ರಣ ಹಸಿವಿನಿಂದ!
ಕವಿತೆ ಮೊನ್ನೆ ಇವರೂಹಲವು ಯುದ್ದಗಳ ಗೆದ್ದಿದ್ದರುಗೆದ್ದ ರಾಜ್ಯದ ಹೆಣ್ನುಗಳಬೇಟೆಯಾಡಿದ್ದರುಇದೀಗ ಸಾಂತ್ವಾನ ಕೇಂದ್ರಗಳತೆರೆದು ಕೂತಿದ್ದಾರೆ! ಮೊನ್ನೆ ಇವರೂಊರೂರುಗಳಿಗೆ ಬೆಂಕಿಹಚ್ಚಿದ್ದರುಉರಿದ ಮನೆಗಳಲ್ಲಿ ಹೆಂಗಸರುಮಕ್ಕಳೆನ್ನದೆ ತಲೆ ತರೆದಿದ್ದರುಇದೀಗ ಆನಾಥಾಶ್ರಮಗಳತೆರೆದು ಕೂತಿದ್ದಾರೆ! ಮೊನ್ನೆ ಇವರೂಕೋವಿ ಖಡ್ಘಗಳ ಹಿಡಿದಿದ್ದರುಇದೀಗ ಧರ್ಮಗ್ರಂಥಗಳಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದಅಕಾರಣ ಯುದ್ದಗಳಿಗೀಗಸಕಾರಣಗಳ ಪಟ್ಟಿಮಾಡುತ್ತ ಕೂತಿದ್ದಾರೆ ತರಿದ ತಲೆಗಳಭೋಗಿಸಿದ ಯೋನಿಗಳಕಚ್ಚಿದ ಮೊಲೆಗಳಕಲಸಿಹಾಕಿದ ಭ್ರೂಣಗಳನಿಖರ ಅಂಕಿಅಂಶಗಳಿಗಾಗಿತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂ ಇರಬಹುದಾದಮೃಗದ ಮುಖವಾಡವಕಳಚಲೆತ್ನಿಸಿದಷ್ಟೂಗೊಂದಲವಾಗುವುದು ಖಚಿತ ನೋಡು ಬರೆಯುವಾಗಲೂ ಇದನುಕೆಕ್ಕರಿಸಿ ನೋಡುತಿದೆ ಮೃಗವೊಂದುರಣಹಸಿವಿನಿಂದ!————————————– ಕು.ಸ.ಮದುಸೂದನ ರಂಗೇನಹಳ್ಳಿ(ದುರಿತಕಾಲದ ದನಿ)
ಕವಿತೆ ಕಾರ್ನರ್
ಅವಳು ಮತ್ತು ಕವಿತೆ! ಅವಳು ನೋವಿನ ಬಗ್ಗೆ ಕವಿತೆ ಬರೆದಳು ಓದಿದ ಜನ ಅವಳ ನೋವನ್ನು ಸವಿದು ಸಂಭ್ರಮಿಸಿದರುಅದರ ಆಳಅಗಲಗಳ ಅಳೆದು ತೂಗಿದರು ಆ ನೋವಿನ ಉತ್ಕಟತೆಯನ್ನಳೆಯಲುಇರಬಹುದೆಮಾಪಕವೆನಾದರೆಂದು ಅದನೂ ಹುಡುಕಾಡಿದರು ಅವಳ ನೋವಿಗಿರಬಹುದಾದ ಕಾರಣಗಳ ಕುರಿತುಸಂಶೋಧನೆಯನ್ನೇ ನಡೆಸಿದರು ಭಗ್ರಪ್ರೇಮ, ಮುರಿದ ದಾಂಪತ್ಯಹೀಗೆ ಕಾರಣಗಳ ಪಟ್ಟಿ ಮಾಡುತ್ತ ಹೋದರು ನೋವಿಗೂ ಮಾರುಕಟ್ಟೆ ಇದೆಯೆಂದರಿತ ಅವಳುಹೀಗೆಯೇ ವರ್ಷಗಟ್ಟಲೆಕವಿತೆ ಬರೆಯುತ್ತ ಪ್ರಸಿದ್ದಳಾಗುತ್ತ ಹೋದಳು ಅದ್ಯಾಕೊ ಒಂದು ದಿನಬರಿದೇ ನೋವಿನ ಬಗ್ಗೆ ಬರೆಯುವುದು ಬೇಸರವೆನಿಸಿನಗುವಿನ ಬಗ್ಗೆಬರೆಯತೊಡಗಿದಳು. ಅವಳ ನೋವಿಗೆ ಲೊಚಗುಟ್ಟುವುದಕ್ಕೆಒಗ್ಗಿ ಹೋಗಿದ್ದ ಓದುಗರುಅವಳ […]
ಕವಿತೆ ಕಾರ್ನರ್
ಶರಣಾಗು ಚಕ್ರವರ್ತಿಯೇ!! ನಿನ್ನ ಕಿರೀಟಗಳಲಿ ಅಂಟಿಸಿದವಜ್ರಗಳು ಇಲ್ಲವಾಗುತ್ತವೆನೀನು ಕೂತ ಸಿಂಹಾಸನದಕಾಲುಗಳಿಗೆ ಗೆದ್ದಲಿಡಿಯುತ್ತವೆನಿನ್ನರಮನೆಯಬುನಾದಿಕುಸಿದು ಬೀಳುತ್ತದೆ. ನಿನ್ನ ಅಂತ:ಪುರದ ರಾಣಿಯರುಅವರ ದಾಸಿಯರುಕಾವಲಿನ ಸೇವಕರ ಜೊತೆಓಡಿ ಹೋಗುತ್ತಾರೆ ನಿನ್ನ ವಂದಿ ಮಾಗಧರುಶತ್ರು ಸೈನ್ಯದ ಜೊತೆ ಸೇರಿಕತ್ತಿಮಸೆಯುತ್ತಾರೆ. ನೀನಾಳಿದ ನರಸತ್ತ ನಾಮರ್ದ ಪ್ರಜೆಗಳೆಲ್ಲವೀರ್ಯವತ್ತಾಗಿಹೊಸ ಸೂರ್ಯನಹುಟ್ಟಿಸುತ್ತಾರೆ ಹೊಸ ಹೂತೋಟಗಳ ಬೆಳೆಸುತ್ತಾರೆಇರುಳಬಣ್ಣವನೆಲ್ಲ ಅಳಿಸಿಹಗಲಿನ ಬೆಳಕಿನ ಬಣ್ಣಬಳಿಯುತ್ತಾರೆ ನಿನ್ನ ಶಸ್ತ್ರಾಗಾರದ ಖಡ್ಗಗಳನ್ನೆಲ್ಲಕಡಲಿಗೆಸೆದುಆ ಕೊಠಡಿಯಲ್ಲಿ ವೀಣೆ ತಂಬೂರಿಗಳನ್ನಿಡುತ್ತಾರೆ ನಿನ್ನೆಲ್ಲ ವಿಜಯದಸಂಕೇತವಾಗಿಕಟ್ಟಿಸಿದಸ್ಮಾರಕ ಸ್ಥಾವರಗಳನ್ನೆಲ್ಲಒಡೆದು ಹಾಕಿಅಲ್ಲಿಮಕ್ಕಳಿಗೆ ಹಾಲು ನೀಡುವಕೆಂದಸುಗಳ ಕಟ್ಟುತ್ತಾರೆ! ಸುಮ್ಮನೆಶರಣಾಗಿಬಿಡುಬಡಿದಾಡಿ ಹೈರಾಣಾಗಬೇಡ! ******** ಕು.ಸ.ಮದುಸೂದನರಂಗೇನಹಳ್ಳಿ
