ಧಾರಾವಾಹಿ ಸಂಗಾತಿ-37
ಸವಿತಾ ದೇಶಮುಖ

ಜಯದೇವಿತಾಯಿಲಿಗಾಡೆ
ಜೀವನಗಾಥೆ
೧೯೫೨ರ ಬೇಲೂರು ಸಾಹಿತ್ಯ ಸಮ್ಮೇಳನ-
ಅಖಂಡ ಕರ್ನಾಟಕ ಗೊತ್ತುವಳಿ

೧೯೫೨ರ ಮೇ ತಿಂಗಳು….
ಐತಿಹಾಸಿಕ ಬೇಲೂರು ….ಮತ್ತೊಮ್ಮೆ ಕನ್ನಡದ ಇತಿಹಾಸಕ್ಕೆ ಸಾಕ್ಷಿಯಾಗಲು ಸಜ್ಜಾಗಿತ್ತು. ಕನ್ನಡ ಸಾಹಿತ್ಯದ ದಿಗ್ಗಜರು, ಸಾಹಿತಿಗಳು, ಚಿಂತಕರು, ಕನ್ನಡಾಭಿಮಾನಿಗಳು ಒಂದೆಡೆ ಸೇರಿದ್ದ… ೩೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇಲೂರು ಆತಿಥ್ಯ ವಹಿಸಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು ವಿದ್ವಾಂಸರಾದ ಎಸ್.ಸಿ. ನಂದೀಮಠರು.
ಆ ಸಮ್ಮೇಳನಕ್ಕೆ ಜಯದೇವಿತಾಯಿಯವರು ಅತಿಥಿಗಳಾಗಿದ್ದರು.ಅವರ ಹೃದಯದಲ್ಲಿ ಬಹುಕಾಲದಿಂದ ಉರಿಯುತ್ತಿದ್ದ ಕನ್ನಡದ ಜ್ಯೋತಿ ಪ್ರಜ್ವಲಿಸುವ ಕಾಲವಾಗಿತ್ತು.
ಸೊಲ್ಲಾಪುರದಲ್ಲಿ ಹುಟ್ಟಿ, ಮರಾಠಿ ಮಾಧ್ಯಮದಲ್ಲಿ ಬಾಲ್ಯಶಿಕ್ಷಣ ಪಡೆದಿದ್ದ ಜಯದೇವಿತಾಯಿಯವರು ನಂತರ ಕನ್ನಡವನ್ನು ಕಲಿತು, ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿ, ಕನ್ನಡದ ಸೇವೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು. ಕನ್ನಡಕ್ಕಾಗಿ ಅವರ ತುಡಿತ ಅವರ ಕಣ್ಣೀರು… ಪ್ರಾಣವನ್ನೇ ಬಲಿಕೊಡುವ ಪಣ…. ಬೇಲೂರಿನ ಸಾಹಿತ್ಯ ಪರಿಷತ್ತು ಸಾಕ್ಷಿಯಾಗಿ ನಿಂತಿತ್ತು…!!
ಅವರ ಪಾಲಿಗೆ ಕನ್ನಡವೆಂಬ ಭಾಷೆಯು ಅವರ ಅಂತರಂಗದ ನಾದವಾಗಿತ್ತು…
ಅದು ಗಡಿಭಾಗದಲ್ಲಿ ಚದುರಿಹೋಗಿದ್ದ ಕನ್ನಡಿಗರ ಬದುಕಿನ ಬಂಧವಾಗಿತ್ತು…..
ಅದು ಶರಣರ ನುಡಿಯ ಪರಂಪರೆಯಾಗಿತ್ತು….
ಅದು ತಮ್ಮ ತಾಯ್ನಾಡಿನ ನೆನಪಾಗಿತ್ತು….
ಕನ್ನಡಿಗರೆಲ್ಲ ಒಂದಾಗಬೇಕೆಂಬ ಕನಸಾಗಿತ್ತು……!!
