ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ”

ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ “ನಕ್ಕಿತು ಕನ್ನಡಿ” ಕಂಡದ್ದು ಕಂಡಹಾಗೆತೋರಿದರೆಕೆಂಡದಂತ ಕೋಪಕನ್ನಡಿ ಸರಿಗಿಲ್ಲಭೂತಗನ್ನಡಿ ಎನ್ನುವಭೂತಗಳ ಕಂಡು ನಿಜವನರಿಯದ ನಿತ್ಯನಡೆವ ನಾಟಕದ ರೂವಾರಿಗಳ ಕಂಡುರಾವುಗನ್ನಡಿಯ ಹಿಂದೆಮನದ ಕನ್ನಡಿ ಮುಚ್ಚಿದ ವಿಚಾರವಾದಿಗಳ ಕಹಿಸತ್ಯವ ಕಂಡು ಜನಸಾಮಾನ್ಯರನು ಮಳ್ಳುಮಾಡುವ ವಿವೇಕಿಗಳಅವಿವೇಕತೆಯ ಕಂಡುವಿವೇಕ ಇದ್ದರೂ ತಪ್ಪನ್ನುತಪ್ಪೆಂದು ಒಪ್ಪದವರ ಕಂಡು ಅವರಿವರನು ಬಳಸಿಕೊಂಡುಶಾಂತಿ ನೆಮ್ಮದಿ ಸೌಹಾರ್ದಹಾಳು ಮಾಡುವ ಮತಿಹೀನರ ಮಂಗನಾಟದಲಿಮುಗ್ಧಜನರ ಬಲಿಪಶು ಕಂಡು ಇದ್ದದ್ದು ಇದ್ದಂಗ ತೋರಿದರೂ ಮತ್ತೊಂದು ಬಣ್ಣ ಹಚ್ಚಿ ಕನ್ನಡಿಯ ಬಿಂಬ ಸರಿಯಿಲ್ಲ ಎನ್ನುವ ಸೈಲೆಂಟ ಕಿಲ್ಲರ್  ಮನಸುಗಳ ವಿಕ್ರತ ಮನಸು ಕಂಡುಮುಸು ಮುಸು ಕನ್ನಡಿ ನಕ್ಕಿತುಕನ್ನಡಿ ನಕ್ಕಿತುಲಲಿತಾ ಪ್ರಭು ಅಂಗಡಿ ಮಂಬಯಿ.

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ” Read Post »

ಇತರೆ, ಜೀವನ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ಒಂದು ಹಳ್ಳಿಯಲ್ಲಿ ಸೋಮಣ್ಣ ಎಂಬ ಒಬ್ಬ ಕೃಷಿಕನಿದ್ದನು. ಅವನು ತುಂಬಾ ದಯಾಳುವಾಗಿದ್ದರೂ, ಅತಿಯಾದ ಸೋಮಾರಿಯಾಗಿದ್ದನು. “ನಾಳೆ ಮಾಡೋಣ ಬಿಡು” ಎಂದು ಪ್ರತಿಯೊಂದು ಕೆಲಸವನ್ನೂ ಮುಂದೂಡುವುದು ಅವನ ಹವ್ಯಾಸವಾಗಿತ್ತು.ಒಂದು ದಿನ ಅವನ ಹಳ್ಳಿಗೆ ಒಬ್ಬ ಸಾಧು ಬಂದರು. ಸೋಮಣ್ಣನ ಬಡತನ ಮತ್ತು ಸೋಮಾರಿತನವನ್ನು ಕಂಡು ಅವರಿಗೆ ಮರುಕ ಉಂಟಾಯಿತು. ಸಾಧುಗಳು ಅವನಿಗೆ ಒಂದು ಕಪ್ಪಾದ ವಿಚಿತ್ರ ಕಲ್ಲನ್ನು ನೀಡಿ ಹೀಗೆ ಹೇಳಿದರು, “ಸೋಮಣ್ಣ, ಇದು ಕೇವಲ ಕಲ್ಲಲ್ಲ, ಇದೊಂದು ‘ಪರಸಮಣಿ’ ಇದನ್ನು ನೀನು ಯಾವುದೇ ಕಬ್ಬಿಣಕ್ಕೆ ಮುಟ್ಟಿಸಿದರೂ ಅದು ಚಿನ್ನವಾಗುತ್ತದೆ. ಆದರೆ ನೆನಪಿಡು, ನಾನು ನಾಳೆ ಸಂಜೆ ಸರಿಯಾಗಿ ಆರು ಗಂಟೆಗೆ ಇದನ್ನು ಮರಳಿ ಪಡೆಯಲು ಬರುತ್ತೇನೆ. ಅಷ್ಟರೊಳಗೆ ನಿನಗೆ ಎಷ್ಟು ಬೇಕೋ ಅಷ್ಟು ಚಿನ್ನ ಮಾಡಿಕೊ ಹಾಗೂ ನಿನ್ನ ಬಡತನ ನೀಗಿಸಿಕೊ” ಎಂದು ಹೇಳಿ ಹೊರಟರು.ಸೋಮಣ್ಣನಿಗೆ ಅಪಾರ ಸಂತೋಷವಾಯಿತು. ಅವನು ಯೋಚಿಸಿದನು, “ನನ್ನ ಬಳಿ ನಾಳೆ ಸಂಜೆಯವರೆಗೆ ಸಮಯವಿದೆಯಲ್ಲ! ಈಗ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ತುಂಬಾ ಕಬ್ಬಿಣ ತಂದು, ಚಿನ್ನವಾಗಿ ಬದಲಾಯಿಸುತ್ತೇನೆ.”ಮಾರನೇ ದಿನ ಬೆಳಿಗ್ಗೆ ಎದ್ದ ಸೋಮಣ್ಣ, “ಇನ್ನೂ ತುಂಬಾ ಸಮಯವಿದೆ, ಮಧ್ಯಾಹ್ನ ಹೋದರಾಯಿತು” ಎಂದುಕೊಂಡು ಆರಾಮವಾಗಿ ಊಟ ಮಾಡಿ ನಿದ್ದೆ ಹೋದನು. ಮಧ್ಯಾಹ್ನ ಮೂರು ಗಂಟೆಗೆ ಎದ್ದಾಗ ಅವನಿಗೆ ಮಾರುಕಟ್ಟೆಗೆ ಹೋಗಿ ಕಬ್ಬಿಣ ತರಬೇಕು ಎಂದು ನೆನಪಾಯಿತು. ಆದರೆ ಸೋಮಾರಿತನದಿಂದಾಗಿ, “ಸಂಜೆಯಾಗಲು ಇನ್ನು ಮೂರು ಗಂಟೆ ಇದೆಯಲ್ಲ, ನಿಧಾನವಾಗಿ ಹೋಗೋಣ” ಎಂದುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದನು.ಅವನು ಮಾರುಕಟ್ಟೆಗೆ ತಲುಪಿ, ಕಬ್ಬಿಣವನ್ನು ಖರೀದಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಸರ‍್ಯ ಮುಳುಗುತ್ತಿದ್ದನು. ಅವನು ಓಡೋಡುತ್ತಾ ಮನೆಗೆ ಬಂದು ಕಬ್ಬಿಣಕ್ಕೆ ಆ ಮಾಂತ್ರಿಕ ಕಲ್ಲನ್ನು ಮುಟ್ಟಿಸಲು ಹೋದನು.ಆದರೆ ಅಷ್ಟರಲ್ಲೇ ಸರಿಯಾಗಿ ಸಂಜೆ ಆರು ಗಂಟೆಯಾಗಿತ್ತು!ಸಾಧುಗಳು ಅವನ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಅವರು ಸೋಮಣ್ಣನ ಕೈಲಿದ್ದ ಮಾಂತ್ರಿಕ ಕಲ್ಲನ್ನು ಮರಳಿ ಪಡೆದರು. ಸೋಮಣ್ಣನು ಅಳುತ್ತಾ, “ಸ್ವಾಮಿ, ನನಗೆ ಇನ್ನೊಂದು ಐದು ನಿಮಿಷ ಕೊಡಿ, ನಾನು ಕಬ್ಬಿಣವನ್ನು ಚಿನ್ನ ಮಾಡಬೇಕು” ಎಂದು ಬೇಡಿಕೊಂಡನು.ಅದಕ್ಕೆ ಸಾಧುಗಳು ಶಾಂತವಾಗಿ ಹೇಳಿದರು, “ಸೋಮಣ್ಣ, ಯಾರು ಸಮಯದ ಬೆಲೆಯನ್ನು ಅರಿಯುವುದಿಲ್ಲವೋ, ಅವರಿಗೆ ಅದೃಷ್ಟವೂ ಒಲಿಯುವುದಿಲ್ಲ. ನಿನಗೆ ಪರ‍್ತಿ ಒಂದು ದಿನ ಸಿಕ್ಕರೂ ನೀನು ಸಮಯವನ್ನು ವ್ರ‍್ಥ ಮಾಡಿದೆ. ಕಳೆದುಹೋದ ಸಮಯ ಮತ್ತು ಕಳೆದುಕೊಂಡ ಅವಕಾಶಗಳು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ.”