ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಐದು ದಶಕದ ಹಿಂದೆ,
ಕಾಲ ಸರಳವಾಗಿತ್ತು,
ಬದುಕು ಹಸನಾಗಿತ್ತು;
ಮಣ್ಣ ಗೋಡೆಯ ತೊಲೆಯ
 ಹಳೆ ಮನೆಯೊಳಗೆ,
ಬೆಳಕಿಂಡಿಯ ಪ್ರೀತಿ ಬೆಳಕು
ಬಡ ರೈತರ ಬದುಕು

ಮೊಬೈಲ್ ಇರದ ದಿನಗಳಲ್ಲಿ,
ಮಾತುಗಳು ಮನಸ್ಸನ್ನು
 ಮುಟ್ಟುತ್ತಿದ್ದವು;
ಪತ್ರದ ಬರುವಿಕೆಗಾಗಿ
 ಕಾಯುವ ಕಣ್ಣುಗಳು,
ಬಾಂಧವ್ಯದ ಆಳ
 ಅಳೆಯುತ್ತಿದ್ದವು.

ಜಾತ್ರೆ ಪಾರಿಜಾತದ ಸದ್ದು
ಓಣಿ ತುಂಬಾ ಆಟದ ಗದ್ದಲ,
ಸಿಡಿಯಲು ಸಿದ್ಧ ಪಟಾಕಿ ಮದ್ದು
ಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;
ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,
ಕೂಡು ಕುಟುಂಬವೇ ನಮಗೆ
ಒಂದು ದೊಡ್ಡ ನೀತಿ.

ಬೀದಿ ದೀಪದ ಕೆಳಗಿನ ಓದು,
ಚಿಮಣಿ ಬಡ್ಡಿಯ ಸುತ್ತ
 ಮಸುಕಾದ ಬೆಳಕು;
ಕಷ್ಟ ದುಃಖದ ಮಧ್ಯೆ
ಮಂದಹಾಸದ  ನಗೆ ಇತ್ತು,
ಬರಿಗಾಲಲಿ ಶಾಲೆ ಪಾಠ
ನಿತ್ಯ ಕಸರತ್ತು

ಇಂದು ಕಾಲ ಬದಲಾಗಿದೆ,
 ವೇಗ ಹೆಚ್ಚಾಗಿದೆ,
ಕೈಯಲ್ಲಿ ಜಗತ್ತಿದೆ, ಆದರೆ
 ಮನುಜ ಒಂಟಿಯಾಗಿರುವ
ಐದು ದಶಕದ  ಆ ದಿನಗಳು,
ನೆನಪಿನ ಪುಟಗಳಲ್ಲಿ
ಅಚ್ಚಳಿಯದೆ ಉಳಿದಿವೆ.

ಎಷ್ಟೋ ವರುಷಗಳ ಮೇಲೆ
ಅವಳ ಭೇಟಿ
ಕಣ್ಣಿನಲ್ಲಿ ಮಾತು ಹರಿದವು
ಮೌನ ಮುರಿದು ಮಾತು
ಸಂಜೆ ಬಾನಿನ  ಚುಕ್ಕಿ ಮೂಡಿದವು
ಹುಣ್ಣಿಮೆಯ ಚಂದ್ರ ನಕ್ಕನು
ಮತ್ತೆ ಗೂಡು ಸೇರಿದೆವು


About The Author

3 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ””

  1. “ಕಾಲ ಬದಲಾಗಿದೆ”ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ, ಅರ್ಥ ಪೂರ್ಣವಾಗಿ ರಚಿಸಿದ್ದೀರಿ ಸರ್.

Leave a Reply

You cannot copy content of this page

Scroll to Top