ಬೇಲೂರಿನ ಸಾಹಿತ್ಯಿಕ ವೇದಿಕೆಯಲ್ಲಿ ಅಖಂಡ ಕರ್ನಾಟಕದ ವಿಚಾರ ಪ್ರಸ್ತಾಪವು…..ತಾಯಿಯವರ ಮನದಾಳದ ನೋವಿನ ಮಾತಾಗಿ ಹೊರಹೊಮ್ಮಿತು. ನಂತರ ಅದು ದಾಖಲೆಗಳಾಗಿ ಉಳಿದವು…. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧ ಎಂಬಷ್ಟು ತೀವ್ರವಾದ ಬದ್ಧತೆಯನ್ನು ದಾಖಲಿಸುತ್ತವೆ.
ಅವರ ಭಾಷಣದ ಹೀಗಿತ್ತು …
*ಯೋಗಿ ಬಂದಿದಾರೇನ…ರಾಗ
ಭೋಗದ ಆಚೆ ಒಯ್ಯುವರೇನ
ಯೋಗದ ಕೀಲ ತಿಳಿಸುವರೇನ….
ಎಂದು ಶಿವಯೋಗಿ ಸಿದ್ದರಾಮನನ್ನು ಪ್ರಥಮವಾಗಿ ನೆನೆಯುತ್ತ… ಭಾಷಣವನ್ನು ಪ್ರಾರಂಭಿಸುವ ರೂಡಿ ಜಯದೇವಿ ತಾಯಿ ವರದಗಿತ್ತು
ಅಂದಿನ ಭಾಷಣದ ಮುಖ್ಯ ಭಾಗದಲಿ ಅವರು ಹೇಳ್ತಾರೆ…
*ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರಿದು ಹಾಡುವಿರೇಕೆ?…… ಅಧಿಕಾರದ ಲಾಲಸೆ ಬಿಟ್ಟು ಕರ್ನಾಟಕಕ್ಕಾಗಿ ಹೋರಾಡುವಿರಾ? ನಡು ನಾಡಿನಲ್ಲಿರುವ ಕನ್ನಡಿಗರು ನೀವು ಗಡಿನಾಡಿನಲ್ಲಿರುವ ಕನ್ನಡತಿ ನಾನು ……..ನಮ್ಮ ಕಷ್ಟ, ನಾವು ತಲೆ ಕೊಟ್ಟಿರುವ ತುಳಿತ ಇವೆಂತು ನಿಮಗೆ ಗೊತ್ತಾದಿತ್ತು ,?…..ಅಣ್ಣಂದಿರೇ , ಸೊಲ್ಲಾಪುರದ ಗೋಡವೆ ಏಕೆ ಎಂದೆನ್ನುವಿರಾ?….. ಇಂದು ಸೊಲ್ಲಾಪುರಕ್ಕೆ ಒದಗಿದ ಗತಿ ನಾಳೆ ಬೇಲೂರಿಗೂ ಬರಬಹುದು…. ಏಕೀಕರಣ ಬೇಕಾದರೆ ಮಾಡಬೇಕಾದ ಕಾರ್ಯ ಬಹಳವಿದೆ….. ನಾನಂತೂ ನನ್ನ ಪ್ರಾಣವನ್ನು ಬಲಿಯಾಗಿ ಕೊಡಲು ಸಿದ್ದಳಿರುವೆನು……!!
ಅಖಂಡ ಕರ್ನಾಟಕದ ಈ ಹೋರಾಟವನ್ನು ಯಾವುದೇ ಆಶಯಗಳನ್ನು ಇಟ್ಟುಕೊಂಡು ನಾವು ಕೈಗೆತ್ತಿಕೊಂಡಿಲ್ಲ…. ಇದಕ್ಕೆ ಸೊನ್ನಲಿಯ ಸಿದ್ದರಾಮನೇ ಸಾಕ್ಷಿ, ಪಂಪಾಪತಿಯ ವಿರೂಪಾಕ್ಷ, ಬೇಲೂರಿನ ಚನ್ನಕೇಶವ ,ಶ್ರವಣಬೆಳಗೊಳದ ಗೊಮ್ಮಟೇಶ್ವರರೇ ಸಾಕ್ಷಿ …..ಕರ್ನಾಟಕ ಒಂದುಗೂಡುವುದು ನಿಶ್ಚಿತ ಇದು ನನ್ನ ಅಂತಕರಣದ ಬಯಕೆ, ಇದು ಆಗಲೇಬೇಕು……!!!ಎಂದು ಧಾರಾಕಾರವಾಗಿ ಕಣ್ಣೀರು ಸುರಿಸಲಾರಂಭಿಸಿದರು.
