ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಉಷಾರಾಣಿ ಗುರುಪ್ರಸಾದ ಕವಿತೆ “ನಿರಾಸೆ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ  “ನಿರಾಸೆ” ಕನಸುಗಳ ಗೋಪುರಕೆ ಕಲ್ಲು ಬಿದ್ದಂತೆ,ಹಚ್ಚಿದ ದೀಪತಾನಾಗಿಯೇ ಆರಿದಂತೆ,ನಂಬಿಕೆಯ ದಾರಿಯಲಿ ಮುಳ್ಳು ಸಿಕ್ಕಂತೆ,ಮನಸೀಗ ಮೌನವಾಗಿದೆ, ಏನೂ ತೋಚದಂತೆ. ಆಸೆಯ ಚಿಗುರೊಡೆದು ನಿಂತ ಕೊಂಬೆಗೆ,ಬರಗಾಲದ ಬಿಸಿಲು ತಗುಲಿದ ಹಾಗೆ,ನೆನೆದ ಸುಖದ ದಿನಗಳೆಲ್ಲ ದೂರ ಸರಿದು,ಹೃದಯದ ಮೂಲೆಲಿ ನೋವು ಮನೆ ಮಾಡಿದೆ. ಯಾರನ್ನು ನೋಯಿಸಲಿ, ಯಾರಿಗೆ ದೂಷಿಸಲಿ?ನನ್ನದೇ ವಿಧಿಯ ಆಟ ಹೇಗೆ ನಗಲಿ?ಪ್ರತಿ ಬಾರಿ ಗೆಲುವಿನ ದಡ ಮುಟ್ಟುವ ಮುನ್ನ,ನಿರಾಸೆಯ ಅಲೆಯು ಬಂದು ಮುಳುಗಿಸುವುದೆನ್ನ. ಆದರೂ ಒಂದು ಭರವಸೆ ಮೂಡದಿರದು,ಕತ್ತಲೆಯ ನಂತರ ಬೆಳಕು ಬಾರದಿರದು,ಇಂದಿನ ಈ ನಿರಾಸೆಯಕಹಿ ಕಣ್ಣೀರು,ನಾಳೆಯ ಯಶಸ್ಸಿಗೆಹಾದಿ ರಾಜಮಾರ್ಗ .ಉಷಾರಾಣಿ ಗುರುಪ್ರಸಾದ 

ಉಷಾರಾಣಿ ಗುರುಪ್ರಸಾದ ಕವಿತೆ “ನಿರಾಸೆ” Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ವಿದಾಯ ಹೇಳಲೇ ಕವಲೊಡೆದ ದಾರಿಗೆದೂರ ಸರಿಯಲೇ ಒಲವಿರದ ದಾರಿಗೆ ಘಮವಿಲ್ಲದ ಪಾರಿಜಾತ ನೊಂದಿದೆಕಳಚಿ ಹೋಗಲೇ ನಾಕವಿರದ ದಾರಿಗೆ ಪಡೆದುದೆಲ್ಲ ನಶ್ವರವಾಗಿ ಮೌನವಾದೆಮರೆತು ಬಿಡಲೇ ಸುಖವಿರದ ದಾರಿಗೆ ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆಹರಿದು ತೊರೆಯಲೇ ನಲಿವಿರದ ದಾರಿಗೆ ತಪ್ಪಿದೆ ಯಾನದ ಹರಿಗೋಲು ಮಾಜಾಕಳೆದು ಕೂಡಲೇ ಕರುಣೆವಿರದ ದಾರಿಗೆ ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ಇತರೆ, ಶಿಕ್ಷಣ

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು.

