ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ

ಪುಸ್ತಕ ಸಂಗಾತಿ ವಿಜಯನಾಗ್‌ ಜಿ. “ಜಪಾನಿನ ಸಾಹಿತ್ಯ ಚರಿತ್ರೆ” ಆರ್. ದಿಲೀಪ್ ಕುಮಾರ್ ಪ್ರಿಯ ವಿಜಯ್ ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ. ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ. ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ‌ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು. ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ. ಸಸ್ನೇಹಪೂರ್ವಕವಾಗಿ ಆರ್. ದಿಲೀಪ್ ಕುಮಾರ್

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ Read Post »

ಪುಸ್ತಕ ಸಂಗಾತಿ

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ.

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ.

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ. Read Post »

ಪುಸ್ತಕ ಸಂಗಾತಿ

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು ಅವಲೋಕನ ಬಿ.ಹೆಚ್. ತಿಮ್ಮಣ್ಣ

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು
ಅವಲೋಕನ ಬಿ.ಹೆಚ್. ತಿಮ್ಮಣ್ಣ
ಕೃತಿ: *ಬಾಳೊಂದು ಚೈತ್ರಾ ಮಯ*
ಲೇಖಕರು: ವಿಶ್ವಾಸ್.ಡಿ. ಗೌಡ
ಪ್ರಕಾಶನ: ಬೊಂಬೆ ಎಂಟರ್ಪ್ರೈಸಸ್ , ಮೈಸೂರು
ಬೆಲೆ:158 /-
ದೊರೆಯುವ ಸ್ಥಳ: ಅಕ್ಷರ ಬುಕ್ ಡಿಪೋ, ಸಪ್ನಾ ಬುಕ್ ಹೌಸ್, ಹಾಸನ ಜಿಲ್ಲೆ.
ಸಂಪರ್ಕಿಸುವ ಮೊಬೈಲ್ ನಂ:9743636831

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು ಅವಲೋಕನ ಬಿ.ಹೆಚ್. ತಿಮ್ಮಣ್ಣ Read Post »

ಪುಸ್ತಕ ಸಂಗಾತಿ

“ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು” ಗೊರೂರು ಅನಂತರಾಜು

“ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು” ಗೊರೂರು ಅನಂತರಾಜು

“ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು” ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ

ಪ್ರವಾಸ ಕಥನದ ಒಂದು ಉತ್ತಮ ಮಾದರಿಯಾಗಿದೆ. ಇದು ಕೇವಲ ಸ್ಥಳಗಳ ವಿವರಣೆ ಮಾತ್ರವಲ್ಲದೆ, ಅಲ್ಲಿನ ವ್ಯಕ್ತಿಗಳ ಒಡನಾಟ, ಅವರ ವ್ಯಕ್ತಿತ್ವದ ವಿಶ್ಲೇಷಣೆ ಮತ್ತು ಇದರಿಂದ ಪಡೆದ ಅನುಭವಗಳನ್ನು ಮನಮುಟ್ಟುವಂತೆ ದಾಖಲಿಸುತ್ತದೆ.
ಪುಸ್ತಕ ಸಂಗಾತಿ

“ಶಹಾಪುರದಿಂದ ಪ<ಜಾಬಿನವರೆಗೆ" ಡಾ. ಸಿದ್ದರಾಮ ಹೊನ್ಕಲ್ ಅವರ "ಲೋಕ ಸಂಚಾರಿ" ಪ್ರಕಾಶಚಂದ ತಾರಾಚಂದ ಜೈನ

ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ Read Post »

ಪುಸ್ತಕ ಸಂಗಾತಿ

ಎಸ್‌ ಎಲ್‌ ಬೈರಪ್ಪನವರ ಕಾದಂಬರಿ “ಉತ್ತರ ಕಾಂಡ” ಒಂದು ಪರಾಮರ್ಶೆ, ಸುಜಾತಾ ರವೀಶ್

ಸುಜಾತಾ ರವೀಶ್

ಎಸ್‌ ಎಲ್‌ ಬೈರಪ್ಪನವರ

“ಉತ್ತರ ಕಾಂಡ”

ಒಂದು ಪರಾಮರ್ಶೆ

ಎಸ್‌ ಎಲ್‌ ಬೈರಪ್ಪನವರ ಕಾದಂಬರಿ “ಉತ್ತರ ಕಾಂಡ” ಒಂದು ಪರಾಮರ್ಶೆ, ಸುಜಾತಾ ರವೀಶ್ Read Post »

ಪುಸ್ತಕ ಸಂಗಾತಿ

“ಮಾನಸೀಕ ಸಮಸ್ಯೆಗಳಿಗೆ ಆಧ್ಯಾತ್ಮದ ದಿವ್ಯೌಷಧ” ಪಿ.ಲಂಕೇಶರ ನಾಟಕ ʼಗುಣಮುಖʼ ಒಂದು ಓದು-ಗಿರಿಜಾ ಮಾಲಿಪಾಟೀಲ ಅವರಿಂದ

