ರತ್ನರಾಯಮಲ್ಲ ಅವರ ಗಜಲ್
ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನಿನ್ನ ಪ್ರೇಮದ ಸುತ್ತ ಅನುದಿನವೂ ಸುತ್ತುತಿದೆ ಮನಸುನಿನ್ನ ಅನುರಾಗಭರಿತ ಪುಟಗಳನು ಮುತ್ತುತಿದೆ ಮನಸು ನಿನ್ನ ಸಾಂಗತ್ಯವು ನನ್ನ ಕನಸುಗಳಿಗೆ ರೆಕ್ಕೆಯಾಗಿದೆ ಬೇಬಿನನ್ನ ಜೀವತಾಣದ ನೆಲದಲಿ ನಿನ್ನಾಸೆ ಬಿತ್ತುತಿದೆ ಮನಸು ನನ್ನ ಉಸಿರಿನ ಪ್ರತಿತಾಳವೂ ನಿನ್ನ ಹೆಸರು ಗುನುಗುತಿದೆಕಣ್ಣೊಳಗಿನ ಕನಸಲಿ ನಿನ್ನ ರೂಪವೇ ಕೆತ್ತುತಿದೆ ಮನಸು ನನ್ನ ಬದುಕಿಗೆ ವಸಂತ ಮೂಡಿದೆ ನಿನ್ನ ಆಗಮನದಿಂದನಿನ್ನ ನಗುವಿನ ಪ್ರಭೆಯಲಿ ಬಾಳನು ಎತ್ತುತಿದೆ ಮನಸು ಪರಿಮಳವಾಗಿದೆ ನಿನ್ನ ಸನಿಹವೇ ನನ್ನ ಜೀವಕೆ ಅರಗಿಣಿಮಲ್ಲಿಗೆಯ ಸುಮವನು ಉಸಿರಾಗಿ ಹೊತ್ತುತಿದೆ ಮನಸು ರತ್ನರಾಯಮಲ್ಲ
ರತ್ನರಾಯಮಲ್ಲ ಅವರ ಗಜಲ್ Read Post »