ಶಿಕ್ಷಣ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ಅಂಕ ಆಧಾರಿತ ಶಿಕ್ಷಣಕ್ಕಿಂತ ಕೌಶಲ್ಯ ಮತ್ತು ವೃತ್ತಿಪರತೆ ಆಧಾರಿತ ಮೂಲ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಈ ಶಿಕ್ಷಣ ವ್ಯವಸ್ಥೆ ಸುಧಾರಿಸಬಹುದೇನೋ. ಅಂಕ ಮಾಡಲು ಯೋಗ್ಯತೆ ಇಲ್ಲದವನು ಅದನ್ನು ಕೊಂಡುಕೊಂಡು ಅದೆಷ್ಟೋ ಪ್ರತಿಭಾವಂತರಿಗೆ ತೊಂದರೆ ಮಾಡುವ ಬದಲು ವೃತ್ತಿ ಕೌಶಲ್ಯ ಆಧಾರಿತ ಕಲಿಕೆ ಪ್ರತಿಭಾವಂತರನ್ನು ಸೃಷ್ಟಿಸುತ್ತದೆ. ಕೌಶಲ್ಯ ಮತ್ತು ಪ್ರತಿಭೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಅದನ್ನು ಸ್ವತಃ ರೂಡಿಸಿಕೊಳ್ಳುವಂತದ್ದು. ಕೆಲಸಕ್ಕೆ ತಕ್ಕ ಕೌಶಲ್ಯ ಕೌಶಲ್ಯಕ್ಕೆ ತಕ್ಕ ಅನುಭವ ಅನುಭವಕ್ಕೆ ತಕ್ಕ ಪರಿಶ್ರಮ ಸಿಕ್ಕಾಗ ಸಮಾಜದಲ್ಲಿ ದುಡಿಯುವ ವರ್ಗಕ್ಕೆ ಬಲ ತುಂಬಿದಂತಾಗುತ್ತದೆ.    ಬರೀ ಅಂಕ ಗಳಿಕೆಯ ಹಿಂದೆ ಓಡುತ್ತಿರುವ ಇಂದಿನ ಯುವ ಸಮುದಾಯ ಅತ್ತ ಅಂಕ ಗಳಿಸಲು ಬರದಾಡುತ್ತಿದ್ದರೆ ಇತ್ತ ಪಟ್ಟಭದ್ರರು ತಮ್ಮವರ ಹಿತಕ್ಕಾಗಿ ಕೋಟ್ಯಂತರ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ತಾವು ಮಾತ್ರ ತಮ್ಮ ಹಣ ಅಧಿಕಾರ ಪ್ರಭಾವ ಬಳಸಿ ಎಲ್ಲಾ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಮೆರೆಯುತ್ತಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಹೆತ್ತವರಿಗೆ ಇನ್ನಿಲ್ಲದ ನೋವು ಕೊಡುವ ಪರಿಸ್ಥಿತಿಗೆ ತಂದು ಬಿಟ್ಟಿದೆ ಈ ವ್ಯವಸ್ಥೆ. ಶಿಕ್ಷಣ ಸ್ವಉದ್ಯೋಗಿಗಳನ್ನು ಸೃಷ್ಟಿ ಮಾಡಬೇಕೆ ವಿನಹ ಸರ್ಕಾರ ಸಂಘ ಸಂಸ್ಥೆಗಳ ಬಾಗಿಲಲ್ಲಿ ನಿಂತು ಕೆಲಸಕ್ಕಾಗಿ ಅಂಗಲಾಚುವ ದೈನಿಶಿ ಸ್ಥಿತಿಯಲ್ಲಿ ಮಕ್ಕಳನ್ನು ತಂದು ನಿಲ್ಲಿಸಿದೆ.    ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡುವ ಬದಲು ಪುಸ್ತಕದ ಹುಳುಗಳನ್ನಾಗಿಸಿ ಸ್ವಂತಿಕೆಯನ್ನೇ ಮರೆಸಿ ಕೇವಲ ಅಂಕ ್ರ್ಯಾಂಕ್ಗಳ ಹಿಂದೆ ಓಡುವಂತೆ ಮಾಡಿದೆ. ಇಲ್ಲಿ ವಿಫಲನಾದನವನಿಗೆ ಮತ್ತೊಂದು ಅವಕಾಶವನ್ನು ಸೃಷ್ಟಿಸಿಕೊಳ್ಳುವ ಬದಲು ಕೈ ತಪ್ಪಿದ ಅವಕಾಶದ ಚಿಂತೆಯಲ್ಲಿಯೇ ಬದುಕು