ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಬರವಣಿಗೆಯ ನಿಜಸ್ವರೂಪ” ವಿಶೇಷ ಲೇಖನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

ವಿಶೇಷ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಬರವಣಿಗೆಯ ನಿಜಸ್ವರೂಪ” ಬರವಣಿಗೆಯ ನಿಜಸ್ವರೂಪ        ಇತ್ತೀಚಿನ ಸಾರಸ್ವತ ಲೋಕದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಪದಗಳಲ್ಲಿ ವಿಮರ್ಶೆ, ಸಂಶೋಧನೆ, ಕೃತಿ ಪರಿಚಯ ಮತ್ತು ಕೃತಿ ವಿಶ್ಲೇಷಣೆ ಪ್ರಮುಖವಾಗಿವೆ. ಆದರೆ ಈ ಪದಗಳು ಹೆಚ್ಚು ಬಳಕೆಯಾಗುತ್ತಿರುವಷ್ಟೇ ಅವುಗಳ ಮೂಲ ಅರ್ಥ ಮತ್ತು ಪರಿಕಲ್ಪನೆಗಳು ಮಸುಕಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಂದು ಪುಸ್ತಕದ ಕುರಿತು ಎರಡು ಪುಟಗಳ ಪರಿಚಯ ಬರೆದರೂ ಅದನ್ನು ವಿಮರ್ಶೆ ಎಂದು ಕರೆಯಲಾಗುತ್ತಿದೆ; ಕಥಾಸಾರವನ್ನು ಹೇಳಿದರೂ ಅದನ್ನೇ ವಿಶ್ಲೇಷಣೆ ಎಂದು ಭಾವಿಸಲಾಗುತ್ತಿದೆ; ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಅದನ್ನು ವಿಮರ್ಶೆ ಎಂದು ಪರಿಗಣಿಸಲಾಗುತ್ತಿದೆ; ಕೆಲವು ಉಲ್ಲೇಖಗಳನ್ನು ಸೇರಿಸಿದ ಮಾತ್ರಕ್ಕೆ ಅದೇ ಸಂಶೋಧನೆ ಎಂಬ ತಪ್ಪು ಕಲ್ಪನೆಯೂ ಬೆಳೆಯುತ್ತಿದೆ. ಈ ಪರಿಕಲ್ಪನಾತ್ಮಕ ಗೊಂದಲವು ಕೇವಲ ಪದಗಳ ಬಳಕೆಯ ಸಮಸ್ಯೆಯಲ್ಲ; ಅದು ಸಾಹಿತ್ಯಿಕ ಮೌಲ್ಯಮಾಪನದ ಗುಣಮಟ್ಟ, ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ಬರವಣಿಗೆಯ ಶೈಕ್ಷಣಿಕ ಘನತೆಯ ಮೇಲೂ ನೇರ ಪರಿಣಾಮ ಬೀರುತ್ತಿದೆ.      ವಾಸ್ತವವಾಗಿ ಬರವಣಿಗೆಯ ಪ್ರತಿಯೊಂದು ಪ್ರಕಾರಕ್ಕೂ ತನ್ನದೇ ಆದ ಉದ್ದೇಶ, ವಿಧಾನ, ವ್ಯಾಪ್ತಿ ಮತ್ತು ಮಿತಿ ಇವೆ. ಕೃತಿ ಪರಿಚಯವು ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದ್ದರೆ, ಕೃತಿ ವಿಶ್ಲೇಷಣೆಯು ಕೃತಿಯ ಅಂತರಂಗವನ್ನು ತೆರೆದಿಡುತ್ತದೆ. ಇನ್ನೂ ವಿಮರ್ಶೆಯು ಕೃತಿಯ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದ್ದರೆ, ಸಂಶೋಧನೆಯು ಹೊಸ ಜ್ಞಾನವನ್ನು ಅನ್ವೇಷಿಸುವ ವೈಜ್ಞಾನಿಕ ಅಧ್ಯಯನವಾಗಿದೆ. ಇವುಗಳಲ್ಲಿ ಯಾವುದೂ ಮತ್ತೊಂದರ ಪರ್ಯಾಯವಲ್ಲ; ಅವು ಪರಸ್ಪರ ಸಂಬಂಧ ಹೊಂದಿದ್ದರೂ ತಮ್ಮದೇ ಆದ ಸ್ವತಂತ್ರ ಸ್ವರೂಪವನ್ನು ಉಳಿಸಿಕೊಂಡಿವೆ. ಆದ್ದರಿಂದ ಈ ಬರವಣಿಗೆಯ ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಸಾಹಿತ್ಯ ಮತ್ತು ಶೈಕ್ಷಣಿಕ ವಲಯದ ಮೂಲಭೂತ ಅಗತ್ಯವಾಗಿದೆ.       ವಿಮರ್ಶೆಯು ಸಾಹಿತ್ಯ, ಕಲೆ ಅಥವಾ ಯಾವುದೇ ಸೃಜನಾತ್ಮಕ ಕೃತಿಯ ಸ್ವರೂಪ, ಆಶಯ, ರಚನಾ ವೈಶಿಷ್ಟ್ಯ, ಭಾಷೆ, ಶೈಲಿ, ಸೌಂದರ್ಯಾತ್ಮಕ ಅಂಶಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದೆ. ವಿಮರ್ಶೆಯ ಉದ್ದೇಶ ಪ್ರಶಂಸೆ ಅಥವಾ ಟೀಕೆ ಮಾಡುವುದಲ್ಲ; ಕೃತಿಯ ಗುಣ-ದೋಷಗಳನ್ನು ಸಮತೋಲನದಿಂದ ವಿಶ್ಲೇಷಿಸಿ ಅದರ ಸ್ಥಾನವನ್ನು ನಿರ್ಧರಿಸುವುದಾಗಿದೆ. ಆದ್ದರಿಂದ ವಿಶ್ಲೇಷಣೆಯು ವಿಮರ್ಶೆಯ ಒಂದು ಹಂತವಾಗಿದ್ದರೂ, ವಿಶ್ಲೇಷಣೆ ಮಾತ್ರವೇ ವಿಮರ್ಶೆಯಾಗುವುದಿಲ್ಲ. ವಿಮರ್ಶೆಯು ಅಂತಿಮವಾಗಿ ಮೌಲ್ಯನಿರ್ಣಯವನ್ನು ಒಳಗೊಂಡಿರಬೇಕು. ಇದೇ ವಿಮರ್ಶೆಯ ವಿಶಿಷ್ಟತೆ.      ಸಂಶೋಧನಾ ಬರವಣಿಗೆಯು ಇದಕ್ಕಿಂತ ಭಿನ್ನವಾದ ಸ್ವರೂಪವನ್ನು ಹೊಂದಿದೆ. ಅದು ಹೊಸ ಜ್ಞಾನ, ಹೊಸ ಸತ್ಯ ಅಥವಾ ಹೊಸ ವ್ಯಾಖ್ಯಾನವನ್ನು ಸಾಕ್ಷ್ಯಾಧಾರಿತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಅನ್ವೇಷಿಸುವ ಪ್ರಕ್ರಿಯೆಯಾಗಿದೆ. ಸಮಸ್ಯೆಯ ನಿರೂಪಣೆ, ಸಾಹಿತ್ಯ ಸಮೀಕ್ಷೆ, ಅಧ್ಯಯನ ವಿಧಾನ, ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ತೀರ್ಮಾನಗಳ ಮೂಲಕ ಸಂಶೋಧನೆಯು ತನ್ನ ವಿಶ್ವಾಸಾರ್ಹತೆಯನ್ನು ಸಾಧಿಸುತ್ತದೆ. ವೈಯಕ್ತಿಕ ಅಭಿಪ್ರಾಯಕ್ಕಿಂತ ಸಾಕ್ಷ್ಯ, ಉಲ್ಲೇಖ ಮತ್ತು ತಾರ್ಕಿಕ ನಿರೂಪಣೆಗೆ ಇಲ್ಲಿ ಹೆಚ್ಚಿನ ಮಹತ್ವವಿರುತ್ತದೆ. ಹೀಗಾಗಿ ವಿಮರ್ಶೆ ಮತ್ತು ಸಂಶೋಧನೆ ಒಂದೇ ಅಲ್ಲ; ಅವು ಪರಸ್ಪರ ಪೂರಕವಾಗಿದ್ದರೂ ವಿಭಿನ್ನ ಶೈಕ್ಷಣಿಕ ಪ್ರಕ್ರಿಯೆಗಳಾಗಿವೆ.        