Day: October 22, 2020

ಬದುಕಲಿ ಅವಳು

ಕವಿತೆ ಬದುಕಲಿ ಅವಳು ತಿಲಕ ನಾಗರಾಜ್ ಬಿಟ್ಟು ಬಿಡಿ ಅವಳನುಅವಳ ಪಾಡಿಗೆಬದುಕಲಿ ಅವಳು…. ನಿಮ್ಮ ನಿರ್ಧಾರಗಳೇಸುಟ್ಟಿರುವಾಗಅವಳ ಬದುಕಅಳಿದುಳಿದವುಗಳನೇಜೋಡಿಸಿ ಮುನ್ನಡೆಯಲಿ ಬಿಡಿ ಕಣ್ಮುಂದೆ ಕುಣಿದುಅಣಕಿಸುತಿರುವಾಗ ಅವಳುಕಂಡ ಕನಸುಗಳುಈಡೇರದ ಆಸೆಗಳು ಚಾಟಿಯೇಟಿನಂತೆ ಮೈಮನದ ತುಂಬೆಲ್ಲಾ ನೋವಬರೆಗಳ ಎಳೆಯುತಿರಲುಕೆನ್ನೆಯ ತುಂಬೆಲ್ಲಾ..ಕಂಬನಿಯ ಬಿಂದುಗಳು ಬಿಟ್ಟುಬಿಡಿ ಅವಳನುಅವಳ ಪಾಡಿಗೆಆಗಲೇ ದಾಟಿತಲ್ಲ ಮೂವತ್ತು ಎಲ್ಲದಕೂ ಆಕ್ಷೇಪಿಸುವ ನೀವುಗಳುಕೊಟ್ಟಿರೇ ಒಂದೊಳ್ಳೆ ಬದುಕನು?ಇನ್ನಾದರೂ ಬಿಟ್ಟು ಬಿಡಿ ಅವಳನುನಿಮ್ಮ ಬಂಧನದ ಕಟ್ಟಳೆಗಳಿಂದ ಕಟ್ಟಿಕೊಳ್ಳಲಿ ಒಂದೊಳ್ಳೆ ಬದುಕನು ***********************************

ಬದಲಾಗುವ ಸತ್ಯ

ಕವಿತೆ ಬದಲಾಗುವ ಸತ್ಯ ನೂತನ ದೋಶೆಟ್ಟಿ ನಿನ್ನೆಗಳ ಬಾನಲ್ಲಿ ನಿನ್ನ ನಗುವಿನ ನಕ್ಷತ್ರ‘ ಶೂಟಿಂಗ್ ಸ್ಟಾರ್ ‘ ಎಂದ ಗೆಳತಿಯ ಪುಳಕಮರೆತ ಜಿಜ್ಞಾಸೆಎದುರಲ್ಲಿ ನಿನ್ನ ಗುರಿಗಳು ಅವಳ ಪಿಟಿಪಿಟಿಸುವ ಬಾಯಲ್ಲಿಅವಸರದ ಬೇಡಿಕೆಗಳುನನ್ನ ಮುಚ್ಚಿದ ಕಂಗಳಲ್ಲಿನಿನ್ನ ಕನಸುಗಳ ಹಾರೈಕೆನಿನ್ನೆಯವರೆಗೆ ಇದೆಲ್ಲ ಸತ್ಯ ಇಂದುನೀನು, ನಕ್ಷತ್ರ , ಕನಸು ನನ್ನ ಮುಖದಲೊಂದು ಮುಗುಳ್ನಗೆತುಟಿಯಂಚಿನ ಅಚ್ಚರಿಗಲ್ಲದಲ್ಲೂರಿ ಕುಳಿತ ವಾಸ್ತವಶೂಟಿಂಗ್ ಸ್ಟಾರಿನತ್ತ ಹರಿದು ನೋಟನಾಳಿನ ಸತ್ಯಕ್ಕೆ ಸಿದ್ಧವಾಗಿತ್ತು. **********************

ಮಾತಿನಲ್ಲಿಯೇ ಇದೆ ಎಲ್ಲವೂ…

ಲೇಖನ ಮಾತಿನಲ್ಲಿಯೇ ಇದೆ ಎಲ್ಲವೂ… ಪೂಜಾ ನಾಯಕ್ ನುಡಿದರೆ ಮುತ್ತಿನ ಹಾರದಂತಿರಬೇಕು| ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು| ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು| ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು| ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯ ? ಇತ್ತೀಚಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಮ್ಮೆಲೇ ಹಿಂದೆ ಪ್ರೌಢಶಾಲೆಯಲ್ಲಿ ಓದಿದ ಬಸವಣ್ಣನವರ ವಚನದ ಈ ಸಾಲುಗಳು ಥಟ್ಟನೆ ನೆನಪಾಯಿತು. ನೆನಪಾಗುವುದರ ಹಿಂದೆ ಒಂದು ಘಟನೆಯಿದೆ.              ಅಂದು ಐದರ ಇಳಿ ಸಂಜೆಯ ಹೊತ್ತು. ನಾನು ಮತ್ತು ನನ್ನ ಗೆಳತಿ, ರಸಾಯನಶಾಸ್ತ್ರ ವಿಷಯದ ಪ್ರಾಯೋಗಿಕ ತರಗತಿಗಳನೆಲ್ಲ […]

ಅದಿತಿ

ಕವಿತೆ ಅದಿತಿ ಮುರಳಿ ಹತ್ವಾರ್  ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.ಒಂದಿಷ್ಟೂ ಬಿಸಿಯಾಗಲಿಲ್ಲ ಅದುಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ.ಬೇರು ಕಿತ್ತು, ಕೈ-ಕಾಲು ಕೊಯ್ದು,ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ,ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ.ಆಕೆ “ಅಯ್ಯೋ, […]