ಭವಿಷ್ಯಗಳ ಎರಡನ್ನು ಕತ್ತಲೆ ಮಾಡಿಕೊಂಡು ಹೆತ್ತವರಿಗೆ ಸರಿಯಾಗಿ ಜನ್ಮಕ್ಕಾಗುವಷ್ಟು ನೋವನ್ನು ನೀಡಿ ಸೊರಗಿ ಹೋಗುತ್ತಿದೆ. ತಂತ್ರಜ್ಞಾನ ಮುಂದುವರೆದಂತೆಲ್ಲ ಸತ್ಯತೆ ಮತ್ತು ಪ್ರಾಮಾಣಿಕತೆಗೆ ಅವಕಾಶ ಇರುವುದಿಲ್ಲ. ಅಲ್ಲಿ ಏನಿದ್ದರೂ ತಾಂತ್ರಿಕತೆಗೆ ನಾವೆಷ್ಟು ಸಮರ್ಥರು ಎಂಬುದನ್ನು ಸಾಬೀತುಪಡಿಸಬೇಕಷ್ಟೆ. ತಾಂತ್ರಿಕತೆಯಲ್ಲಿ ಪ್ರಾವೀಣ್ಯತೆ ಇಲ್ಲದವನು ಹಣ ಅಧಿಕಾರಗಳ ಪ್ರಭಾವ ಬಳಸಿ ಅದನ್ನು ಕೊಂಡುಕೊಳ್ಳಲು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದು ಇಂದಿನ ದುರಂತ. ಅದರ ಜೊತೆಗೆ ನೂರಾರು ಕನಸುಗಳನ್ನು ಕಟ್ಟಿಕೊಂಡ ಮಧ್ಯಮ ವರ್ಗದ ಪೋಷಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯವನ್ನು ಕತ್ತಲಾಗಿಸಿಬಿಡುತ್ತದೆ.     ಶಿಕ್ಷಣ ಜ್ಞಾನವನ್ನು ಕೊಡಬೇಕು ಅಂಕಗಳನ್ನಲ್ಲ. ಜ್ಞಾನ ಬದುಕನ್ನು ಅನ್ವೇಶಿಸಿ ಸರಿ ತಪ್ಪುಗಳ ವಿಶ್ಲೇಷಿಸಿ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಓದಿನಲ್ಲಿ ಮುಂದಿರುವವರಿಗೆ ಬದುಕಿನ ಪರ್ಯಾಯ ಹಾದಿಗಳು ಗೊತ್ತೇ ಇರುವುದಿಲ್ಲ. ಕುದುರೆಗೆ ಕಣ್ಣು ಕಟ್ಟಿದಂತೆ ಓಡುವುದಷ್ಟೇ ಅವನ ಗುರಿಯಾಗಿರುತ್ತದೆ. ಕೈಗೆಟುಕದ ಉನ್ನತ ಗುರಿಗಿಂತಲೂ ಅಂಗೈಯಲ್ಲಿರುವ ಬೆಣ್ಣೆಯನ್ನೇ ತುಪ್ಪವಾಗಿಸುವ ಕೌಶಲ್ಯವನ್ನು ಇಂದಿನ ಶಿಕ್ಷಣ ಮಕ್ಕಳಿಗೆ ಕಲಿಸಿ ಕೊಡಬೇಕಾಗಿದೆ. ತಂತ್ರಜ್ಞಾನದ ಆವಿಷ್ಕಾರ ಮನುಷ್ಯನನ್ನು ಸೋಮಾರಿಯಾಗಿಸಿದೆ. ಅವನ ಶ್ರಮದ ಕೆಲಸಗಳನ್ನೆಲ್ಲ ನುಂಗಿ ಹಾಕಿ ಗುಂಡಿ ಬತ್ತಿದರೆ ಸಾಕು ಆಗಬೇಕಾದ ಕೆಲಸಗಳೆಲ್ಲ ನಿರ್ದಿಷ್ಟ ಸಮಯದಲ್ಲಿ ಮುಗಿಸಿ ಕೊಡುತ್ತಿರುವಾಗ ಮನುಷ್ಯನ ದೈಹಿಕ ಶ್ರಮ ಕೌಶಲ್ಯ ಎಲ್ಲವೂ ಮೂಲೆಗುಂಪಾಗಿ ನಿರುದ್ಯೋಗಿಗಳು ಉತ್ಪಾದನೆಯಾಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೇಶದ ಪ್ರಗತಿಯ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಲಿದೆ.      ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾದ ಈ ಕಾಲಘಟ್ಟದಲ್ಲಿ ಪ್ರತಿಭೆಗಳು ಹುಟ್ಟುವುದು ಅಷ್ಟು ಸುಲಭವಲ್ಲ. ಉಳ್ಳವರ ಎದೆಗೊದ್ದು ಪ್ರತಿಭಾವಂತ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಲ್ಲೂ ಇಂದಿನ ರಾಜಕೀಯ ವ್ಯವಸ್ಥೆ ಕೇವಲ ಗುಲಾಮರನ್ನು ಸೃಷ್ಟಿಸುವ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಸಾಧನಗಳನ್ನಾಗಿ ಬಳಸಿಕೊಳ್ಳುತಿದೆ ವಿನಹ ಕೌಶಲ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದು ಅವರರಿಗೂ ಬೇಕಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಹಣ ಗಳಿಸಿಕೊಂಡು ತಾನು ಮಾತ್ರ ಉದ್ದಾರವಾಗುವ ಮನಸ್ಥಿತಿಯಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಹೀಗಿರುವಾಗ ಓದಿದ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಸೃಷ್ಟಿಕರ್ತನನ್ನಾಗಿಸುವ ಬದಲು ಕೇವಲ ಅನುಯಾಯಿಯಾಗಿ ಅನುಸರಿಸುವ ಅಮಾಯಕರನ್ನು ತಯಾರಿಸುವ ಕಾರ್ಖಾನೆಗಳಾಗಿವೆ.     ಯುವ ಸಮುದಾಯ ಒಂದು ಮಹಾನ್ ಶಕ್ತಿ. ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇಂದು ಅದನ್ನು ಮಾರ್ಗದರ್ಶಿಸುವ ಹಾಗೂ ಅದಕ್ಕೆ ಸರಿಯಾದ ಗುರಿ ನಿಗದಿಪಡಿಸುವ ಗುರುವಿನ ಕೊರತೆ ಎದ್ದು ಕಾಣುತ್ತದೆ. ಯುವಶಕ್ತಿಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಅದನ್ನು ಒಗ್ಗೂಡಿಸಿಕೊಂಡು ಮುನ್ನಡೆಯ ಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ತುಂಬಾ ಅನಿವಾರ್ಯವಾಗಿದೆ. ಇಲ್ಲಿ ಆಡಿಸುವವರ ಯೋಗ್ಯತೆ ಒಟ್ಟುಗೂಡಿಸುವಲ್ಲಿನ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡುವ ಬದಲು, ಸಂಘರ್ಷಕ್ಕೆ ಎಡೆ ಮಾಡಿ ಕೊಡುವ ಬದಲು ವ್ಯವಸ್ಥೆಯೊಳಗಿರುವ ಹುಳುಕುಗಳನ್ನು ಸರಿಪಡಿಸಲು ಬೇಕಾದ ಚಾಕಚಕ್ಯತೆಯನ್ನು ಹೊಂದಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಉಳಿಸಿಕೊಂಡು ವ್ಯವಸ್ಥೆಯ ಓರೆ ಕೋರೆಗಳನ್ನು ತಿದ್ದಿ ಅರ್ಹರಿಗೆ ಅವಕಾಶಗಳ ಬಾಗಿಲನ್ನು ತೆರೆಸುವ ಶಿಕ್ಷಣ ವ್ಯವಸ್ಥೆ ಅದನ್ನು ಮುನ್ನಡೆಸುವ ಗುರುವಿನ ಮಾರ್ಗದರ್ಶನ ಅತಿ ಅವಶ್ಯಕವಾಗಿ ಬೇಕಾಗಿದೆ. ಅಮು ಭಾವಜೀವಿ ಮುಸ್ಟೂರು.

