ಸಾಹಿತ್ಯವನ್ನೂ, ರಾಘವಾಂಕನು ‘ಷಟ್ಪದಿ’ ಶೈಲಿಯನ್ನೂ ಪರಿಚಯಿಸಿದರು. ದಾಸ ಸಾಹಿತ್ಯ: ಭಕ್ತಿ ಪಂಥದ ಭಾಗವಾಗಿ ಪುರಂದರದಾಸರು, ಕನಕದಾಸರು ಮುಂತಾದ ಹರಿದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕುಮಾರವ್ಯಾಸ: ‘ಕರ್ಣಾಟ ಭಾರತ ಕಥಾಮಂಜರಿ’ (ಗದಗಿನ ಭಾರತ) ಮಹಾಕಾವ್ಯದ ಮೂಲಕ ನಡುಗನ್ನಡದ ಶ್ರೇಷ್ಠ ಕವಿಯಾಗಿ ಹೊರಹೊಮ್ಮಿದನು. ಇಂತಹ ಸುದೀರ್ಘ ಸಾಹಿತ್ಯ ಪರಂಪರೆಯ ಶ್ರೇಷ್ಠ ಶತಕ ಸಾಧಕ ಪುಲಿಗೆರೆ ಸೋಮನಾಥ (ಪುಲಗೇರೆ ಸೋಮನಾಥ) ಕನ್ನಡ ಸಾಹಿತ್ಯ ಲೋಕದ ಒಬ್ಬ ಪ್ರಸಿದ್ಧ ಹಳಗನ್ನಡದ ಕವಿ.  ಇವರು ಪ್ರಮುಖವಾಗಿ ತಮ್ಮ ನೀತಿಪ್ರಧಾನ ಕಾವ್ಯವಾದ  ಸೋಮೇಶ್ವರ ಶತಕ’ಕ್ಕಾಗಿ ಜನಪ್ರಿಯರಾಗಿದ್ದಾರೆ.ಕವಿಯ ಕುರಿತಾದ ಪ್ರಮುಖ ವಿವರಗಳು  ವೈಯಕ್ತಿಕ ವಿವರಗಳು ಮತ್ತು ಕಾಲ ಇವರು ಸುಮಾರು ಕ್ರಿ.ಶ. ೧೨೯೯ ಅಥವಾ ೧೩ನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದರು ಎಂದು ಅಂದಾಜಿಸಲಾಗಿದೆ. ಇವರು ಹೊಯ್ಸಳ ರಾಜರ ಆಶ್ರಯದಲ್ಲಿದ್ದರು. ಜನ್ಮಸ್ಥಳ: ಇವರು ಪ್ರಸ್ತುತ ಗದಗ ಜಿಲ್ಲೆಯ (ಹಳೆಯ ಧಾರವಾಡ ಜಿಲ್ಲೆ) ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಎಂಬ ಊರಿನವರು.ಪಾಂಡಿತ್ಯ: ಸೋಮನಾಥನು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಮಹಾ ಪಂಡಿತನಾಗಿದ್ದನು. ಸಾಹಿತ್ಯ ಕೃಷಿ ಮತ್ತು ಅಂಕಿತ ನಾಮ ಇವರ ಪದ್ಯಗಳ ಅಂಕಿತ ನಾಮ “ಹರಹರಾ ಶ್ರೀ ಚೆನ್ನಸೋಮೇಶ್ವರಾ” ಅಥವಾ “ಹರಹರ ಶ್ರೀ ಚನ್ನಸೋಮೇಶ್ವರ”.ಸೋಮೇಶ್ವರ ಶತಕ: ಇದು ಇವರ ಅತ್ಯಂತ ಪ್ರಸಿದ್ಧ ಕೃತಿ.  ವೃತ್ತ ಛಂದಸ್ಸಿನಲ್ಲಿ (ಮತ್ತೇಭವಿಕ್ರೀಡಿತ ವೃತ್ತ) ರಚಿತವಾಗಿರುವ ಈ ಕಾವ್ಯವು ಒಟ್ಟು 100 ಪದ್ಯಗಳನ್ನು ಒಳಗೊಂಡಿದೆ. ಇವು ಸಮಾಜಕ್ಕೆ ಉತ್ತಮ ನೀತಿ, ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ. ರತ್ನಾಕರಂಡಕ: ಇವರು ಚಂಪೂ ಶೈಲಿಯಲ್ಲಿ ‘ರತ್ನಾಕರಂಡಕ’ ಎಂಬ ಕಾವ್ಯವನ್ನೂ ರಚಿಸಿದ್ದಾರೆ. ಪ್ರಸಿದ್ಧ ಸಾಲುಗಳುಇವರ ಸೋಮೇಶ್ವರ ಶತಕದ ಈ ಸಾಲು ಕನ್ನಡ ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ:”ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ…”(ಇದರ ಅರ್ಥ: ಮನುಷ್ಯನು ಸ್ವಲ್ಪ ಜ್ಞಾನವನ್ನು ತಿಳಿದವರಿಂದ ಕಲಿತು, ಇನ್ನು ಸ್ವಲ್ಪ ಜ್ಞಾನವನ್ನು ಶಾಸ್ತ್ರಗಳನ್ನು ಕೇಳಿ ಪಡೆಯುತ್ತಾ ಜ್ಞಾನಿಯಾಗಬೇಕು.) ಪುಲಿಗೆರೆ ಸೋಮನಾಥ ಮೂಲತಃ ಜೈನ ಧರ್ಮೀಯನಾಗಿದ್ದು ಶರಣರ ವಚನಗಳನ್ನು ಆಳವಾಗಿ ಓದಿಕೊಂಡು ನಡುಗನ್ನಡ ದೇಸಿ ಪದ್ಧತಿಯನ್ನು ತನ್ನ ಕಾವ್ಯ ಶೈಲಿಯನ್ನಾಗಿ ಪರಿವರ್ತಿಸಿದನು. ಬಸವಣ್ಣ ಅಕ್ಕ ಮಹಾದೇವಿ ಮತ್ತು ಇತರ ಶರಣರ ವಚನಗಳ ಪ್ರಭಾವ ಈತನ ಮೇಲೆ ಅಪಾರವಾಗಿ ಬೀರಿತ್ತು. ಇವನ ಶತಕಗಳು ಮುಂದೆ ಸರ್ವಜ್ಞ ಮತ್ತು ತತ್ವ ಪದಕಾರರಿಗೆ ಪ್ರಭಾವ ಬೀರಿರಬಹುದು ಎಂದೆನಿಸುತ್ತಿದೆ.ಒಟ್ಟಾರೆ ಸೋಮನಾಥನ ಶತಕಗಳು ಇಂದಿಗೂ ಕನ್ನಡ ಸಾಹಿತ್ಯ ಲೋಕದ ಅಪೂರ್ವ ಆಸ್ತಿ ಎಂದು ಹೇಳ ಬಹುದು ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top