ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆ
ವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ

ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋ
ಕೊಂಚವೂ ದಯೆಯಿರದೇ ತುಳಿದು ಹೋದೆ

ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆ
ಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ

ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !
ತೋರಿದ ಅಸೀಮ ಒಲವನು ಜರೆದು ಹೋದೆ

ನನಸಾಗದ ಕನಸುಗಳ ನೀ ಕಾಣದಿರು *ಹೇಮ*
ನಿನಗಾಗಿ ಮಿಡಿದ ಹೃದಯವ ಮುರಿದು 
ಹೋದೆ


About The Author

1 thought on “ಎ.ಹೇಮಗಂಗಾ ಅವರ ಗಜಲ್”

Leave a Reply

You cannot copy content of this page

Scroll to Top