ಸೋಮಣ್ಣನಿಗೆ ತನ್ನ ಸೋಮಾರಿತನದ ಅರಿವಾಯಿತು, ಆದರೆ ಅಷ್ಟರಲ್ಲೇ ಸಮಯ ಮೀರಿಹೋಗಿತ್ತು.ಕಥೆಯ ನೀತಿ:ಸಮಯವು ಅತ್ಯಂತ ಅಮೂಲ್ಯವಾದದ್ದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು. ನಾಳೆಗೆ ಮುಂದೂಡುವ ಅಭ್ಯಾಸವು ನಮ್ಮ ಯಶಸ್ಸಿನ ದಾರಿಗೆ ಅತಿ ದೊಡ್ಡ ಶತ್ರು.ಶ್ರೇಷ್ಠ ಸಾಧಕಇತಿಹಾಸದ ಶ್ರೇಷ್ಠ ಸಾಧಕರ ಜೀವನವನ್ನು ಗಮನಿಸಿದರೆ, ಅವರು ಎಂದಿಗೂ ನಾಳೆಗಾಗಿ ಕಾಯಲಿಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ. ಭಾರತದ ಹೆಮ್ಮೆಯ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ಸಮಯ ಪಾಲನೆಗೆ ಮತ್ತು ತತ್‌ಕ್ಷಣದ ರ‍್ತವ್ಯ ಪ್ರಜ್ಞೆಗೆ ಹೆಸರಾಗಿದ್ದರು. ಒಮ್ಮೆ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಳಿಯ ಶಬ್ದದಲ್ಲಾದ ಸಣ್ಣ ವ್ಯತ್ಯಾಸವನ್ನು ಆ ಕ್ಷಣದಲ್ಲೇ ಗ್ರಹಿಸಿ ತಕ್ಷಣವೇ ರೈಲಿನ ಅಪಘಾತ ಸರಪಳಿಯನ್ನು ಎಳೆದರು. “ನಾಳೆ ನೋಡೋಣ” ಅಥವಾ “ಮುಂದಿನ ನಿಲ್ದಾಣದಲ್ಲಿ ಹೇಳೋಣ” ಎಂದು ಅವರು ಅಂದು ಉದಾಸೀನತೆ ತೋರಿದ್ದರೆ ನೂರಾರು ಜೀವಗಳು ಬಲಿಯಾಗುತ್ತಿದ್ದವು. ಅವರು ಇಂದಿನ ಕ್ಷಣದ ಮಹತ್ವವನ್ನು ಅರಿತು ಕರ‍್ಯಪ್ರವೃತ್ತರಾದ ಕಾರಣಕ್ಕೇ ದೊಡ್ಡ ದುರಂತ ತಪ್ಪಿತು. ಇದನ್ನೇ ಮಹಾತ್ಮರು “ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈ ಕ್ಷಣವೇ ಮಾಡು” ಎಂದು ಬಣ್ಣಿಸಿದ್ದಾರೆ.ಚಲನಶೀಲ ಬದುಕಿನ ಯಶಸ್ಸಿನ ಸೂತ್ರಬದುಕಿನ ಹಾದಿಯಲ್ಲಿ ಸಮಯ ಮತ್ತು ಅವಕಾಶಗಳು ನದಿಯ ನೀರಿನಂತೆ, ಅವು ಸದಾ ಹರಿಯುತ್ತಲೇ ಇರುತ್ತವೆ. “ಹೋದ ಆಯುಷ್ಯ, ಚಲಿಸಿದ ನದಿ ಮತ್ತು ಕಳೆದುಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ” ಎಂಬ ಪ್ರಕೃತಿಯ ಕಠೋರ ನಿಯಮವನ್ನು ನಾವು ಅರಿತಾಗ ಮಾತ್ರ ಪ್ರಸ್ತುತ ಕ್ಷಣದ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಮನುಷ್ಯನ ಅತಿ ದೊಡ್ಡ ದರ‍್ಬಲ್ಯವೆಂದರೆ ಆಲಸ್ಯ ಮತ್ತು ಮುಂದೂಡುವಿಕೆ. ಇಂದು ಸಿಕ್ಕ ಅವಕಾಶವನ್ನು ನಾಳೆಗೆ ಮುಂದೂಡುವಾಗ ನಾವು “ಇದ್ದಾಗ ಇರದ ಮೌಲ್ಯ, ಹೋದಾಗ ತಿಳಿಯಿತು” ಎಂಬ ಗಾದೆ ಮಾತನ್ನು ಮರೆತುಬಿಡುತ್ತೇವೆ. ಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ವಿದ್ಯರ‍್ಥಿ ಜೀವನವಿರಲಿ ಅಥವಾ ವೃತ್ತಿ ಬದುಕಿರಲಿ, ನಮಗೆ ಸಿಗುವ ಸಣ್ಣ ಅವಕಾಶವನ್ನೂ ಕಡೆಗಣಿಸಬಾರದು.ನಾಳೆಯ ಭ್ರಮೆಯಲ್ಲಿಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ಕಣ್ಣೆದುರಿನ ನಿತ್ಯ ಸತ್ಯಗಳು:💡 ಬೆಳಕಿನ ಬೆಲೆ: ಹಗಲಿಡೀ ಸರ‍್ಯನ ಬೆಳಕಿದ್ದಾಗ ಅದರ ಬೆಲೆ ನಮಗೆ ತಿಳಿಯುವುದಿಲ್ಲ, ಆದರೆ ರಾತ್ರಿಯ ಕತ್ತಲಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹೋದಾಗ ಮಾತ್ರ ಒಂದೇ ಒಂದು ಸಣ್ಣ ಮೇಣದಬತ್ತಿಯ ಬೆಳಕು ಎಷ್ಟು ಅಮೂಲ್ಯ ಎಂಬುದು ಮನವರಿಕೆಯಾಗುತ್ತದೆ. ನೀರಿನ ಮೌಲ್ಯ: ನಲ್ಲಿಯಲ್ಲಿ ನೀರು ಬರುತ್ತಿರುವಾಗ ಬೇಕಾಬಿಟ್ಟಿ ಪೋಲು ಮಾಡುವ ನಾವು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬಂದಾಗ ಮಾತ್ರ ನೀರಿನ ನಿಜವಾದ ಯೋಗ್ಯತೆಯನ್ನು ಅರಿಯುತ್ತೇವೆ.ಅಮ್ಮನ ಕೈರುಚಿಪ್ರತಿದಿನ ಅಮ್ಮ ಪ್ರೀತಿಯಿಂದ ಮಾಡುವ ಅಡುಗೆಯಲ್ಲಿ ನಾವು ನೂರು ತಪ್ಪುಗಳನ್ನು ಹುಡುಕುತ್ತೇವೆ, ಆದರೆ ಮನೆಯಿಂದ ದೂರದ ಊರಿಗೆ ಹೋಗಿ ಹೋಟೆಲ್ ಊಟ ತಿಂದಾಗ ಮಾತ್ರ ಅಮ್ಮನ ಕೈರುಚಿಯ ನಿಜವಾದ ಮೌಲ್ಯ ನೆನಪಾಗಿ ಕಣ್ಣೀರು ಬರುತ್ತದೆ. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕುಸಣ್ಣ ಅವಕಾಶಚಲನಚಿತ್ರ ರಂಗದ ಮಹಾನಾಯಕ ಅಮಿತಾಭ್ ಬಚ್ಚನ್ ಅವರು ೯೦ರ ದಶಕದಲ್ಲಿ ತಮ್ಮದೇ ಕಂಪನಿಯ ನಷ್ಟದಿಂದಾಗಿ ಸಂಪರ‍್ಣ ದಿವಾಳಿಯಾಗಿದ್ದರು. ಆ ಕಠಿಣ ಸಮಯದಲ್ಲಿ ಅವರಿಗೆ ದೂರರ‍್ಶನದ ‘ಕೌನ್ ಬನೇಗಾ ಕರೋಡ್ ಪತಿ’ ಕರ‍್ಯಕ್ರಮದ ಆಫರ್ ಬಂದಾಗ, ಅದನ್ನು ಸಣ್ಣ ಅವಕಾಶವೆಂದು ಅವರು ತಳ್ಳಿಹಾಕಲಿಲ್ಲ. ಅಂದು ಸಿಕ್ಕ ಆ ಒಂದು ಅವಕಾಶವನ್ನು ಅತ್ಯಂತ ಶ್ರದ್ಧೆಯಿಂದ ಬಳಸಿಕೊಂಡಿದ್ದರಿಂದಲೇ ಅವರು ಮತ್ತೆ ಯಶಸ್ಸಿನ ಶಿಖರಕ್ಕೇರಲು ಸಾಧ್ಯವಾಯಿತು. ಅವರು ಅಂದು ಇಂದಿನ ಅವಕಾಶವನ್ನು ಕಳೆದುಕೊಂಡಿದ್ದರೆ ನಾಳೆಯ ವೈಭವ ಸಿಗುತ್ತಿರಲಿಲ್ಲ.ಹೆಚ್ಚಿನ ಸಮಯನಮ್ಮ ಹಿರಿಯರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂದು ಸುಮ್ಮನೆ ಹೇಳಿಲ್ಲ; ಸಿಕ್ಕ ಅವಕಾಶವನ್ನು ಆರಂಭದಲ್ಲೇ ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು.ಅದೇ ರೀತಿ, ಬಡತನ ಮತ್ತು ಕಡು ನಿರಾಶೆಯಲ್ಲಿದ್ದ ಲೇಖಕಿ ಜೆ.ಕೆ. ರೌಲಿಂಗ್ ಅವರು ತಮಗೆ ಕಲ್ಪನೆಗಳು ಮೂಡಿದ ತಕ್ಷಣ ಸಿಕ್ಕ ಹರಿದ ಕಾಗದದ ಚೂರುಗಳ ಮೇಲೆಯೇ ಹ್ಯಾರಿ ಪಾಟರ್ ಕಥೆಯನ್ನು ಬರೆಯಲು ಶುರು ಮಾಡಿದರು. ಒಂದು ವೇಳೆ ಅವರು ಮನಸ್ಸಿನ ಸ್ಥಿತಿ ಸರಿಯಿಲ್ಲ ಎಂದು ಇಂದಿನ ಬರವಣಿಗೆಯನ್ನು ನಾಳೆಗೆ ಮುಂದೂಡಿದ್ದರೆ, ಜಗತ್ತಿನ ಅತ್ಯಂತ ಯಶಸ್ವಿ ಸಾಹಿತ್ಯ ಸರಣಿ ಎಂದಿಗೂ ಸೃಷ್ಟಿಯಾಗುತ್ತಿರಲಿಲ್ಲ. ಬದುಕಿನಲ್ಲಿ “ಸಮಯವು ಹಣಕ್ಕಿಂತ ಹೆಚ್ಚು ಅಮೂಲ್ಯವಾದುದು; ನೀವು ಹೆಚ್ಚು ಹಣವನ್ನು ಗಳಿಸಬಹುದು, ಆದರೆ ಹೆಚ್ಚಿನ ಸಮಯವನ್ನು ಗಳಿಸಲು ಸಾಧ್ಯವಿಲ್ಲ” ಎಂಬ ಸತ್ಯಕ್ಕೆ ರೌಲಿಂಗ್ ಅವರ ಜೀವನವೇ ಸಾಕ್ಷಿ.ಕೊನೆಯದಾಗಿ ಹೇಳಬೇಕೆಂದರೆ,“ಇಂದು” ಎಂಬುದು ಪ್ರಕೃತಿ ನಮಗೆ ನೀಡಿರುವ ಅಮೂಲ್ಯವಾದ ಉಡುಗೊರೆ. “ದೂರವಿರುವ ಬೆಟ್ಟ ಕಣ್ಣಿಗೆ ನುಣುಪಾಗಿ ಕಾಣುವುದು ಸಹಜ, ಆದರೆ ಬಾಯಾರಿಕೆ ಇಂಗಿಸುವುದು ನಮ್ಮ ಕಾಲ ಬುಡದಲ್ಲಿ ಹರಿಯುವ ಸಣ್ಣ ತೊರೆ ಮಾತ್ರ” ಎಂಬಂತೆ, ನಾಳೆಯ ಸುಳ್ಳು ಭರವಸೆಗಳಿಗಾಗಿ ಇಂದಿನ ವಾಸ್ತವವನ್ನು ಕಳೆದುಕೊಳ್ಳಬಾರದು. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕು. ಇಂದು ಸಿಕ್ಕ ಅವಕಾಶವನ್ನು ಇಂದೇ ಸದುಪಯೋಗಪಡಿಸಿಕೊಂಡು, ನಾಳೆಯ ಪಶ್ಚಾತ್ತಾಪದಿಂದ ಮುಕ್ತಿ ಪಡೆದು ಯಶಸ್ಸಿನತ್ತ ಹೆಜ್ಜೆ ಇಡುವುದೇ ನಿಜವಾದ ಬುದ್ಧಿವಂತಿಕೆ. ಜಯಶ್ರೀ. ಜೆ. ಅಬ್ಬಿಗೇರಿ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ‌ “ನೆರೆ-ಬರ” ಇದೋ ನೋಡಿ ….ಈ ವರ್ಷದ ಸೋಜಿಗ ,ಒಂದು ಕಡೆ ನೆರೆ , ಇನ್ನೊಂದು ಕಡೆ ಬರ .ಇರುವುದೊಂದೇ ಬಾನು , ಇರುವುದೊಂದೇ ಭುವಿನಡುವೆ ಎನೀ  ಅಂತರ….. ? ಒಂದೆಡೆ ಬರಗಾಲದ ಭೀತಿ ,ಇನ್ನೊಂದೆಡೇ  ಪ್ರವಾಹಕೆ ಆಹುತಿಬೇಡವೆಂದು ಗೋಳಾಡಿದರು , ಮುನಿದ ಮಾರಿಯ ಹಾಗೆ ಸುರಿಯುತಿಹುದು ಬಿಡದೆ ಮಹಾಮಳೆ ,ಕಣ್ಣು ಮಿಟುಕಿಸಿದ್ದೆ ತಡ , ಕಂಡಿದ್ದೆಲ್ಲವು ಅವಶೇಷ ,ಸುತ್ತ ನೋಡಿದರೂ ಜಲ ದಿಗ್ಬಂಧನ…… ಜೀವಮಾನದ ಗಳಿಕೆ ಕೊಚ್ಚಿ ಹೋಯಿತು ,ಗಳಿಸಿದ ಧನ ಕನಕಕ್ಕೆಇಲ್ಲದ ಹಾಗಾಯಿತು ಕಿಮ್ಮತ್ತುನಾನು , ನನ್ನವರು , ನನ್ನದು ಎನ್ನುವ ಮೋಹ ಪಾಶಸಡಿಲಗೊಂಡು ,  ನಶ್ವರ ಜಗದ ಸತ್ಯ ದರ್ಶನ….. ಕಾಳಿಲ್ಲದೆ , ಕೂಳಿಲ್ಲದೆ  ಕಂಗೆಟ್ಟ ಜೀವ ಕುಲನೀರಿಲ್ಲದೆ ಸೊರಗುತ್ತಿದೆ ಹಸಿರ ಬಸಿರುವರುಣದೇವನ ಕೃಪೆಗೆ ನಡೆದಿವೆ ಹಲವು ಪುಜೆಗಳು…. ಸುರಿಯುವ ಸುಳಿವೇ ಕೊಡದ ಮಳೆರಾಯಆಡುತಿರುವ ನಮ್ಮೊಡನೆ  ಜೂಟಾಟಹಸಿವು , ದಾಹಕೆ  ಅದೆಷ್ಟು ಬಲಿ  ಬಿಳುವುದೊ ತಿಳಿಯದು , ….. ತಾಪಮಾನದ ಹೆಚ್ಚಳಕೆ  ಪುರಾಣ ಐತಿಹ್ಯದ ಕೇದಾರನಾಥನೆ ಕರಗುತ್ತಿದ್ದಾನೆಭೂ ಲೋಕವಿಗ ಅಸುರ ಲೋಕ ,ಸತ್ಯ ಮಿತ್ಯದಲೆಕ್ಕದಲ್ಲಿ ಸತ್ಯ ಶೂನ್ಯವಾಗಿದೆ .ಸೃಷ್ಠಿ ಕರ್ತನ ಅಣತಿ ಮೀರಬಹುದೆ?ಪುಣ್ಯದ ದಿನಗಳು ಕಳೆದಾಗ ,ಉಳಿಯುವ ಶೇಷವೆ ಕರ್ಮ ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಅಂಕಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸಮಾಜವಾದಿ ಚಿಂತಕರು,ಗಾಂಧಿವಾದಿಡಾ ಕುಮಾರ ಸಪ್ತರ್ಷಿ ಗ್ರಾಮ ರಾಜ್ಯದ ಕನಸು ಕಂಡ ಅಪ್ಪಟ ಗಾಂಧಿವಾದಿ ಡಾ. ಕುಮಾರ ಸಪ್ತರ್ಷಿ ಅವರು ಮಹಾರಾಷ್ಟ್ರದ ಪ್ರಸಿದ್ಧ ಹಿರಿಯ ಸಮಾಜವಾದಿ ಚಿಂತಕರು, ಗಾಂಧಿವಾದಿ ಹೋರಾಟಗಾರರು ಮತ್ತು ಯುವ ನಾಯಕರಾಗಿದ್ದರು. ಅವರು ಮಹಾರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಪ್ರಗತಿಪರ ಚಳವಳಿಗಳಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದುರದೃಷ್ಟವಶಾತ್, ಅವರು ತಮ್ಮ 85ನೇ ವಯಸ್ಸಿನಲ್ಲಿ 18 ಜುಲೈ 2026 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. 1941ರ ಆಗಸ್ಟ್ 21ರಂದು ಜನಿಸಿದ ಸಪ್ತರ್ಷಿ ಅವರು ಬಿಹಾರದ ಗಯಾದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ತಮ್ಮ ಸಾಮಾಜಿಕ ಜೀವನವನ್ನು ಆರಂಭಿಸಿದರು; ಅಲ್ಲಿ ಅವರು ಬರಗಾಲದಿಂದ ತೊಂದರೆಗೀಡಾದ ಜನರಿಗಾಗಿ ಸಹಾಯ ಕೇಂದ್ರವೊಂದನ್ನು ನಡೆಸುತ್ತಿದ್ದರು. ಅವರು 1967ರ ನವೆಂಬರ್‌ನಲ್ಲಿ ‘ಯುಕ್ರಂದ್’ (Yukrand) ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರದ ಇತಿಹಾಸದಲ್ಲಿ ‘ಯುಕ್ರಂದ್’ ಕಾಲಘಟ್ಟವು ಮಹತ್ವದ ಸ್ಥಾನವನ್ನು ಹೊಂದಿದೆ, ಏಕೆಂದರೆ ಇದು ಸಾಮಾಜಿಕ ನ್ಯಾಯದ ವಿಷಯವನ್ನು ಬಲವಾಗಿ ಎತ್ತಿಕೊಂಡ ಸಮಾಜವಾದಿ ನಾಯಕರ ಗುಂಪಾಗಿತ್ತು. ಜಾತಿ ತಾರತಮ್ಯದ ವಿಷಯದಲ್ಲಿ ಈ ಸಂಘಟನೆಯು ಎಷ್ಟು ಸಕ್ರಿಯವಾಗಿತ್ತೆಂದರೆ, ಮುಂದಿನದಿನಗಳಲ್ಲಿಅದು ‘ದಲಿತ ಪ್ಯಾಂಥರ್’ ಜೊತೆಗೂಡಿ ಜಂಟಿ ಹೋರಾಟಗಳನ್ನು ನಡೆಸಿತು. ಕುಮಾರ ಸಪ್ತರ್ಷಿ ಅವರ ಜೀವನ ಮತ್ತು ಪ್ರಮುಖ ಕಾರ್ಯಗಳ  ಪ್ರಮುಖ ಸಾಧನೆಗಳು ಮತ್ತು ಸಂಘಟನೆಗಳು ಯುವಕ ಕ್ರಾಂತಿ ದಳ (ಯುಕ್ರಾಂದ್): ಯುವಕರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಪ್ರಗತಿಪರ ಆಲೋಚನೆಗಳನ್ನು ಬೆಳೆಸಲು ಅವರು 1967 ರಲ್ಲಿ ಈ ಪ್ರಭಾವಿ ಯುವ ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರ ಗಾಂಧಿ ಸ್ಮಾರಕ ನಿಧಿ: ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ಗಾಂಧಿವಾದಿ ತತ್ವಗಳನ್ನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸಲು ಶ್ರಮಿಸಿದರು.