ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


( ಲಕ್ಷ್ಮಣ ಶರೆಗಾರ ಸರ್ ಅವರ ಮಿಸ್ರಾ ತೆಗೆದುಕೊಂಡು ಬರೆದದ್ದು.
ಒಮ್ಮೆ ಹಿಂತಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋ..)
ಒಮ್ಮೆ ಹಿಂದಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋ
ಮರಣಿಸಿದ ನಿನ್ನ ಆ ಸ್ಮೃತಿಗೆ ಮರುಜನ್ಮ ಸಿಗುತ್ತಿತ್ತೇನೋ
ಒಂದೇ ಕ್ಷಣ ನಿಂತು, ನನ್ನ ಬಿಂಬವ ಕಣ್ತುಂಬಿಕೊಳ್ಳಬೇಕಿತ್ತು
ಆರ್ದ್ರಗೊಂಡ ಮನವು ಮತ್ತೆ ಒಲವಿನೆಡೆಗೆ ವಾಲುತ್ತಿತ್ತೇನೋ
ಚಂದ್ರ ತಾರೆಗಳೂ ಸೋತಿದ್ದವು ನಮ್ಮಿಬ್ಬರ ಬಾಂಧವ್ಯಕೆ
ನೀ ತಲೆ ಎತ್ತಿದ್ದರೆ ಆ ಬಾನು ಬಾಗಿ ಸಾಕ್ಷಿ ಹೇಳುತ್ತಿತ್ತೇನೋ
ಬರಬರನೇ ಹಾಗೆಯೇ ನಡೆದು ಹೋದೆಯಲ್ಲ ನಲ್ಲನೇ
ನಿಂತಿದ್ದರೆ ನನ್ನೂರಿನ ತಂಗಾಳಿ ನಿನ್ನೆದೆಗೆ ಸೋಕುತ್ತಿತ್ತೇನೋ
ಕೆಲ ಮೈಲುಗಳಾದರೂ ವಾಣಿಯ ಕೈ ಹಿಡಿದು ಪಯಣಿಸಿದ್ದೆ
ನಿನ್ನದೇ ಬೆರಳ ನಿಟ್ಟಿಸಿದ್ದರೆ ,ನಿನಗದರ ತವಕ ಕಾಣುತ್ತಿತ್ತೇನೋ
ವಾಣಿ ಯಡಹಳ್ಳಿಮಠ




Very nice madam
Thank you