ಶತ ಶತಮಾನಗಳಿಂದ ಕರ್ನಾಟಕದ ಸಂಸ್ಕೃತಿಯ ಇತಿಹಾಸವನ್ನು ತನ್ನ ತೊಡೆಯ ಮೇಲೆ ಹೊತ್ತು ನಿಂತಿರುವ ಶ್ರೀ ಚೆನ್ನಕೇಶ್ವರನ ದಿವ್ಯ ಸನ್ನಿಧಿಯಲ್ಲಿ ಆ ಸಮ್ಮೇಳನ ಜರುಗುತ್ತಿತ್ತು. ಸುತ್ತಲೂ ಸಾಹಿತ್ಯದ ಕಂಪು….. ಕನ್ನಡದ ಕಾವ್ಯ, ನಾಡು-ನುಡಿಯ ಪ್ರೀತಿ, ಸಂಸ್ಕೃತಿಯ ಸೊಬಗು,ಇವೆಲ್ಲವೂ ಒಂದೆಡೆ ಸೇರಿ ಆ ವಾತಾವರಣವನ್ನು ಪಾವನಗೊಳಿಸಿದ್ದವು.
ಅಂತಹ ಸಾಹಿತ್ಯದ ಸಾಕ್ಷಿ ಯಜ್ಞವೇದಿಕೆಯ ನಡುವೆ, ಕನ್ನಡತಿಯೊಬ್ಬಳು ಗಳಗಳನೆ ಅಳುತ್ತಾ ನಿಂತಿದ್ದಳು. ಕಣ್ಣಂಚಿನಿಂದ ಜಾರುತ್ತಿದ್ದ ಕಣ್ಣೀರನ್ನು ತನ್ನ ಸೆರಗಿನಿಂದ ಒರೆಸಿಕೊಳ್ಳುತ್ತಾ, ಇಡೀ ಕನ್ನಡ ನಾಡಿನ ನೋವು ತೋಡಿಕೊಂಡರು. ಗಡಿಯಾಚೆ ಉಳಿದ ಕನ್ನಡಿಗರ ಕೊರಗು, ನಾಡು ನುಡಿಯ ಅಸ್ತಿತ್ವದ ಸಂಕಟ, ತನ್ನ ತಾಯ್ನಾಡಿನಿಂದ ದೂರವಾಗುತ್ತಿರುವ ಕನ್ನಡಿಗರ ವೇದನೆ..
ಎಲ್ಲವನ್ನೂ ತನ್ನ ಕಣ್ಣೀರಿನ ಮೂಲಕ ಅಲ್ಲಿ ನೆರೆದಿದ್ದವರ ಹೃದಯಕ್ಕೆ ತಲುಪಿಸುತ್ತಿದ್ದರು…..
ಅವರ ಪ್ರತಿಯೊಂದು ಮಾತಿನಲ್ಲೂ ನೋವಿತ್ತು. ಪ್ರತಿಯೊಂದು ಕಣ್ಣೀರಿನ ಹನಿಯಲ್ಲೂ ಕನ್ನಡದ ಮೇಲಿನ ಅಪಾರ ಅಭಿಮಾನವಿತ್ತು. ಅವರ ಮಾತನಾಡುತ್ತಿದ್ದಂತೆ ಕೇಳುತ್ತಿದ್ದವರ ಕಣ್ಣುಗಳೂ ತೇವಗೊಂಡವು. ಸಾಹಿತ್ಯಾಸಕ್ತ ಹೃದಯಗಳು ಮಿಡಿದವು. ಅಲ್ಲಿ ನೆರೆದಿದ್ದವರಿಗೆ ಅವರು ಸಾಕ್ಷಾತ ಭುವನೇಶ್ವರಿ ತಾಯಿಯೇ ತನ್ನ ಮಕ್ಕಳ ನೋವನ್ನು ಹೇಳಿಕೊಳ್ಳಲು ಅವರ ಮುಂದೆ ನಿಂತಂತೆ ಭಾಸವಾಯಿತು.
