ಕಾವ್ಯ ಸಂಗಾತಿ
ಎ.ಎಸ್. ಮಕಾನದಾರ ಗದಗ
“ಆ ಕಾಲಕ್ಕೆ ಕಾಯುವೆ”


ಮಸೀದೆಯ ಅಜಾನ್
ಚರ್ಚ್ ನಲ್ಲಿ ಕೇಳಬೇಕು
ಚರ್ಚ್ ನಲ್ಲಿಯ ಪ್ರಾರ್ಥನೆ
ಮಂದಿರ ದಲ್ಲಿ ಜರುಗಬೇಕು
ಮಂದಿರ ದಲ್ಲಿ ಸೇರಿದ ಜನ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು
ನನ್ನ ಕಾಯ
ಕರ್ಪುರ ವಾಗಬೇಕು
ಮಂದಿರ ಮಸೀದೆ
ಚರ್ಚ್ ನಲ್ಲಿ ಬೆಳಗಬೇಕು
ನರನಾಡಿಗಳು
ನೀಲಾಂಜನಕೆ ಬತ್ತಿ ಯಾಗಬೇಕು
ರಕುತ ಎಣ್ಣಿಯಾಗಬೇಕು
ಮನಸು ಬೆಣ್ಣಿಯಂತೆ ಕರಗಬೇಕು
ಆ ಕಾಲಕ್ಕಾಗಿ ನನ್ನ
ಕಣ್ಣುಗಳು ಕಾಯಬೇಕು
ಎ.ಎಸ್. ಮಕಾನದಾರ ಗದಗ




ಆಶಾವಾದಿ ಕವಿ ಮಕನದಾರ
ಕೋಮುವಾದಿಗಳ ಕೈಯಲ್ಲಿ ತ್ರಿಶೂಲ ಕಳಚಿ,
ಅತ್ತರಿನ ಪರಿಮಳ ಬೀದಿಗಳ ತುಂಬಬೇಕು
ಚರ್ಚಗಳ ಪ್ರಾರ್ಥನೆ ಫಲ
ನನ್ನ ದೇಶದ ಅಂಗಳದಲ್ಲಿ ಹರಡಿ, ಬೆಂಕಿ ಹಚ್ಚುವ ಮನಸುಗಳ ಬದಲಿಸಬೇಕು
ದೇವಸ್ಥಾನದ ಹಣ ಕದಿಯುವವರು ಕುರುಡರಾಗಬೇಕು:
ಹುಂಡಿಯ ಹಣ ಹಸಿದವರ ಹೊಟ್ಟೆಗೆ ಅನ್ನವಾಗಬೇಕು