Day: October 13, 2020

ಅವಳೇ ಕಾರಣ…

ಲಹರಿ ಅವಳೇ ಕಾರಣ… ಸ್ಮಿತಾ ಭಟ್ ಏನೇ ಹೇಳಿ ಮಕ್ಕಳನ್ನು ಸಂಭಾಳಿಸುವ ವಿಷಯದಲ್ಲಿ ತಾಯಿಗೇ ಹೆಚ್ಚಿನ ಪ್ರಶಸ್ತಿಗಳು ಸಲ್ಲಬೇಕು.ಎಲ್ಲದಕ್ಕೂ ಅಮ್ಮಾ ಎಂದೇ ಕೂಗುವ ಕಂದಮ್ಮಗಳನ್ನು ತೃಪ್ತಿ ಪಡಿಸುವುದು ಸುಲಭದ ವಿಷಯವಂತೂ ಅಲ್ಲ. ಏಕ ಕಾಲದಲ್ಲಿ ನೂರು ಮಕ್ಕಳನ್ನು ಗಾಂಧಾರಿ ಹೇಗೆ ಸಂಭಾಳಿಸಿದಳೋ ಎಂದು, ಒಂದೇ ಮಗುವಿನ ತಾಯಿಯಾದ ನನಗೆ ಸದಾ ಕಾಡುವ ಸಂಗತಿ. “ಅಯ್ಯೋ ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ” ಈಗಿನ ಕಾಲದ ಮಕ್ಳೇ ಹಾಗೋ, ಪಾಲಕರೇ ಹಾಗೋ ಅನ್ನುವ, ಅವಕಾಶ ವಂಚಿತರಾಗದಂತೆ ಹಿರಿಯರಾಡುವ ಮಾತುಗಳು ನೇರ ತಾಕುವುದು […]

ಹನಿಗಳು

ಕವಿತೆ ಹನಿಗಳು ನಾಗರಾಜ. ಹರಪನಹಳ್ಳಿ -1-ಮೌನವಾಗಿ ಬಿದ್ದ ದಂಡೆಯಲ್ಲಿಒಂಟಿಯಾಗಿಧ್ಯಾನಿಸುತ್ತಿದೆ ದೋಣಿಬದುಕಿನ ಯಾತ್ರೆ ಮುಗಿಸಿ -2-ಕಡಲ ಅಲೆಗಳ ಸದ್ದುಕೇಳಿಯೂ ಕೇಳದಂತೆಬಿದ್ದಿರುವ ದಂಡೆಯ ಕಂಡುಆಗಸದಲ್ಲಿ ಚಂದ್ರನಗುತ್ತಿದ್ದ -3-ಸಂಜೆ ಗತ್ತಲುದಂಡೆಯಲ್ಲಿ ನಡೆದಾಡುತ್ತಿರುವಜೋಡಿ ನೆರಳುಗಳುನಕ್ಷತ್ರಗಳು ಹಾಡುತ್ತಿರೆಮಗುಮರಳಲ್ಲಿ ಗುಬ್ಬಚ್ಚಿಗಾಗಿಮನೆ ಮಾಡುತ್ತಿತ್ತು -4-ಗಾಳಿ ಸಿಳ್ಳೆಹಾಕುತ್ತಿತ್ತುಕಡಲಲ್ಲಿ ಯಾರೋದೀಪಸಾಲು ಹಚ್ಚಿಟ್ಟಂತೆದೋಣಿಗಳುಬದುಕಿಗಾಗಿಹುಡುಕಾಡುತ್ತಿದ್ದವು ********************************

ನೆನಪು

ಕವಿತೆ ನೆನಪು ಡಾ. ರೇಣುಕಾ ಅರುಣ ಕಠಾರಿ ಮಾಸಿ ಹೋದ ಕಾಗದಅದರ ಮೇಲೆ ಅಪ್ಪ ಬರೆದಿದ್ದ ಅಕ್ಷರಮಡಿಕೆಗಳ ತವರೂರೆ ಆಗಿ ನಿಂತಿತ್ತು.ಏಷ್ಟೋ ಅಕ್ಷರಗಳು ಆ ಮಡಿಚಿಟ್ಟ ರೇಖೆಯೊಳಗೆಸೇರಿಕೊಂಡು ಕಾಣಲು ಕಾಡಿಸುತ್ತಿದ್ದವು.ಎನು ಬರೆದಿರಬಹುದು! ಇದರಲ್ಲಿ ಎಂಬಕುತೂಹಲ ಮತ್ತು ತವಕ ಹೆಚ್ಚಾದವು. ಉಬ್ಬಿದ ಕಾಗದ ಅಲ್ಲಿ ಅಲ್ಲಿ ಚಲ್ಲಿದ ಶಾಹಿಅದರ ಬಣ್ಣೋ ವಿಕಾರಕ್ಕೆ ತಿರುಗಿತ್ತುಅಕ್ಷರಗಳಿಗೆ ಸ್ವಲ್ಪವೂ ನಗು ಇರಲಿಲ್ಲಕೆಳಗಿಂದ ಮೇಲೆಕ್ಕೆಮತ್ತು ಮೇಲ್ಲಿಂದ ಕೆಳಕ್ಕೆಏನೋ ಸಣ್ಣ ಸಣ್ಣ ಸಂಕೇತಗಳುಅಯೋ! ಒಂದು ತಿಳಿತಿಲ್ವಾಲ್ಲ ?ಅಂತಹಿಂದೆ ಮುಂದೆ ಕಾಗದದ ಅಕ್ಕ ಪಕ್ಕನೋಡುತ್ತಿದ್ದಾಗ,.. ಜೋಪಾನವೇ ತುಂಡಾಗಿತುಎಂದು […]

ಹೇಮಾ

ಕಥೆ ಹೇಮಾ ಎಂ.ಆರ್.ಅನಸೂಯ ವಿಜಯಾ  ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ  ಹೇಮಾ !  ” ನಮಸ್ತೆ ಮೇಡಂ “ ಹೇಮಾ, ಆರಾಮಾಗಿದೀಯಾ ,  ಹೇಗಿದಾನಮ್ಮ ನಿನ್ನ ಮಗ ? ಚೆನ್ನಾಗಿದ್ದಾನೆ  ಮಿಸ್.  ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ ಖಂಡಿತ ಬರಬೇಕು ಮೇಡಂ   ಹೌದಾ ಎಷ್ಟು ತಿಂಗಳು ಮಗುವಿಗೆ ಐದು ತಿಂಗಳು  ಮಿಸ್ ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ  ನೋಡಲು  ಬರುತ್ತೇನೆ. ಪಾಪುಗೆ ಏಳು ತಿಂಗಳಾದಾಗ  […]