ಹೌದು ಅಮಾಯಕರನ್ನು ಹಿಡಿದು ಕೊಲ್ಲುವುದು ರಾಜನಾದವನಿಗೆ ಯಾವ ಕಾಲದಲ್ಲೂ ಶ್ರೇಯಸ್ಕರವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಪ್ರಜೆಗಳೆಂದರೆ ಅರಸನ ಮಕ್ಕಳು.
ಪುಸ್ತಕ ಸಂಗಾತಿ

ಗಿರಿಜಾ ಮಾಲಿಪಾಟೀಲ

“ಮಾನಸೀಕ ಸಮಸ್ಯೆಗಳಿಗೆ

ಆಧ್ಯಾತ್ಮದ ದಿವ್ಯೌಷಧ”

ಪಿ.ಲಂಕೇಶರ ನಾಟಕ

ʼಗುಣಮುಖʼ

“ಮಾನಸೀಕ ಸಮಸ್ಯೆಗಳಿಗೆ ಆಧ್ಯಾತ್ಮದ ದಿವ್ಯೌಷಧ” ಪಿ.ಲಂಕೇಶರ ನಾಟಕ ʼಗುಣಮುಖʼ ಒಂದು ಓದು-ಗಿರಿಜಾ ಮಾಲಿಪಾಟೀಲ ಅವರಿಂದ Read Post »

ಪುಸ್ತಕ ಸಂಗಾತಿ

ಗುರುಸ್ವಾಮಿ ಕಲಕೇರಿ ಅವರ ಕೃತಿ “ಚಿನುಮಯ”(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಗುರುಸ್ವಾಮಿ ಕಲಕೇರಿ ಅವರ ಕೃತಿ “ಚಿನುಮಯ”(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಗುರುಸ್ವಾಮಿ ಕಲಕೇರಿ ಅವರ ಕೃತಿ “ಚಿನುಮಯ”(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »

ಪುಸ್ತಕ ಸಂಗಾತಿ

“ಎದೆಯ ಹಣತೆಯ ಅಂತರಂಗ” ಬೂಕರ್‌ ಪ್ರಶಸ್ತಿ ವಿಜೇತ ಬಾನುಮುಷ್ತಾಕ್‌ ಅವರಕೃತಿ ʼಎದೆಯ ಹಣತೆʼ ಕಥಾ ಸಂಕಲನದ ಓಂದು ಓದುಮತ್ತು ವಿಶ್ಲೇಷಣೆ ಜ್ಯೋತಿ.ಬಿ.ದೇವಣಗಾoವ್ ಅವರಿಂದ