ಕೃತಿ ಪರಿಚಯವು ಓದುಗರಿಗೆ ಒಂದು ಪುಸ್ತಕದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡುವ ಬರವಣಿಗೆಯಾಗಿದೆ. ಪ್ರಕಟಣೆ-ಪ್ರಕಾಶನದ ವಿವರಗಳು, ಲೇಖಕರ ಪರಿಚಯ, ಕೃತಿಯ ವಿಷಯವಸ್ತು, ಉದ್ದೇಶ ಮತ್ತು ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಮೂಲಕ ಓದುಗರಲ್ಲಿ ಆಸಕ್ತಿ ಮೂಡಿಸುವುದು ಇದರ ಗುರಿಯಾಗಿದೆ. ಇದರಲ್ಲಿ ಮೌಲ್ಯನಿರ್ಣಯಕ್ಕೆ ಹೆಚ್ಚಿನ ಅವಕಾಶ ಇರುವುದಿಲ್ಲ. ಅದೇ ರೀತಿ ಕೃತಿ ವಿಶ್ಲೇಷಣೆಯು ಕೃತಿಯನ್ನು ಅದರ ವಿವಿಧ ಅಂಶಗಳಾಗಿ ವಿಭಜಿಸಿ ಕಥಾವಸ್ತು, ಪಾತ್ರಚಿತ್ರಣ, ಭಾಷೆ, ಶೈಲಿ, ಸಂಕೇತಗಳು, ಪ್ರತಿಮೆಗಳು ಹಾಗೂ ರಚನಾ ತಂತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಧ್ಯಯನ ವಿಧಾನವಾಗಿದೆ. ಆದರೆ ಅದು ಅಂತಿಮವಾಗಿ ಕೃತಿಯ ಮೌಲ್ಯವನ್ನು ನಿರ್ಣಯಿಸುವುದಿಲ್ಲ. ಈ ಕಾರಣಕ್ಕಾಗಿಯೇ ವಿಶ್ಲೇಷಣೆಯು ವಿಮರ್ಶೆಗೆ ಪೂರಕವಾಗಬಹುದು; ಆದರೆ ವಿಶ್ಲೇಷಣೆಯೇ ವಿಮರ್ಶೆ ಎಂದು ಹೇಳುವುದು ಸರಿಯಲ್ಲ.       ಉಪನ್ಯಾಸ ರೂಪದ ಬರವಣಿಗೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಂದು ನಿರ್ದಿಷ್ಟ ವಿಷಯವನ್ನು ಶ್ರೋತೃಗಳು ಅಥವಾ ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಕ್ರಮಬದ್ಧವಾಗಿ, ಉದಾಹರಣೆಗಳು ಮತ್ತು ವಿವರಣೆಗಳೊಂದಿಗೆ ನಿರೂಪಿಸುವುದು ಇದರ ಉದ್ದೇಶವಾಗಿದೆ. ಇದು ಜ್ಞಾನವನ್ನು ಪರಿಣಾಮಕಾರಿಯಾಗಿ ಹಂಚುವ ಮಾಧ್ಯಮವಾಗಿದ್ದು, ಸಂಶೋಧನಾ ಬರವಣಿಗೆ ಅಥವಾ ವಿಮರ್ಶೆಯ ಪರ್ಯಾಯವಲ್ಲ.       ಇಂದು ಸಾಹಿತ್ಯಲೋಕದಲ್ಲಿ ಕಂಡುಬರುವ ದೊಡ್ಡ ಸಮಸ್ಯೆಯೆಂದರೆ, ಬರವಣಿಗೆಯ ವಿವಿಧ ಪ್ರಕಾರಗಳ ನಡುವಿನ ಗಡಿಗಳು ಅಸ್ಪಷ್ಟವಾಗುತ್ತಿರುವುದು. ಪರಿಚಯವನ್ನು ವಿಮರ್ಶೆ ಎಂದು, ವಿಶ್ಲೇಷಣೆಯನ್ನು ಸಂಶೋಧನೆ ಎಂದು, ಅಭಿಪ್ರಾಯವನ್ನು ಮೌಲ್ಯನಿರ್ಣಯ ಎಂದು, ಪ್ರಚಾರವನ್ನು ಸಾಹಿತ್ಯ ಚರ್ಚೆ ಎಂದು ಕರೆಯುವ ಪ್ರವೃತ್ತಿ ಬೆಳೆಯುತ್ತಿದೆ. ಈ ಗೊಂದಲವನ್ನು ನಿವಾರಿಸದೆ ಸಾಹಿತ್ಯಿಕ ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಬರಹಗಾರರು, ವಿಮರ್ಶಕರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಓದುಗರು ಬರವಣಿಗೆಯ ಪ್ರತಿಯೊಂದು ಪ್ರಕಾರದ ಉದ್ದೇಶ, ವಿಧಾನ ಮತ್ತು ಮಿತಿಯನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ಪರಿಚಯವನ್ನು ಪರಿಚಯವೆಂದು, ವಿಶ್ಲೇಷಣೆಯನ್ನು ವಿಶ್ಲೇಷಣೆಯೆಂದು, ವಿಮರ್ಶೆಯನ್ನು ವಿಮರ್ಶೆಯೆಂದು ಮತ್ತು ಸಂಶೋಧನೆಯನ್ನು ಸಂಶೋಧನೆಯೆಂದು ಗುರುತಿಸುವ ಸಾಹಿತ್ಯಿಕ ಪ್ರಾಮಾಣಿಕತೆ ಬೆಳೆದಾಗ ಮಾತ್ರ ಆರೋಗ್ಯಕರ ವಿಮರ್ಶಾ ಸಂಸ್ಕೃತಿ, ಮೌಲಿಕ ಸಂಶೋಧನೆ ಮತ್ತು ಗುಣಮಟ್ಟದ ಸಾಹಿತ್ಯ ನಿರ್ಮಾಣ ಸಾಧ್ಯವಾಗುತ್ತದೆ. –ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಬರವಣಿಗೆಯ ನಿಜಸ್ವರೂಪ” ವಿಶೇಷ ಲೇಖನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ Read Post »

ಕಾವ್ಯಯಾನ, ಗಝಲ್

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್

ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಗಜಲ್ *ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ ಜಗದಲಿ ಅದೆಷ್ಟು ಮಧುಪಾತ್ರೆಗಳು ಬರಿದಾಗಿವೆ ನೋಡು ಹಸೀನಾ..*ತೃಪ್ತ* ಹೃದಯವ ಹುರಿದು ಮೆದುಮಾಡಿಕೊಂಡ *ನೈವೇದ್ಯವಿದು* ಪ್ರೇಮ -ಡಾ.ಹಸೀನಾ ಹೆಚ್.ಕೆ, ಶಿವಮೊಗ್ಗ

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್ Read Post »

ಇತರೆ, ಜೀವನ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ

ಸಮಾಜ ಸಂಗಾತಿ ಪ್ರೊ.ರಾಜೇಶ್ವರಿ ಶೀಲವಂತ ಪುಣೆ “ಭಾರತೀಯ ಮಕ್ಕಳ ಇಂದಿನ ನಡವಳಿಕೆ” ಅಂದಿನ ಭಾರತೀಯ ಮಕ್ಕಳಲ್ಲಿ ಸಂಪ್ರದಾಯ ಮತ್ತು ಸಂಸ್ಕಾರ ಗುಣಗಳು ತುಂಬಿ ತುಳುಕುತ್ತಿದ್ದವು .ಅವರಲ್ಲಿ ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಆದರದ ಭಾವವಿತ್ತು. ಮನೆಯಲ್ಲಿ ಮಕ್ಕಳು  ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯ ವಾತಾವರಣದೊಂದಿಗೆ ಸಂಭ್ರಮಿಸುತ್ತಿದ್ದರು.ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಲೀಲಾಜಾಲವಾಗಿಕಲಿಯುತ್ತಿದ್ದರು.ಹೆಣ್ಣು ಮಗು ಅಭ್ಯಾಸದ ಜೊತೆ ಮನೆಗೆಲಸ ಕಲಿತರೆ ಗಂಡು ಮಗುಹೊರಗಿನ ವ್ಯವಹಾರ ಜ್ಞಾನ ಬೆಳೆಸಿಕೊಕೊಳ್ಳುತ್ತಿತ್ತು.ಹೀಗಾಗಿ ಮದುವೆಯ ನಂತರವೂ ಅವರಿಗೆ ಮನೆಯ ಜವಾಬ್ದಾರಿ ಹೊಂದಾಣಿಕೆಯಲ್ಲಿ ಚಾತುರ್ಯವಿತ್ತು. ಆಗ ಹೆಣ್ಣು ಮಗಳು  ಮದುವೆ ನಂತರ ಅತ್ತೆ ಮನೆಯಲ್ಲಿ ತನ್ನ ಉದ್ಯೋಗದ ಜೊತೆಗೆ ಸಂಸಾರಿಕ ಜೀವನವನ್ನು ಸಾಮರಸ್ಯದಿಂದ ನಿಭಾಯಿಸುತ್ತಿದ್ದಳು.