ದ್ವಿಪದಿಗಳು

ಕವಿತೆ ದ್ವಿಪದಿಗಳು ವಿ.ಹರಿನಾಥ ಬಾಬು ಹೊರಗೆ ಚಿಟ್ಟೆ ಹಾರುವುದ ನೋಡಿದೆಮೊನ್ನೆಯಿಂದ ಹೃದಯವೇಕೋ ಖಾಲಿ ಖಾಲಿ ಮೋಡಗಳು ಇದ್ದ ಮಳೆಯೆಲ್ಲಾ ಸುರಿಸಿ ನಿಂತಿವೆಮನಸು ನೀನಿಲ್ಲದೆ ಕತ್ತಲ ಕೋಣೆಯಾಗಿದೆ ನದಿಗಳು ಉಕ್ಕಿ ಹರಿಯುತ್ತಿವೆನಿನ್ನ ಹುಡುಕಿ, ಕೈಚೆಲ್ಲಿ ಕುಳಿತಿರುವೆ ಈಜಲಾಗದೆ ನೀರು ಹರಿದ ನೆಲದ ಮೇಲೆ ಅದರ ಹೆಜ್ಜೆ ಮೂಡಿದೆನಿನ್ನ ಬಂದು ಹೋಗುವಿಕೆಗೂ ಇಂಥದೇ ನವಿರು ಯಾಕೋ ಗಾಳಿ, ಛಳಿಗೆ ಮೂಲೆಯಲಿ ಮುದುಡಿ ಕುಳಿತಿದೆನೀನು ಕಾಣದೆ ಮನಸು ಗರಬಡಿದ ಹಾಗಿದೆ *********************

ಅಂಕಣ ಬರಹ ಮಾತಲ್ಲಿ ಹಿಡಿದಿಡಲಾಗದ ಚಿತ್ರ… ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ. ಜೇನು ತುಪ್ಪದಲ್ಲಿ ಅದ್ದಿ ತೆಗೆದಷ್ಟು ಸವಿಯಾಗಿ. ಅದೆಷ್ಟು ವಿನಯತೆ, ಅದೆಷ್ಟು ಭೂಮಿಗಿಳಿದ ಮನುಷ್ಯ ಎನಿಸಿಬಿಡುವಂತೆ. ಮನುಷ್ಯ ಏನೂ ಗೊತ್ತಿಲ್ಲದ ಸಂದರ್ಭದಲ್ಲಿ ಮುಗ್ಧನಷ್ಟೇ ಸ್ವಾರ್ಥಿಯೂ ಇರುತ್ತಾನೆ. ಅದು ಪುಟ್ಟ ಮಗುವಿನಲ್ಲಿ ಕಂಡು ಬರುವಂತಹ ಮುಗ್ಧತೆ ಮತ್ತು ಸ್ವಾರ್ಥ. ತದ ನಂತರ ಬೆಳೆಯುತ್ತ ಬೆಳೆಯುತ್ತಾ ಅವನ್ನು ತನಗೆ ಬೇಕಾದ ಹಾಗೆ ಬಳಸುವುದನ್ನು ಕಲಿಯುತ್ತಾನೆ. ಆದರೆ ಜ್ಞಾನ ಸಂಪಾದನೆ ಮಾಡುತ್ತಾ ಮಾಡುತ್ತಾ ವಿನೀತನಾಗಿ ಬಿಡುತ್ತಾನೆ. ಅವನೆಲ್ಲಾ ಅಹಂಕಾರವೂ ಸತ್ತುಹೋಗುತ್ತದೆ. ಜ್ಞಾನ […]

ಅಂಕಣ ಬರಹ ಹೊಸ ದನಿ-ಹೊಸ ಬನಿ-೧೧ ಭಾವಕ್ಕಿಂತಲೂ ಬುದ್ಧಿಯ ನಡೆಯಲ್ಲೇ ತವಕಿಸುವ ದಿಲೀಪ ಕುಮಾರ್ ಪದ್ಯಗಳು. ಹೊಸ ಕಾಲದ ಹುಡುಗ ಹುಡುಗಿಯರು ಫೇಸ್ಬುಕ್ ವಾಟ್ಸ್ ಆಪಿನಂಥ ಸಾಮಾಜಿಕ ಜಾಲತಾಣದಲ್ಲಿ ಬರೆದುದನ್ನು ತಿದ್ದುವ ಮೊದಲೇ ಪ್ರಕಟಿಸಿ ಬಿಡುವುದರಿಂದ ನಿಜಕ್ಕೂ ಕವಿತೆಗಳಾಗುವ ತಾಕತ್ತಿದ್ದ ರಚನೆಗಳು ಕೂಡ ಗರ್ಭಪಾತಕ್ಕೆ ಸಿಲುಕಿ ಅಂಥ ತಾಣಗಳಲ್ಲೇ ತಿಣುಕುತ್ತಿರುವ ಕೆಲವರ ಲೈಕು ಈಮೋಜಿ ಕಮೆಂಟುಗಳಿಂದಲೇ ಉಬ್ಬಿ ಹೋಗಿ ಆ ಕವಿ ಮಿಣುಕುಗಳು ನಕ್ಷತ್ರಗಳಾಗುವ ಮೊದಲೇ ಉರಿದು ಬಿದ್ದು ಹೋಗುತ್ತಿರುವ ಕಾಲವಿದು. ಅಪರೂಪಕ್ಕೆ ಹೊಸತಲೆಮಾರಿನ ಕೆಲವು ಹುಡುಗ […]

Back To Top