Day: October 4, 2020

ಹುಯಿಲಗೋಳ ನಾರಾಯಣರಾಯ..!

ಲೇಖನ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ವಿನ ಹುಯಿಲಗೋಳ ನಾರಾಯಣರಾಯ..! ಇಂದು ಹುಯಿಲಗೋಳ ನಾರಾಯಣರಾಯರ ಜನ್ಮದಿನ. ಆ ನೆನಪಲ್ಲಿ ಈ ಬರಹ… ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯನ್ನು ರಚಿಸಿದವರು. ೧೮೮೪ ಅಕ್ಟೋಬರ್ ೪ ರಂದು ಗದಗದಲ್ಲಿ ಜನಿಸಿದವರು. ಇವರ ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ […]

ಕಲಿಕೆ ಕಸಿದ ಕರೋನ

ಕವಿತೆ ಕಲಿಕೆ ಕಸಿದ ಕರೋನ ಜಿ.ಎಸ್.ಹೆಗಡೆ ಶಾಲೆಯ ಅಂಗಳದಿ ಬೆಳೆದಿವೆ ಈಗಮುಳ್ಳಿನ ಜೊತೆಗೆ ಕಳ್ಳಿಗಳುಕಲಿಕಾಕೋಣೆಯ ಚಪ್ಪರ ತುಂಬಿದೆಜೇಡರ ಬಲೆಯೊಳು ಕೀಟಗಳುಹಾಜರಿ ವಹಿಗೆ ಮೆತ್ತುತ್ತಿದೆ ಈಗಮಣಗಟ್ಟಲೆ ಧೂಳುಅಡುಗೆ ಮನೆಯಲಿ ಓಡಾಡುತಿವೆಇಲಿ ಜಿರಲೆಗಳು ಜೋರು ಪರಿಮಳವಾದ ಪೆನ್ಸಿಲ್ ರಬ್ಬರ್ಬ್ಯಾಗೊಳು ಹಾಗೆ ಇವೆಹೊಸ ಹೊದಿಕೆಯನು ಧರಿಸಿಹ ಪುಸ್ತಕತೆರೆಯಲು ಕಾಯುತಿವೆಅಪ್ಪನು ಕೊಡಿಸಿಹ ಬಣ್ಣದ ಛತ್ರಿಮಳೆಯೊಳು ಆಡು ಎನ್ನುತಿದೆಮಾವನು ಕೊಡಿಸಿಹ ಹೊಸ ಬಟ್ಟೆಯುಹುಟ್ಟುಹಬ್ಬವನು ನೆನಪಿಸಿವೆ ಶಾಲೆಗೆ ಹೋದರೆ ಗುರುಗಳು ಎಂದರು‘ಬರಬೇಡವೋ ನೀನು ಶಾಲೆ‌ ಕಡೆ,ನೀನಿದ್ದಲ್ಲಿಗೆ ನಾನೇ ಬರುವೆನುನೀಡಿರಿ ಗಮನವ ವಿದ್ಯೆಯೆಡೆ’ಊರಿನ ಗುಡಿಗೋಪುರ ಅಂಗಣದಲ್ಲಿ‌ಮಕ್ಕಳ ಮೊಗಕೆ […]

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ

ಕವಿತೆ ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ ಪ್ರಜ್ಞಾ ಮತ್ತಿಹಳ್ಳಿ ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವನುಅರ್ಧ ಮುಚ್ಚಿದರೂಮಾಸ್ಕ್ ತೆಗೆಯಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ ರಘುಪತಿಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆಆದರೀ ಸಲಏನೋ ಕಲಮಲ ಕಳೆದ ವಾರ ನಿನ್ನ ಆತ್ಮಕತೆ ಓದಿಎಲ್ಲರ ನೋವನು ಬಲ್ಲವನೊಬ್ಬನಹುಡುಕುತ್ತ ಹೊರಟಿದ್ದೆನಡುರಾತ್ರಿ ಕಂದೀಲು ಹಚ್ಚಿದದೋಣಿಗಳು ತುಯ್ಯುವ ಅಲೆಯಲ್ಲಿನಿಧಾನಕ್ಕೆ ಹೊರಟಿದ್ದವು.ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತಹುಟ್ಟು ಹಾಕುವ ಬೆಸ್ತರು ಎಂದೂಮಲಗದ ಮೀನುಗಳ ಹಂಬಲಿಸುತಿದ್ದರುಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವಹೆಂಗಸರು ಕೂಳಿಲ್ಲದೇ […]

