Month: November 2020

ಯುವ ಗಜಲ್ ಕವಿ ಅಕ್ಷತಾ ಕೃಷ್ಣಮೂರ್ತಿ ಅಕ್ಷತಾ ಕೃಷ್ಣಮೂರ್ತಿವಯಸ್ಸು : ೩೯ವೃತ್ತಿ: ಶಿಕ್ಷಕಿಶಿಕ್ಷಣ: ಕನ್ನಡ ಸ್ನಾತಕೋತ್ತರ ಪದವಿ ಕೃತಿಗಳು: ಹನ್ನೆರಡು ದಡೆ ಬೆಲ್ಲಹಾಲಕ್ಕಿ ಒಕ್ಕಲಿಗರುಮಧುರಚನ್ನಕೋಳ್ಗಂಬಹಾಲಕ್ಕಿ ಕೋಗಿಲೆಕೇದಿಗೆಯ ಕಂಪುನಾನು ದೀಪ ಹಚ್ಚಬೇಕೆಂದಿದ್ದೆ ಅಕ್ಷತಾ ಕೃಷ್ಣಮೂರ್ತಿಯವರ ಒಂದು ಗಜಲ್ ತಮ್ಮ ಓದಿಗಾಗಿ ಒಂದೆಒಂದು ಸಾರಿ ಪ್ರೀತಿಸುವೆ ಎಂದ್ಹೇಳಿ ಬಿಡು ಮಳೆಯಾಗಿ ಸುರಿದುಬಿಡುವೆಒಲವ ಪರಿಮಳವಾಗಿ ಬೀರಿ ಬಿಡು ತಂಗಾಳಿಯಾಗಿ ನಿನ್ನ ಸುತ್ತುವರಿಯುವೆ ಒಂದೆರಡು ಪದಗಳಿಗೆ ನೀ ಪ್ರೀತಿತುಂಬಿದರೆ ನಾ ಮಾತಾಡಿಬಿಡುವೆಉಸಿರು ಬಿಗಿಹಿಡಿದು ನಿನಗಾಗಿ ಕಾಯುವುದೇ ಪುಣ್ಯವೆಂದುಜೀವಿಸುವೆ ಒಂದೆಒಂದು ನೋಟಕೊನೆಯ ಬಾರಿಎಂಬಂತಾದರೂ ನೋಡಿಬಿಡುವೆನೀನು […]

ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..!

ಲೇಖನ ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..! ಸೈಯದ್ ಹಜರತಶಾ ಕಾದರಿಯವರು ಸೂಫಿ ಸಂತರಲ್ಲೊಬ್ಬರು. ಇವರು ಆಗಿನ ಧಾರವಾಡ ಜಿಲ್ಲೆಯ ಈಗಿನ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹುಲಗೂರಲ್ಲಿ ನೆಲೆ ಕಂಡುಕೊಂಡವರು. ಇವರ ಜನನ, ಬಾಲ್ಯ, ಬದುಕು ಹಾಗೂ ಈ ಸಂತರ ಮರಣಗಳೆಲ್ಲವೂ ಪೂರ್ಣ ವಿಶಿಷ್ಠವಾದವುಗಳು ಆಗಿದ್ದವು… ಸೈಯದ್ ಹಜರತಶಾ ಕಾದರಿಯವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಬಂಕಾಪುರದಲ್ಲಿ ಜನಿಸಿದವರು. ಇವರ ತಂದೆಯ ಹೆಸರು ಸೈಯದ್ ಖಾದರಬಾಶಾ ಕಾದರಿ ಬಿಜಾಪೂರ. ತಾಯಿಯ ಹೆಸರು ಸೈಯದಾ ವಲಿಮಾಬೀಬಿ. […]

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ ನೂರು ಕನಸುಗಳ‌ ಜಾತ್ರೆ ಮಾಡಿಸುವ ಮೋಜಗಾರ ಅವನುಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನುಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನುಕೆಂಡ ಸಂಪಿಗೆ ಘಮ ಹರಡಿ ನಿನ್ನ […]

ಗಜಲ್

ಗಜಲ್ ಪ್ರತಿಮಾ ಕೋಮಾರ ಈರಾಪುರ ಬದುಕು ಬಯಲಾಗಿದೆ  ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ? ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡುತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ? ಕೆಂಡದುಂಡೆ  ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದುತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ? ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು  ಹುಡುಕುತ್ತಿದ್ದಾರೆ ಇಲ್ಲಿಪರರ ಹುಣ್ಣಿಗೆ  ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ  ಏಕೆ? “ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರುಕಳೆವ […]

ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ

ಪುಸ್ತಕ ಸಂಗಾತಿ ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ             ಶಿವಪುತ್ರ ಅಜಮನಿಯವರು ಕಾವ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಲೇ ಸಮಾಜ ಚಿಂತಕರಾಗಿ ಹೊರಹೊಮ್ಮಿದವರು. ಕ್ರಿಯಾಶೀಲ ಬರಹಗಾರರು. ಸಿಂಗಾಪುರ,ಅಬುದಾಬಿಗಳಂತಹ  ವಿಶ್ವಕನ್ನಡ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಯಾವುದೇ ಕೀರ್ತಿ.  ಸನ್ಮಾನಕ್ಕೆ ಎಂದು ಆಸೆ ಪಟ್ಟವರಲ್ಲ ತುಂಬ ಸರಳ ಜೀವಿ. ಬಡತನದಲ್ಲೆ ಬೆಳೆದರೂ ಅವರ ಸಾಧನೆಗೆ ಅವರ ವಿದ್ವತ್ತಿಗೆ ಬಡತನ ಎಂದು ಅಡ್ಡಿಯಾಗಿಲ್ಲದಂತೆ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದವರು ಶಿವಪುತ್ರ ಅಜಮನಿ. ವಿಜಯಪುರ ಜಿಲ್ಲೆ […]