ಕವಿತೆ ಕಾರ್ನರ್
ತಬ್ಬಲಿ ಕವಿತೆ ಮಾತುಗಳ ಅಟ್ಟಹಾಸದೊಳಗೆ ಅಪಹಾಸ್ಯಕ್ಕೀಡಾದ ಮೌನ ಶಬ್ದಗಳ ಜಾತ್ರೆಯೊಳಗೆ ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು. ಮುಳ್ಳುಗಳ ಕಾವಲಿನಲಿದ್ದ ಹೂಗಳು ನಗುವುದನ್ನೆ ಮರೆತುಬಿಟ್ಟವು ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು ಹಸಿವಿನಲಿ ಕಂಗೆಟ್ಟವು. ನಿನ್ನೆ ಸಂಜೆಯ ಮುದಿಬಿಸಿಲಲಿ ಅಕಾಲ ಮಳೆಸುರಿಯುತು ವಿದಾಯದ ಹೊತ್ತಿನಲಿ ಬಿಕ್ಕಿದವಳ ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು. ಕವಿತೆಯೊಂದ ಕಟ್ಟುವ ನೆಪದಲಿ ಶಬ್ದಗಳ ಮಾರಣಹೋಮ ಕವಿಯ ಸಮಾದಿಯ ಮೇಲೆ ಅಪರಿಚಿತ ಓದುಗನ ಹೂಗುಚ್ಚ. ಎರಡು ಸಾಲಾದರು ಬರೆದು ಹೋಗು ಗೋಗರೆದ ಕವಿತೆಯೀಗ ತಬ್ಬಲಿ. ******** ಕು.ಸ.ಮಧುಸೂದನ
ಕವಿತೆ ಕಾರ್ನರ್
ವಾರಸುದಾರ! ಕಪ್ಪು ಕಾಲುಗಳನೇರೆಕ್ಕೆಯಾಗಿಸಿಕಡಿದಾದ ಬೆಟ್ಟವನೇರುವ ಸಾಹಸದೆ ಕಾಲವೆನ್ನುವುದು ಇಳಿಜಾರಿಗೆಜಾರಿಬಿಟ್ಟ ಚಕ್ರವಾಗಿಸರಸರನೆ ಉರುಳುತ್ತ ಹಗಲಿರುಳುಗಳುಸ್ಪರ್ದೆಗಿಳಿದುಗಡಿಯಾರಗಳನೂ ಸೋಲಿಸಿ ಸೂರ್ಯಚಂದ್ರರೂ ಸರದಿ ಬದಲಿಸಿಉಸಿರೆಳೆದುಕೊಂಡು ಕಣ್ಣರಳಿಸಿಜಗವನರ್ಥಮಾಡಿಕೊಳ್ಳುವಷ್ಟರಲ್ಲಿ ಬೆನ್ನು ಬಾಗಿಕಣ್ಣು ಮಂಜಾಗಿಚರ್ಮ ಸುಕ್ಕಾಗಿ ಮುಪ್ಪೆಂಬುದುಮುಂದೆ ನಿಂತಿರಲುಕವಿತೆಯೆಂಬುದು ಮರಣವಾಕ್ಯವಾಗುವುದು ಶವದ ಮುಂದೆ ನಿಂತುಕಣ್ಣಾಲಿ ತುಂಬಿಕೊಂಡಗೆಳೆಯರಮುಖಗಳಲ್ಲೇನೊ ಸಮಾದಾನದ ಭಾವ ಕವಿತೆ ಸೋತಿತೊ ಗೆದ್ದಿತೊ? ಬಿರುಸಿನ ಚರ್ಚೆಯ ನಡುವೆಗೋಣು ಚಿಲ್ಲಿದ ಕವಿಯಾರ ಕಣ್ಣಿಗೂ ಬೀಳುವುದಿಲ್ಲ! ಅನಾಥ ಶವಕೆವೀರಬಾಹು ಮಾತ್ರವೇವಾರಸುದಾರ! ******** ಕು.ಸ.ಮಧುಸೂದನ ರಂಗೇನಹಳ್ಳಿ
ಕವಿತೆ ಕಾರ್ನರ್
ಕವಿತೆಯಂತವಳು (ಕವಿತೆಯಂತವಳು ಕವಿತೆಯಾದಾಗ) 1.ಸಹ್ಯಾದ್ರಿಯ ಹಸಿರು ಚಪ್ಪರದೊಳಗಿನೊಂದುಹಳೆಯ ಮನೆಯೊಳಗೆ ಕೂತುಬರೆಯುತ್ತಾಳೆಪ್ರತಿ ಶಬುದವನ್ನೂ ಹೃದಯದೊಳಗಿಂದ ಹೆಕ್ಕಿತಂದುತನ್ನ ಒಂಟಿತನದ ಕಣ್ಣೀರಿನಿಂದ ಅವನ್ನು ತೊಳೆದುಒಣಗಿಸಿತನ್ನ ಲೋಕದ ಕಣ್ಣಿನ ನಗುವಿನ ಬಣ್ಣವನದಕೆ ಲೇಪಿಸಿಕಟ್ಟುತ್ತಾಳೆಕವಿತೆಯ ಹಾರ,ತನ್ನಅವಮಾನಅಸಹಾಯಕತೆಹತಾಶೆಗಳ ಪೋಣಿಸಿ!ಓದುತ್ತೇನೆ. ತಲೆದೂಗುತ್ತೇನೆಅವಳ ಕಾವ್ಯ ಕಟ್ಟುವ ಕಲೆಗಿಂತ ಹೆಚ್ಚಾಗಿನಕ್ಕು ನಕ್ಕೇ ದು:ಖ ಮರೆಸಿಮರುಳು ಮಾಡುವ ಅವಳ ಬದುಕುವ ಕಲೆಗಾರಿಕೆಯನ್ನು! ಅವಳಿಗೂ ಬದುಕೆಂಬುದಿದೆ ಕವಿತೆಯಹೊರತಾಗಿಯೂಎಂಬುದು ನೆನಪಾದಾಗೆಲ್ಲನಾನು ಕಣ್ಣೀರಾಗುತ್ತೇನೆ.=================== 2ಕಂಡೆ:ಶಬುದಗಳ ಒಡನಾಟದೊಳಗೆ ತಾನೇ ಒಂದುಹೊಸ ಶಬುದವಾದವಳ ಹಾಗೆ ಅವಳು ಕಟ್ಟಿದ ಪ್ರತಿ ಶಬುದಗಳ ಪಾದಗಳಲ್ಲೂಗಾಯದ ಗುರುತುಇಟ್ಟ ಹೆಜ್ಜೆಗಳೆಲ್ಲವೂ ಹೂವಿನ ಮೇಲೇನೂ ಆಗಿರಲಿಲ್ಲಬಹಳಷ್ಟು […]
ಅದೊಂದು ಗಳಿಗೆ.