ಕನ್ನಡ ನಾಡುನುಡಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ಸಿದ್ಧನಾದ ವರಕವಿಯೊಬ್ಬನು, “ಗಂಡಸಾದರೆ ಬಲಿಕೊಡುವೆನು, ನೀವು ಕೊಡವಿಯೇನು?” ಎಂಬಂತೆ ತಾಯಿಭುವನೇಶ್ವರಿಯನ್ನು ಪ್ರಶ್ನಿಸಿದಾಗ, ಆ ಪ್ರಶ್ನೆಗೆ ಉತ್ತರವಾಗಿ ಆ ಕನ್ನಡತಿಯ ಕಣ್ಣೀರೇ ಹರಿಯುತ್ತಿದ್ದಂತಿತ್ತು. ಮಾತುಗಳಿಂದ ಹೇಳಲಾಗದ ನೋವನ್ನು ಆ ಕಣ್ಣೀರು ಹೇಳುತ್ತಿತ್ತು. ಕನ್ನಡ ತಾಯಿಯ ಮಡಿಲಿನ ಮಕ್ಕಳೇ ಚದುರಿಹೋಗುತ್ತಿರುವಾಗ, ಅವರನ್ನು ಮತ್ತೆ ತನ್ನ ಮಡಿಲಿಗೆ ಕರೆಸಿಕೊಳ್ಳಬೇಕೆಂಬ ತಾಯಿಯ ಆರ್ತನಾದವೇ ಆ ಅಳುವಿನಲ್ಲಿ ಕೇಳಿಸುತ್ತಿತ್ತು.
ಆ ಕ್ಷಣದಲ್ಲಿ ಚೆನ್ನಕೇಶ್ವರನ ಸನ್ನಿಧಿಯೂ, ಸಾಹಿತ್ಯದ ಆ ಸಭೆಯೂ, ಕನ್ನಡತಿಯ ಕಣ್ಣೀರೂ ಮೂರೂ ಒಂದಾಗಿ ಬೆರೆತು ಅಪೂರ್ವವಾದ ಭಾವಲೋಕವೊಂದನ್ನು ಸೃಷ್ಟಿಸಿದ್ದವು.
ಅಲ್ಲಿ ಕಣ್ಣೀರು ಸುರಿಸುತ್ತಿದ್ದವರು ಇಡೀ ಕನ್ನಡ ನಾಡಿನ ಕಣ್ಣೀರು ತುಂಬಿಕೊಂಡಿತ್ತು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಅನೇಕ ಸಾಹಿತಿಗಳು ಆ ಕ್ಷಣವನ್ನು ಇಂದಿಗೂ ಮರೆಯಲಾಗದ ದೃಶ್ಯವೆಂದು ಸ್ಮರಿಸುತ್ತಾರೆ……
ಕರ್ನಾಟಕದ ಎಲ್ಲ ದಿನಪತ್ರಿಕೆಗಳು ಇಂಗ್ಲಿಷ್ ಪತ್ರಿಕೆಗಳಲ್ಲಿ ಈ ಸುದ್ದಿಯು ಪ್ರಕಟಗೊಂಡಿತು,..,ಮನೆ ಮನೆ ಮಾತಾಯಿತು .ಅದು ಕನ್ನಡ ತಾಯಿಯ ಹೃದಯದಿಂದ ಹೊರಬಂದ ಆರ್ತನಾದವಾಗಿತ್ತು. ಅಖಂಡ ಕನ್ನಡ ನಾಡಿನ ಕನಸಿಗಾಗಿ ಹರಿದ ಪವಿತ್ರ ಕಣ್ಣೀರಾಗಿತ್ತು.
ಗಡಿಯಾಚೆ ಉಳಿದುಕೊಂಡ ಕನ್ನಡಿಗರ ನೋವಿನ ಒಂದೊಂದು ಕಥೆಯನ್ನು ಹೇಳುತ್ತಿತ್ತು.
