ಕಾವ್ಯ ಸಂಗಾತಿ
ವನಜ ಮಹಾಲಿಂಗಯ್ಯ
“ಮಳೆಯೇ ಬಾ”


ಮೋಡಗಳೇ ಎಲ್ಲಿಗೆ ಹೋದಿರಿ,
ನಮ್ಮ ಊರ ನೀವು ಮರೆತೆರಾ?
ಬಾವಿಯಲ್ಲೂ ಒಂದನಿ ನೀರಿಲ್ಲ,
ಕೆರೆಯಲ್ಲೂ ಹನಿ ನೀರಿಲ್ಲ.
ಅಡಿಕೆ ಬಾಳೆ ತೆಂಗು ಒಣಗುತಿದೆ
ಆದರೆ ಅಲ್ಲಿ….ರಾಜಕೀಯ ಕುಣಿದಾಡುತಿದೆ
ಬಡವನ ಕೂಗು ಕೇಳಲವರಿಗೆ ಸಮಯವೆಲ್ಲಿದೆ?
ನಿನಗಾದರೂ ಕೇಳಲಿ ರೈತರ ಕೂಗು ಮಳೆಯೇ
ಬಾ ಮಳೆಯೇ ಬಾ ಮಳೆಯೇ
ಬಾ ಬೇಗ ಭೂಮಿ ಕಾದಾರಿದೆ.
ಬೆಳೆ ಇಲ್ಲದೆ ರೈತ ಅಳುತಿರುವ,
ಮಗುವಿಗೆ ನೀರಿಲ್ಲದೆ ತಾಯಿ ಪರಿತಪಿಸುವ,
ಒಣಗಿದ ಮರದ ಕೆಳಗೆ ಹಕ್ಕಿಯೂ ಸುಮ್ಮನಿದೆ,
ಮಳೆಯೇ ಬೇಗ ಬಾ, ನಮ್ಮ ಕಣ್ಣೀರು ಒರೆಸು.
ಬಾ ಮಳೆಯೇ ಬಾ ಮಳೆಯೇ
ಬಾ ಬೇಗ ಭೂಮಿ ಕಾದಾರಿದೆ.
ಭೂಮಿ ತಾಯಿ ಬಾಯಾರಿದ್ದಾಳೆ,
ಬಿತ್ತಿದ ಬೀಜ ಕಾಯುತ್ತಿದೆ,
ಒಂದೇ ಒಂದು ಹನಿ ಮಳೆಗಾಗಿ,
ಇಡೀ ಊರೇ ಕೈಮುಗಿದು ನಿಂತಿದೆ.
ಮಳೆಯೇ ಬಾ, ಮಳೆಯೇ ಬಾ,
ಜೀವನಕ್ಕೆ ಜೀವ ತುಂಬಲು ಬಾ ಭುವಿಗೆ .
ನೀನು ಬಂದರೆ ನಮಗೆಲ್ಲ ಅನ್ನ ನೀರು
ನೀ ಬಾರದಿದ್ದರೆ ನಮಗೆಲ್ಲಿ ಬದುಕು
ಬಾ ಮಳೆಯೇ ಬಾ ಮಳೆಯೇ
ಬಾ ಬೇಗ ಭೂಮಿ ಕಾದಾರಿದೆ.
ವನಜ ಮಹಾಲಿಂಗಯ್ಯ