ಅದೊಂದು ಗಳಿಗೆ. ನಿನ್ನ ಕಾಣುವ ಬಯಕೆಯೊಂದು ಮತ್ತೆ ಮತ್ತೆ ಮುಗಿಬೀಳಲು ತುಕ್ಕು ಹಿಡಿದ ಬುದ್ದಿ ಹಿಡಿತ ತಪ್ಪಿ ಬಂದು ನಿಂತಿದ್ದು ನಿನ್ನ ಮನೆಯಂಗಳಕೆ ಬಂದಾಗ ನೀನು ಮುಚ್ಚಿದ ಕದ ತೆರೆಯದೆ ಕಾಯಿಸಿದ್ದು ನಿನ್ನೊಳಗಿನ ಅಹಮ್ಮಿನ ತುಣುಕಿನೊಂದಂಶವಾಗಿತ್ತು ಕರಗಿದ ಹಗಲು ನಿಶ್ಯಬ್ದ ಇರುಳೊಳಗೆ ಕರಗಿ ಲೀನವಾಗುವ ಸರಿಹೊತ್ತಲ್ಲಿ ದಿಡೀರನೆ ಜ್ಞಾನೋದಯವಾಗಿ ಕಣ್ಮುಂದೆ ಕಂಡ ಮಾಣಿಕ್ಯವೊಂದು ಕಣ್ಮರೆಯಾದ ಪರಿಗೆ ಏಳೂರುಗಳೂ ದಿಗ್ಬ್ರಮೆಗೊಳಗಗಿದ್ದವು. ಸುದೀರ್ಘ ಬರದ ಬೆಂಕಿಯೊಳಗೆ ಬೆಂದ ನನ್ನೂರೊಳಗಿನ ಹಸಿವಿನ ಹಾಹಾಕಾರಕ್ಕೆ ಅಸುನೀಗಿದ ಹಾಲುಗಲ್ಲದ ಹಸುಗೂಸುಗಳ ಹೊತ್ತು ಮಣ್ಣು ಮಾಡಿದ ಕೈಗಳಿಗೆ ಹತ್ತಿದ ಕುಷ್ಠ ಕಿವಿ ಮೂಗು ಪಾದಗಳ ಬೆರಳ ಸಂದಿಗಳಿಗೆ ವ್ಯಾಪಿಸಿ ಉರಿದು ಹೋಯಿತು ಹಾಗೇನೆ ಹಗಲ ಚಿತೆ ಹಿಮ ಪರ್ವತದ ತುತ್ತ ತುದಿಯಲಿ ನೆಲೆಸಿದ ಶಂಕರನ ಪಾದಗಳ ನುಣುಪಾದ ತಣ್ಣನೆಯ ಸ್ಪರ್ಶಕೆ ಕರಗಬಲ್ಲುದೆಂದು ನಂಬಿದ ಪಾಪಾತ್ಮಗಳ ದಿವ್ಯೋಪದೇಶಕೆ ಮಾರು ಹೋಗಿ ಹಮ್ಮು ತೊರೆದು ಸುತ್ತೂರಿನೆಲ್ಲ ಗರತಿಯರ ಪಾದಕೆರಗಿ ಶತಮಾನಗಳ ಪುರಾತನ ಶಾಪ ಉಶ್ಯಾಪಗಳೆಲ್ಲವನ್ನು ಇಲ್ಲವಾಗಿಸಿ ಅದೊಂದು ಮಂಗಳಕರವಾದ ಬೆಳಗಿಗೆ ಕಾಯುತ್ತ ಕೂತ ಕಡುಪಾಪಿ ಮನುಷ್ಯನ ಪಾಪಿಷ್ಠ ಕ್ಷಣಗಳ ಮನ್ನಿಸುವ ಮನಸಿರುವ ದೇವಪುರುಷನಿಗಾಗಿ ಕಾಯುವ ಗಳಿಗೆಯಿದೆಯಲ್ಲ ಅದಕ್ಕಿಂತ ಅಮೃತಮಯವಾದ್ದು ಬೇರೆ ಯಾವುದಿದೆ? ********* ಕು.ಸ.ಮಧುಸೂದನ
ಕವಿತೆ ಕಾರ್ನರ್
ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನ್ನೂ. ಕವಿತೆಯ ಪ್ರತಿಸಾಲನ್ನೂನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನುಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆಎಲ್ಲಿ ಹೋದೆಯಾರಿರುವರು ಜೊತೆಗೆಕೇಳಬಾರದಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! […]
