Day: October 14, 2020

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ  ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” […]

ಕಾಯಕದ ಮಹತ್ವ.

ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ […]

ಅನ್ನದಗಳುಗಳ ಲೆಕ್ಕ..

ಕವಿತೆ ಅನ್ನದಗಳುಗಳ ಲೆಕ್ಕ.. ವಸುಂದರಾ ಕದಲೂರು ಕೈ ಚಾಚಿತು ಒಡಲ ಹಸಿವು, ಅನ್ನದತಟ್ಟೆ ಹಿಡಿದು ಮುಷ್ಠಿ ತುತ್ತಿಗೆ…ಕೈ ಬಿಚ್ಚಿ ಹಾಕಿದರು ಅದರೊಳಗೆ ‘ಕ್ರಾಂತಿ’ ಬೇಕೆಂದು ಸಿಡಿದು ಬೀಳುವ ಹೊಳಪುಅಚ್ಚಿನ ನಾಣ್ಯಗಳನು. ಹಸಿದ ಉದರಕೆ ಓದಲು ಬಾರದು.ತಟ್ಟೆಗೆ ಬಿದ್ದ ಕಹಳೆ ಮೊರೆತದನಾಣ್ಯಗಳು ಕ್ರಾಂತಿಯ ಶ್ವೇತಪತ್ರಓದಿಸಲು ಪೈಪೋಟಿಗೆ ಬಿದ್ದವು.. ಅನ್ನ ಸಿಗುವ ಭರವಸೆಯಿದ್ದ, ತಟ್ಟೆಗೆಬೀಳುವ ಅಗುಳಿನ ಸದ್ದಿಗೆ ಕಾದವರು;ಕೆಂಪು ಉರಿ ಬೆಳಗಿನಲಿ ಉರಿದು, ಸಂಜೆ ಕಪ್ಪಿನಲಿ ನಿಧಾನ ಕರಗಿ, ನಾಳೆಯಾದರೂಹೊಟ್ಟೆ ತುಂಬುವ ಅನ್ನದಗುಳುಗಳ ಕನಸುಕಾಣುತ್ತಾ… ಎವೆಗಳನು ಮುಚ್ಚುತ್ತಿದ್ದರು. ಕಿವುಡು ಕಿವಿಗಳಿಗೆ […]

ಜಾಲತಾಣಗಳಿಂದ ಮಹಿಳೆಯರಿಗೆ ಹೆಚ್ಚಿದ ಅವಕಾಶ ಮಾಲಾ ಅಕ್ಕಿಶೆಟ್ಟಿ   ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ.          […]

ನಮ್ಮ ಕವಿ ಸ್ಮಿತಾ ಅಮೃತರಾಜ್ ಕವಿಪರಿಚಯ–ಸಂದರ್ಶನ–ಕವಿತೆಗಳು ಪರಿಚಯ ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ, ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ. “ಪ್ರಪಂಚ ಬಹಳ ಕೆಟ್ಟದು”ಅನ್ನುವ  ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸ್ಮಿತಾ ಅವರ  ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978,   ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ […]

ಒಂದು ಲೋಟ ಗಂಜಿ

ಕಥೆ ಒಂದು ಲೋಟ ಗಂಜಿ ಟಿ.ಎಸ್.ಶ್ರವಣಕುಮಾರಿ ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ […]

ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು

ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕವಿತೆಗಳು ಏಕಾಂತ ನೇಸರ ಮೋಡಗಳ ಹಾಸಿಗೆಯಿಂದ ಎದ್ದುಮೈಮುರಿಯುತ್ತಆಕಾಶದಗಲಕ್ಕೆ ಬಾಯಿ ಆಕಳಿಸುತ್ತಬೆಳಕು ಮೈಯಲ್ಲಿ ನಿಲ್ಲುತ್ತಾನೆತುಂಬಿದ ಬೆಳಕಿನ ಅಕ್ಷಯ ಕೊಡಅವನ ಕಾಯಬೆಳಕು ಹರಿಸುತ್ತಲೇ ಇರುತ್ತಾನೆಸಂಜೆಯವರೆಗೂ…ಮಾತಿಲ್ಲಬರೀ ಮೌನ! ಹೂವುಗಳು ಅರಳುತ್ತವೆಕೆಂಪು ನೀಲಿ ಹಳದಿತುಟಿ ಎಸಳುಗಳಲ್ಲಿ ಬೆಳಕು ಹೀರುತ್ತಮೌನವಾಗಿ ಕಂಪು ಬೀರುತ್ತಜೇನುಗಳು ಮಕರಂಧ ಹೀರಿ ಮಧು ಸಂಗ್ರಹಿಸುತ್ತವೆಮೌನವಾಗಿ ಬೀಜಗಳಲ್ಲಿ ಮೊಳಕೆಯ ತಲೆ ಬೆಳೆದುತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆಇರುವೆಗಳು ಸಾಲು ಸಾಲು ಸರದಿಯಲ್ಲಿಸೂರ್ಯನನ್ನೇ ಹೊತ್ತು ಸಾಗುತ್ತವೆಮೌನವಾಗಿ ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇಮೂರು ಕಾಲಗಳ ಮಾತು ಮಾತು ಮಾತುಬಾಯಿ ಬ್ರಹ್ಮಾಂಡ!ಎಲ್ಲಿದೆ ಏಕಾಂತ?ಮಾರುದ್ದ […]

