ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಎತ್ತ ನೋಡಿದತ್ತ ಕತ್ತಲು ಬೀಗುತಿದೆ ಸಾಕಿ
ಸೂರ್ಯೋದಯ ಯಾವಾಗ
ಮತಿ ಭ್ರಮಣೆಗೆ ಚಿತ್ತ ವಿಕಾರವಾಗುತಿದೆ ಸಾಕಿ
ನವೋದಯ ಯಾವಾಗ

ಕದ್ದೂ ಕಾಣದಿರುವ ಮುದ್ದು ಮುಖಗಳನು
ಒದ್ದು ಹೊರ ತರುತಿಹರು
ಸಜ್ಜನರ ಮುಖವಾಡ ಬಯಲಾಗುತಿದೆ ಸಾಕಿ,
ಶುದ್ಧೋದಯ ಯಾವಾಗ

ಅತಂತ್ರ ಜೀವನದಲಿ ಯಾಂತ್ರಿಕ ಬದುಕಿನತ್ತ
ನಡೆದಿದೆ ಜಗತ್ತು
ಮನದಿ ಬೆಳದಿಂಗಳು ಮರೆಯಾಗುತಿದೆ ಸಾಕಿ
ಚಂದ್ರೋದಯ ಯಾವಾಗ

ದುಶ್ಚಟಕೆ ದಾಸರಾಗಿ ದುರ್ಜನರ ಸಂಗಕೆ
ಸಾಯುತಿವೆ ಎಳೆ ಮನಗಳು
ಹೂವಿನಂತ ಬದುಕು ಹಾಳಾಗುತಿದೆ ಸಾಕಿ
ಶುಭೋದಯ ಯಾವಾಗ

ಕನಸು ಹುಗಿದರು, ಮನಸು ಹುಗಿದರು, ಈಗ
ಮನುಜತೆಯನೂ ಹುಗಿದರು
ಪ್ರೀತಿ ಸಿಗದೆ ಹೃದಯ ಘಾಸಿಯಾಗುತಿದೆ  ಸಾಕಿ
ಭಾಗ್ಯೋದಯ ಯಾವಾಗ


About The Author

1 thought on “ ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್”

Leave a Reply

You cannot copy content of this page

Scroll to Top