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು. Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

‌ ಕಾವ್ಯ ಸಂಗಾತಿ. ಜ್ಯೋತಿ ಮಾಳಿ ಬೆಳಗಾವಿ ಗಜಲ್ ಕುಳಿತು ಮಾತನಾಡಿಸಿ ಎದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆನಕ್ಕು ನಗಿಸಿ ಮನವನು ಗೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೋದರೆ ಹೋಗಿ ನಿಮಗೂ ಏನೊ ಅನಿವಾರ್ಯತೆಗಳುಇರಬಹುದುಭಾವ ಬಸಿದ ಕವಿತೆಗಳನು ಕದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ನೊಂದು ಬೆಂದು ನರಳಿದ ಗಾಯಗಳ ಗುರುತು ಸಿಗದಂತೆಅಳಿಸಿ ಹಾಕಿದಿರಿಕಲಕಿದ ಕೊಳ ತಿಳಿಯಾಗಿಸಿ ಇದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಬೇಸರಗೊಂಡ  ಜೀವಗಳಿಗೆ ಎಡೆಯ ತುಂಬ ಸಂತಸವನುಮನದಿ ಬಡಿಸಿದಿರಿಹಾಲುಣಿಸಿ ಹಾಲಾಹಲ ಮೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೃದಯ ಹೃದಯಗಳನು ಬೆಸೆದು ಹಂದರವನು ಹಾಕಿ ಕರೆದುಕೂರಿಸಿದಿರಿಜ್ಯೋತಿ ಬೆಳಕಿನಲಿ ತಮವು ಬಿದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಸುಕನಸು ಅವರ‌ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ಬಾ ಅಪರಿಚಿತರಾಗೊಣ  ಮತ್ತೊಮ್ಮೆ ಗೆಳೆಯನೀ ಮರೆತು ಸಹ ಸಿಗದಿರು ಇನ್ನೊಮ್ಮೆ ಗೆಳೆಯ ಸದಾ ನಿನ್ಹೆಸರ ಜಪಿಸುವ ಮನಕೇನು ಸಂತೈಸಲಿನೆನಪುಗಳ ಕೊಂದ್ಹೋಗೂ ಬಂದೊಮ್ಮೆ ಗೆಳೆಯ ಜೊತೆ ಇಟ್ಟ ಹೆಜ್ಜೆಗಳ ಲೆಕ್ಕ ಎಲ್ಲಿದೆ ಸಂತೃಪ್ತಿಯಷ್ಟೆಮುಂದೆಂದೂ ಸಿಗದಂತೆ ಶಪಥ ಮಾಡೊಮ್ಮೆ ಗೆಳೆಯ ಮನ ತಬ್ಬಿಬಾಗಿದೆ ತಳ್ಳಿ ಹೋದ ಕಾರಣ ತಿಳಿಯದೆತೊರೆದು ಹೋದ ನೆಪ ಹೇಳಿ ಹೋಗೊಮ್ಮೆ ಗೆಳೆಯ ಸುಮದ ಪರಿಮಳವೆ ಅಪಾರವಾಯಿತು ನವಿರಲ್ಲವಒಲವಿಲ್ಲ ಲಾಲಶೆಯಷ್ಟೆಯೆಂದು ಹೇಳೊಮ್ಮೆ ಗೆಳೆಯ ಸುಕನಸು

