ಗಝಲ್
ಪ್ರಭಾವತಿ ಎಸ್ ದೇಸಾಯಿ
ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರು
ಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು
ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡ
ಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ ದೂರವಿರು
ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿ
ಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು
ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆ
ಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು
ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” ಹರಡಲಿ
ಮೋಹದ ಕವಚ ಸರಿದಿಲ್ಲ ಸಾವೇ ದೂರವಿರು.
****************************************
ಸಾವಿಗೆ ದೂರವಿರು ಎಂಬ ತಮ್ಮ ಆಶಯದ ಗಝಲ್ ಸೂಪರ್ ಮಾ.
ಸಂಗಾತಿಯಲ್ಲಿ ನನ್ನ ಗಜಲ್ ಪ್ರಕಟಿಸಿದಕ್ಕೆ ಪತ್ರಿಕೆ ಯ ಸಂಪಾದಕರೆ ಮತ್ತು ಸಂಪಾದಕ ಮಂಡಳಿಗೆ ಅನಂತ ಧನ್ಯವಾದಗಳು
ತುಂಬಾ ಚೆಂದದ ಅಮ್ಮ. ಜೀವನದ ಕಡಲು ಈಜಬೇಕು ನೀನು ಅಂದರೆ ಸಾವು ದೂರ ಇರು ಎಂದು ವಿಧಿಯನ್ನು ನಿವೇದಿಸಿರುವುದು ವಾಸ್ತವಕ್ಕೆ ಸರಿಯಾಗಿದೆ… ಅಬಾಟೇ