ವಾರ್ಷಿಕೋತ್ಸವದ ವಿಶೇಷ ಲೇಖನವಾರ್ಷಿಕೋತ್ಸವದ ವಿಶೇಷ ಲೇಖನ ಅನುವಾದಕರ ಮುಂದಿರುವ ಸವಾಲುಗಳು ಪಾರ್ವತಿ ಜಿ.ಐತಾಳ್ ಅನುವಾದ ಅಥವಾ ಭಾಷಾಂತರವೆಂದರೆ ಭಾಷೆಯನ್ನು ಬದಲಾಯಿಸುವ ಕ್ರಿಯೆ ಎಂಬುದು ಸಾಮಾನ್ಯರ ಅಭಿಪ್ರಾಯ. ಇದು ಎರಡು ಭಾಷೆಗಳ ನಡುವೆ ಅನುವಾದಕ/ಕಿಯ ಮೂಲಕ ನಡೆಯುವ ಸಂವಹನ. ಇದಕ್ಕೆ ಮುಖ್ಯವಾಗಿ ಬೇಕಾದುದು ಎರಡು ಭಾಷೆಗಳ ಜ್ಞಾನ. ಯಾವ ಭಾಷೆಯಿಂದ ನಾವು ಅನುವಾದ ಮಾಡುತ್ತಿದ್ದೇವೋ ಅದನ್ನು ಮೂಲ ಭಾಷೆಯೆಂದೂ ಯಾವ ಭಾಷೆಗೆ ಮಾಡುತ್ತಿದ್ದೇವೋ ಅದನ್ನು ಉದ್ದಿಷ್ಟ ಭಾಷೆಯೆಂದೂ ಕರೆಯುತ್ತೇವೆ. ಅನುವಾದಕನಿ/ಕಿಗೆ ತನ್ನ ಮಾತೃಭಾಷೆ ಅಥವಾ ಶಿಕ್ಷಣ ಮಾಧ್ಯಮದ ಭಾಷೆ […]

ದೀಪ್ತಿ ಭದ್ರಾವತಿ ಕವಿತೆಗಳು ಲೂಟಿಯಾದವರು ಅಗೋ ಸಿಕ್ಕಿಯೇಬಿಟ್ಟ ನಿನ್ನೆಯಷ್ಟೇ ಎಷ್ಟೆಲ್ಲ ಜನರ ಉಸಿರು ಕದ್ದು ನಡೆದವ ಇಂದಿಲ್ಲಿ ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಸದ್ದಿಲ್ಲದೆ ಮಲಗಿದ್ದಾನೆ ಸೂರೆ ಹೋದವರು ಸೂರು ಹಾರುವಂತೆ ಕಿರುಚುತ್ತಿದ್ದರೂ ಗಮನಿಸದೆ ತನ್ನದೇ ಕನಸಲೋಕದಲ್ಲಿ ಹಾಯಾಗಿ ಕನಸುಕಾಣುತ್ತಿದ್ದಾನೆ ಲೂಟಿಯಾದವರು ಇದೀಗ ಇಲ್ಲಿ ಒಳಗಡೆಗೆ ನುಗ್ಗಲಿದ್ದಾರೆ ಎಬ್ಬಿಸಿ ಇವನನ್ನು ಬೀದಿಗೆಳೆದು ತಂದು ಆರೋಪಪಟ್ಟಿಯ ಸಿದ್ದವಾಗಿಸಿ ಕಂಬಕ್ಕೆ ಕಟ್ಟಿ ಥಳಿಸಲಿದ್ದಾರೆ “ಆಳಿಗೊಂದು ಕಲ್ಲು, ತಲೆಗೊಂದು ಮಾತು” ಕನ್ನ ಹಾಕುವುದೆ ಕಾಯಕ ಎಂದುಕೊಂಡವನಿಗೆ ಯಾವುದೂ ಹೊಸತಲ್ಲ ಪ್ರತಿ ಬಾರಿ […]

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ ಡಿ.ಎಸ್.ರಾಮಸ್ವಾಮಿ ಸಾಹಿತ್ಯವನ್ನು ಮುದ್ರಣ ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಂಗಾತಿಯ ಸಂಪಾದಕರು ಅಲವತ್ತುಕೊಂಡಿದ್ದಾರೆ. ಪ್ರತಿ ಭಾನುವಾರ ಎಲ್ಲ ಪತ್ರಿಕೆಗಳ ಪುರವಣಿಗಳನ್ನು ಹರಡಿಕೊಂಡು ಓದುತ್ತಿದ್ದ ಅನುಭೂತಿ ಈ ಕೋವಿಡ್ ನೆವದಿಂದಾಗಿ ಇಲ್ಲವಾದದ್ದು ನೆನಪಾಗಿ ಸಂಗಾತಿಯ ಸಂಪಾದಕರ ಆರೋಪ ಸರಿ ಅನ್ನಿಸಿತು ಕೂಡ. ಆದರೆ ಸ್ವಲ್ಪ ಕಾಲ ಯೋಚಿಸಿದ ಮೇಲೆ ಆ ಅಭಿಪ್ರಾಯ ತಾತ್ಕಾಲಿಕ ಅನ್ನಿಸುತ್ತಿದೆ. ಓದುಗರೇ ಇಲ್ಲದೆ ಪ್ರಸರಣವೇ ಇಲ್ಲದೆ ಪತ್ರಿಕೆಗಳೇ ಮುಚ್ಚುತ್ತಿರುವ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ ಅಂತೆಲ್ಲ ಕೇಳುವುದು ಹೊಟ್ಟೆ ಹಸಿದು […]

Back To Top