* ಕನ್ನಡ ತಾಯಿಗಾಗಿ ಕಣ್ಣೀರ ಸುರಿದಾವ
ಉನ್ನತ ನಾಡ ಒಂದು ಗೂಡಿಸಲು- ಸಿದ್ದರಾಮ
ಅನ್ನ ನೀರಿನ ಪರಿವೆ ಹರಿಸೀದಿ*
ಶ್ರೀ ಚೆನ್ನಕೇಶ್ವರನ ಸನ್ನಿಧಿಯಲ್ಲಿ ನಡೆದ ಆ ಕ್ಷಣವು ಕನ್ನಡದ ಇತಿಹಾಸದ ಒಂದು ಭಾವನಾತ್ಮಕ ಅಧ್ಯಾಯವಾಗಿ ಉಳಿಯಿತು.
ಚೆನ್ನಕೇಶ್ವರನ ಪಾವನ ಸನ್ನಿಧಿಯಲ್ಲಿ ಸುರಿದ ಆ ಕಣ್ಣೀರಿನ ಹನಿಗಳು, ಮುಂದೆ ಕನ್ನಡ ನಾಡು-ನುಡಿಗಾಗಿ ನಡೆಯಲಿದ್ದ ಹೋರಾಟದ ಸಂಕಲ್ಪಕ್ಕೆ ಪುಷ್ಟಿ ಕೊಟ್ಟೆವು.
ಸಾಹಿತ್ಯ ಪರಿಷತ್ತು ಕರ್ನಾಟಕ ಎರಡಾಗಬೇಕು ಎಂಬ ವಾದದೊಂದಿಗೆ ಸೇರಿತ್ತು ಆದರೆ ಅಲ್ಲಿ ಅಖಂಡ ಕರ್ನಾಟಕ ಜನರ ಮನಸ್ಸಗಳನ್ನು ಒಂದು ಮಾಡಬೇಕಿತ್ತು ಸಮ್ಮೇಳನಕೆಂದು ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರ ಮನಸ್ಸನ್ನು ಒಲಿಸಿ, ಅಖಂಡ ಕರ್ನಾಟಕ ರಚನೆಯ ಬೇಡಿಕೆ ಗೊತ್ತುವಳಿಯನ್ನು ಮಂಡಿಸುವುದು ಹಾಗೂ ಸರ್ವಾನುಮತದಿಂದ ಆ ಬೇಡಿಕೆ ಸೀಕೃತವಾಗುವುದು ಸುಲಭದ ಕೆಲಸವಾಗಿರಲಿಲ್ಲ…..
ಮೂರು ಕೋಟಿ ಕನ್ನಡಿಗರ ಎದುರು ಈ ಗೊತ್ತುವಳಿಯನ್ನು ಮಂಡಿಸೀದ್ದರು.ಆ ಕಾಲಕ್ಕೆ ಒಬ್ಬ ಹೆಣ್ಣು ಮಗಳು ನೆರೆದಿದ್ದ ಜನಸಮುದಾಯದ ಸಭೆಯಲ್ಲಿ ಮಾತನಾಡುವುದೇ ವಿರಳವಾಗಿತ್ತು. ಅಂತಹದರಲ್ಲಿ ಜಯದೇವಿ ತಾಯಿಯವರ ಕಾರ್ಯ ಮಹಾಸಾಧನೆ ಸರಿ. ಅವರು ಮಂಡಿಸಿದ ಗೊತ್ತು ಗಳಿಗೆ ಎದ್ದ ವಿರೋದ್ಧ, ಅಲ್ಲಿ ಉಂಟಾದ ಉದ್ವಿಗ್ನತೆಯಿಂದ ಕರ್ನಾಟಕ ಏಕೀಕರಣ ಅಸಾಧ್ಯವೆಂದು ಅನಿಸಿತ್ತು ಅಂಥ ವಿರೋಧದ ನಡುವೆ ಅವರು ಏಕೀಕರಣದ ಗೊತ್ತುವಳಿ ಮಂಡಿಸಿದರು.