ಅಂದಿನ  ಪೀಳಿಗೆಯಲ್ಲಿ ಪಾಲಕರು ತಮ್ಮ ಮಕ್ಕಳ  ಶಿಕ್ಷಣದ ಜೊತೆಗೆ ಅವರ ಭಾವನಾತ್ಮಕ ಬೆಳವಣಿಗೆ ಹಾಗೂ ಮಾನಸಿಕ  ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸುತ್ತಿದ್ದರು.  ಅಂದು  ಅಜ್ಜ, ಅಜ್ಜಿ ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನ ಮತ್ತು ಸಂಸ್ಕೃತಿಯನ್ನ ಹೇಗೆ ಕಾಪಾಡಬೇಕೆಂದು ತಿಳಿಸುತ್ತಿದ್ದರು. ಹೀಗಾಗಿ ಭಾರತದಲ್ಲಿ ಮಕ್ಕಳು ತಮ್ಮ ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಜಂಟಿ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಆಗಿನ ಮಕ್ಕಳು ಹಂಚಿಕೊಳ್ಳುವಿಕೆ  ಮತ್ತು ಸಾಮಾಜಿಕ  ಹೊಂದಾಣಿಕೆಗಳನ್ನು ಬೆಳೆಯುತ್ತಲೇ ಕಲಿಯುತ್ತಿದ್ದರು .ಆದರೆ ಈಗ  ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ .ಭಾರತೀಯ ಮಕ್ಕಳ  ಆಧುನಿಕ ತಂತ್ರಜ್ಞಾನದ ಬಳಕೆ ಅವರ  ನಡವಳಿಕೆಯಲ್ಲಿಯ ಮುಖ್ಯ ಅಂಶಗಳಾದ ಕುಟುಂಬದ ಮೌಲ್ಯಗಳು ,ಸಂಸ್ಕೃತಿ, ಹಿರಿಯರು, ಪೋಷಕರು ಮತ್ತು ಶಿಕ್ಷಕರು  ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ.  ವಿಭಕ್ತ  ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದ ಅಭಾವದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ, ಹೊಂದಾಣಿಕೆಗಳಂತಹ  ಜೀವನಮೌಲ್ಯಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ  ಮಕ್ಕಳು ಆಟಿಕೆಗಳಿಗಿಂತ ಸ್ಮಾರ್ಟ್‌ಫೋನ್, ವಿಡಿಯೋ ಗೇಮ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.ಹಠಮಾರಿ ಸ್ವಭಾವ ಹೆಚ್ಚುತ್ತಿದೆ.ತಾವು ಕೇಳಿದ್ದು ಸಿಗದಿದ್ದರೆ ಬೇಗನೆ ಸಿಟ್ಟು ಮಾಡಿಕೊಳ್ಳುವುದು, ಹಠ ಹಿಡಿಯುವುದು ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತಿದೆ.ಒಂದೇ ವಿಷಯದ  ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಕಷ್ಟಪಡುವುದು ಮತ್ತು ಬೇಗನೆ ಬೇಸರಗೊಳ್ಳುವುದು ಹೆಚ್ಚಾಗಿದೆ.ಸಾಮಾಜಿಕ ಹೊಂದಾಣಿಕೆಯ  ಕೌಶಲ್ಯಗಳ ಕೊರತೆಯಿಂದ ಮಕ್ಕಳು  ಹೊರಗಡೆ ಆಟವಾಡುವುದನ್ನ  ಮರೆತು ಮನೆಯಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರೊಂದಿಗೆ ಬೆರೆಯುವದೂ  ದಿನೇ ದಿನೇ ಕಡಿಮೆಯಾಗುತ್ತಿದೆ.ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು, ಸ್ನೇಹಿತರಂತೆ ವರ್ತಿಸುವುದು ,ಅವರ ಮಾನಸಿಕ ಸಮಸ್ಯೆಗಳನ್ನು  ದೂರ  ಮಾಡಬಹುದು.ಅತಿಯಾದ ಟಿವಿ ಅಥವಾ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ದೈಹಿಕ ಚಟುವಟಿಕೆಗಳು, ಸೃಜನಶೀಲ ಚಟುವಟಿಕೆಗಳು,ಯೋಗ, ಧ್ಯಾನ ಮುಂತಾದವುಗಳಲ್ಲಿ ಅವರನ್ನು  ತೊಡಗಿಸಬೇಕು. ಅದೇ ರೀತಿ ಮಕ್ಕಳಲ್ಲಿ ಮದುವೆ ಮಕ್ಕಳ ಪ್ರಾಮುಖ್ಯತೆ ಕೂಡ ಕಡಿಮೆಯಾಗುತ್ತಿದೆ. ಜಾಸ್ತಿ ಸಂಪಾದನೆಯ ಅಹಂ ಹೆಚ್ಚಾಗಿ ಗಂಡನ ಜೊತೆ ಕೂಡ ಹೊಂದಾಣಿಕೆ ಕಳೆದುಕೊಂಡು ವಿಚ್ಛೇದನಕ್ಕೆ ಮೊರೆ ಹೋಗುತ್ತಿರುವುದು ಬಹು ದೊಡ್ಡ ವಿಷಾದನೀಯ ಸಂಗತಿ ಕೂಡ.ಹೇಳಿ ಆಧುನಿಕತೆ ವರವೋ ಶಾಪವೋ!! ಪ್ರೊ. ರಾಜೇಶ್ವರಿ ಶೀಲವಂತ ಪುಣೆ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು”

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ಒಲವಮುಖಗಳು” 1ಹೊಳಿ ಮಗ್ಗುಲ ಕಲ್ಲುಚಿಗುರದು, ಒಣಗದುನೀನಿದ್ದೂ ನನ್ನಂತೆ..!2ರೆಕ್ಕೆ ನಂಬಿ ಹೊಂಟ ಹಕ್ಕಿ…ಒಲವುನಿನ್ನನ್ನೇ…ನಂಬಿದೆಮರದ ಕೊಂಬೆ ಬೇಕೀಗ…3ಸಿಮೆಂಟು ರೋಡೇ ಎರಡುತಿಂಗಳಿಗೆ ಸೀಳಿದೆ…ಒಲವಿಗೀಗವ್ಯಾಲಿಡಿಟಿ ಕಡಿಮೆ ಅಂತಿದ್ರಪ..4ಹಣದ ಹಿಂದೆ ಗಿರಕಿ ಹೊಡೆವಜಗತ್ತಿಗೆ ಒಲವಿನಭಾಷೆ ಹೊಸದು; ಕಾಗುಣಿತದ ಅರಿವಿಲ್ಲ5ಅವ್ವ ಮುನಿಸಿಕೊಂಡಾಗೆಲ್ಲಾಅಪ್ಪ ತುತ್ತು ಜಾಸ್ತಿ ಉಣ್ತಿದ್ದ;ಒಲವಿಗೆ ಹೊಸ ವ್ಯಾಖ್ಯಾನ ಅಂತ ಅವ್ವನ ಸಮಜಾಯಿಷಿ!6ಮಸಣ ದೂರ ಕಣೋ ಇಲ್ಲಿಂದಲೇ ಹೂಒಗೆವೆ ದಾರಿಯಲ್ಲಿಜೊತೆಗಿದ್ದೇನೆ ಅಂದುಕೋ ಒಲವ ಹುಡುಗಾ..7ಬೆರಳು ಸೋಕದೆಯೂ ಒಲವ ಉಣಬಡಿಸಿದರಾಜಕುಮಾರನೆದುರುಮೇಲೆ ಬಿದ್ದು ಹೊರಳಾಡಿದ ಈಗಿನ ಪ್ರೀತಿ ಸಪ್ಪೆ ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು” Read Post »

ಕಥಾಗುಚ್ಛ

ರೋಹಿಣಿ ಜೆ ಅವರ ಸಣ್ಣ ಕಥೆ “ಹಾರಾಟ ಮುಗಿದ ಹಕ್ಕಿ!”

