Day: October 11, 2020

ಸಹನಾರವರ ನ್ಯಾನೊ ಕಥೆಗಳು

ಸಹನಾರವರ ನ್ಯಾನೊ ಕಥೆಗಳು ಸಹನಾ ಪ್ರಸಾದ್ ಆಡಲಾಗದ ಮಾತು “ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು. ಸೊಪ್ಪಿನವಳು “ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ […]

ಇರುಳ ಹೆರಳು

ಪುಸ್ತಕ ಪರಿಚಯ ಮನ ಸೆಳೆವ ಇರುಳ ಹೆರಳು [11:15 am, 11/10/2020] YAKOLLY: ತಮ್ಮ‌ಮೊದಲ ಹನಿಗವನ ಸಂಕಲನ ಪಿರುತಿ ಹನಿಗಳು ಸಂಕಲನಕ್ಕೆ  ಅತ್ಯತ್ತಮ ಸಂಕಲನ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ನೀ ಶ್ರೀಶೈಲ ಅವರು ಕವಿಯಾಗಿ ಮಾತ್ರವಲ್ಲ,ಒಳ್ಳೆಯ ಗೆಳೆಯನಾಗಿ ಹೃದಯ ಗೆದ್ದವರು.ಅವರ ಭಾವದ ಪಲಕುಗಳನ್ನು ದಿನವೂ ಮುಖ ಪುಸ್ತಕದಲ್ಲಿ ಓದಿ ಮರುಳಾಗುತ್ತಿರುವವನು ನಾನು.ಹನಿಗವನ ಲೋಕದಲ್ಲಿ ತುಂಬ ಸುಂದರವಾದ ರಚನೆಗಳನ್ನೇ ಕೊಟ್ಟಿರುವ ಶ್ರೀಶೈಲ ಅವರ ಕವಿತೆಯ ತುಂಬ ತುಂಬಿದ ಪ್ರೀತಿಯ ಬೆಳಕನ್ನು ಬೊಗಸೆ ತುಂಬಿ ಹಿಡಿಯಲೂ ಆಗದೆ ನನ್ನ […]

ನಿರಾಕರಣೆ

ಕವಿತೆ ನಿರಾಕರಣೆ ಕಾವ್ಯ ಎಸ್. ನನ್ನ ಮರೆತ ಹೊನ್ನ ಮೆತ್ತ ಹೊತ್ತುನನ್ನ ತೊರೆದು ಯೋಚಿಸಿದಆ ಘಳಿಗೆಗಳ ಚಲನಗಳುಕಳಚುತ್ತಿವೆ, ಇಂದು-ನಾಳೆಗಳ ಅಂಗಿಯಯಾರ ಕತ್ತಲು ಯಾರ ಒಡಲ್ಲಲ್ಲಿಜಿನುಗಿ ಹಾವಾಗುತ್ತಿರುವುದೋಕಡಲ ತುಂಬೆಲ್ಲ ಬರುವ ನಿನ್ನ ನೆನಪಿನಆರಿದ ಮಲ್ಲಿಗೆಯ ಕೆಂಡಗಳುಎಷ್ಟು ಹೊತ್ತು ಸುಡಬಲ್ಲವು ನನ್ನಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲುಬೇಕ ಸಮಯದ ಎಲ್ಲೆಗಳುಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿಹರಿದು ಹೋಗಲಿಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನತೋಳಲ್ಲಿ […]

ಧಿಕ್ಕಾರ… ಧಿಕ್ಕಾರ…!!