ರಾಜಕಾರಣಗಳಿಂದ ನಾಡ ನುಡಿಯ ಚಟುವಟಿಕೆ ಸ್ಥಗಿತವಾಗಿದ್ದ ಕಾಲದಲ್ಲಿ ತಮ್ಮ ದಿಟ್ಟತನದಿಂದ ಗೊತ್ತುವಳಿ ಮಂಡಿಸಿದ್ದು…ಅಲ್ಲಿ ನೆರೆದ ಪುರುಷ ಪ್ರಧಾನ ವ್ಯವಸ್ಥೆಗೆ ಒಂದು ಸವಾಲ ಹಾಕಿದರು . ಕರ್ನಾಟಕ ಏಕೀಕರಣ…. ಅಗಲಿದ ಕನ್ನಡ ನೆಲ ಕುಲ ಜಲ ಜನ ಒಂದಾಗಬೇಕೆನ್ನುವುದೇ ನನ್ನ ಬಯಕೆ ಎಂದರು….ಪರಿಷತ್ತಿನಲ್ಲಿ ನೆರೆದ ರಾಜಕಾರಣಿಗಳ ಮನಸ್ಸು ಒಲಿಸಿದರು.. ಜನತೆಯನ್ನು ಓಲ್ಯೆಸಿದರು.
ಕೆಲವು ಮೂಲಗಳು “ಅಖಂಡ ಕರ್ನಾಟಕದ ಗೊತ್ತುವಳಿ” ಮತ್ತು “ಎರಡು ಕರ್ನಾಟಕದ ಕಲ್ಪನೆಗೆ ವಿರೋಧ” ಎಂದು ವಿವರಿಸುತ್ತವೆ. ಒಂದು ಸಂಶೋಧನಾ ಲೇಖನವು ಬೇಲೂರು ಸಮ್ಮೇಳನದಲ್ಲಿ ಹನುಮಂತಯ್ಯ ಮತ್ತು ಇತರರು ಮುಂದಿಟ್ಟಿದ್ದ ಎರಡು ಕರ್ನಾಟಕದ ಕಲ್ಪನೆಯನ್ನು ಜಯದೇವಿತಾಯಿಯವರು ತೀವ್ರವಾಗಿ ವಿರೋಧಿಸಿದ್ದರೆಂದು ಹೇಳುತ್ತದೆ.
೧೯೫೩ ರಲ್ಲಿ ಹೈದರಾಬಾದ ರಾಜ್ಯದ ತಳವಾಡದಲ್ಲಿ ನಡೆದ ಅಖಿಲ ಕನ್ನಡಿಗರ ಸಭೆಯಲ್ಲಿ ಹೈದರಾಬಾದಿನ ಮುಖ್ಯಮಂತ್ರಿ ಬಿ ರಾಮಕಿಶನರಾವ ಅವರು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯದೇವಿ ತಾಯಿ ಲಿಗಾಡೆಯವರು ಒಹಿಸಿಕೊಂಡಿದ್ದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಬಿ ರಾಮ ಕಿಸರಾವ ಅವರನ್ನು ಒತ್ತಾಯಿಸುವ ಮೂಲಕ ಗೊತ್ತುವಳಿಯು ಸ್ವೀಕರಿಸಲಾಯಿತು.
ಕನ್ನಡ ಶಿಕ್ಷಕರು ಹೈದರಾಬಾದ ರಾಜ್ಯದಲ್ಲಿ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಜಯದೇವಿ ತಾಯಿಯವರು ನಾಲ್ಕು ನೂರು ಜನ ಶಿಕ್ಷಕರನ್ನು ನೇಮಿಸಿದರು ಅವರು ಮುಖ್ಯವಾಗಿ ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುತ್ತಿದ್ದರು. ಅದೇ ಕಾಲಕ್ಕೆ ಸೊಲ್ಲಾಪುರ ಕೆಲ ಭಾಗದಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲಿ ನೇಮಕರಾದ ಶಿಕ್ಷಕರ ಖರ್ಚನ್ನು ತಾಯಿಯವರೇ ವಹಿಸುತ್ತಿದ್ದರು
ಸವಿತಾ ದೇಶಮುಖ




