Day: October 15, 2020

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

ಸಾಧ್ಯವಾದರೆ ಕಲಿ

ಕವಿತೆ ಸಾಧ್ಯವಾದರೆ ಕಲಿ ಪ್ರತಿಮಾ ಕೋಮಾರ ಈರಾಪುರ ಹೌದು ನಾನು ಬರೀ ಇರುವೆನನ್ನಾಕಾರ,ಗಾತ್ರ,ಬಣ್ಣನೋಡಿನನ್ನೆಳೆಯದಿರು ಮನವೆನನ್ನ ಹೊಸಕದಿರುಸಾಧ್ಯವಾದರೆ ಕಲಿನನ್ನ ಸಂಘ ಜೀವನತುಸುವಾದರೂಹಂಚಿ ತಿನ್ನುವ ಉದಾರತೆ ನೀ ಕೊಡುವ ಪ್ರತೀತುತ್ತಿಗೂ ನಾನು ಋಣಿನಿನ್ನ ಮನೆ ಮೂಲೆಯೇಎನ್ನ ಸಾಮ್ರಾಜ್ಯನೀ ತೋರುವ ಹನಿ ಪ್ರೀತಿಗೆದುಪ್ಪುಟ್ಟು ಸೇರಿಸಿಕೊಡುವೆ ಪ್ರೀತಿಸಾಧ್ಯವಾದರೆ ಕಲಿಉಂಡ ಮನೆಗೆ ದ್ರೋಹ ಬಗೆಯದನನ್ನ ಪ್ರಾಮಾಣಿಕತೆ ನೀ ಬತ್ತಿಯಿಟ್ಟು ತೈಲವೆರೆದುಉರಿಸುವ ಹಣತೆ ನಾನುನಾ ಕತ್ತಲೆಯಲ್ಲುಳಿದರೂನೀಡುವೆ ನಿನಗೆ ಬರೀಬೆಳಕುಸಾಧ್ಯವಾದರೆ ಕಲಿಬೆಳಕ ನೀಡಿದವರಬದುಕ ಬೆಳಕಾಗಿಸಲುಇಲ್ಲ ಆರಿಸುವವಿಶ್ವಾಸ ದ್ರೋಹವಾದರೂಮಾಡದಿರು ಹಣ್ಣು ಹೇಗಿದ್ದರೂಬರೀ ಸವಿಯನ್ನಷ್ಟೇಕುಕ್ಕಿ ಹೀರಿಖುಷಿಪಡುವುದು ಹಕ್ಕಿಸಾಧ್ಯವಾದರೆ ಕಲಿಒಂದು ಕೆಟ್ಟದ್ದನ್ನೇಕೆದಕಿಕೂಗಿ […]

ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ

ಅನುಭವ ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ      ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ  ಬಂಧುಗಳ  ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್‌! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ.  ಪಿಜಿ ಅಂದರೆ  ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ  ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ […]

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ […]

ಹೆಣ್ಣು

ಕಥೆ ಹೆಣ್ಣು ಸಹನಾ ಪ್ರಸಾದ್ ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು […]

ಹೂ ಬೆಳಗು

ಕವಿತೆ ಹೂ ಬೆಳಗು ಫಾಲ್ಗುಣ ಗೌಡ ಅಚವೆ ಸರಿಯುವ ಕತ್ತಲನ್ನು ಮರದಎಲೆಗಳ ನಡುವೆ ಕುಳಿತ ಹಕ್ಕಿಗಳುತದೇಕ ಚಿತ್ತದಿಂದ ನೋಡುತ್ತಿವೆ ಆಗಷ್ಟೇ ಕಣ್ಣು ಬಿಟ್ಟ ನಸುಕುದೊಸೆ ಹೊಯ್ಯಲುಬೆಂಕಿ ಒಟ್ಟುತ್ತಿದೆ ಹೊಂಗನಸ ನೆನೆದುಒಂದೇ ಸವನೆ ಮುಸುಕುವ ಮಂಜುಮರದ ಎಲೆಗಳ ತೋಯಿಸಿಕಚಗುಳಿಯಿಡುತ್ತಿದೆ ಆಗತಾನೇ ಹೊಳೆ ಸಾಲಿನಲ್ಲಿಮುಖ ತೊಳೆದುಕೊಂಡ ಮೋಡಗಳ ಕೆನ್ನೆಅರಳುವ ಎಳೆಬಿಸಿಲಿಗೆಕೆಂಪಾಗುಗುತ್ತಿದೆ ದಾಸಾಳದ ಹೂಗಳುಹೂ ಕೊಯ್ಯುವ ಪುಟ್ಟಿಯಪುಟಾಣಿ ಕೈಯ ಮುದ್ದು ಮಾಡುತ್ತಿವೆ ತಡವಾಗಿ ಎದ್ದ ಮುತ್ತುಮಲ್ಲಿಗೆಹೂಗಳು ಮುಖಕ್ಕೆ ಇಬ್ಬನಿಯೆರಚಿನಿದ್ದೆಗಣ್ಣುಗಳನ್ನು ತೊಳೆಯುತ್ತಿವೆ ಕಣ್ಣು ತೆರೆದೇ ಸಣ್ಣ ನಿದ್ದೆಗೆ ಜಾರಿದಅಬ್ಬಲಿ ಹೂಗಳನ್ನುಬೀಸಿ ಬಂದ ತಂಗಾಳಿ […]

ಅಂಕಣ ಬರಹ ಜ್ಞಾನವೆಂಬ ತಿಜೋರಿಯ ಕೀಲಿಕೈ… ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ  ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ […]

ಅಂಕಣ ಬರಹ ಹೊಸ ದನಿ ಹೊಸ ಬನಿ – ೧೦. ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ ಚಂ ಸು ಕವಿತೆಗಳು ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ.  ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ […]

Back To Top