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಗಾಂಧಿ ನಾಡಿನಲಿ ಮಾತುಗಳು ಮೌನ ಅರ್ಥ ಕಳೆದುಕೊಂಡಿವೆ |ಗಾಂಧಿ ನಾಡಿನಲಿ ಕನಸುಗಳು ಹೊಸಕಿ ಬಿಸಾಕಿ ಹಾಕಲಾಗುತ್ತಿವೆ || ಬಾಪೂಜಿ ದೇಶದಲಿ ನಾಲಿಗೆ ಹರಿತವಾದರೆ ಕತ್ತರಿಸಲಾಗುತ್ತದೆ |ಇಲ್ಲಿ ಎಲ್ಲವೂ ಭಕ್ತಿಯ ಪರಾಕಾಷ್ಠೆ ಉಧೋಒಪ್ಪಿತ ನಿರ್ಧಾರಗಳಿವೆ || ಮಲಗಿದವರ ಎಬ್ಬಿಸಬಹುದು ಸತ್ತಂತೆ ನಟಿಸುವ ದುರುಳರು ತುಂಬಿದ್ದಾರೆ |ಕಟ್ಟೆ ಪಂಚಾಯತಿ ನ್ಯಾಯ ತೀರ್ಮಾನ ಕಚ್ಚೆ ಹರುಕರೆ ತುಂಬಿಕೊಂಡಿವೆ || ಉಳ್ಳವರ ಕಾಯ್ದೆಗೆ ಹೆಣ್ಣು ಭೋಗ ವಸ್ತು ಆಕೆಯ ರಕ್ತವೇ ಗುಲಾಲು |ರಾತ್ರಿಯೂ ಕೆಲಸಗಳು ನಡೆಯುತ್ತಿವೆ ಸತ್ತ […]

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು […]

ಅಬಲೆಯ ಹಂಬಲ

ಕವಿತೆ ಅಬಲೆಯ ಹಂಬಲ ಅಶೋಕ ಬಾಬು ಟೇಕಲ್ ರಾಮನ ನೆಲವಾದರೂ ಅಷ್ಟೇರಹೀಮನ ನೆಲವಾದರೂ ಅಷ್ಟೇಕಾಮುಕನೆಂಬ ಕೆಂಡದಕಣ್ಣುಗಳ ಅಮಲಿಗರಿಗೆಅಬಲೆಯರ ಹಸಿ ಬಿಸಿ ರಕ್ತಹೀರ ಬೇಕಷ್ಟೇ… ಮನಿಶಾ, ಆಸೀಫಾ ಆದರೇನುನಿರ್ಭಯಾ ರಕ್ಷಿತ, ದಿಶಾಆದರೂ ಸರಿಯೇ ಇವರಿಗೆ ನಡು ರಸ್ತೆಯಲಿಹಾಡ ಹಗಲೇ ಹದ್ದು ಮೀರಿದಗೂಳಿಗಳಂತೆ ಬಂದೆರಗಿಹಾಲುಗಲ್ಲ ಹಸುಳೆಯಎದೆಯ ನಾಯಿಯಂತೆನೆಕ್ಕಿ ಬೆತ್ತಲಾಗಿಸಿಕಾಮ ತೃಷೆ ಮುಗಿಸಿಕಣ್ಣಿಲ್ಲದ ಕಾನೂನಿನಸಾಕ್ಷಿಯ ಕಟಕಟೆ ಒಳಗೂಕಥೆ ಹನಿಸಿ ಕಾಂಚಾಣದಬಿಸಿ ಮುಟ್ಟಿಸಿ ಕ್ಷಮಾದಾನದ ಅರ್ಜಿಯಲಿನಿರ್ದೋಷಿ ಪಟ್ಟ..! ಇನ್ನೆಷ್ಟು ದಿನ ಧರ್ಮಮತ ಪಂಥಗಳ ಕಡೆಬೊಟ್ಟು ಮಾಡಿ ಬೀಗುವಿರಿರಾಮ ರಹೀಮ‌ ಜೀಸಸ್ಏನಾದರೂ ಹೇಳಿಯಾರೆಅತ್ಯಾಚಾರ ಎಸಗಿರೆಂದು […]

ಅನುವಾದ ಸಂಗಾತಿ

ಛೇ.. ಕನ್ನಡ ಮೂಲ:ದೀಪ್ತಿ ಭದ್ರಾವತಿ. ಇಂಗ್ಲೀಷಿಗೆ:ಸಮತಾ ಆರ್ ಛೇ ಪಕ್ಕದ ಕೋಣೆಯಲ್ಲಿಯೇ ಇದ್ದ ಬಾಡಿಗೆದಾರನೊಬ್ಬಹೇಳದೆ ಕೇಳದೆ ರಾತ್ರಿಹೊರಟು ಹೋಗಿದ್ದಾನೆ ನಾಪತ್ತೆಯಾಗಿದ್ದಾನೆನನ್ನ ಪುಟ್ಟ ಮಗಳಜೀನ್ಸ್ ಪ್ಯಾಂಟನ್ನು ಹರವುವಾಗಲೆಲ್ಲಕೆಂಪು ಕಣ್ಣಿನಲಿ ನೋಡಿ“ಸರಿಯಿಲ್ಲ ಸರಿಯಿಲ್ಲ”ಎನ್ನುತ್ತ ದಢಾರನೆ ಬಾಗಿಲು ಹಾಕಿಶತಪಥ ತಿರುಗುತ್ತಿದ್ದವ ಹಗಲಿರುಳೂ ನಮ್ಮ ಮನೆಯ ಕಡೆಯೇ ದಿಟ್ಟಿಸುತ್ತಬಾಗಿಲಲ್ಲಿ ಕೂತುಅವನ ಸಂಕಟ ನೋಡಲಾಗದೆ” ನಿನಗ್ಯಾಕೊ ನಮ್ಮಗಳ ಉಸಾಬರಿ”ಎಂದಿದ್ದೆದನಿ ಜೋರಾಯಿತೋ ಏನೋಎದೆಯೊಳಗೆ ಅದೆಷ್ಡು ಮಾತುಗಳಿದ್ದವೊಒಂದನ್ನು ಹೇಳಿಕೊಳ್ಳದೆಮನೆಯ ಗೋಡೆಯ ತುಂಬೆಲ್ಲಮಸಿಯಲ್ಲಿ ಗೀಚಿ ಹೋಗಿದ್ದಾನೆ ಅದೆಷ್ಟು ಕೋಪವ ಎದೆಯ ಪುಪ್ಪಸದಲಿಅಡಗಿಸಿಕೊಂಡಿದ್ದನೊಮನೆಯ ಹೆಂಚು ಕಿಟಕಿಬಾಗಿಲುಎಲ್ಲವನ್ನು ಮುರಿದು ಹಾಕಿದ್ದಾನೆಒತ್ತಿ ಹೋಗಿದ್ದಾನೆಸಾಕಷ್ಡು […]

ಅಂಕಣ ಬರಹ ಕಬ್ಬಿಗರ ಅಬ್ಬಿ  ರಾಗದ ಬೆನ್ನೇರಿ ಬಂತು ಭಾವನಾ ವಿಲಾಸ ಕರ್ನಾಟಕ ಸಂಗೀತದಲ್ಲಿ’ ಕದನ ಕುತೂಹಲ’ ಅನ್ನೋ ರಾಗ ಇದೆ. ಈ ರಾಗದ ಸ್ವರಗಳನ್ನು ಸಾಕಷ್ಟು ವೇಗವಾಗಿ ಹಾಡುತ್ತಾರೆ. ಸಮುದ್ರಮಥನದ ಸಮಯದಲ್ಲಿ ಆಕಡೆ ರಾಕ್ಷಸರು,ಈ ಕಡೆ ದೇವತೆಗಳು ಅಮೃತಕ್ಕಾಗಿ ಕಡಲನ್ನು ಕಡೆಯುವಾಗಲೂ, ಎರಡೂ ವಿರುದ್ಧ ಪಂಗಡಗಳ ನಡುವೆ ಕದನವೇ. ಮನಸ್ಸೊಳಗೂ ಅಷ್ಟೇ, ಯಾವುದೇ ಹೊಸ ಆವಿಷ್ಕಾರದ ಬೆಣ್ಣೆ ಮೂಡುವುದು, ವಿರುದ್ಧ ಚಿಂತನೆಗಳ ಮಂಥನದಿಂದಲೇ. ಈ ರಾಗವನ್ನು ನೀವು ಆಲಿಸುವಾಗ ಒಂದು ಮಂಥನದ ಅನುಭವ ಆಗುತ್ತೆ. ರಾಗ […]

Back To Top