ಸುಕನಸು ಅವರ‌ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” ಬದುಕಿದ್ದಾಗ…ಅವನ ಮನೆಯ ಬಾಗಿಲು ತಟ್ಟಿದರೂತೆರೆದದ್ದು ಯಾರ ಮನಸ್ಸೂ ಅಲ್ಲ. ಹಸಿವೆಂದು ಕೈ ಚಾಚಿದಾಗಒಂದು ತುತ್ತು ಅನ್ನಕ್ಕೂ ಲೆಕ್ಕ ಹಾಕಿದ ಜನ,ದುಃಖವೆಂದು ಕಣ್ಣೀರು ಸುರಿಸಿದಾಗಒಂದು ಹೆಗಲನ್ನೂ ನೀಡದ ಬಂಧುಗಳು. ಅವನ ಉಸಿರು ಇರುವಾಗಅವನ ಮಾತಿಗೆ ಬೆಲೆ ಇರಲಿಲ್ಲ;ಉಸಿರು ನಿಂತ ಕ್ಷಣದಿಂದಲೇಅವನ ಮೌನಕ್ಕೆ ಬೆಲೆ ಕಟ್ಟಲು ಹೊರಟರು. ಚಿತೆಯ ಬೆಂಕಿ ಹೊತ್ತಿತು…ದೇಹ ಬೂದಿಯಾಯಿತು…ಆದರೆ ಸುಟ್ಟು ಹೋದದ್ದು ದೇಹವಲ್ಲ—ಸಮಾಜದ ಕಪಟ ಮುಖವಾಡ. ಅಂತ್ಯಸಂಸ್ಕಾರಕ್ಕೆಸಾವಿರ ಜನ ಸೇರಿದರು;ಬದುಕಿನ ದಾರಿಯಲ್ಲಿಅವನೊಂದಿಗೆ ನಡೆದದ್ದುಅವನ ನೆರಳು ಮಾತ್ರ. ಮೂರನೇ ದಿನ…ಹತ್ತನೇ ದಿನ…ವಾರ್ಷಿಕ…ನಂತರ ಜಾತ್ರೆ… ವೇದಿಕೆ ಕಟ್ಟಿದರು.ಹೂವಿನ ಹಾರ ಹೊದಿಸಿದರು.ಅವನ ಹೆಸರಿನಲ್ಲಿ ಧ್ವಜ ಹಾರಿಸಿದರು.ನಿನ್ನೆ ಅವನನ್ನು ತಿರಸ್ಕರಿಸಿದವರೇಇಂದು ಹೊಗಳಿಕೆಯ ಹೊಳೆ ಹರಿಸಿದರು. “ಅವನು ಮಹಾನ್…” ಎಂದರು.“ಅವನು ಸಮಾಜದ ಬೆಳಕು…” ಎಂದರು.“ಅವನಂತವರು ಅಪರೂಪ…” ಎಂದರು. ಆ ಮಾತುಗಳನ್ನು ಕೇಳಿಕಾಲವೇ ಕಹಿಯಾಗಿ ನಕ್ಕಿತು. ಏಕೆಂದರೆ—ಅವನು ಬದುಕಿದ್ದಾಗಈ ಒಂದು ಮಾತನ್ನಾದರೂಅವನ ಕಿವಿಗೆ ಹೇಳಿರಲಿಲ್ಲ! ಜಾತ್ರೆಯ ದಿನಹೊಟ್ಟೆತುಂಬ ಊಟ,ಕೈತುಂಬ ಕಾಣಿಕೆ,ವೇದಿಕೆಯ ಮೇಲೆ ಭಾಷಣ,ಕೆಳಗೆ ಚಪ್ಪಾಳೆ… ಜಾತ್ರೆ ಮುಗಿದ ಮೇಲೆ? ಹೂವು ಒಣಗಿತು.ವೇದಿಕೆ ತೆರವಾಯಿತು.ಜನರು ಮರೆಯಾದರು.