Day: October 2, 2020

ತಲೆದಿಂಬಿನೊಳಗೆ ಅವಿತ ನಾ

ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ […]

ಮರ್ದಿನಿ ಆಗಲಿಲ್ಲ

ಕವಿತೆ ಮರ್ದಿನಿ ಆಗಲಿಲ್ಲ ಡಾ.ಶಿವಕುಮಾರ್ ಮಾಲಿಪಾಟೀಲ ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ ನಿನ್ನ ಗರ್ಭದಲ್ಲಿ ಹುಟ್ಟಿದರೂನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣುಕಾಳಿಯಾಗಲಿಲ್ಲ ವರದಕ್ಷಿಣೆಗಾಗಿ ಅವಮಾನಿಸಿಹಿಂಸೆ ಕೊಟ್ಟುಕೊಲೆ ಮಾಡುವಾಗ ಹೆಣ್ಣುದುರ್ಗೆ ಆಗಲಿಲ್ಲ ಹೆಣ್ಣು ಬೇಡವೆಂದುಭ್ರೂಣವನ್ನು ಗರ್ಭದಲ್ಲೇಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ ಮಹಾ ಗ್ರಂಥಗಳಲ್ಲಿ ಮರುಳಾಗಿಕಲೆ ,ಶಿಲೆಗಳಲ್ಲಿ ಗೊಂಬೆಯಾಗಿಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆಅರ್ಧ ನಾರೇಶ್ವರಿ…ಆಗಿದ್ದು ಮಾತ್ರ ದೇವದಾಸಿ. ಕಾಡು ಮೇಡುಗಳಲ್ಲಿಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿಭೂ ತಾಯಿ ಬಿರುಕೊಡೆಯಲಿಲ್ಲಗಂಗೆ,ತುಂಗೆ,ಕಾವೇರಿ,ಗೋದಾವರಿ ಎಲ್ಲಾ ಹೆಣ್ಣುಹೆಸರಿನ ನದಿಗಳು ಬರಿದಾಗಲಿಲ್ಲ ಸಾಕ್ಷಿಗಳಿದ್ದರೂಅಪರಾಧಿಗಳಿಗೆ […]

‘ಜೈ ಜವಾನ್, ಜೈ ಕಿಸಾನ್’

ಲೇಖನ ‘ಜೈ ಜವಾನ್, ಜೈ ಕಿಸಾನ್’ ಜಯಘೋಷದ ಲಾಲ್ ಬಹಾದ್ದೂರ್ ಶಾಸ್ತ್ರಿ ಇಂದು ಮಹಾತ್ಮ ಗಾಂಧಿ ಹುಟ್ಟಿದ ದಿನವೂ ಹೌದು. ಹಾಗೆಯೇ ಲಾಲ್ ಬಹಾದ್ದೂರ್ ಶಾಸ್ತ್ರೀಯ ಹುಟ್ಟು ಹಬ್ಬವೂ ಹೌದು. ಗಾಂಧಿ ಸ್ಮರೀಸಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡದೇ ಬಿಟ್ಟರೆ ಅದು ಮಹಾ ತಪ್ಪಾಗುತ್ತದೆ. ಇಬ್ಬರೂ ರಾಷ್ಟ್ರದ ಹಿತ ಚಿಂತಕರು, ಆ ಕಾರಣಕ್ಕೆ ಈ ಇಬ್ಬರ ಒಂದೇ ದಿನದ ಹುಟ್ಟು ಹಬ್ಬದ ಸ್ಮರಣೆಯನ್ನು ಮಾಡೋಣ… ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ […]

ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ :

ಲೇಖನ ಮಹಾತ್ಮಾಗಾಂಧೀಜಿಯವರ  ಚಿಂತನೆಗಳ ಪ್ರಸ್ತುತತೆ : “ಹಸಿದ ಹೊಟ್ಟೆಯವನಿಗೆ ಯಾವ ಉಪದೇಶವೂ ಮುಖ್ಯವಲ್ಲ” ಪಾಪವನ್ನು ದ್ವೇಷಿಸಿ ಪಾಪಿಯನ್ನಲ್ಲ” ಇವು ನಮ್ಮ ನೆಚ್ಚಿನ ಬಾಪೂಜಿಯವರ ನುಡಿಮುತ್ತುಗಳು.”ಅಯ್ಯಾ ನೀನೇನು ದೇವರಲ್ಲ, ಆದರೆ ದೇವರನ್ನು ಬಲವಾಗಿ ನಂಬಿದವನು, ದಂತವಿಲ್ಲದಿದ್ದರೂ ಬದುಕಿದ್ದ ಕಾಲದಲ್ಲೇ ದಂತಕಥೆಯಾದವನು” ಇವು  ಮಹಾತ್ಮಾ ಗಾಂಧೀಜಿಯವರ ಕುರಿತು ಕವಿ ಸಿ.ಪಿ.ಕೆ.ತಮ್ಮ ವಂದನೆ ಕವಿತೆಯಲ್ಲಿ ಮನೋಜ್ಞವಾಗಿ ಮೂಡಿಸಿದ ಸಾಲುಗಳು. ಮೋಹನದಾಸ ಕರಮಚಂದ ಗಾಂಧಿ ಎಂಬ ಬಾಲಕ ಯಾರಿಗೂ ನಿಲುಕದ ಅತಿಮಾನವನೇನೂ ಆಗಿರಲಿಲ್ಲ. ಎಲ್ಲರಂತೆಯೇ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ಮಗು. ಅವರ […]