ಪುಸ್ತಕ ಸಂಗಾತಿ ಜ್ಯೋತಿ.ಬಿ.ದೇವಣಗಾoವ್ “ಎದೆಯ ಹಣತೆಯ ಅಂತರಂಗ” ಬೂಕರ್‌ ಪ್ರಶಸ್ತಿ ವಿಜೇತ ಬಾನುಮುಷ್ತಾಕ್‌ ಅವರಕೃತಿ ʼಎದೆಯ ಹಣತೆʼ ಕಥಾ ಸಂಕಲನದ ಓಂದು ಓದುಮತ್ತು ವಿಶ್ಲೇಷಣೆ ಎದೆಯ ಹಣತೆಯ ಅಂತರಂಗ ಬಾನು ಮುಷ್ತಾಕ್ ಈಗ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿರುವ ಮುನ್ನೆಲೆಯ ಹೆಸರು.ಅವರ ಸಾಹಿತ್ಯ ಪಯಣ ಪ್ರಾರಂಭಗೊಂಡು ಮೂರ್ನಾಲ್ಕು ದಶಕಗಳು ಕಳೆದಿದ್ದರು ಅವರ ಪ್ರಯತ್ನಗಳಿಗೆ ಸಾಹಿತಿಯೊಬ್ಬರಿಗೆ ಸಲ್ಲಬಹುದಾದ ಗರಿಷ್ಠ ಹೆಸರು ಕೀರ್ತಿ ಈಗ ಲಭಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಗ್ರಹಿಣಿ,ವಕೀಲೆ,ಹೋರಾಟಗಾರ್ತಿ,ಸಾಹಿತಿ ಹೀಗೆ ಅನೇಕ ಕವಲುಗಳಲ್ಲಿ ಸಾಗುತ್ತಾ ಒಂದರಿಂದ ಮತ್ತೊಂದಕ್ಕೆ ಸ್ಫೂರ್ತಿ,ಬಲ ಮತ್ತು ಬೆಳಕನ್ನು ಪಡೆದುಕೊಳ್ಳುತ್ತಾ ತಮಗೆ ದೊರೆತುದನ್ನು ಓದುಗರಿಗೆ ತಮ್ಮ ಬರಹಗಳ ಮೂಲಕ ಹಂಚಿಕೊಳ್ಳುತ್ತಾ ಸಾಗಿದವರು ಅವರು. ಅನೇಕ ಜನಪರ ಹೋರಾಟಗಳಲ್ಲಿ ಅವರ ಹೆಸರು ಕೇಳಿಬರುತ್ತಿದ್ದುದು ಅವರ ದಿಟ್ಟ ನಿಲುಗಳಿಂದ,ನಿರoತರವಾಗಿ ಚಾಲ್ತಿಯಲ್ಲಿದ್ದ ಹೋರಾಟ ಮನೋಭಾವನೆಗಳಿಂದ.ಹೋದ ವರ್ಷ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಜರುಗಿತು.ಅಲ್ಲಿನ ಸಮ್ಮೇಳನದ ಭಾಗವಾಗಿ ಯಾವುದೇ ಪ್ರಮುಖ ಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದವರು ಆಯ್ಕೆ ಮಾಡಿಕೊಳ್ಳದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿತ್ತು.ಅಥವಾ ಅವರನ್ನು ಕಡೆಗಣಿಸಲಾಗಿತ್ತು.ದೇಶದಲ್ಲಿ ಹೆಚ್ಚುತ್ತಲಿರುವ ಅಸಹಿಷ್ಣುತೆ ಮತ್ತು ಕೋಮುವಾದಕ್ಕೆ ಇಂಬುಕೊಡುವಂತೆ ಈ ಘಟನೆ ಕಂಡುಬಂದಿತು.ಇದನ್ನು ವಿರೋಧಿಸಿದ್ದ ಸಮಾನ ಮನಸ್ಕರ ಸಭೆ ಪರ್ಯಾಯ ಸಮ್ಮೇಳನ ನಡೆಸಿ ಅದಕ್ಕೆ ಅಧ್ಯಕ್ಷರಾಗಿ ಶ್ರೀಮತಿ.ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿತು.ಅವರ ನೇತೃತ್ವದಲ್ಲಿಯೇ ಸಮ್ಮೇಳನ ಯಶಸ್ವಿಯಾಗಿಯೂ ನೆರವೇರಿಸಲಾಗಿತ್ತು.ಆಗ ಕರ್ನಾಟಕದ ಬುದ್ಧಿಜೀವಿಗಳ ಚಿತ್ತ ಬಾನು ಮೇಡಂ ಅವರತ್ತ ಮತ್ತೊಮ್ಮೆ ಸೆಳೆದದ್ದು ಸುಳ್ಳಲ್ಲ.ದೇಶದಲ್ಲಿ ಅಥವಾ ರಾಜ್ಯದಲ್ಲಿ ನಡೆಯುವ ದೌರ್ಜನ್ಯ,ಕೋಮು ದಂಗೆಗಳು,ಗಲಭೆಗಳು,ಮುಂತಾದ ಅಹಿತಕರ ಘಟನೆಗಳ ಕುರಿತು ಸಮಚಿತ್ತದ ಸಮಯೋಚಿತ ಅಭಿಪ್ರಾಯ ಮತ್ತು ಸಂಭವನೀಯ ಸಾಧ್ಯತೆಗಳತ್ತ ಚಿತ್ತ ಸೆಳೆಯುತ್ತಿದ್ದವು ಅವರ ಮುಖಪುಟವೆಂಬ ಫೆಸ್ ಬುಕ್ ಗೋಡೆಯ ಬರಹಗಳು.2025 ರಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆ ಶಾರ್ಟ್ ಲಿಸ್ಟ್ ಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದ ಅವರ ಪುಸ್ತಕ ಹಾರ್ಟ್ ಲ್ಯಾಂಪ್, ಶಾರ್ಟ್ ಸ್ಟೋರೀಸ್.ಕೊನೆಯ ಸುತ್ತಿನಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದು ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಬಾನು ಮುಷ್ತಾಕ್ ಅವರ ಸುಮಾರು ಆರು ಕಥಾ ಸಂಕಲನಗಳಿಂದ ಆಯ್ದುಕೊಂಡ ಹನ್ನೆರಡು ಕತೆಗಳ ಅನುವಾದ ಹಾರ್ಟ್ ಲ್ಯಾಂಪ್. ಕನ್ನಡದ ಸಾಹಿತ್ಯದ *ಎದೆಯ ಹಣತೆ*ಬೆಳಗಿಸಿತ್ತು.ಸಾವಿರಾರು ವರ್ಷಗಳಿಂದ ಕನ್ನಡದ ಸಾಹಿತ್ಯ ಹಣತೆ ಬೆಳಗಿಸಿಟ್ಟ ಮಹನೀಯರ ಶ್ರಮಕ್ಕೆ ತಮ್ಮದೂ ಬಲ ಪೇರಿಸಿದರು ಬಾನು ಮುಷ್ತಾಕ್.ದೇಶ ವಿದೇಶಗಳಲ್ಲಿ ಹಾರ್ಟ್ ಲ್ಯಾಂಪ್ ಕುರಿತು ಸಂವಾದಗಳಲ್ಲಿ ಭಾಗವಹಿಸುತ್ತಾ ತಮ್ಮ ಬದುಕು,ಬರಹ ತಮ್ಮನ್ನು ಪ್ರಭಾವಿಸಿದ ಸಂಗತಿಗಳು,ತಮ್ಮ ಬದುಕಿನಲ್ಲಿ ಕಂಡ ಅನುಭವಗಳನ್ನು ಪ್ರಪಂಚದ ಎದುರಲ್ಲಿ ಹಂಚಿಕೊಳ್ಳುವ ಸುವರ್ಣ ಘಳಿಗೆ ಅವರಿಗೆ ಬಂದೊದಗಿದೆ. ಬೂಕರ್ ಪ್ರಶಸ್ತಿ ಸ್ವೀಕರಿಸಿದ ನಂತರ ಅವರಾಡಿದ ಮಾತುಗಳು ತುಂಬಾ ಮೌಲಿಕವಾಗಿದ್ದವು.ಅನುವಾದಕಿ ದೀಪಾ ಭಾಸ್ತಿ ಮತ್ತು ಮೂಲ ಲೇಖಕಿ ಬಾನು ಮುಷ್ತಾಕ್ ಎರಡು ಭಿನ್ನ ಧರ್ಮಗಳ ವಿಭಿನ್ನ ಧಾರ್ಮಿಕ ಆಚರಣೆಗಳಲ್ಲಿನ ಎರಡು ಧ್ರುವಗಳ ಸಂಗಮದಂತೆ ಕಂಡರೂ ಹೆಣ್ಣು ಎನ್ನುವ ಸಮಾನ ಸಂವೇದನೆ ಅವರನ್ನು ಹತ್ತಿರಕ್ಕೆ ಎಳೆದು ತಂದಿತೆ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಬ್ಬರ ಜೋಡಿ, ಪ್ರಪಂಚವನ್ನು ಕನ್ನಡ ಸಾಹಿತ್ಯದತ್ತ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ.ಬೂಕರ್ ಸ್ವೀಕರಿಸಿದ ನಂತರ ಅವರು ಹಾಸನದ ನಾಗರಿಕರ ಸನ್ಮಾನ ಸ್ವೀಕರಿಸಿ ಬೂಕರ್ ಪ್ರಶಸ್ತಿ,ಅದರ ಆಯ್ಕೆ ಕ್ಷಣಗಳು,ಅನಂತರದ ಸಂಭ್ರಮದ ಕುರಿತು ಸಭಿಕರಿಗೆ ವಿವರಿಸಿದ್ದು ತುಂಬಾ ಅರ್ಥಪೂರ್ಣವಾಗಿತ್ತು.ಆಯ್ಕೆ ಪ್ರಕ್ರಿಯೆ ಮತ್ತು ಅದರ ಅನoತರದ ಪ್ರಕ್ರಿಯೆಗಳನ್ನು  ಸಹಜವಾಗಿ ಸರಳವಾಗಿ ಹಂಚಿಕೊಂಡದ್ದು ಅವರ ಸರಳತೆಗೆ ಮತ್ತೊಂದು ಉದಾಹರಣೆ. ಮಕ್ಕಳ ಮುಗ್ಧ ನಗು,ಕನ್ನಡ ಭಾಷೆಗೆ ಅದು ದಕ್ಕಿದೆ ಎನ್ನುವ ಅಭಿಮಾನ ಅವರ ನಡೆ ನುಡಿಗಳಲ್ಲಿ ಪ್ರತಿಫಲಿಸುತ್ತಿದ್ದವು.ಅವರ ಬರಹಗಳ ಕುರಿತು ಒಳಹೊಕ್ಕು ಕತಾಂತರಂಗ ಅರಿಯಲು ಸಂಶೋಧನಾತ್ಮಕ ನೆಲೆಯ ಓದು ತುಂಬಾ ಮುಖ್ಯ ಈ ಮೂಲಕ ಅವರ ಬರಹಗಳ ಆಳ ಶೋಧಿಸಲು ಸಾದ್ಯವಾಯಿತು.ಅವರ ಬರಹಗಳು ತುಂಬಾ ಸರಳ ಪದಗಳಲ್ಲಿ ಮೂಡಿಬಂದರು ಅವುಗಳಲ್ಲಿನ ಆಳವಾದ ಚಿಂತನೆಗಳು,ಸಂವೇದನೆಗಳು ಗಾಢ ಪ್ರಭಾವದ ಛಾಪು ಒತ್ತುತ್ತವೆ.ಅವುಗಳಲ್ಲಿನ ತಾತ್ವಿಕತೆ ಓದುಗರನ್ನು ಬಹುಕಾಲ ಕಾಡುವಂತಹವಾಗಿವೆ.ಅವರ ಬರಹಗಳನ್ನು ಆಳವಾಗಿ ಸ್ಪರ್ಶಿಸಲು ವಿವೇಚನಾಯುಕ್ತ ಓದು ಅವಶ್ಯಕವಾಗಿ ತೋರುತ್ತದೆ.ಬಳ್ಳಾರಿಯಲ್ಲಿ ಜರುಗಲಿರುವ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಸಾರಥ್ಯ ಬಾನು ಮುಷ್ತಾಕ್ ಅವರಿಗೆ ನೀಡಲಾಗಿದೆ.ಬಹು ಜನರ ಬಹುದಿನದ ಬೇಡಿಕೆಯ ಮನ್ನಣೆ ಎಂಬಂತೆ ಮೊದಲಬಾರಿಗೆ ಮಹಿಳೆಯೋರ್ವರ ಸಾರಥ್ಯದಲ್ಲಿ ಕನ್ನಡಮ್ಮನ ಉತ್ಸವ ಜರುಗಲಿದೆ ಹಲವು ಹೊಸತುಗಳಿಗೆ ಸಾಕ್ಷಿಯಾಗಲಿರುವ ಈ ಸಮ್ಮೇಳನ ಬಾನು ಮುಷ್ತಾಕ್ ಅವರ ಮುಂದಾಳತ್ವದಲ್ಲಿ ನಡೆದು ಸಮ್ಮೇಳನ ತನ್ನ ಮೂಲ ಅರ್ಥವನ್ನು ಮತ್ತೆ ಪಡೆದುಕೊಳ್ಳಲಿ ಎನ್ನುವ ಆಶಯದ ನಿರೀಕ್ಷೆಯಲ್ಲಿದೆ ಕನ್ನಡ ಸಾರಸ್ವತ ಲೋಕ. 1  ಶಾಯಿಸ್ತ ಮಹಲ್ ನ ಕಲ್ಲು ಚಪ್ಪಡಿಗಳು ಶಾಯಿಸ್ತ ಮಹಲ್ ನ ಕಲ್ಲು ಚಪ್ಪಡಿಗಳು ಕಥೆಯ ಪಾತ್ರಗಳು ಮತ್ತು ಕಥಾ ಸಾರಾಂಶ ಅನೇಕ ವಿಷಯಗಳತ್ತ ಓದುಗರ ಗಮನವನ್ನು ಸೆಳೆಯುತ್ತವೆ.ಇಲ್ಲಿನ ಹೆಸರುಗಳು ಮುಸ್ಲಿಂ ಸಮುದಾಯದ ಹೆಸರುಗಳನ್ನು ಹೊಂದಿದ್ದರೂ ಅವುಗಳು ಹೇಳುವ ಮಾತುಗಳೆಲ್ಲ ಇಡೀ ಮನುಕುಲದ ರೂಢಿಗತ ಮನೋವ್ಯಾಪಾರಗಳ ಪ್ರಾತಿನಿಧಿಕ ಸ್ವರೂಪವನ್ನು ತೋರುತ್ತವೆ.