ಎರಡು ಮೊಲೆ ಕರುಳ ಸೆಲೆ

ಕವಿತೆ ಎರಡು ಮೊಲೆ ಕರುಳ ಸೆಲೆ ವಿಶಾಲಾ ಆರಾಧ್ಯ ಮನುಜ ಕುಲವ ಕತ್ತಲಿಂದ ಬೆಳಕಿಗಿತ್ತತೊಡೆಯ ಸೆಲೆಯ ಮಾಯೀ ಕಣಾನವಮಾಸ ಏನೆಂದು ಬಲ್ಲೆಯಾ?ಒಂದೊಂದು ಮಾಸದಲ್ಲೂಒಂದೊಂದು ವೇದನೆಯಗ್ರಹಚಾರವ ಮೀರಿಕೆಸರ ಮುದ್ದೆಗೆ ರೂಹಿತ್ತುಗುಟುಕಿತ್ತ ಕರುಳ ಹೊಕ್ಕುಳು !ಮಾ-ನವರಂಧ್ರದ ನಿನ್ನಧರೆಗಿಳಿಸಿ ಬಸವಳಿದರೂದಣಿವರಿಯದ ಧರಣಿ ಕಣಾ ಹೆಣ್ಣು!!ಪುಣ್ಯ ಕೋಟಿ ಕಾಮಧೇನುಬೀದಿಗಿಳಿದ ಹೋರಿಬಸವನಿಗೆ ಸಮವೇನು?ಹೋಲಿಕೆಯೇ ಗೇಲಿ ಮಾತುಒಂದೇ ಕ್ಷಣ ಬಿತ್ತುವನಿನ್ನ ಗತ್ತಿಗೆಷ್ಟು ಸೊಕ್ಕು?ಒಂದು ಬಸಿರಲುಸಿರುತುಂಬಿ ಕೊಡುವಳೆಲ್ಲರಿಗೂ ಮಿಕ್ಕು!ಒಂದೇ ಕ್ಷಣ ಉರಿದಾರುವಗಂಡೇ ಕೇಳು ದಂಡಧರಣಿಯೋ ಬೂದಿಯೊಳಡಗಿದಮೌನ ಕೆಂಡ ಹಸಿ ಮಾಂಸಮುಕ್ಕುವುದುಸುಲಭ ನಿನ್ನ ದಂಡಕೆ !ಹಲವು ಕೂಸಿಗೊಬ್ಬಳೇಹಾಲನ್ನೀವ ಹೆಣ್ಣಂತೆಎರಡು […]

ಡಿ.ಎಸ್.ರಾಮಸ್ವಾಮಿ ಕವಿತೆಗಳು ಗೆ; ಕವಿತೆಯ ಮೊಳಕೆಯೊಡೆಸುತ್ತದೆನಿನ್ನದೊಂದು ನಗು, ಸಣ್ಣ ಸಂದೇಶಎಂದಂದು ನಿನ್ನನ್ನು ಮರುಳುಮಾಡುವುದಿಲ್ಲ; ಜೊತೆಗಿರದೆಯೂ ಜೊತೆಗೇ ಇರುವಾಗ.ನಟ್ಟ ನಡುವೆ ಎದ್ದು ಹೋಗುವ ಮಾತಿಗೆಖಬರಿಲ್ಲ, ಅನ್ನುವುದಕ್ಕೆ ಪುರಾವೆ ಯೊದಗಿಸಲಾರೆ, ಬದುಕ ದುರಿತದ ನಡುವೆ.ಆಡದೇ ಉಳಿದ ಮಾತುಗಳು ಎದೆ ತುಂಬಉಳಿದದ್ದಕ್ಕೆ ಸಾಕ್ಷಿ, ಕವಿತೆಯ ಸಾಲುಗಳಲ್ಲಿ ನೀನು, ಪದೇ ಪದೇ ಇಣುಕುತ್ತೀಯ, ಮುಖಾಮುಖಿ-ಯಾಗದೆಯೂ, ಒಳಗೇ ಉಳಿದ ಬೆಳಕು.ಹಂಚಿಕೊಳ್ಳುವುದಕ್ಕೇನು ಉಳಿದಿದೆ ಎನ್ನುವುದೆಲ್ಲ ಬರಿಯ ಒಣ ತರ್ಕದ ದೇಶಾವರಿ ಹೇಳಿಕೆಇಬ್ಬರಿಗಲ್ಲದೇ ಮತ್ತಾರಿಗೂ ಗೊತ್ತಾಗಬಾರದ ಸತ್ಯ.ಹೆಗಲಿಗೊರಗಿ, ಬೆರಳ ಹೆಣೆದು ಅನೂಹ್ಯ ಲೋಕಕ್ಕೆ ಜಾರಿ, ಮನಸ್ಸಲ್ಲೇ ಕೂಡಿದ್ದು, […]

ಅಂಕಣ ಬರಹ ಲೇರಿಯೊಂಕ ಲೇರಿಯೊಂಕ ( ಕಾದಂಬರಿ)ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿಪ್ರ : ಛಂದ ಪುಸ್ತಕಪ್ರಕಟಣೆಯ.ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೨೫೦  ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ.  ಮಾಸಯಿ ಜನಾಂಗಕ್ಕೆ […]

Back To Top