ಕಥಾ ಸಂಗಾತಿ ರೋಹಿಣಿ ಜೆ “ಹಾರಾಟ ಮುಗಿದ ಹಕ್ಕಿ!” ಒಂದೂರು.. ಊರ ಬಾಗಿಲಲೊಂದು ಅರಳಿ ಮರ. ಅದರ ಮೇಲೆ ಒಂದು ಹಕ್ಕಿ ಗೂಡು. ತಂದೆ ತಾಯಿ ಎರಡು ಮರಿಗಳು ಅದರಲ್ಲಿ ವಾಸವಾಗಿದ್ದವು. ಹಗಲಲ್ಲಿ ಹಾರಾಡುತ್ತ ಇರುಳಲ್ಲಿ ಆಕಾಶ ನೋಡುತ್ತ ಸಂಭ್ರಮಿಸುತ್ತ ಎಲ್ಲ ಚಂದಿತ್ತು.  ಕಿರಿಯ ಮರಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದವು. ತನ್ನ ಗೂಡಿನಲ್ಲಿ ಇರುವವರೆಗೂ ಆ ಹಕ್ಕಿಮರಿಗೆ ಹಸಿವು ಎಂದರೆ ಏನು ಅಂತಾನೆ ಗೊತ್ತಾಗುತ್ತಿರಲಿಲ್ಲ, ಆ ಮರದಿಂದ ಈ ಮರ ಈ ಮರದಿಂದ ಆ ಕೊಂಬೆ ಹಾರುತ್ತಾ ನಲಿದಾಡುತ್ತಾ ಎಲ್ಲದಕ್ಕೂ ಹಠ ಮಾಡುತ್ತಾ ಕಾಲ ಕಳೆಯುತ್ತಾ ಇತ್ತು. ಮಳೆ ಗಾಳಿ ಜೋರಾಯ್ತು ಅಂದ್ರೆ ಗೂಡು ಸೋರುತ್ತಾ ಇತ್ತು. ಬೀಳುವ ಭಯ ಕಾಡ್ತಾ ಇತ್ತು. ಆದರೆ ಅಪ್ಪ ಅಮ್ಮ ರೆಕ್ಕೆಯಲ್ಲಿ ಅಪ್ಪಿ ಆ ಭಯ ಕಾಡದ ಹಾಗೆ ನೋಡ್ಕೊಳ್ತಿದ್ವು, ಊಟ ಮಾಡಲಿಕ್ಕೆ ತುಂಬಾ ಹಠ ಮಾಡುತ್ತಿತ್ತು. “ತಿನ್ನು, ತಿನ್ನು” ಅಂತ ಅದರ ಹಿಂದೆನೇ ಬೀಳ್ತಾ ಇದ್ರು. ಹಕ್ಕಿಮರಿ ಬೆಳೆಯುತ್ತಾ ಹೋಯಿತು ಸ್ವಲ್ಪ ದೊಡ್ಡದಾಗುತ್ತಾ ಅದರ ಆಸೆಗಳು ಕೂಡ ದೊಡ್ಡದಾಗಲಿಕ್ಕೆ ಶುರುವಾಯಿತು. ತನ್ನ ಗೂಡು ಚಿಕ್ಕದು ಅನ್ನಿಸಲಿಕ್ಕೆ ಶುರುವಾಯಿತು.  ಕೆಲವು ಪಕ್ಷಿಗಳ ಗೂಡು ಬಹಳ ಗಟ್ಟಿಮುಟ್ಟಾಗಿತ್ತು ಇದರ ಅಪ್ಪ ಅಮ್ಮ ತನ್ನ ಶಕ್ತಿ ಮೀರಿ ಈಗಿರುವ ಗೂಡನ್ನು ಕಟ್ಟಿದ್ದು ಇನ್ನೂ ಅದಕ್ಕಿಂತ ಹೆಚ್ಚು ಅವುಗಳಿಂದ ನಿರೀಕ್ಷೆ ಮಾಡಲಿಕ್ಕೆ ಆಗ್ತರ‍್ಲಿಲ್ಲ. ಈ ಹಕ್ಕಿಗೆ ಮಳೆಗಾಲದಲ್ಲಿ ಸೋರದ, ಬಿರುಗಾಳಿಗೆ ಬೀಳದ ಗಟ್ಟಿ ಮನೆ ಒಂದನ್ನು ಕಟ್ಟಬೇಕೆಂಬ ಆಸೆ ಮೂಡತೊಡಗಿತು. ಅಷ್ಟೇ ಅಲ್ಲ ತನ್ನನ್ನು ಮುದ್ದಿನಿಂದ ಸಾಕಿದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಕೊನರತೊಡಗಿತು.ಹೀಗಿರುವಾಗ ಅಪ್ಪ ಅಮ್ಮ ಬೇಡುವ ಅಗೋಚರವಾದ ಆ ʼದೇವʼನನ್ನು ತಾನೂ ಬೇಡಿತು. ಅವನು ತಥಾಸ್ತು ಅಂದನೋ ಇಲ್ಲ ಅದರ ವಿಧಿಯೇ ಅಂತಿತ್ತೋ ಯಾರಿಗೆ ಗೊತ್ತು! ಯಾವುದೋ ಹಕ್ಕಿಗಳ ಮೂಲಕ ಇದಕ್ಕೆ ಹಣ್ಣಿನ ಸಾಮ್ರಾಜ್ಯದ ಪರಿಚಯ ಆಯ್ತು. ಅಲ್ಲಿ ಹೋದರೆ ಊಟ, ಸಂಪತ್ತು ಯಾವುದಕ್ಕೂ ಕೊರತೆ ಇಲ್ಲ ಎನಿಸಿತು. ತಾನು ಶ್ರೀಮಂತರಾಗಿ ತನ್ನವರನ್ನು ಶ್ರೀಮಂತವಾಗಿಸುವ ಬಯಕೆ ಚಿಗುರೊಡೆಯಿತು. ಹಿಂದೆ ಮುಂದೆ ಯೋಚನೆ ಮಾಡದೆ ಆದದ್ದಾಗಲಿ ಏನಾದರೂ ಸಾಧಿಸಲೇಬೇಕೆಂದು ತನ್ನ ಸೋದರಹಕ್ಕಿಯನ್ನು ಅಪ್ಪ ಅಮ್ಮರ ಜೊತೆ ಇರಲು ಹೇಳಿ ಮರಿ ಹಕ್ಕಿ ಹೊರಟು ನಿಂತಿತು. ತಂದೆ ಹಕ್ಕಿ ಇದನ್ನು ಕಂಡು ತುಂಬಾ ದುಃಖಿಸಿತು “ಬೇಡ ಮಗು ಇಲ್ಲೇ ಇರೋಣ ಇದ್ದಿದ್ರಲ್ಲಿ ಖುಷಿಯಾಗಿ, ದೂರದ ಕಾಣದ ಊರಿನ ಸಹವಾಸ ಯಾಕೆ?”.  ಹಕ್ಕಿಮರಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಾಲದ್ದಕ್ಕೆ ಅದರ ತಾಯಿ ಹಕ್ಕಿ ತನ್ನ ಮರಿಗೆ ಬೆಂಬಲ ಕೊಟ್ಟಿತು. “ಹೋಗಿ ಬಾ ಕಂದಾ, ಒಳ್ಳೆಯದಾಗಲಿ ನಿನಗೆ” ಎಂದು. ಇತ್ತ ತನ್ನ ಗಂಡನನ್ನು ಸಂತೈಸಿತು “ಇರಲಿ ಬಿಡು ಅದರಿಂದಲಾದರೂ ನೆಮ್ಮದಿ ಕಾಣೋಣ, ನಾವೂ ಎಲ್ಲರಂತೆ ಬದುಕಬಹುದು”. ಒಂದು ದಿನ ಅದು ಹೊರಡುವ ಸಮಯ ಬಂದೇ ಬಿಟ್ಟಿತು. ಪ್ರೀತಿ ಭಯ ಆತಂಕಗಳಿಂದ ಕಣ್ತುಂಬಿಕೊಂಡು ಬೀಳ್ಕೊಟ್ಟವು.ಹಾರಿತು, ಹಾರಿತು ದೂರದ ತೀರಕೆ ಹಣ್ಣಿನ ರಾಜ್ಯವನ್ನು ಹುಡುಕಿಕೊಂಡು ಬಹಳ ಕ್ರಮಿಸಿದ ಬಳಿಕ ಕೊನೆಗೊಂದು ದಿನ ಸಿಕ್ಕೆ ಬಿಟ್ಟಿತು ಹಣ್ಣಿನ ಸಾಮ್ರಾಜ್ಯ. ಹೌದು ಇಲ್ಲಿ ಎಲ್ಲವೂ ಚಂದ ಎಷ್ಟೊಂದು ಹಣ್ಣುಗಳು! ಬಣ್ಣ ಬಣ್ಣದ ಹಣ್ಣುಗಳು, ಹೂವುಗಳು ಬಹುಪಾಲು ಹೆಸರೇ ಗೊತ್ತಿಲ್ಲ! ಎಲ್ಲ ಹೊಸಬಗೆಯವು. ಆ ಹಕ್ಕಿ “ಸುಂದರ ಹೂ, ಹಣ್ಣಿನ ತೋಟ ಸ್ವರ್ಗ ಅಂದ್ರೆ ಇದೇ ಏನು! ಮನುಷ್ಯರು ಮಾತಾಡ್ತಾರಲ್ಲ ಅದು” ಎಂದುಕೊಂಡಿತು ಮನದಲಿ.  