ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಓ…ಅಹಂಕಾರಿ ಮನುಜ
ನೀನೆಂದೂ ಚಿರಂಜೀವಿಯಲ್ಲ,!

   ನಿನ್ನ ಅಧಿಕಾರದ ದರ್ಪ
   ನೀನಗೆಂದೂ ಅದು ಶಾಶ್ವತವಲ್ಲ,!

ಧರ್ಮದ ಮಧವೇರಿಸಿ
ಅನ್ಯ ಧರ್ಮಗಳ ನೀ ಕೆಣಕದಿರು,!

   ರಾಜಕೀಯ ಪ್ರೇರಿತನಾಗಿ
   ದ್ವೇಷದ ಜಪವನು ಮಾಡದಿರು,!

ಮತಾಂಧರನು ನೀನಾಗದೆ
ಮಾನವ ಕುಲದ ಸುಪುತ್ರನಾಗು,!

   ಮರಣದ ಕುಣಿಕೆ ಹಿಡಿದು
   ಯಮ ನಿನ್ನ ಬೆನ್ನಟ್ಟುತ್ತಿರುವನು!

ಸತ್ತು ಮಣ್ಣಾಗುವ ಮುನ್ನ
ಮಂದಿಯ ಮನಸ್ಸಿಗೆ ಅರಸನಾಗು.!

   ಕೆಡುಕಿನ ದಾರಿಗಳ ಹಿಡಿದು
   “ನರಕದ ಬೆಂಕಿ”ಗೆ ಆಹುತಿ ಆಗದಿರು.!


About The Author

Leave a Reply

You cannot copy content of this page

Scroll to Top