ಕವಿತೆ ಧಿಕ್ಕಾರ… ಧಿಕ್ಕಾರ…!! ಡಾ. ಮಲ್ಲಿನಾಥ ಎಸ್. ತಳವಾರ ಭೋಗದ ವಸ್ತುವೆಂದು ಭಾವಿಸಿದ ಈ ಸಮಾಜಕ್ಕೊಂದು ಧಿಕ್ಕಾರಹೆರಿಗೆಯ ಯಂತ್ರವೆಂದು ಭಾವಿಸಿದ ಗಂಡುಕುಲಕ್ಕೊಂದು ಧಿಕ್ಕಾರ ನಯ ನಾಜೂಕಿನ ಬಲವಂತದ ಫೋಷಾಕು ತೊಡಿಸಿದರು ಹೆತ್ತವರುತಾಳ್ಮೆಯ ಅನಗತ್ಯ ಮಾಲೆ ಕೊರಳಿಗೆ ಹಾಕಿದರು ಬೆಳ್ಳಿ ಕೂದಲಿನವರುಬಿಟ್ಟು ಕೊಡುವುದರಲ್ಲಿಯೇ ತೃಪ್ತಿ ಪಡೆಯಬೇಕೆಂದರು ಬಂಧುಗಳುಗಂಡಿಗಿಲ್ಲದ ಮೌಲ್ಯ ನಮ್ಮ ಮೇಲೆ ಹೇರಿದ ಪುಸ್ತಕಗಳಿಗೊಂದು ಧಿಕ್ಕಾರ ಕಾಮದ ಕಂಗಳಲಿ ನುಂಗುವ ತೋಳಗಳಿವೆ ನಮ್ಮ ನೆರೆಹೊರೆಯಲ್ಲಿಮುಖವಾಡದಿ ಉಬ್ಬು-ತಗ್ಗುಗಳ ಕಂಡು ಜೊಲ್ಲು ಸುರಿಸುವ ನಮ್ಮವರಿದ್ದಾರೆಹಣ ಚೆಲ್ಲಿ ಕನಸುಗಳನ್ನು ದೋಚುವ ಧನಿಕರು ಇದ್ದಾರೆ […]

ಸಜ್ಜನರ ಸಂಗ ಲೇಸು ಕಂಡಯ್ಯಾ…!

ಲೇಖನ ಸಜ್ಜನರ ಸಂಗ ಲೇಸು ಕಂಡಯ್ಯಾ…! ಬಾಲಾಜಿ ಕುಂಬಾರ, ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನ ಪ್ರಮಥರಲ್ಲಿ ವೀರಗೊಲ್ಲಾಳ ಎನ್ನುವ ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣನಾಗಿದ್ದನು. ಈತನ ಮೂಲತಃ ಇಂದಿನ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ. ಈತನನ್ನು ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಕುರಿ ಕಾಯುವುದು ಈತನ ಕಾಯಕವಾಗಿತ್ತು.ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನ ಪಡೆದುಕೊಂಡು ಶರಣತತ್ವ ಪರಿಪಾಲಕನಾಗಿದ್ದನು.ತನ್ನ ವೃತ್ತಿ ಪರಿಭಾಷೆಯನ್ನು ಹಾಗೂ ತತ್ವಪರಿಭಾಷೆಯನ್ನು ಬಳಸಿಕೊಂಡು ರಚಿಸಿರುವ ಬಹುಚಿಂತನೆಯ 10 ವಚನಗಳು ಪ್ರಸ್ತುತವಾಗಿ ಲಭ್ಯವಾಗಿವೆ. […]

