ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ನನ್ನ ಕನಸಲ್ಲಿ ಬಂದವಳು ನೀನು,  
ಹೆಸರಿಲ್ಲ, ಊರಿಲ್ಲ,ಆದರೂ
ಎಷ್ಟು ಹತ್ತಿರ ಇರುವೆ ನೀನು
ಕಣ್ಣಲ್ಲಿ ನಕ್ಷತ್ರ, ನಗುವಲ್ಲಿ ಹುಣ್ಣಿಮೆ,  
ಮಾತಲ್ಲಿ ಮಲ್ಲಿಗೆ ಪರಿಮಳವನು
ಹೊತ್ತು ತಂದಿರುವೆ ಏನು.?

ನೀನು ನಡೆದರೆ ಹೂವು ಅರಳಿಹುದು
ನೀನು ನೋಡಿದರೆ ಮಳೆ ಬರುವುದು  
ಸುಮ್ಮನೆ ಒಮ್ಮೆ ನೀ ಕೈ ಬೀಸಿದರೂ  
ನನ್ನ ಇಡಿ ದಿನ ಹಬ್ಬವಾಗುವದು.

ವಾಸ್ತವದಲ್ಲಿ ಸಿಗಲಾರೆನೋ ಗೊತ್ತಿಲ್ಲ
ಆದರೂ ಕನಸಲ್ಲಿ ಪ್ರತಿ ರಾತ್ರಿ
ಭೇಟಿಯಾಗುವೆನು ನಿನ್ನನು
“ನೀನೆ ನನ್ನ ಸ್ವಪ್ನ ಸುಂದರಿ”
ನಿದ್ದೆಯಲ್ಲೆ ಪದೇ ಪದೇ ಹೇಳುವೆ ರಿ.

ನೀನು ಕನಸೆ ಆದರೂ
ನನಸಾಗಿಸಲು ಬರದೆ ಇರುವೆ ಏನು?
ಆದರೂ ಆ ಕನಸೆ ನನ್ನ ಬದುಕಿಗೆ ಬೆಳಕು
ಒಂದು ದಿನ ಆ ಕನಸು
ನಿಜವಾಗುವುದಲ್ಲವೇನು!
ಆಗಲೆಂದು ಆ ದೇವರಲ್ಲಿ
ಕೇಳುತ್ತಿರುವೆನು ನಾನು.


About The Author

1 thought on “ಕಲ್ಪನಾ ಎಸ್ ಪಾಟೀಲ ಕವಿತೆ “ಸ್ವಪ್ನ ಸುಂದರಿ””

Leave a Reply

You cannot copy content of this page

Scroll to Top