ಕುಟುಂಬ ಪರಿಸರವು ಮಾನವ ಕುಲದ ಹೆಚ್ಚಳಕ್ಕೆ ಪೋಷಕವಾಗಿ ರೂಪಗೊಂಡರೂ ಆ ವ್ಯವಸ್ಥೆಯಲ್ಲಿ ಹೆಣ್ಣು ಜೀವದ ಕುರಿತಾಗಿ ಇರಬೇಕಾದ ಸಂವೇದನೆಗಳೆಡೆಗಿನ ರೂಕ್ಷತೆಯನ್ನ ಇಲ್ಲಿ ಪ್ರಮುಖವಾಗಿ ಕಾಣಿಸಲಾಗಿದೆ.ಸಮಸ್ತ ಪುರುಷ ಕುಲವು ಇದಕ್ಕೆ ಉದಾಹರಣೆಯಾಗಿ ನೀಡಬಹುದಾ ಎಂದರೆ ಇಲ್ಲ, ಅಲ್ಲಲ್ಲಿ ತಮ್ಮ ಸುತ್ತಲಿನ ಹೆಣ್ಣುಮಕ್ಕಳಿಗಾಗಿ ಮಿಡಿಯುವ ತುಡಿಯುವ ಒಂದಿಷ್ಟು ಜೀವಗಳು ಇರುವುದರಿಂದ ಈಗಲೂ ಹೆಣ್ಣುಕುಲ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗಿದೆ.ನಿಟ್ಟುಸಿರು! ಅದು ಸರಾಗವಾಗಿ ಉಸಿರಾಡುವ ಉಸಿರಿನಂತಲ್ಲ ಅದಕ್ಕೆ ತನ್ನದೇಯಾದ ಆವೇಗ,ಧಾವಂತ,ಯೋಚನೆಗಳ ಒತ್ತಡ,ಭಯ,ಉದ್ವೇಗ ಮುಂತಾದ ರೂಪಾಂತರಗಳನ್ನು ಹೊದ್ದ ಸಂಕೀರ್ಣ ಪ್ರಕ್ರಿಯೆಯದು. ಶಾಯಿಸ್ತ ಮಹಲ್ ನ ಕಲ್ಲುಚಪ್ಪಡಿಗಳು ಕಥೆಯ ಶೀರ್ಷಿಕೆ ಶಾಯಿಸ್ತ ಮತ್ತು ಇಪ್ತಿಕಾರ್ ವಾಸಿಸುವ ಮನೆಯ ಹೆಸರು.ಆ ಮನೆಯನ್ನು ಸಾಧಾರಣ ಮನೆ ಎನ್ನುವುದಕ್ಕಿಂತಲೂ ಮಹಲ್ ಎಂತಲೇ ಗ್ರಹಿಸಬಹುದಾದ ಒಂದು ದೊಡ್ಡದಾದ,ಜೀವನಶೈಲಿಯನ್ನು  ಸರಳಗೊಳಿಸುವ ಆಧುನಿಕ ಪರಿಕರಗಳನ್ನು ಒಳಗೊಂಡ ವೈಭವದಿಂದ ಕೂಡಿದ ಮಹಲ್ ನ ಚಿತ್ರಣವನ್ನು ಕಥೆ ಕಟ್ಟಿಕೊಡುತ್ತದೆ.ಮನೆಯ ಬಯಲು ಜಾಗದಲ್ಲಿ ನೆಟ್ಟ ಸೀಬೆ ಹಣ್ಣಿನ ಗಿಡ ,ಗಟ್ಟಿಯಾದ ಸರಪಳಿಯ ಜೋಕಾಲಿ,ವಿವಿಧ ರೀತಿಯ ಹೂವಿನ ಗಿಡ ಮತ್ತು ಬಳ್ಳಿಗಳ ವಿವರಣೆಗಳು ಒಂದು ದೊಡ್ಡ ಮನೆ ಮತ್ತು ಸುತ್ತಲಿನ ಆಹ್ಲಾದಕರ ವಾತಾವರಣದ ಅನುಭವವನ್ನು ಓದುಗರಿಗೆ ನೀಡುತ್ತದೆ.ಅರಳಿದ ಹೂವುಗಳನ್ನು ಬಿಡಿಸಿ ಹೆಂಡತಿಗೆ ಮಾಲೆಕಟ್ಟಲು ನೀಡುವ,ಪ್ರತಿ ಮಾತುಗಳಲ್ಲೂ ತನ್ನ ಪ್ರೇಮವನ್ನು ನಿವೇದಿಸುವ,ಪ್ರಕಟಿಸುವ,ಸಮರ್ಥಿಸಿಕೊಳ್ಳುವ ಇಪ್ತಿಕಾರ್ ನಮ್ಮ ಸಮಾಜದ ಬಹುತೇಕ ಗಂಡಸರ ಪ್ರತಿನಿಧಿಯಂತೆ ತೋರುತ್ತಾನೆ.ಅವನ ಮಾತುಗಳಲ್ಲಿ ಪ್ರಾಮಾಣಿಕತೆ,ಬದ್ಧತೆ ಇವುಗಳಿಗೆ ಅರ್ಥವಿದೆಯಾ ಎಂದು ಯೋಚಿಸಿದರೆ ಎಳ್ಳಷ್ಟೂ ಇಲ್ಲ ಎನ್ನುವುದು ಅವನು ತನ್ನ ಮಗಳೊಂದಿಗೆ,ಇನ್ನಿತರ ಮಕ್ಕಳೊಂದಿಗೆ,ತನ್ನ ಹೆಂಡತಿಯೊಂದಿಗೆ ನಡೆದುಕೊಳ್ಳುವ ನಡುವಳಿಕೆಗಳು ದೃಢವಾಗಿಸುತ್ತವೆ.