ಡಾ.ಅನ್ನಪೂರ್ಣ ಹಿರೇಮಠ್ ಅವರ ಗಜಲ್
ಕಾವ್ಯ ಸಂಗಾತಿ ಡಾ.ಅನ್ನಪೂರ್ಣ ಹಿರೇಮಠ್ ಗಜಲ್ ಜಗದ ಎಲ್ಲ ಸುಖವು ಸಿಗುವುದೆಂದು ಬೆರಗಾಗಿದ್ದೆಬಯಸಿದ ಒಲವು ದೊರಕುವುದೆಂದು ಬೆರಗಾಗಿದ್ದೆ ಏನಿಲ್ಲ ಏನುಂಟೆಂಬ ಕುತೂಹಲ ಬಿಡದೆ ಕಾಡಿತ್ತುಅಪ್ರತಿಮ ಗೆಳೆಯನೇ ದಕ್ಕುವನೆಂದು ಬೆರಗಾಗಿದ್ದೆ ಹಾತೊರೆವ ಭಾವ ಬಿತ್ತಿಯ ತುಂಬೆಲ್ಲ ಕನಸುಗಳುಸ್ವರ್ಗ ಸಿರಿಯ ಪಲ್ಲಕ್ಕಿ ಏರುವೆನೆಂದು ಬೆರಗಾಗಿದ್ದೆ ಅರಿಯದಾಸೆಗಳು ಉಬ್ಬಿ ಉಬ್ಬಿ ತಾರಕಕೇರಿದ್ದವುಗರಿಗೆದರಿದಂಬಲ ಹಸಿರಾಗುವುದೆಂದು ಬೆರಗಾಗಿದ್ದೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಪ್ರೇಮ ಪರವಶದಲ್ಲಿತ್ತುಅನುಳಿಗೆ ಪ್ರೀತಿಯ ಧಾರೆ ಎರೆವನೆಂದು ಬೆರಗಾಗಿದ್ದೆಡಾ ಅನ್ನಪೂರ್ಣ ಹಿರೇಮಠ
ಡಾ.ಅನ್ನಪೂರ್ಣ ಹಿರೇಮಠ್ ಅವರ ಗಜಲ್ Read Post »









