Day: October 17, 2020

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ […]

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ದ್ರೌಪದಿ ಶಸ್ತ್ರಧಾರಿಯಾಗು

ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ […]

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ […]

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ […]

Back To Top