ಹೊಸದರಲ್ಲಿ ಎಲ್ಲವೂ ಸೊಗಸೆನಿಸಿತು. ಇದು ಗರಿಬಿಚ್ಚಿ ರ‍್ತಿಸಿತು ಮೇಲಿಂದ ಕೆಳಗೆ ಜಿಗಿದು, ಟಪಟಪ ರೆಕ್ಕೆಬಡಿದು ಅದರ ಖುಷಿ ಸಂಭ್ರಮಕ್ಕೆ ಕೊನೆ ಇರಲಿಲ್ಲ “ಅಂತು ತಾನು ಸಾಧಿಸಿಬಿಟ್ಟೆ ಇನ್ನು ನನ್ನ ಮನೆಯ ಕಷ್ಟಗಳೆಲ್ಲ ಪರಿಹಾರವಾದಂತೆಯೇ ನನ್ನ ಪಾಲಿಗೆ ಬರಿ ಸುಖವೇ ಇನ್ನು” ಎಂದುಕೊಂಡಿತು.ಹೊಸ ಜಾಗ, ಹೊಸ ಗಿಡ ಮರಗಳು, ಹೊಸ ಮುಖಗಳು ಎಲ್ಲವೂ ಹೊಸದು. ಅಲ್ಲಿದ್ದ ಹಕ್ಕಿಗಳು ಪ್ರೀತಿಯಿಂದ ಸ್ವಾಗತಿಸಿದವು. ಇದು ಸುಮ್ಮನೆ ಪಿಳಿ ಪಿಳಿ ಮುಖ ನೋಡಿತು. ಯಾರು ಯಾರೋ ಮಾತಾಡಿಸಿದವು ಇದಕೆ ಭಾಷೆ ತಿಳಿಯುತ್ತಿಲ್ಲ. ನಕ್ಕು ಸುಮ್ಮನಾಯಿತು. ಹಣ್ಣುಗಳಂತೂ ಕಣ್ಣು ಕೋರೈಸುವಂತೆ ದಪ್ಪ ದಪ್ಪದಾಗಿ ಹಲವು ಬಣ್ಣಗಳಲ್ಲಿ ಮಾಗಿದ್ದವು. ಕೆಲವೊಂದಕ್ಕೆ ನೇರವಾಗಿ ಬಾಯಿಟ್ಟಿತು. ಇಲ್ಲ ಯಾಕೋ ತಿನ್ನಲ್ಲಾಗುತ್ತಿಲ್ಲ.  ಹಣ್ಣೇನೋ ಮಾಗಿದೆ  ಘಮಗುಡುತ್ತಿದೆ ಇದರ ನಾಲಿಗೆ ಮಾತ್ರ ರುಚಿ ಎನಿಸದು. ಈಗ ಅದಕ್ಕೆ ಹಸಿವಿನ ಬೆಲೆ, ಊಟದ ಬೆಲೆ ತಿಳಿಯುತ್ತಾ ಹೋಯಿತು. ಅಪ್ಪ ಅಮ್ಮನ ನೆನಪು ಕಾಡಕೊಡಗಿತು. ನಿಧಾನವಾಗಿ ತಿನ್ನುತ್ತಾ ತಿನ್ನುತ್ತಾ ಅಭ್ಯಾಸ ಮಾಡಿಕೊಂಡಿತು. ಕೊನೆಗೆ ಅದರಲ್ಲೇ ರುಚಿ ಕಂಡುಕೊಂಡಿತು ತನ್ನೂರಿಗೂ ಈ ಹಣ್ಣುಗಳನ್ನು ಒಯ್ದು ತನ್ನವರಿಗೂ ಅಭ್ಯಾಸ ಮಾಡಿಸಬೇಕೆಂದುಕೊಂಡಿತು.  ಒಂದು ಹಣ್ಣು ಒಯ್ದರೆ ಸಾಕು ವರ‍್ಷಕ್ಕಾಗುವಷ್ಟು ಊಟ. ಅಷ್ಟೇನೂ ಭಾರವೂ ಇಲ್ಲ ಹಣ್ಣು.  ಪ್ರತಿ ಬಾರಿ ಎರಡೆರಡು ಹೊಯ್ದು ಒಂದು ಊಟಕ್ಕೆ, ಒಂದು ಮಾರಾಟಕ್ಕೆ ಅದರಿಂದ ಬಂದ  ಲಾಭದಿಂದ ಗಟ್ಟಿ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಆಸೆಪಟ್ಟಿತು.  ಎರಡು ಹಣ್ಣು ಎತ್ತಿಕೊಂಡು ಹಾರಿಹೋಯಿತು. ಕುಟುಂಬದಲ್ಲಿ ಎಲ್ಲ ಸಂಭ್ರಮ ಪಟ್ಟವು. ಹಕ್ಕಿ ಮತ್ತೆ ಹಾರಿ ಹಣ್ಣಿನ ಸಾಮ್ರಾಜ್ಯಕ್ಕೆ ಬಂದಿತು. ಏಕೆಂದರೆ ಅಲ್ಲಿ ನಿಲ್ಲುವಂತಿರಲಿಲ್ಲ! ಇಲ್ಲಿ ಹಣ್ಣಿನ ಸಾಮ್ರಾಜ್ಯದ ಒಡೆಯ ನಿಯಮ ವಿಧಿಸಿದ್ದ ಒಂದು ಹಣ್ಣು ಒಯ್ದರೆ ನಾಲ್ಕು ದಿನಕ್ಕೆ, ಎರಡು ಹಣ್ಣು ತೆಗೆದುಕೊಂಡು ಹೋದರೆ ಎರಡೇ ದಿನಕ್ಕೆ ವಾಪಸ್ ಬರಬೇಕಿತ್ತು. ಹೀಗೆ ವರ‍್ಷಗಳೇ ಕಳೆದು ಹೋದವು. ತನ್ನ ಕುಡಿಯನ್ನು ಮತ್ತೆ ಕಳಿಸಲು ಬೇಸರ ತಂದೆ ತಾಯಿ ಹಕ್ಕಿಗಳಿಗೆ ಆದರೆ ಹೊಟ್ಟೆಪಾಡು,  ತಂದೆ ಹಕ್ಕಿಗೂ ವಯಸ್ಸಾಗುತ್ತಿತ್ತು ಆಹಾರ ಹೊಂದಿಸುವುದು ಕಷ್ಟವಾಗತೊಡಗಿತು.ಇತ್ತೀಚಿಗೆ ಈ ಹಕ್ಕಿ ಇನ್ನೂ ದೊಡ್ಡದಾಗಿತ್ತು ಅಷ್ಟೇ ಅಲ್ಲ ಅದರ ಸ್ವಾರ್ಥವೂ ಹೆಚ್ಚಿತ್ತು ಈಗ ಅದು ಒಮ್ಮೆಲೇ ಐದೈದು ಹಣ್ಣುಗಳನ್ನು ಸಂಪಾದಿಸುವ ಶಕ್ತಿ ಬೆಳೆಸಿಕೊಂಡಿತ್ತು ಹಾಗಾಗಿ ತಾನು ಬಯಸಿದಂತೆ ಗಟ್ಟಿಯಾದ ಸುಭದ್ರವಾದ ಸುಂದರವಾದ ಅಕ್ಕಪಕ್ಕದ ಗೂಡಿನ ಹಕ್ಕಿಗಳೆಲ್ಲ ಮೆಚ್ಚುವಂತಹ ʼಹಕ್ಕಿಗೂಡುʼ ಒಂದನ್ನು ಕಟ್ಟಿತು. ಬಂದಂತಹ ನೆಂಟರಿಷ್ಟರು ಬಂಧುಗಳೆಲ್ಲ ಹರಸಿ ಸಂಭ್ರಮಿಸಿ ಹೋದರು. ಜೊತೆಗೆ ಕೇಳಿಯೂ ಹೋದರು “ಏನು ಹಣ್ಣಿನ ರಾಜ್ಯದಲ್ಲೇ ಉಳಿದುಬಿಡುವ ಬಯಕೆಯೇ? ಇತ್ತ ಬರುವ ಮನಸಾಗದೆ! ನಿನ್ನ ಹೆತ್ತವರಿಗೂ ವಯಸ್ಸಾಯ್ತು ಬಂದುಬಿಡು”. ಇಂತಹ ನೂರಾರು ಪ್ರಶ್ನೆಗಳು, ಮಾತುಗಳು ಚೂಪಾದ ಬಾಣದಲ್ಲಿ ಚುಚ್ಚಿದಂತೆ ಭಾಸವಾಗುತ್ತಿತ್ತು. ಅಲ್ಲಿ ಹಣ್ಣಿನ ಸಾಮ್ರಾಜ್ಯದಲ್ಲಿ ಬಿಡುಗಡೆ ಅಷ್ಟು ಸುಲಭವಿರಲಿಲ್ಲ ಇಲ್ಲಿ ತನಗೆ ವಹಿಸಿದ ಎಲ್ಲ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ, ಸುತ್ತ ಪ್ರೀತಿ ಹಂಚುತ್ತಾ ಯಾರಿಗೂ ನೋವಾಗದೆ, ಎಲ್ಲರೊಡನೆ ಹೊಂದಿಕೊಂಡು ಎಷ್ಟೆಲ್ಲ ದುಡಿದರೂ ಹಣ್ಣಿನ ಸಾಮ್ರಾಜ್ಯದ ಒಡೆಯ ಕರುಣೆ ತೋರುವಂತೆ ಕಾಣಲಿಲ್ಲ. ಹಕ್ಕಿಗೆ ಸಂಕಟ ಹೆಚ್ಚಾಗತೊಡಗಿತು, ಪಶ್ಚಾತ್ತಾಪದಲ್ಲಿ ಬೇಯತೊಡಗಿತು. ತನ್ನವರು, ಬಂಧುಗಳಿಂದ ದೂರಾಗಿ ಒಂಟಿತನ ಕಾಡತೊಡಗಿತು. ಸಂಬಂಧಿಗಳ ಸಂಭ್ರಮದಲಿ, ಸಂತಾಪಗಳಲಿ ಭಾಗವಹಿಸಲಾಗಲಿಲ್ಲ. ಇದೆಲ್ಲದರ ನಡುವೆ ತನ್ನ ತಂದೆಯನ್ನೂ, ಆಪ್ತ ಸಂಬಂಧಿಗಳನ್ನು ಕಳೆದುಕೊಂಡಿತು! ಈಗಂತೂ ಅದಕ್ಕೆ ಹುಚ್ಚುಹಿಡಿಯುವುದೊಂದೇ ಬಾಕಿ ವಿಲವಿಲ ಒದ್ದಾಡಿತು. ಕಾದನೆಲದಲ್ಲಿ ಹೊರಳಾಡಿತು. ಬೇಡಿತು, ಕಾಡಿತು ಹಣ್ಣಿನ ಸಾಮ್ರಾಜ್ಯದ ಒಡೆಯನ ಕಣ್ಣು ತೆರೆಯಲೇ ಇಲ್ಲ. ಅದರ ಜೊತೆಯಾದ ಅದೇ ಸಾಮ್ರಾಜ್ಯದ ಇತರ ಹಕ್ಕಿಗಳು ಅದನ್ನು ಅಪ್ಪಿ ಸಂತೈಸತೊಡಗಿದವು. ಆದರೆ ಪಾಪ ಅವಕ್ಕೂ ಮನೆ ಕುಟುಂಬ ಇದರ ಜೊತೆ ಎಷ್ಟು ಹೊತ್ತು ಇರಲಾದೀತು. ಅವುಗಳ ಪ್ರೀತಿಯೇನೋ ಅಗಾಧವಾಗಿತ್ತು. ಆದರೆ ಎಲ್ಲರ ನಡುವೆ ಇದಕ್ಕೆ ಕೊರಗು ಕಾಡಲು ಶುರು ಆಯ್ತು ಈಗ ಯಾವ ಹಣ್ಣನ್ನ ಹುಡುಕಿ ಬಂದಿತ್ತೋ ಆ ಹಣ್ಣಲ್ಲಿ ರುಚಿ ಕಳೆದುಕೊಳ್ಳಲಾರಂಭಿಸಿತು. “ಹಣ್ಣು ಈಗ ಮೊದಲಿಗಿಂತಲೂ ರುಚಿಯಾಗಿವೆ” ಅಲ್ಲಿನ ಹಕ್ಕಿಗಳು ಹೇಳುತ್ತವೆ. ಆದರೆ ಇದರ ನಾಲಿಗೆಗೆ ರುಚಿ ಎನಿಸುತ್ತಿಲ್ಲ. ಇದೆಲ್ಲದರ ಮಧ್ಯ  ತಿಂಗಳಿಗೆ ಒಂದೊಂದು ಗರಿ ಉದುರಲಾರಂಭಿಸಿತು. ನೋಡು ನೋಡುತ್ತಲೇ ಹಕ್ಕಿ ಹಣ್ಣಾಗಿ  ಗರಿಕಳಚಿ ಬೋಳಾಗತೊಡಗಿತು. ಈಗ ಮತ್ತಷ್ಟು ಭಯ ಉಂಟಾಯಿತು ಅದಕೆ. ತನ್ನ ಮನೆಯ ತುಂಬಾ ರಾಶಿ ಹಣ್ಣುಗಳಿವೆ ಯಾವುದಕ್ಕೂ ಕೊಕ್ಕು ಹಚ್ಚಲಾಗುತ್ತಿಲ್ಲ ಬಣ್ಣ ಬಣ್ಣದ ರಾಶಿ ಹೂವುಗಳಿವೆ ಸಂಭ್ರಮಿಸಲಾಗುತ್ತಿಲ್ಲ. ಏನೇನೋ ಪ್ರಯತ್ನ ಪಡ್ತಿದೆ ಎಲ್ಲ ಸರಿ ಮಾಡಬೇಕು, ಇದೆಲ್ಲದರಿಂದ ಹೊರ ಬರಬೇಕು, ನಾನು ಮರಳಿ ಗೂಡು ಸೇರಬೇಕು, ತನ್ನವ್ವನ ಮಡಿಲಲ್ಲಿ ಮಲಗಬೇಕು. ಇಲ್ಲ ಹಣ್ಣಿನ ಸಾಮ್ರಾಜ್ಯದ ಒಡೆಯ ಹೃದಯ ಕಲ್ಲಾಗಿಸಿದ್ದ..! ಒಂದೊಂದಾಗಿ ತನ್ನದೆಲ್ಲವನ್ನು ಕಳೆದುಕೊಂಡ ಹಕ್ಕಿ ಗೂಡಿಂದ ಹೊರಬರುವುದನ್ನು  ನಿಲ್ಲಿಸಿ ಬಿಟ್ಟಿತು. ತನ್ನೂರಿಗೆ ಹೋಗುವಾಗ ಮಾತ್ರ ಸಂಭ್ರಮಿಸಿ ಮತ್ತೆ ಅಲ್ಲಿಂದ ಬರುವಾಗ ದಾರಿಯುದ್ದಕ್ಕೂ ಕಣ್ಣೀರುಗರೆಯುತ್ತ ಬರುತ್ತಿತ್ತು.ಇತ್ತ ಎಲ್ಲ ಇದ್ದು ತನ್ನವರಿಂದ ದೂರ ಉಳಿದು ನರಳುವ ಪಾಡು ತನ್ನದಾದರೆ ಅತ್ತ ಕಟ್ಟಿದ ಗೂಡಲ್ಲಿ ಯಾರು ವಾಸವಿರದೆ ಯಾವುದೋ ಬರಸಿಡಿಲಿಗೆ ಬಲಿಯಾಗಿ ಕುಟುಂಬ ದಿಕ್ಕಾಪಾಲಾಗಿ ಇರುವ ಪರಿಸ್ಥಿತಿ ಮತ್ತೊಂದೆಡೆ. ಕೊನೆಗೆ ಹಕ್ಕಿ  ಹಣ್ಣೊಂದರ ಮೇಲೆ ಕುಳಿತು ಯೋಚಿಸತೊಡಗಿತು ಕಣ್ಣೀರು ಅದರ ಪಾದ ಸವರಿ ಹಣ್ಣಿನ ಮೇಲೆ ಹರಿಯತೊಡಗಿತು. “ತಾನು ಸಾಧಿಸಿದ್ದಾದರೂ ಏನು…! ಹೊಟ್ಟೆಪಾಡಿಗಾಗಿ ಆ ದೇವರನ್ನು ಹಣ್ಣಿನ ಸಾಮ್ರಾಜ್ಯದ ದಾರಿ ತೋರಿಸು ಎಂದು ಬೇಡಿದ್ದೇ ತಪ್ಪಾಯ್ತೇ.. ಅನ್ನ ಬೇಡಿದ್ದಕ್ಕೆ ಈ ಪರಿ ಶಿಕ್ಷೆಯೇ, ಯಾವ ತಪ್ಪಿಗೆ! ಯಾರಿಗೆ ತೊಂದರೆ ಕೊಟ್ಟಿದ್ದಕ್ಕೆ!” ಸುಮ್ಮನೆ ಪಶ್ಚಾತಾಪದಲ್ಲಿ ಬೇಯತೊಡಗಿತ್ತು. ಯೋಚನೆಯಲಿ ಹಕ್ಕಿ ಮತ್ತಷ್ಟು ಹಣ್ಣಾಯಿತು. ಈಗ ಅದಕ್ಕೆ  ಈ ಹಣ್ಣುಗಳನ್ನು ನೋಡಿ ವಾಕರಿಕೆ ಶುರುವಾಯಿತು. ಹಸಿವೂ ಪ್ರಾಯಶ್ಚಿತ ರೂಪದಿ ಇಂಗತೊಡಗಿತು. “ಇಲ್ಲ, ಇಲ್ಲ ಆಗುತ್ತಿಲ್ಲ” ಕೊಕ್ಕಿನಿಂದ ಒಂದು ಚೂರು ತಿನ್ನಲಾಗುತ್ತಿಲ್ಲ, ದುಸ್ತರವಾಯಿತು ಮಲಗಲೂ ಕೂಡ. ಬದುಕಲು ಬಹಳ ಕಷ್ಟ ಪಡುತ್ತಿದೆ ಜೀವವಿದ್ದಾಗಲೇ ತನ್ನ ಗೂಡು ಸೇರಬೇಕೆಂಬ ಹಂಬಲ ಹಿಡಿದು ಉಸಿರಾಡುತಿದೆ. ಇನ್ನೇನೋ ಇದು ಉಳಿಯುವುದೇ ಇಲ್ಲ ಎನ್ನುವುದು ಅವನಿಗೆ ಅರಿವಾಯಿತೋ ಏನೋ ಅವನು ಎಲ್ಲ ಬಲ್ಲವ!  ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದ ಎಷ್ಟೋ ರ‍್ಷಗಳ ನಂತರ!   ಅದರ ಸುತ್ತಮುತ್ತ ವಾಸವಿದ್ದ ಹಕ್ಕಿಗಳೆಲ್ಲ ಸಂಭ್ರಮಿಸಿದವು “ಹೋ!!” ಎಂದು. ಇದು ತನ್ನ ಬಾಡಿಗೆಗೂಡಿನಿಂದ ಹೊರಬರಲಾಗದೆ ತೆವಳುತ್ತಾ ಇಣುಕಿ ನೋಡಿತು ನಂಬಲಾಗುತ್ತಿಲ್ಲ ಅದಕ್ಕೆ. ಹೌದು! ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದಿದ್ದಾನೆ! ಇಷ್ಟು ರ‍್ಷ ಕಾಡಿ ಬೇಡಿದರೂ ಮೂಕನಾಗಿದ್ದನವ ಇಂದು ಕಣ್ಣು ತೆರೆದ. ಹಕ್ಕಿಗೆ ಸಂಭ್ರಮಿಸಬೇಕೋ, ಸಂಕಟಪಡಬೇಕೋ ತಿಳಿಯುತ್ತಿಲ್ಲ ತಾನು “ವಾಪಸ್ ತನ್ನೂರಿಗೆ ತೆರಳುವೆನೇ, ಇಲ್ಲಿಂದ ಪರ‍್ತಿ ಪ್ರಮಾಣದಲ್ಲಿ ಬಿಡುಗಡೆ ಹೊಂದಿ ನನ್ನ ಊರಲ್ಲಿ ನೆಲೆಸುವ ಭಾಗ್ಯ ನನಗೆ ದೊರೆತೀತೇ, ಅಥವಾ ಮತ್ತಾವುದೋ ಜನ್ಮದ ತಪ್ಪಿನ ಲೆಕ್ಕ ತೆಗೆದು ಶಿಕ್ಷೆ ರೂಪದಿ ಮತ್ತೊಂದು ಹಣ್ಣಿನರಾಜ್ಯಕ್ಕೆ ಎಸೆಯುವನೇ?” ಏನೊಂದು ತೋಚುತ್ತಿಲ್ಲ. ಏನನ್ನು ನಂಬಲಾಗುತ್ತಿಲ್ಲ. ಹಣ್ಣಿನ ಸಾಮ್ರಾಜ್ಯದ ಒಡೆಯ ಬಳಿ ಕರೆದು ಹೇಳಿದ “ನೀನಿನ್ನು ಹೊರಡಬಹುದು, ನಿನ್ನ ಸಮಯ ಮುಗಿಯಿತು”. ಖುಷಿಯಲ್ಲಿ ಹಕ್ಕಿ ಹಾರಲು ಪ್ರಯತ್ನಿಸಿತು ಆಗುತ್ತಿಲ್ಲ, ತಿನ್ನಲು ಪ್ರಯತ್ನಿಸಿತು ಆಗುತ್ತಿಲ್ಲ. ಏನು ಮಾಡುವುದು ತಿಳಿಯದೆ ಹಣ್ಣಿನ ಸಾಮ್ರಾಜ್ಯದ ಒಡೆಯನನ್ನೇ ಕೇಳಿತು‌. “ನಾನೀಗ ಶಕ್ತಿಹೀನ ಎಲ್ಲವನ್ನು ಕಳೆದುಕೊಂಡಿದ್ದೇನೆ”. ಕರುಣಾಳು ದಯಾಮಯಿ ಅವ ಹೇಳಿದ “ಸರಿ, ನಿನ್ನ  ಊರಿಗೆ ಹೋಗಿ ತಲುಪುವಷ್ಟು ಶಕ್ತಿಯನ್ನು ನೀಡುತ್ತೇನೆ ಮುಂದಿನದು ನಿನ್ನ ಜವಾಬ್ದಾರಿ”. ಅಷ್ಟಕ್ಕೆ ಹಕ್ಕಿ ಸಂಭ್ರಮಿಸಿ ನಲಿದಾಡಿತು ಅವನ ಮಹಿಮೆಯನ್ನು ಕೊಂಡಾಡಿತು. ದೂರದ ತೀರಕೆ ಹಾರಿತು ಹಾರಿತು ತಾನು ಹಾರಿ ಬಂದಿದ್ದ ದಿಕ್ಕಿಗೆ. ಆದರೆ ಕಣ್ಣು ಮಂಜು ಮಂಜು ನೋಡಿದರೆ ಯಾವುದೋ ಹೊಸ ಊರು!“ಅಯ್ಯೋ ನಾನು

ರೋಹಿಣಿ ಜೆ ಅವರ ಸಣ್ಣ ಕಥೆ “ಹಾರಾಟ ಮುಗಿದ ಹಕ್ಕಿ!” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-34 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ರಣವೀರನಾಗಬೇಕಾದ ಮಣಿಪುರದರಸ ಮಣಿದ ನನಗೆ ‘ಮಣಿಪುರದರಸು ಬಭ್ರುವಾಹನ ನಿಮ್ಮ ಯಜ್ಞಾಶ್ವವನ್ನು ಕಟ್ಟಿಹಾಕಿದ್ದಾನೆ. ಬಿಡಿಸಿಕೊಂಡುಹೋಗುವ ಸಾಮರ್ಥ್ಯವಿದ್ದರೆ ಯುದ್ಧರಂಗದಲ್ಲಿ ಪರಾಕ್ರಮ ತೋರುವವರಾಗಬೇಕು’ ಎಂಬ ಸಂದೇಶವದು ನಮ್ಮನ್ನು ತಲುಪಿತು. ಅದಾಗಲೇ ಸೂರ್ಯ ಅಸ್ತಂಗತನಾಗಿದ್ದ. ಆ ದಿನ ಯುದ್ಧ ನಡೆಯುವುದು ಸಾಧ್ಯವಿರಲಿಲ್ಲ. ಇನ್ನೇನಿದ್ದರೂ ಮರುದಿನವಷ್ಟೇ ಕದನಕೋಲಾಹಲ ಆರಂಭ.ನನ್ನ ಆಪ್ತರ ಜೊತೆ ಮರುದಿನದ ಯುದ್ಧತಂತ್ರಗಳನ್ನು ಚರ್ಚಿಸಿದೆ. ಸಮರ್ಥನೆನಿಸಿಕೊಂಡ ಬಭ್ರುವಾಹನನನ್ನು ಹೀನಾಯವಾಗಿ ಸೋಲಿಸಿದರೆ ನನ್ನ ವಿಜಯಮಾಲೆಗೆ ಹೊಸದೊಂದು ಕುಸುಮದ ಆಗಮನವದು ಖಚಿತ ಎನಿಸಿತು. ಬಭ್ರುವಾಹನನ ಸ್ಮರಣೆಯಲ್ಲಿಯೇ ಇರುಳು ಕಳೆಯಿತು.ಬೆಳಕು ಮೂಡಿತು. ನಿತ್ಯಕರ್ಮಗಳನ್ನು ಪೂರೈಸಿದೆ. ಜಪತಪಾದಿಗಳನ್ನು ಮುಗಿಸಿದೆ. ಕೃಷ್ಣ ಪಾದಪದ್ಮಗಳನ್ನು ನೆನೆದೆ. ನಮ್ಮ ಪಾಳಯದ ವೀರರೆಲ್ಲರನ್ನೂ ಕರೆಸಿದೆ. ಅವರ ಜೊತೆಗೆ ಯುದ್ಧರಂಗಕ್ಕೆ ಹೊರಟೆ.ಅನುಸರಿಸುತ್ತಿತ್ತು ಅನುಸಾಲ್ವಕನ ಸೇನೆ ನನ್ನನ್ನು. ಯುಕ್ತಿಯ ಯಾದವ ಚತುರಂಗವದು ಜೊತೆಗಿತ್ತು. ಒಡನೆಯೇ ಬಂತು ವೃಷಕೇತುವಿನ ವ್ಯಗ್ರಸೇನೆ. ಯುದ್ಧಚತುರ ಯೌವನಾಶ್ವನ ದಂಡು ಹಿಂದೆಯೇ ಇತ್ತು. ಹಂಸಧ್ವಜನ ಹೋರಾಟದ ಪಡೆಯದು ಮುನ್ನುಗ್ಗುತ್ತಿತ್ತು. ಘನವಾದ್ಯಗಳ ಧ್ವನಿಯದು ಮೊಳಗಿರಲು ನಾವೆಲ್ಲರೂ ಬಂದುಸೇರಿದೆವು ರಣರಂಗವನ್ನು.ನಾನು ಮುಂಚೂಣಿಯಲ್ಲಿದ್ದೆ. ಬಭ್ರುವಾಹನನ ಆಗಮನಕ್ಕಾಗಿ ನನ್ನ ಕಣ್ಣು ಕಾತರಿಸುತ್ತಿತ್ತು. ಅಪಾರ ಜನಸಮೂಹದೊಂದಿಗೆ ಮಣಿಪುರದೊಡೆಯ ಬರುತ್ತಿರುವುದು ಕಂಡಿತು. ನೋಡಿದೆ! ಸರಿಯಾಗಿ ಇನ್ನೊಮ್ಮೆ ನೋಡಿದೆ! ಯುದ್ಧೋನ್ಮುಖವಾಗಿ ಬರುತ್ತಿರುವ ದಂಡು ಅದಲ್ಲ ಎಂದು ತೋರಿತು ನನಗೆ.ಘನವಾದ್ಯದ ಮೊರೆತವಿರಲಿಲ್ಲ. ಕಾಳಗದ ಆರ್ಭಟವದು ಅಲ್ಲಿರಲಿಲ್ಲ. ಶುಭಸೂಚಕವಾದ ಇಂಪು ವಾದನಗಳ ಧ್ವನಿಯದು ಕೇಳಿಬರುತ್ತಿತ್ತು. ಕಳಶ, ಕನ್ನಡಿಗಳನ್ನು ಹಿಡಿದು ಅಲಂಕೃತರಾಗಿ ಮಂದಗಮನೆಯರಾಗಿ ಸಾಗಿಬರುತ್ತಿದ್ದರು ಲಲಿತಾಂಗಿಯರು. ಬ್ರಾಹ್ಮಣರಿದ್ದರು ಆ ಮೆರವಣಿಗೆಯಲ್ಲಿ, ವೇದಮಂತ್ರಗಳನ್ನು ಪಠಿಸುತ್ತಾ. ಈ ಬಗೆಯಲ್ಲಿ ಯುದ್ಧಕ್ಕೆ ಆಗಮಿಸುವುದೂ ಇದೆಯೇ! ಎಂದು ಅಚ್ಚರಿಯಾಯಿತು ನನಗೆ.ಮೆರವಣಿಗೆಯ ಮೊಟ್ಟಮೊದಲಲ್ಲಿದ್ದ ಬಭ್ರುವಾಹನ. ಹತ್ತಿರ ಬಂದAತೆಲ್ಲಾ ಅವನ ರೂಪವದು ಸ್ಪಷ್ಟವಾಯಿತು. ಒಂದಷ್ಟು ವರ್ಷಗಳಿಗೆ ಮೊದಲು ನಾನು ಹೇಗಿದ್ದೆನೋ ಹಾಗೆಯೇ ಇದ್ದಾನೆ.ನೇರವಾಗಿ ಬಂದ ನನ್ನೆಡೆಗೆ, ನಗುವನ್ನು ಸೂಸುತ್ತಾ. ಕದನ ಭಾವವದು ಅವನ ಮುಖದಲ್ಲಿ ಎಳ್ಳಷ್ಟೂ ಕಾಣಿಸಲಿಲ್ಲ. ನನಗೆ ತೀರಾ ಸನಿಹದವನಾಗಿ ನಿಂತ, ಆನಂದದಿAದ ನನ್ನ ಮೊಗವನ್ನು ನಿಟ್ಟಿಸುತ. ಒಡನೆಯೇ ತನ್ನ ಶಿರದಲ್ಲಿ ಶೋಭಿಸುತ್ತಿದ್ದ ಕಿರೀಟವನ್ನು ತೆಗೆದ. ನನ್ನ ಪಾದಗಳ ಬಳಿಯಿಟ್ಟ. ಅದು ಶರಣಾಗತಿಯ ಸಂಕೇತ. ಅಚ್ಚರಿಯಾಯಿತು ನನಗೆ. ಯುದ್ಧಕ್ಕೂ ಮೊದಲೇ ಶರಣು ಬಂದನೇ ಈತ! ಎನಿಸಿತು. ಮುಂದೇನು ಮಾಡಲಿದ್ದಾನೋ ಎಂಬAತೆ ನೋಡಿದೆ. ಅನರ್ಘ್ಯ ರತ್ನಗಳನ್ನು ನನ್ನ ಪಾದಮೂಲಕ್ಕೆ ಸುರಿದ. ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ಹಾಗೆಯೇ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದ, ನೆಲದ ಮೇಲೆ ಒರಗಿ.ತಕ್ಷಣವೇ ಅಲ್ಲಿ ನೆರೆದಿದ್ದ ಮಣಿಪುರದ ಜನರು, ಹೆಂಗಳೆಯರು ನನ್ನ ಮೇಲೆ ಮುತ್ತಿನ ಮಳೆಗರೆದರು. ಬಗೆಬಗೆಯ ಕಾಣಿಕೆಗಳನ್ನು ನನಗಿತ್ತರು ಅಲ್ಲಿಯ ಸಚಿವರು. ಪರಾಕ್ರಮದ ಮಾತು, ಹರಿತ ಬಾಣಗಳ ಪ್ರಯೋಗ, ಹೀಗಳೆವ ಹೀನನನುಡಿ ಇವುಗಳನ್ನೆಲ್ಲಾ ನಿರೀಕ್ಷಿಸಿ ಹೋಗಿದ್ದ ನಾನು ಬಭ್ರುವಾಹನನ ವಿನಯಶೀಲತೆ, ಅಲ್ಲಿನ ಜನರ ಮುತ್ತಿನ ಮಳೆ, ಅಪೂರ್ವ ಕಾಣಿಕೆಗಳು ಇದನ್ನೆಲ್ಲಾ ಕಂಡು ವಿಸ್ಮಯಚಕಿತನಾದೆ. ನನ್ನ ಜೊತೆಗಿದ್ದ ನನ್ನ ಆಪ್ತರೂ ಸಹ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿದ್ದರು. ಕೇಳಿದೆ ಬಭ್ರುವಾಹನನಲ್ಲಿ, “ಏನಿದೆಲ್ಲಾ?! ಯಾಕೆ ಈ ಪರಿಯ ವಿನಯಶೀಲತೆ?!”ಒಡನೆಯೇ ಅವನು ನನ್ನನ್ನು ‘ತಂದೆ’ ಎಂದು ಸಂಭೋದಿಸಿದ. ನನ್ನ ಕಣ್ಣುಗಳರಳಿದವು, ಚಕಿತತೆಯಿಂದ. “ನಾನು ನಿಮ್ಮ ಮಗ. ನೀವಂದು ತೀರ್ಥಯಾತ್ರೆಗೆಂದು ಇಲ್ಲಿಗೆ ಬಂದಾಗ ನಿಮ್ಮಿಂದ ಜನಿಸಿದವನು ನಾನು. ನನ್ನ ತಾಯಿ ಚಿತ್ರಾಂಗದೆ. ಪ್ರೀತಿಯಿಂದ ಸಲಹಿದವಳು ಉಲೂಪಿ. ನೀವೆನ್ನ ಜನಕ ಎಂಬ ಸತ್ಯವನ್ನು ಅರಿಯದೆಯೇ ಕಟ್ಟಿದೆ ಕುದುರೆಯನ್ನು. ಕ್ಷಮಿಸಬೇಕು ನಾ ಮಾಡಿದ ಈ ಬಗೆಯ ತಪ್ಪನ್ನು” ಎಂದವನು ತಪ್ಪು ಮಾಡಿ ಸಿಕ್ಕಿಬಿದ್ದ ಎಳೆಮಗುವಿನಂತೆ ಕಾಲಿಗೆ ಬಿದ್ದ.ನಾನು ಏನೊಂದು ನುಡಿಯನ್ನೂ ಆಡಲಿಲ್ಲ. ನನ್ನನ್ನೇ ನೋಡುತ್ತಿದ್ದರು ನನ್ನಾಪ್ತರು, ಆತ್ಮೀಯರು. ಇದಾವ ಹೊಸ ಬಾಂಧವ್ಯವಿದು ಬಂದಪ್ಪಿದೆ ಈ ಅರ್ಜುನನನ್ನು ಎಂಬ ಭಾವವಿತ್ತು ಅವರ ಆ ಕಣ್ಣೋಟದಲ್ಲಿ. ಬಭ್ರುವಾಹನ ನನ್ನ ಮಗ ಎನ್ನುವುದನ್ನು ಸಂಪೂರ್ಣವಾಗಿ ನಂಬಿದAತಿತ್ತು ಅವರ ಮಾತುಗಳು.“ನಿನ್ನ ಮಗನಾದ ಈ ಬಭ್ರುವಾಹನ ಮಹಾ ಪರಾಕ್ರಮಿ. ವೈಭವಯುತನಾಗಿದ್ದಾನೆ. ಹೊಗಳಿಕೆಗೆ ಅರ್ಹನೆನಿಸಿಕೊಂಡಿದ್ದಾನೆ. ನಿನ್ನನ್ನೇ ಹೋಲುತ್ತಾನೆ ರೂಪದಲ್ಲಿ. ಪಾದವನ್ನಪ್ಪಿರುವ ಈತನನ್ನು ಕ್ಷಮಿಸದೆಯೇ ಸುಮ್ಮನೆ ಏಕೆ ನಿಂತೆ?! ಮನ್ನಿಸು ಅವನನ್ನು” ಎಂದರು ಅವರೆಲ್ಲರೂ.ಹೀಗೆ ಬಭ್ರುವಾಹನ ನಡೆದುಕೊಳ್ಳುವುದರ ಹಿಂದೆ ಒಂದು ಬಲವಾದ ಕಾರಣವಿತ್ತು. ಹಿಂದಿನ ದಿನ ನಮ್ಮ ಕುದುರೆಯನ್ನು ಕಟ್ಟಿಸಿದ್ದ ಆತ ನಮ್ಮೆದುರಿನ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದ. ಈ ಸಮಯದಲ್ಲಿಯೇ ಅವನ ತಾಯಿಗೆ ಈ ವಿಷಯ ಗೊತ್ತಾಯಿತಂತೆ. ತಕ್ಷಣವೇ ಅವನ ಬಳಿಹೋಗಿ, “ಅರ್ಜುನ ನಿನ್ನ ತಂದೆ. ಅವನ ಕುದುರೆಯನ್ನು ಕಟ್ಟಿರುವುದು ಸರಿಯಲ್ಲ” ಎಂದಳAತೆ. ಈ ವಿಚಾರವನ್ನು ಸುಬುದ್ಧಿಯ ಜೊತೆಗೆ ಚರ್ಚಿಸಿದನಂತೆ ಬಭ್ರುವಾಹನ. “ತಂದೆಯೆAದು ತಿಳಿಯದೇ ಇದ್ದಾಗ ಕುದುರೆಯನ್ನು ಕಟ್ಟಿಸಿದವ ನೀನು. ಈಗ ನಿಜ ವಿಚಾರ ತಿಳಿದ ಬಳಿಕವೂ ಹಾಗೆಯೇ ನಡೆದುಕೊಳ್ಳುವುದು ಉಚಿತವಲ್ಲ” ಎಂಬ ಸಲಹೆಯನ್ನು ನೀಡಿದನಂತೆ ಸುಬುದ್ಧಿ. ಈ ಕಾರಣಕ್ಕೇ ಬಭ್ರುವಾಹನ ಯುದ್ಧಚಂತನೆಯನ್ನು ತೊರೆದು, ಶರಣಾಗತನಾಗಿ ನನ್ನೆದುರಿಗೆ ಬಂದದ್ದು.ನನಗಂತೂ ಬಭ್ರುವಾಹನ ನುಡಿದದ್ದೆಲ್ಲವೂ ಕಟ್ಟುಕಥೆ ಎಂದೇ ತೋರಿತು. ನನ್ನನ್ನು ಎದುರಿಸಲಾರದ ಅಧೈರ್ಯಕ್ಕೆ ಒಳಗಾದವನು ಸುಳ್ಳು ಹೇಳುತ್ತಿದ್ದಾನೆ ಎನಿಸಿತು. ಹೀಗಿದ್ದಾಗಲೇ ನಮ್ಮವರಾಡಿದ “ಕ್ಷಮಿಸು ಮಗನನ್ನು” ಎಂಬ ಮಾತು ನನ್ನನ್ನು ಕೆರಳಿಸಿತು. ಉಗ್ರನೋಟ ಬೀರಿದೆ ಬಭ್ರುವಾಹನನೆಡೆಗೆ… ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

You cannot copy content of this page

Scroll to Top