ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ

ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ನ್ಯೂ ಸಿಲಬಸ್ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ಈಗ ನಾವೆಲ್ಲರೂ ಕೇಳಲೇಬೇಕು!ಮಕ್ಕಳು ಹೇಳುತ್ತಿರುವುದನ್ನು ಕೇಳಬೇಕು.ನಿನ್ನೆಯವರೆಗೂ ಈ ಮಕ್ಕಳೆಲ್ಲ ತಡಬಡ ಹೆಜ್ಜೆ ಹಾಕುತ್ತಾ,ಮುದ್ದಾದ ಮಾತುಗಳನ್ನಾಡುತ್ತಾ,ತುಟಿಗಳ ಮೇಲೆ ಮುಗ್ಧತೆಯನ್ನು ಜೀವಂತವಾಗಿರಿಸಿಕೊಂಡು,‘ಮಮ್ಮಿ’, ‘ಪಾಪ್ಪಾ’ ಎಂದು ಓಡಿ ಬಂದವರೇ.ಅವರನ್ನು ಇನ್ನು ಮುಂದೆ ಅದೇ ದೃಷ್ಟಿಯಿಂದ ನೋಡಬೇಕಾಗಿಲ್ಲ.ನಮ್ಮ ಬಾಡಿಗೆ ಯೋಚನೆಗಳಲ್ಲಿ ಅವರನ್ನು ಮುಳುಗಿಸಬೇಕಾಗಿಲ್ಲ.ಮಕ್ಕಳಿಗೂ ಕನಸುಗಳಿರುತ್ತವೆ,ಬಣ್ಣಗಳು, ರಾಗಗಳೂ ಇರುತ್ತವೆ.ಮಕ್ಕಳನ್ನು ಬೆಳೆಸುವುದೆಂದರೆ ಅಂಕಗಳು, ರ್ಯಾಂಕ್‌ಗಳು..ಪ್ಲೇಸ್‌ಮೆಂಟ್‌ಗಳಷ್ಟೇ ತಾನೇ ನಮಗೆ ತಿಳಿದಿದ್ದು?ಆದರೆ ಈ ಮೂರು ಎಲೆಗಳ ಆಟವನ್ನು ದಾಟಿನಾಲ್ಕು ದಿಕ್ಕುಗಳನ್ನೂ ಈ ಮಕ್ಕಳೇ ಕಂಡುಕೊಂಡಿದ್ದಾರೆ.ಸಿಸ್ಟಮ್‌ನಲ್ಲಿ ಹುಡುಕಬೇಕಾದದ್ದು ‘ಮೌಲ್ಯ’ ವಲ್ಲ,ನಾವು ಕಳೆದುಕೊಂಡ ‘ಬಾಲ್ಯ’ ಎನ್ನುತ್ತಿದ್ದಾರೆ,ಆ ದಿಕ್ಕಿನತ್ತ ನಮ್ಮನ್ನು ನೋಡಲು ಕರೆಯುತ್ತಿದ್ದಾರೆ.ಫ್ರೇಮ್‌ಗಳಲ್ಲಿ ನಾವಿರಲಾರೆವು, ಬಾಕ್ಸ್‌ಗಳಲ್ಲಿ ಬಂಧಿಯಾಗಿರಲಾರೆವು ಎಂದುಖಡಾಖಂಡಿತವಾಗಿ ಹೇಳುತ್ತಿದ್ದಾರೆ.ನಾವು ಕಂಡ ದೂರವನ್ನು ಮೀರಿದ ದಿಗಂತಗಳನ್ನುಅವರು ಕಾಣುತ್ತಿದ್ದಾರೆ.ನಾವು ರೂಢಿಸಿಕೊಂಡ ಲೋಕವನ್ನು ಸಮಾಧಿ ಮಾಡಿ,ತಾವು ಕನಸು ಕಾಣುವ ಹೊಸ ಜಗತ್ತನ್ನು ನೋಡಲು ಹೇಳುತ್ತಿದ್ದಾರೆ.ಭ್ರಷ್ಟಾಚಾರ, ಅಕ್ರಮ, ಅನ್ಯಾಯ, ದೌರ್ಜನ್ಯ—ನಮ್ಮ ಜಾತಿಗೆ ‘ವೆರಿ ನಾರ್ಮಲ್’ .