ಗಜಲ್‌

ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ ಕಣ್ಣ ಹನಿ ಜಾರುವ ಮುನ್ನ ಬೊಗಸೆಯೊಡ್ಡುವ ಭರವಸೆಯನ್ನು ಇತ್ತವನುನೀನಲ್ಲವೇ ಮುಚ್ಚಿಟ್ಟ ನೂರಾರು ಕನಸುಗಳಿಗೆಚಂದದ ಮರು ಜೀವವನ್ನುಇತ್ತವನುನೀನಲ್ಲವೇ – ಸಾಮಾನ್ಯಳಾದ ನನ್ನಲ್ಲಿ ಅಸಾಮಾನ್ಯಳೆಂಬ ಆತ್ಮ ವಿಶ್ವಾಸವನ್ನುತುಂಬಿದವನೇ ನೀನು ನಿನಗಾಗಿ ಏನಾದರೂ ಮಾಡಬಲ್ಲೆ ಎಂಬ ಭರವಸೆಯನ್ನು ಇತ್ತವನುನೀನಲ್ಲವೇ – ಸಾವಿರ ಹಸಿದ ಕಣ್ಣುಗಳ ನಡುವೆಯೂ ಪ್ರೇಮದ ಬೆಳಕು ಹೊತ್ತ ಕಣ್ಣಿನವನು ನೀನು ಎದೆಯ ಕತ್ತಲ ನೋವುಗಳನೆಲ್ಲಮರೆಸಿ ನಗುವಿನ ಮಿಂಚನ್ನುಇತ್ತವನುನೀನಲ್ಲವೇ – ಬರಿದೆಬಯಲಮರೀಚಿಕೆಯಂತಿದ್ದಭವಿತವ್ಯದಬದುಕಿನಲಿಹೊಂಗನಸತುಂಬಿದೆ ನೀನು ಸುಡುವ ಬೆಂಗಾಡಾಗಿದ್ದಮರುಭೂಮಿಯಲಿತಣ್ಣನೆಯನೆಳಲನ್ನುಇತ್ತವನುನೀನಲ್ಲವೇ – ನನ್ನೆದೆಯಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಕಾಮನಬಿಲ್ಲನುಮೂಡಿಸಿದವನು ನೀನು […]

ಕಬ್ಬಿಗರ ಅಬ್ಬಿ ಮನಸ್ಸು ಕಟ್ಟಿದ ಕೇರಿ ಮತ್ತು ಸಾಕ್ಷೀಪ್ರಜ್ಞೆ ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ. ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ […]

ವಾರದ ಕವಿತೆ ನಿರಂತರ ನೋವು ರಾಜೇಶ್ವರಿ ಭೋಗಯ್ಯ ಎದೆಯ ಒಳಗೊಂದು ಚುಚ್ಚುವ ನೋವಿದ್ದರೆಮೈಮೇಲೊಂದು ಗಾಯ ಮಾಡಿಕೊ ನಂತರ ಒಳಗಿನ ನೋವು ಹೆಚ್ಚೋಹೊರಗಿನ ನೋವು ಹೆಚ್ಚೋ ಎಂದು ತಾಳೆ ಹಾಕಿಕೋ ಎದೆಯ ನೋವೇ ಹಿಂಡುವಂತಾದ್ದುಮೈಯ್ಯ ನೋವೇ ಚುಚ್ಚುವಂತಾದ್ದು ಮನವರಿಕೆ ಮಾಡಿಕೋ ಎರಡರ ಜೊತೆ ಸೆಣಸಿ ಸೆಣಸಿ ಮೈಯ ಗಾಯ ಮಾಯಿತುಎದೆಯ ನೋವು ಮತ್ತೆ ಇಣುಕಿತುಚರ್ಮದ ಮೇಲಿನದು ಒಣಗಿದರೂ ವಿಕಾರವಾಯಿತುಯಾರಿಗೂ ಕಾಣದ ನೋವು ಒಳಗಿದ್ದದ್ದೇ ಸಹ್ಯವಾಯಿತು ಗೆಳತಿ ಹೇಳಿದಳು..ಮೂಗು ಚುಚ್ಚಿಸು…ಕಷ್ಟಕ್ಕೂ ,ಸುಖಕ್ಕೂ ,ಎದೆಗೂ ಹತ್ತಿರಒಂದಕ್ಕೊಂದು ಅನುಬಂಧ ಅದೂ ಆಯಿತು…ಹಾಗೇ ಮಾಯಿತುಉಳಿಯುವುದಿಲ್ಲ […]

ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು […]

ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು.             ಕಾಲೇಜ್ […]

Back To Top