ಸ್ವಗತ

ಕವಿತೆ ಸ್ವಗತ ಮಮತಾ ಶಂಕರ್ ದೂರದಲ್ಲಿ ನಾನು ನೀನುಒಂದಾಗಿ ಕಂಡರೂ ಒಂದಾಗದ ನಿಜದೂರದ ಕಣ್ಗಳಿಗೆ ಸುಳ್ಳೆಲ್ಲವೂ ಸತ್ಯವೇ….ನೀನು ಮೇಲೆ ತನ್ನ ಪಾಡಿಗೆ ತಾನಿರುವ ಗಗನಸೂರ್ಯ ಮೋಹಿತೆ ಭೂಮಿಗೆ ತನ್ನ ಕಕ್ಷೆಯಲ್ಲೇ ಯಾನ ನೀನು ಒಮ್ಮೊಮ್ಮೆ ಉರಿಯೆದ್ದುಸುರಿಸುವೆ ಕೆಂಡ ಮೈಮನಗಳಿಗೆ ;ನಾನೋ ಹಪಹಪಿಸುವೆ ಒಂದೆರಡುತಂಪನಿಗಳಿಗೆಹುಚ್ಚೆದ್ದು ಮಳೆ ಸುರಿಸುವೆ ಅದೆಒಲವೆಂದು ಬಾನೆದೆಯ ಸೀಳಿ ;ಕಡಲುಕ್ಕಿಸಿ ನದಿ ಸೊಕ್ಕಿಸಿ ತಳಮಳಿಸುವೆಬಿಕ್ಕಳಿಸುತ ನಾನಿಲ್ಲಿ…… ನಿನ್ನಿಂದ ಅದೆಷ್ಟು ಬಾರಿ ಬಿರುಮಳೆಗೆಬಿರುಗಾಳಿಗೆ ಬಿರುಬಿಸಿಲಿಗೆ ತುತ್ತಾದರೂ ನಾನುನಿನಗುಂಟೆ ಈ ಒಡಲೊಳಗಿಂದಕಣಕಣವು ನೋವಾಗಿ ಚಿಗುರಿ ಮರಹೂ ಕಾಯಿ ಹಣ್ಣಾಗುವ […]

ಚಿಂದಿ ಆಯುವ ಕುಡಿಗಳು

ಕವಿತೆ ಚಿಂದಿ ಆಯುವ ಕುಡಿಗಳು ನೂತನಾ ದೋಶೆಟ್ಟಿ ಆಗಸವ ಬೇಧಿಸುವ ಸೂರುಚಂದ್ರನಿಗೂ ಗಾಬರಿಪ್ರೇಯಸಿಯ ಮೈಮೇಲೆಪ್ಲ್ಯಾಸ್ಟಿಕ್ಕಿನ ಗಾಯಬೆಳದಿಂಗಳೂ ಆರಿಸದ ಬೇಗೆ ಓಝೋನಿನ ತೇಪೆಯಲ್ಲಿಇಣುಕುವ ಸೂರ್ಯಸತಿಯ ಜಾಲಾಡುವ ಅವನುಸಹಿಸಲಾಗದ ಧಗೆ ಮತ್ಸರವೇಕೆ?ಅವಳ ಪ್ರಶ್ನೆಒಡಲ ಮಮತೆಯ ಕುಡಿಗಳವುಎದೆ ಭಾರ ಕಳೆಯುವವು ನೀರ ಕಾಣದ ದೇಹಹಣಿಗೆ ಸೋಕದ ತಲೆಸಿಗುವ ರೂಪಾಯಿಗೆಏನೆಲ್ಲ ಬವಣೆ ಸೈರಣೆ! ತಾಯ ಮಮತೆಗೆಪ್ರೇಮಿಗಳ ಹನಿಗಣ್ಣುಹೆತ್ತೊಡಲ ಉರಿಗೆಗೋಳಿಟ್ಟ ರಾತ್ರಿಗಳುಹರಸಿದವು ಕೈಯೆತ್ತಿಚಿಂದಿ ಆಯುವ ಕುಡಿಗಳ ಇರಲೆಂಟು ಜನುಮಎಲೆ ತುಂಬಿ ಉಣಲಿಕನಸುಗಳ ನಿದ್ರಿಸಲಿನಿನ್ನ ಸ್ವಚ್ಛ ಮಡಿಲಲ್ಲಿ **********************

ಅಂಕಣ ಬರಹ ಕಬ್ಬಿಗರ ಅಬ್ಬಿ   ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!.  ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ […]

Back To Top