ಸಾಮಾಜಿಕ ಹೋರಾಟಗಳು: ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದ ಅವರು, ವಿವಿಧ ಆಂದೋಲನಗಳ ಭಾಗವಾಗಿ ಸುಮಾರು 35 ಕ್ಕೂ ಹೆಚ್ಚು ಬಾರಿ ಜೈಲು ಸೇರಿದ್ದರು.  ತುರ್ತು ಪರಿಸ್ಥಿತಿಯ (Emergency) ಸಮಯದಲ್ಲಿ ಅವರು ‘ಮಿಸಾ’ (MISA) ಕಾಯ್ದೆಯಡಿ ಯೆರವಾಡ ಜೈಲಿನಲ್ಲಿ ಬಂಧಿಯಾಗಿದ್ದರು. ರಾಜಕೀಯ ಮತ್ತು ಸಾಹಿತ್ಯಿಕ ಕೊಡುಗೆಶಾಸಕರಾಗಿ ಸೇವೆ: 1977 ರಲ್ಲಿ ಜನತಾ ಪಕ್ಷವನ್ನು ಸೇರಿ, 1978 ರ ವಿಧಾನಸಭಾ ಚುನಾವಣೆಯಲ್ಲಿ ಅಹಮದ್‌ನಗರ ಕ್ಷೇತ್ರದಿಂದ ಶಾಸಕರಾಗಿ (MLA) ಆಯ್ಕೆಯಾಗಿದ್ದರು. *ಪತ್ರಿಕೋದ್ಯಮ ಮತ್ತು ಸಾಹಿತ್ಯ: ಪ್ರಗತಿಪರ ವಿಚಾರಗಳನ್ನು ಹರಡಲು ‘ಸತ್ಯಾಗ್ರಹಿ ಪತ್ರಿಕೋದ್ಯಮ’ (Satyagrahi Vichardhara) ಎಂಬ ಮರಾಠಿ ಮಾಸಿಕ ಪತ್ರಿಕೆಯ ಸಂಪಾದಕರಾಗಿ ದೀರ್ಘಕಾಲ ಕೆಲಸ ಮಾಡಿದರು. ಅವರು ‘ಸಂಕಲ್ಪ’, ‘ಯಾತ್ರಿ’ ಮತ್ತು ‘ಡೇಸ್ ಅಟ್ ಯೆರವಾಡ ಯೂನಿವರ್ಸಿಟಿ’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದರೂ (Medical Doctor), ತಮ್ಮ ಇಡೀ ಜೀವನವನ್ನು ಸಮಾಜ ಸೇವೆ, ಜಾತಿ ನಿರ್ಮೂಲನೆ ಮತ್ತು ಸಮಾನತೆಯ ಹೋರಾಟಕ್ಕಾಗಿ ಮುಡುಪಾಗಿಟ್ಟಿದ್ದರು. ಸಮಾಜವಾದದ ಗಟ್ಟಿ ಕೊಂಡಿಯೊಂದು ಕಳಚಿತಿದೆ. ಬುದ್ಧ ಬಸವ ಮಹಾತ್ಮಾ ಗಾಂಧಿ ಬಾಬಾಸಾಹೇಬ ಅಂಬೇಡ್ಕರ ಅವರ ವಿಚಾರ ಧಾರೆಗೆ ಆಕರ್ಷಿತರಾದ ಇವರು ಜೀವನದಲ್ಲಿ ಬಡವರ ಪರವಾಗಿ ಧ್ವನಿ ಎತ್ತಿದರು. ಜೆಪಿ ಚಳುವಳಿಯ ಮಹಾರಾಷ್ಟ್ರದ ಉಸ್ತುವಾರಿ ವಹಿಸಿದ ಅಪ್ಪಟ ಭಾರತೀಯ ಸಂಸ್ಕೃತಿ ಚಿಂತಕ ಸಮಾಜವಾದಿ ಈಗ ನೆನಪು ಮಾತ್ರ. ಇತ್ತೀಚೆಗೆ ಶ್ರೀ ಸಂಜಯ ಇಂಡೆ ಅವರ ಮೂಲಕ ಬಸವ ತಿಳುವಳಿಕೆ ಮತ್ತು ತತ್ವಜ್ಞಾನದ ಒಂದು ದಿನದ ಕಾರ್ಯಾಗಾರವನ್ನು ಪುಣೆಯ ಗಾಂಧಿ ಭವನದಲ್ಲಿ ಮಾಡಲು ಅವರ ಮೂಲಕ ನನಗೆಸೂಚಿಸಿದ್ದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top