ಮನಿಷಾ

ಕವಿತೆ ಮನಿಷಾ ವೀಣಾ ನಿರಂಜನ್ ಮೊದಲೇ ಕುರುಡಿಯಾಗಿದ್ದನ್ಯಾಯ ದೇವತೆಯಮೂಗಿಯನ್ನಾಗಿಸಿದರು ಮಗಳೇನಿನ್ನ ನಾಲಿಗೆ ಕತ್ತರಿಸಿಅವರ ಗಂಡಸುತನಕ್ಕೆ ಧಿಕ್ಕಾರವಿರಲಿ ಅವರ ಬೆಚ್ಚನೆಯ ಮನೆಗಳಲ್ಲಿಬಚ್ಚಿಟ್ಟ ನಿಧಿಯಂತೆ ನೀನೂ ಕೂಡಅರಿತಿದ್ದರೆ ಸಾಕಿತ್ತು ಅವರುಹತ್ತೂ ಕಡೆ ಚಾಚಿದ ವಿಷ ಸರ್ಪಗಳಹೆಡೆ ಮುರಿದು ಕಟ್ಟುತ್ತಿದ್ದರು ಅರಿಯದಾದರೆ ಅವರುನಿನ್ನೊಳಗಿನ ಕುಡಿಯನ್ನುಹೊರಲಾರದಷ್ಟು ಪಾಪದಮೂಟೆ ಹೊತ್ತು ನಡೆದರುಸಾವೂ ಕೂಡ ಸಹಜವಾಗಿಸುಳಿಯಲಾರದಿನ್ನು ಅವರ ಬಳಿ ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆನ್ಯಾಯ ದೇವತೆನಿನ್ನ ನೆತ್ತರ ಬಿಸಿಯ ಸೋಕಿಉರಿಯುತ್ತಿದ್ದಾಳೆ ನಖಶಿಖಾಂತಸತ್ಯದ ನಾಲಿಗೆಯು ನೇತಾಡುತ್ತಿದೆನಿನ್ನ ನಾಲಿಗೆಯ ಹಾಗೇ ತೀರ್ಪು ಏನಾದರೇನು ಮಗಳೇನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇಬೇಡ […]

ಹೊತ್ತು ಬಂದಿದೆ

ಕವಿತೆ ಹೊತ್ತು ಬಂದಿದೆ ಗಾಂಧಿ ನೀನುದಿಸಿದನಾಡಿನಲೀ… ತೊನೆವ ತರುಗಳಕತ್ತು ಹಿಚುಕಿಜಲದ ಕಣ್ಣಿಗಿರಿವ ಹೊತ್ತು ಬಂದಿದೆ ಹರಿವರಿವ ನದಿಯದಿಕ್ಕು ದಿವಾಳಿಯಾಗಿಸಿಬರಿದಾಗಿಸುವ ಹೊತ್ತು ಬಂದಿದೆ ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ ಕಿವಿಗಡಚಿಕ್ಕುವಬೈರಿಗೆಗಳನ್ನಿಕ್ಕಿನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ ಹೊತ್ತಿಗೊತ್ತಿಗೆ ಉರಿವ ದಿನಕರನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ ಚಂದಿರನ ಅಂಗಳದಲ್ಲಿಳಿವಮಂಗಳನ ಕೇರಿಯಲ್ಲಿಸುತ್ತುವ ಹೊತ್ತು ಬಂದರೂ… ವಿಜ್ಞಾನ ಜ್ಞಾನವೋ,ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ […]

ಫಿವಟ್ ಕವಿತೆ…

ಕವಿತೆ ಫಿವಟ್ ಕವಿತೆ…. ಹುಳಿಯಾರ್ ಷಬ್ಬೀರ್ 01 ಬರೆಯಲೆಂದುಕುಳಿತಾಗಅವಳನ್ನು ಬರೆದೆನನ್ನನ್ನು ನಾನೇಮರೆತೆ….! 02 ಕಣ್ಣಲ್ಲಿ ಕದ್ದುಮನಸ್ಸಲ್ಲಿಇಳಿಯುವ ಮುನ್ನಗಂಟಲಿಗೆಇಳಿಸಿದ್ದೆನೀ ಕೊಟ್ಟದೊಡ್ಡ ವರ…! 03 ಗುಂಡು ಅವಳುಇಬ್ಬರೂ ನಶೆಯೇಗುಂಡು ತಾತ್ಕಾಲಿಕ ನಶೆಅವಳು ನಶೆಯಪರಾಕಾಷ್ಠೆ….! 04 ಮನಸ್ಸಿಗೆನೈವೇದ್ಯ ಎಣ್ಣೆಯಲ್ಲಿಆಗಬೇಕಂತೆನೋವುನಿರಾಳವಾಗಲುಲೋಟ ಚಿಯರ್ಸ್ಎನ್ನಲು…! 05 ಕುಡಿದಷ್ಟುಮಾತು ಜಾಸ್ತಿ ಆಯಿತುಪದೇ ಪದೇಅವಳ ನೆನಪುಆಯಿತು…! **************************

ಪಾತ್ರ

ಚಂದ್ರಿಕಾ ನಾಗರಾಜ್ ಬರೆಯುತ್ತಾರೆ–
ಹುಡುಕಬೇಡಿ
ಹಾಗೊಂದು ವೇಳೆ ಸಿಕ್ಕರೆ
ನಿಮ್ಮೊಳಗೆ ಹಿಡಿದಿಟ್ಟುಕೊಳ್ಳಿ

ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೈನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ

Back To Top