ಸಾಕ್ಷಿ ಶ್ರೀಕಾಂತ ತಿಕೋಟಿಕರ -ಕವಿತೆ ನಾನಾರು

ಸಾಕ್ಷಿ ಶ್ರೀಕಾಂತ ತಿಕೋಟಿಕರ -ಕವಿತೆ ನಾನಾರು

ಎದೆಯಭಾವಗಳನು ಮೀಟಿದಾಗ
ಸ್ವರವಲ್ಲದ ಒಂದು ನಿಟ್ಟುಸಿರು ಬಿಟ್ಟಿತು
ಮೆದುವಿನ ಮನಸನು ಸವರಿದಾಗ
ನುಣುಪಿನ ಸ್ಪರ್ಷವಿಲ್ಲ ಗಾಯ ತಟ್ಟಿತು

ಹೇಳಬೇಕಾದ ಮಾತುಗಳು ಬಹಳ
ಕೇಳ ಬೇಕೆನ್ನುವ ಮನಸ್ಸು ಯಾರಬಳಿ
ಹೃದಯದ ಪಿಸುಮಾತುಗಳು ರಸಗವಳ
ಅವರಿವರ ಬಾಯಲ್ಲಿ ಕೇಳಿ ಉಗುಳಿ

ಅರ್ಥವಾಗದವರೊಂದಿಗೆ ವಾದವೇಕೆ
ವ್ಯರ್ಥ ಕಣ್ಣೀರು ಸ್ಪಂದಿಸದವರ ಮುಂದೆ
ನೋವು ನುಂಗಿಬಿಡು ಹಂಚುವ ತವಕವೇಕೆ
ಆಡಿಕೊಳ್ಳುವರಿಗೇನು ಕಡಿಮೆ ಹಿಂದೆ

ಕಂಬನಿತೊಡೆದು ಗಟ್ಟಿಯಾಗು ಮನವೇ
ಅಂಬಲಿಗೆ ತಟ್ಟೆಯ ಹಂಗಿಲ್ಲ ತಂಪು ಹೊಟ್ಟೆ
ಸತ್ಯವನ್ನು ಬಲ್ಲಿದರು ಒಪ್ಪುವ ಜನವೇ
ಸೋಗಿನಡಿ ಬದುಕುವನ ನಯ ನಂಬಿಕೆಟ್ಟೆ

ಮಾತಿನಸಂತೆಯಲಿ ಮೌನದ ಸರಕಿನ ಬೆಲೆ
ತೂತಿನಕಾಸಿಗೂ ಕೊಳ್ಳುವರು ಇಲ್ಲ
ಅರಿವಿನ ನಡೆಯಲಿ ಕಾಣಬೇಕಿದೆ ಈಗ ನೆಲೆ
ಅರಿಯದೇ ಕಿಚಾಯಿಸುತಿರುವರು ಎಲ್ಲ.

ಹನಿಬಿಂದು ಕವಿತೆ-ನಗೆಯು ಬರುತಿತ್ತಾ

ಕಾವ್ಯ ಸಂಗಾತಿ

ನಗೆಯು ಬರುತಿತ್ತಾ (ದಾಸ ಸಾಹಿತ್ಯದಿಂದ ಪ್ರಭಾವಿತ)

ಹನಿಬಿಂದು

ಪ್ರಿಯಾಂಕ ಪೋದ್ದಾರ್ ಕವಿತೆ-ಪ್ರೀತಿ ಅರಳು ಮರಳು

ಕಾವ್ಯ ಸಂಗಾತಿ

ಪ್ರೀತಿ ಅರಳು ಮರಳು

ಪ್ರಿಯಾಂಕ ಪೋದ್ದಾರ್

ಕನ್ನಡಸಾಹಿತ್ಯಕ್ಕೆ ಹೊಸ ಜಗತ್ತನ್ನು ಪರಿಚಯಿಸಿದಬಿ.ಜಿ.ಎಲ್.ಸ್ವಾಮಿಯವರ ಜನ್ಮದಿನ

ನೆನಪು

ಕನ್ನಡಸಾಹಿತ್ಯಕ್ಕೆ ಹೊಸ ಜಗತ್ತನ್ನು ಪರಿಚಯಿಸಿದ

ಬಿ.ಜಿ.ಎಲ್.ಸ್ವಾಮಿಯವರ ಜನ್ಮದಿನ

“ಹಾವೇರಿ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ”

ವಿಶೇಷ ಲೇಖನ

“ಹಾವೇರಿ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ”

ಡಾ. ಪುಷ್ಪಾ ಶಲವಡಿಮಠ ಬರೆಯುತ್ತಾರೆ

Back To Top