ನನ್ನಾತ್ಮದ ಕನ್ನಡಿಯಲ್ಲಿ
ಇರಬೇಕಿತ್ತು ನೀನುನನ್ನಾತ್ಮದ ಕನ್ನಡಿಯಲಿ ದೂಳು ಕೂರದಂತೆನನ್ನ ಪ್ರಜ್ಞೆಯಾಳದೊಳಗೆ ಅಹಮ್ಮಿನ ಮುಳ್ಳು ಬೆಳೆಯದಂತೆನನ್ನ ಹೃದಯದಾಳದಲಿ ಪಾಪಿಷ್ಠ ಲಹರಿಗಳುಗುನುಗದಂತೆ ನೋಡಿಕೊಳ್ಳಲು. ಜನರಹಿತ ರಾತ್ರಿಯ ಬೆತ್ತಲು ರಸ್ತೆಗಳಲ್ಲಿಸಂಜೆ ಉರಿಸಿದ ಚಿತೆಯ ಬೆಂಕಿ ಆರದ ಮಸಣಗಳಲಿಗತದ ನೆನಪುಗಳೆಲ್ಲ ಹಾವುಗಳಂತೆ ಹರಿದಾಡುವಅಸಹನೀಯ ಕ್ಷಣಗಳ ಪಯಣದಲಿ. ಎಂದೂ ಮಳೆಯಾಗದಬೀಜ ಸಸಿಯಾಗದಸಸಿ ಮರವಾಗಿಮರ ಹೂವರಳಿಸಿ ಹಣ್ಣುಗಳ ಫಲಿಸಿತಾಯಾಗಲಾರದಂತಹ ತೀರಗಳಿರದರುದ್ರಭೀಕರ ಮರಳುಭೂಮಿಯನಡುವಲ್ಲೂ ಹಸಿರು ಚಿಗುರಿಸುವಛಲದೊಡತಿ ನೀನಿರಬೇಕಿತ್ತು ಮುಗಿದ ನನ್ನಿಷ್ಟಕಾಲದ ಜೊತೆಗೆಆರಂಭಗೊಂಡ ಕಷ್ಟಕಾಲದಲಿನೀನಿರಬೇಕಿತ್ತು ನನ್ನಾತ್ಮದ ಕನ್ನಡಿಯಲ್ಲಿ! ****** ಕು.ಸ.ಮಧುಸೂದನ್
ಕವಿತೆ ಕಾರ್ನರ್
ಕಣ್ನೀರಾಗುತ್ತೇನೆ! ಕಗ್ಗತ್ತಲ ಇರುಳೊಳಗೆ ಬೀದಿ ದೀಪಗಳ ನೆರಳುಗಳಾಟದೊಳಗೆ ಮುಸುಕೊದ್ದು ಮಲಗಿದ ನಿನ್ನ ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ ಹಗಲು ಕಂಡ ಬೀದಿಯ ಹುಡುಕಿ ಇರುಳು ಅಲೆಯುತ್ತೇನೆ ಎತ್ತರದ ನಿನ್ನ ಮನೆಯ ಮಹಡಿಯಮೇಲೆ ಕವಿದ ಕಪ್ಪು ಮೋಡಗಳಾಚೆ ಇಣುಕುತ್ತಿರುವ ಚಂದ್ರನ ನಿದ್ದೆಗಣ್ಣಿನ ನಗುವಿಗೆ ಹೋಲಿಸಿ ನಿನ್ನ ಮಂದಹಾಸವ ನಾಚುತ್ತೇನೆ! ಮೂಡಿದ ಸೂರ್ಯನ ಎಳೆ ಕಿರಣಗಳು ನಿನ್ನಂಗಳದಲ್ಲಿ ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ ಮೈಮುರಿಯುತ್ತ ಹೊರಬಂದ ನಿನ್ನ ಮುದುಡಿದ ಸೀರೆಯ ನಿರಿಗೆಗಳಲ್ಲಿ ಅಡಗಿರಬಹದಾದ ಹಿಂದಿನ ರಾತ್ರಿಯ ಕನಸುಗಳಲ್ಲಿ ನನ್ನ ಹುಡುಕುತ್ತೇನೆ! ಕಾಣದ […]