ಅವನ ಹೆಸರೂಮತ್ತೊಮ್ಮೆ ಧೂಳಿನೊಳಗೆ ಮಲಗಿತು. ಇದೇನಾ ಸಂಸ್ಕಾರ? ಸಂಸ್ಕಾರವೆಂದರೆಸತ್ತವನಿಗೆ ಚಂದನ ಹಚ್ಚುವುದಲ್ಲ;ಬದುಕಿರುವವನ ಗಾಯಕ್ಕೆಒಂದು ಮುದ್ದಾದ ಮದ್ದು ಹಚ್ಚುವುದು. ಸಂಸ್ಕಾರವೆಂದರೆಚಿತೆಗೆ ಬೆಂಕಿ ಕೊಡುವುದಲ್ಲ;ಜೀವಂತ ಹೃದಯದಲ್ಲಿಭರವಸೆಯ ದೀಪ ಹಚ್ಚುವುದು. ಸಂಸ್ಕಾರವೆಂದರೆಸಾವಿನ ನಂತರದ ಜಾತ್ರೆಯಲ್ಲ;ಜೀವನದೊಳಗಿನ ಮಾನವೀಯತೆ. ಕೊರಡಿಗಿಲ್ಲಿ ಸಂಸ್ಕಾರಮರಣದ ನಂತರದ ಆಡಂಬರವಲ್ಲ—ಬದುಕಿರುವಾಗಲೇಮನುಷ್ಯನನ್ನು ಮನುಷ್ಯನಾಗಿ ಕಾಣುವಕರುಣೆಯ ಕಣ್ಣು. ಇಲ್ಲದಿದ್ದರೆ… ಪ್ರತಿ ವರ್ಷ ಜಾತ್ರೆ ನಡೆಯುತ್ತದೆ,ಪ್ರತಿ ವರ್ಷ ಭಾಷಣಗಳು ಮೊಳಗುತ್ತವೆ,ಪ್ರತಿ ವರ್ಷ ಹೊಗಳಿಕೆಯ ಹೂವುಗಳು ಬೀಳುತ್ತವೆ. ಆದರೆ… ಬದುಕಿದ್ದಾಗ ಕಡೆಗಣಿಸಿದಒಬ್ಬ ಮನುಷ್ಯನ ನಿಟ್ಟುಸಿರುಆ ಚಪ್ಪಾಳೆಗಳಿಗಿಂತ ದೊಡ್ಡದು. . -ಎನ್.ಜಯಚಂದ್ರನ್ .ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” Read Post »

ಕಾವ್ಯಯಾನ

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು “ಅವಳಿಗೆ” ಅವಳಿರಬೇಕಿತ್ತು ಅಲ್ಲಿಅವನ ಜೊತೆಯಲ್ಲಿಅವನ ಬದುಕಲ್ಲಿಅವನ ಬಾಳಿನಲ್ಲಿ  ಆಗಬೇಕಿತ್ತು ಅವಳಿಗೆಅವನ ಮಗನ ತಾಯಿಯಾಗಿಅವನ ಬಾಳ ಸಂಗಾತಿಯಾಗಿಅವನ ಹೃದಯದ ಬಡಿತವಾಗಿ ಬಯಕೆಯಿತ್ತು ಅವಳಿಗೆಬಾಹುಗಳಲ್ಲಿ ಬಂಧಿಯಾಗಲುಸುಖ ದುಃಖಗಳಲಿ ಜೊತೆಯಾಗಲುಅವನ ತುಟಿಗಳ ನಗುವಾಗಲು ಕನಸಿತ್ತು ಅವಳಿಗೆಅವನ ಕನಸಿಗೆ ಜೀವ ತುಂಬಲುಅವನ ಕವಿತೆಗೆ ಪದವಾಗಲುಮಧುಮಂಚದ ವದುವಾಗಲು ಅಂತರಂಗದ ಭಾವನೆಗಳುಹೊರಬರಲಾರದ ಕನಸುಗಳುಬಲಿಪಶುವಾದ ಹೂಗಳುಅವಲೊಳಗಿನ ಅವಶೇಷಗಳು ಪರಿಮಳ ಐವರ್ನಾಡು

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ” Read Post »

You cannot copy content of this page

Scroll to Top