ಮತ್ತೊಮ್ಮೆ ಬೆಳಕು
ಕವಿತೆ ಮತ್ತೊಮ್ಮೆ ಬೆಳಕು ಹುಳಿಯಾರ್ ಷಬ್ಬೀರ್ ಹುಳಿಯಾರ್ ಷಬ್ಬೀರ್ ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿಗುಡಿಸಿ ಹಾಕಿ ಸ್ವಚ್ಛ ಮಾಡಿ,ಜಯಭೇರಿ ಹೊಡೆದಿತ್ತುನಮ್ಮ ಗಾಂಧಿಗಿರಿ. ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟವಿಶ್ವಧಾಮ…..?ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ…. ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರಪ್ರಜೆ […]
ಪಟ್ಟದರಸಿಯೊಂದಿಗೆ ಪಟ್ಟಾಂಗ
ಕವಿತೆ ಪಟ್ಟದರಸಿಯೊಂದಿಗೆ ಪಟ್ಟಾಂಗ ಪ್ರೇಮಶೇಖರ ಪಟ್ಟದಕಲ್ಲಿನ ಪಟ್ಟದರಾಣಿಯೇ ಇಷ್ಟದ ಒಡವೆಯ ಕೊಡಿಸುವೆ ಬಾ. ಕಷ್ಟವೇ ಆದರೂ, ನಿದ್ರೆಯೇ ಹೊದರೂ ತರುವೆನು ಸರವನು ನಿನಗೊಂದ. ಮೈಸೂರಿನ ಶೂರನೇ, ಪ್ರಾಣಕಾಂತನೆ ಒಡವೆಯು ನನಗೆ ಬೇಡಪ್ಪ. ಮಳೆಗಾಲಕೆ ಮೊದಲೇ ಸೋರುವ ಸೂರನು ಚಂದಕೆ ನೀನು ಹೊದಿಸಪ್ಪ. ಸೂರಿನ ಕೆಲಸವ ನಂತರ ಮಾಡುವೆ, ಮೊದಲಿಗೆ ನಿನ್ನ ಕೊರಳನು ತುಂಬುವೆ ಕಿವಿಯಲಿ ಓಲೆಗಳೆರಡನು ಅಂಟಿಸುವೆ, ಜುಮಕಿಗಳೆರಡನು ತಂದೂ ಕೂಡಿಸುವೆ. ಓಲೆಯು ಬೇಡ, ಜುಮಕಿಯೂ ಬೇಡ, ಒಡವೆಯ ಗೊಡವೆಯು ಬೇಡವೇಬೇಡ. ಮಳೆಗೇ ಮೊದಲೇ ಕಣಜವ ತುಂಬಪ್ಪ, […]
ಮೌನ ಬೆಳದಿಂಗಳಂತೆ ನಗುತ್ತದೆ…
ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ […]
ಅದೆ ಕೂಗು
ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************
ಸಣ್ಣ ತಪ್ಪು
ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ […]