ಕಾವ್ಯಸಂಗಾತಿ
ಡಾ.ಲತಾ ಎ. ಆರ್ ಬಾಳೆಹೊನ್ನೂರು
“ಲಂಚಾವತಾರ”


ಅಮಾಯಕರ ಜೀವ ಹಿಂಡುವ ಅಧಿಕಾರ
ಕೊಡಲಿಲ್ಲ ಯಾರಿಗೂ ಪ್ರೀತಿಯ ಸಹಕಾರ
ಮೆರೆದರು ತೋರಿಸಿ ಹಣದ ಅಹಂಕಾರ
ಮರೆತರು ಸೊಕ್ಕಿನಲಿ ಪ್ರೇಮದ ಮಮಕಾರ
ಕೊನೆಗಾಲದ ನೋವ ನೀ ಅನುಭವಿಸುವೆ
ಹುಟ್ಟು ಸಂಭ್ರಮ ಸಾವು ನಿಗೂಢ ಅರಿವೆ
ಸಾವಿನಲಿ ಕಾಯುವುದಿಲ್ಲ ನಿನ್ನ ಹಣವೇ
ಒಂದು ದಿನ ಶವವಾಗಿ ಮಣ್ಣಲ್ಲಿ ಕೊಳೆಯುವೆ
ಹೊತ್ತೋಯ್ಯುವುದಿಲ್ಲ ಮರಣದ ಕೊನೆಯಲ್ಲಿ
ಬೆಳಕಾಗು ದೀನ ದಲಿತರ ಸೇವೆಯಲಿ
ಕಾಯಕದಿ ಕೈಲಾಸ ನೋಡುವೆ ನೀನಿಲ್ಲಿ
ದುರಹಂಕಾರದಿ ಮಣ್ಣು ಲೋಕದ ಬಯಲಲಿ
ದುರಾಸೆಯ ಬದುಕಿನಲಿ ಮಾನವನ ಜೀವನ
ಅತಿ ಆಸೆಯಲಿ ಮಾಡದಿರು ಮೋಸತನ
ಕಾಣಬೇಕಿದೆ ನೂತನ ಜೀವನ ಪಾವನ
ಲಂಚಾವತಾರದ ನೀಚ ರಕ್ಕಸರಿಗೆ ಈ ಕವನ
ಡಾ.ಲತಾ ಎ. ಆರ್ ಬಾಳೆಹೊನ್ನೂರು