ಆದರೆ ಮಕ್ಕಳು ಈಗ ಅವುಗಳನ್ನು ‘ಅಬ್‌ನಾರ್ಮಲ್’ ಎನ್ನುತ್ತಿದ್ದಾರೆ.ಅವರು ‘ಜೆನ್ ಜೀ’ಗಳು ಅಲ್ಲವೇ!‘ ಜೀ ಹುಜೂರ್’ ಎಂಬ ಗುಲಾಮಗಿರಿಯನ್ನು ಬಿಟ್ಟು,ಆತ್ಮಗೌರವದಿಂದ ಬದುಕುತ್ತಾ,ತಮ್ಮ ಭಾಷೆಯ ಎಬಿಸಿಡಿಗಳನ್ನು ನಮ್ಮನ್ನು ಕಲಿಯಲು ಹೇಳುತ್ತಿದ್ದಾರೆ.‘ಟೆಕ್ನೋ ಕಿಡ್ಸ್’ ಆಗಿ ಬೆಳೆಸಿದ್ದೇವೆ ಅಲ್ಲವೇ…ಇವರಿಗೇನು ಭಾವನೆಗಳಿರುತ್ತವೆ ಅಂದುಕೊಂಡಿದ್ದೇವೆ.ರೋಬೋ ಪೀಳಿಗೆ,ಇವರಿಗೇನು ಅನುಬಂಧಗಳಿರುತ್ತವೆ ಅಂದುಕೊಂಡಿದ್ದೇವೆ.ಆದರೆ ‘ಜಂತರ್ ಮಂತರ್’ ಸಾಕ್ಷಿಯಾಗಿ ಹೇಳುತ್ತಿದ್ದಾರೆ—ಅವರ ಭಾವನೆಗಳು ಈ ಮಣ್ಣಿನೊಂದಿಗೆ..ಈ ಅಣಕಿಸಲ್ಪಟ್ಟ ಜನರೊಂದಿಗೆ..ತಮ್ಮನ್ನು ಸುತ್ತುವರಿದ ಪ್ರಕೃತಿಯೊಂದಿಗೆ..‘ಪ್ರಶಾಂತ’ವಾದ ನಾಳೆಯೊಂದಿಗೆ ಹೆಣೆದಿವೆ!ಇದನ್ನು ಕೇವಲ ‘ಪೇಪರ್ ಲೀಕ್’ ಕನ್ನಡಕದಿಂದಷ್ಟೇ ನೋಡಬೇಡಿ,ಅವರು ಕಳೆದುಕೊಂಡ ವ್ಯವಸ್ಥೆಯ ಮೇಲಿನಅಪನಂಬಿಕೆಯ ಪರಾಕಾಷ್ಠೆಯಾಗಿ ನೋಡಿ.ಟಿಯರ್ ಗ್ಯಾಸ್, ವಾಟರ್ ಗನ್, ಲಾಠಿಚಾರ್ಜ್‌ಗಳುಅವರ ಮನೋಬಲದ ಮುಂದೆತಲೆಬಾಗಲೇಬೇಕು ಎಂಬುದನ್ನು ಅರಿತುಕೊಳ್ಳಿ.ಇದು‘ಜನ್’ ತರಂಗ – ‘ಮನ್’ ತರಂಗ.ಈಗ ಅವರಿಗೆ ನಾವುಗಳೇ ಮಕ್ಕಳು!ಕ್ಲೈಮ್ಯಾಕ್ಸ್‌ಗೆ ಬಂದಿರುವ ಈ ಕಥೆಯಲ್ಲಿಬೇಕಾಗಿರುವುದು ‘ಐಮ್ಯಾಕ್ಸ್’ ಸೀನ್‌ಗಳಲ್ಲ,‘ಜೆನ್ ಜೀ’ ಗುರುಕುಲದ ಪಾಠಗಳು!ಅವರ ಸಿಲಬಸ್ ಅನ್ನು ಅವರ ಭಾಷೆಯಲ್ಲೇ ಕಲಿಯೋಣ ಬನ್ನಿ.ಈ ವಯಸ್ಸಿನಲ್ಲಿ ಮತ್ತೊಮ್ಮೆ ಮಕ್ಕಳಾಗಿ,ಬುದ್ಧಿಯಲ್ಲಿ ಹಿರಿಯರಾದ ಅವರ ಗುರುತ್ವದಲ್ಲಿಹೊಸ ಗಾಳಿಯನ್ನು ಉಸಿರಾಡೋಣ.ಹೊಸ ಲೋಕದಲ್ಲಿ ಹೊಸ ಆಧಾರ್ ಕಾರ್ಡ್‌ಗೆ ಅರ್ಜಿ ಹಾಕೋಣ,ನಮ್ಮ ಪಾಸ್‌ಪೋರ್ಟ್ ಅನ್ನುಮತ್ತೊಮ್ಮೆ ಹೊಸದಾಗಿ ನಾವೇ ಹುಡುಕಿಕೊಳ್ಳೋಣ.ಬನ್ನಿ ಹೋಗೋಣ,‘ಜೆನ್ ಜಿ’ ಗುರುಕುಲಗಳಿಗೆ..‘ಮತ್ತೊಮ್ಮೆ ಹುಟ್ಟೋಣವೇ?’

ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ Read Post »

ಕಾವ್ಯಯಾನ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ”

ಕಾವ್ಯ ಸಂಗಾತಿ ವೆಂಕಟೇಶ್ ಈಡಿಗರ “ಮೌನ ಯಾನ” ಮೌನವದು ಸ್ಪಷ್ಟತೆ ಇಲ್ಲದಅನರ್ಥಗಳ ನಿರ್ಭಾವ  ಸ್ಥಿತಿಸಮ್ಮತಿಯೂ  ಅಲ್ಲದಅಸಮ್ಮತಿ ಸೂಚಿಸದ ದ್ವಂದ್ವ ನೀತಿ ಮನಸ್ಸು ಬಲವಾದಾಗ ಪ್ರತಿಕಾರದುರ್ಬಲವೆಂದರೆ ಅಂಗಿಕಾರಇಲ್ಲದಿರೆ ನಪುಂಸಕತೆಯ ನಿರಾಕಾರವಿವರಿಸಲಾಗದ ಅನಿರ್ಧಿಷ್ಟವಧಿ  ಮುಷ್ಕರ ಮನದಿಂಗಿತಗಳನು ಬಲಿಕೊಟ್ಟುಒಳಬೇಗುದಿಯಲ್ಲಿ ಬೇಯುವನೋಯುವ ನಿಶಕ್ತ ರೂಪವದುತನ್ನತನವ ದಹಿಸಿಕೊಂಡು ಬಂದುದ್ದನ್ನುಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು ಜ್ಞಾನವೋ ಅಜ್ಞಾನವೋ ಎಂದರುಹಲುಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವದಿವ್ಯ ರೂಪ   ದೃಢತೆಯ ಅಪರೂಪಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ ಮೌನವದು  ವಿಶ್ವರೂಪಹೊಸ ಮನ್ವಂತರಕೆ ಮುನ್ನುಡಿಬರೆಯಲುಮೈದಾಳಿದ ಮಹಾ ಸಂಕಲ್ಪˌಇದಕಾಗಿ ಇರಬೇಕು ಆತ್ಮಬಲದಜ್ಞಾನದೀಪˌ  ಅದುವೇ ಅವನಜೀವನದ ಮುನ್ನಡೆಗೆ ದಾರಿದೀಪ ಮತಿಗೆಡದಿರಲಿ ಮನದ ಮೌನದೃತಿಗೆಡದೆ ಮುನ್ನಡೆಯಲಿ ಜ್ಞಾನಮೌನದಲ್ಲಿಯೂ ಧ್ಯಾನಸ್ಥನಾಗಿಬೆಳಗಲಿ ಲೋಕದೊಳಿತಿನ ಸುಜ್ಞಾನಉಳಿಸಿ ಬೆಳೆಸಲಿ ಮಾನ ಸಮ್ಮಾನಮೌನವೇ ಧ್ಯಾನವಾಗಿˌ ಜ್ಞಾನವಾಗಿಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ. ವೆಂಕಟೇಶ್ ಈಡಿಗರ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು.  ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ  ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು.  ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು  “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ  ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು.  ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ.  ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ  ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ  ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ  .

Read Post »

You cannot copy content of this page

Scroll to Top