ಅವು ಆತ ಸ್ವಯಂ ರೂಢಿಸಿಕೊಂಡ ರೂಢಿಗಳೋ ಅಥವಾ ಹೇರಲ್ಪಟ್ಟ ನಡಾವಳಿಗಳೋ ಆಗಿ ಇಲ್ಲಿ ತೋರುವುದಿಲ್ಲ ಇಲ್ಲಿನ ಎಲ್ಲ ಸಂದರ್ಭಗಳಲ್ಲಿ ಕಾಣುವ ವರ್ತನೆಗಳು ಸಹಜ ಎನ್ನುವಂತೆ ರೂಢಿಗೊಂಡ ಜೀವನ ಪದ್ಧತಿಯಿಂದ ಬಂದಂತ ಸಂಗತಿಗಳಾಗಿವೆ. ಇಪ್ತಿಕಾರ್,ಶಾಯಿಸ್ತಳೊಡನೆ,ಅವರ ಮಗಳು ಆಸಿಫಾಳೊಡನೆ ವರ್ತಿಸುವ ವರ್ತನೆಗಳು ಎಲ್ಲವೂ ಗಂಡಾಳಿಕೆಯ ಸ್ವರೂಪವನ್ನು ಪ್ರತಿನಿಧಿಸುತ್ತವೆ.ತನ್ನೊಡನಿರುವ ಹೆಣ್ಣು ಜೀವಗಳ ಆಸೆ,ಆಕಾಂಕ್ಷೆ,ಸುಖ,ದುಃಖಗಳ ಸಂವೇದನೆಗಳಿಗೆ ಕುರುಡಾದ,ಕಿವುಡಾದ ಇಪ್ತಿಕಾರ್ ಸಮಾಜದ ಬಹುತೇಕ ಪುರುಷರ ಪ್ರತಿನಿಧಿಯಾಗಿ ಗೋಚರಿಸುತ್ತಾನೆ.ಇದಕ್ಕೆ ವೈರುಧ್ಯವಾಗಿ ಜೀನತ್,ಮುಜಾಹಿದ್ ಪಾತ್ರಗಳು ಕಂಡುಬರುತ್ತವೆ ಇಪ್ಪತ್ತೊಂದನೇ ಶತಮಾನದ ಸ್ತ್ರೀವಾದದ ನಿಲುವುಗಳನ್ನು ಮೈಗೂಡಿಸಿಕೊಂಡ ವಿದ್ಯಾವಂತ ಪದವೀಧರೆ ಜೀನತ್ ಮತ್ತು ಅವಳ ಸುಧಾರಿತ ನಡೆಗಳನ್ನು ವಿರೋಧಿಸದ ಮುಜಾಹಿದ್ ಒಂದೇ ಧರ್ಮದಲ್ಲಿನ ಜನರ ವಿಭಿನ್ನ ಮನಸ್ಥಿತಿಯ ಪ್ರತಿರೂಪಗಳಾಗಿ ಕಂಡುಬರುತ್ತಾರೆ.ಹಲವು ಹೆಣ್ಣುಗಳ ಸಂಘಕ್ಕೆ ಹಾತೊರೆಯುತ್ತಲೇ ತನ್ನ ಹೃದಯಾಂತರಾಳದ ಪ್ರೇಮ ಶಾಯಿಸ್ತ ಎನ್ನುತ್ತಾನೆ ಇಫ್ತಿಕಾರ್,ಇದು ಆತನ ಇಬ್ಬಂದಿತನ ಮನಸ್ಥಿತಿ ಮತ್ತು ಹಲವು ಪತ್ನಿಯರನ್ನು,ಸ್ತ್ರೀ ಸಖ್ಯವನ್ನು ಹೊಂದುವುದು ಪುರುಷರಲ್ಲಿ ಸಹಜ ಮತ್ತು ಸಾಮಾನ್ಯ ಎನ್ನುವ ಮನಸ್ಸು ಆತನದ್ದು. ಅದನ್ನು ಓರೆಗೆ ಹಚ್ಚಿ ನೋಡದ,ಅಂತಹ ವಿಚಾರವೇ ಮನದಲ್ಲಿ ಉದ್ಭವಿಸದ ಮನಸ್ಥಿತಿಯ ಶಾಯಿಸ್ತ. ಶಹಜಾನ್ ನಂತೆ ಪ್ರೇಮದ ತಾಜ್ ಮಹಲ್ ಕಟ್ಟುವೆ ಎಂದು ಮಾತುಮಾತಿಗೂ ಉದ್ಘರಿಸುವ,ತನ್ನ ಪ್ರೇಮವನ್ನು ಅಭಿನಯಿಸುವ ರೂಢಿ ಆತನದ್ದು.ತನ್ನ ಹೆಂಡತಿಮೇಲಿನ ಪ್ರೀತಿಗಾಗಿಯೇ ಮನೆಯ ಸುತ್ತಲಿನ ಹೂ ಹಣ್ಣಿನ ಗಿಡಗಳನ್ನು,ಜೋಕಾಲಿಗಳನ್ನು ಹಾಕಿಸಿದ್ದಾಗಿ ಹೇಳುತ್ತಾನೆ ಇಫ್ತಿಕಾರ್.ಮುಂದೆ ತನ್ನ ಪ್ರೀತಿಯ ಮಡದಿ ಶಾಯಿಸ್ತಾ ಮರಣಿಸಿದ ನಂತರ ನಲವತ್ತು ದಿನಗಳ ಕಾರ್ಯ ಮುಗಿಸಿದ ತಕ್ಷಣವೇ ಮತ್ತೊಂದು ಹೆಣ್ಣಿನೊಡನೆ ಮದುವೆಯಾಗುತ್ತಾನೆ. ಶಾಯಿ ಸ್ತಾಳೊಂದಿಗಿನ ಹದಿನೇಳು ವರ್ಷದ ದಾಂಪತ್ಯ ಹದಿನಾರು ವರುಷದ ಮಗಳು ಮತ್ತು ಇನ್ನಿತರ ವಯೋಮಾನದ ಮತ್ತು ನಲವತ್ತು ದಿನದ ಹಸುಗೂಸನ್ನು ಒಳಗೊಂಡ ಆರು ಮಕ್ಕಳು ಇವು ಯಾವುವೂ ಆತನ ಮರು ವಿವಾಹಕ್ಕೆ ಅಡ್ಡಿ ಎನಿಸುವುದಿಲ್ಲ. ಆತ ಕೊಡುವ ಸ್ಪಷ್ಟ ಕಾರಣ ತನ್ನ ಚಿಕ್ಕ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಮದುವೆಯಾಗಿದ್ದು ಎನ್ನುವುದು.ಅವನ ಮಾತಿಗೆ ತದ್ವಿರುದ್ಧ ಎನ್ನುವಂತೆ ಎಳೆಯ ಕೂಸಾದ ತನ್ನ ಚಿಕ್ಕ ತಮ್ಮನ ಜೊತೆ ತನ್ನ ತಮ್ಮ ಮತ್ತು ತಂಗಿಯರನ್ನು ಆಟವಾಡಿಸುತ್ತಾ ಅಂಗಳದಲ್ಲಿ ಕೂತಿರುತ್ತಾಳೆ ಆಸಿಫಾ,ಅದು ತನ್ನ ತಂದೆಯ ಹೊಸ ಹೆಂಡತಿಯೊಂದಿಗೆ ಏಕಾಂತಕ್ಕೆ ಅನುಕೂಲವಾಗಲೆಂದು. ಶಾಯಿಸ್ತಳಿಗಿಂತಲು ಹತ್ತು ವರ್ಷ ಹಿರಿಯನಾಗಿದ್ದ ಇಪ್ತಿಕಾರ್ ಮುಂದೆ ಹದಿನೆಂಟು ವರ್ಷದ ಬಾಲೆಯನ್ನು ಮದುವೆಯಾದದ್ದು ಇವೆಲ್ಲವೂ ಹೆಣ್ಣು ಬದುಕಿನ ಬಿಕ್ಕಟ್ಟುಗಳನ್ನು ಬಿಚ್ಚಿಡುತ್ತದೆ. ಹತ್ತನೇ ತರಗತಿ ಮುಗಿಸಿ ಒತ್ತಾಯಕ್ಕೆ ಶಾಲೆಬಿಟ್ಟ ಮಗಳನ್ನು ಮದುವೆ ಮಾಡಿ ಕೊಡಬೇಕು ಎನ್ನುವುದು ತಂದೆಯ ಮನಸ್ಥಿತಿ.ಮಗಳನ್ನು ಮುಂದಿನ ವಿದ್ಯಾಭ್ಯಾಸಕ್ಕೆ ತೊಡಗಿಸಿ ಪದವೀಧರೆಯನ್ನಾಗಿ ಮಾಡಬೇಕು ಎನ್ನುವುದು ತಾಯಿಯ ಇಂಗಿತ ಆದರೆ ಅದು ಶಾಯಿಸ್ತಾಳ ಮರಣದೊಂದಿಗೆ ಆಸೆಯೂ ಕೊನೆಗೊಳ್ಳುತ್ತವೆ.ಶಾಯಿಸ್ತ ಹೇಳುವಂತೆ ಆಕೆಗೆ ತಾನು ಇರುವಾಗಲೇ ತನ್ನ ಹಿರಿಯಮಗಳು ತನ್ನನ್ನು ತನ್ನ ಇತರ ಮಕ್ಕಳನ್ನು ಮಗಳಾಗಿ ಅಲ್ಲದೆ ಅಮ್ಮನಾಗಿ ಅವರನ್ನು ಸಂಭಾಳಿಸುತ್ತಿದ್ದಳು.ಇನ್ನು ಅಮ್ಮನ ಮರಣದ ನಂತರ ಅಕ್ಷರಶಹ: ಆಕೆ ತಾಯಿಯೇ ಆಗಿ ನಿಂತಳು.ಜೀನತ್ ಳ ತಾಯಿ ತನ್ನ ಮಕ್ಕಳು ಅಥವಾ ಸೊಸೆಯಂದಿರು ಬಾಣಂತನದ ಸಮಯದಲ್ಲಿ ಹೇಳುತ್ತಿದ್ದ ಮಾತುಗಳು,ಕಟ್ಟುನಿಟ್ಟಾಗಿ ಹಾಕುತ್ತಿದ್ದ ನಿಯಮಗಳು,ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದ್ದ ಪುಷ್ಟಿಕರ ಆಹಾರಗಳು ಎಲ್ಲವೂ ಪ್ರತಿ ಹೆಣ್ಣಿನ ಬಾಣಂತನದ ಸಮಯದಲ್ಲಿ ಅನುಸರಿಸಬೇಕಾದ ಪದ್ಧತಿಗಳನ್ನು ಅನಾವರಣಗೊಳಿಸಿವೆ.ಇದು ಸಾರ್ವತ್ರಿಕವಾಗಿ ಎಲ್ಲ ಹೆಂಗಳೆಯರ ಬಾಣಂತನಗಳಲ್ಲಿ ಕಂಡು ಬರುವ ಚಿತ್ರಣವಾಗಿದ್ದು ಆಹಾರದ ವಿಧಗಳಲ್ಲಿ ಭಿನ್ನತೆ ಹೊಂದಿದ್ದರು ಆರೈಕೆಯಲ್ಲಿ ಅಷ್ಟೊಂದು ವ್ಯತ್ಯಾಸಗಳಿಲ್ಲ.ಬಾಣಂತನದ ನಂತರದ ನಲವತ್ತು ದಿನಗಳು ತುಂಬಾ ಜಾಗರೂಕರಾಗಿ ಕಳೆಯಬೇಕಿದ್ದು ಆಗ ನಲವತ್ತು ಗೋರಿಗಳು ಬಾಯ್ತೆರೆದು ಕುಳಿತಿದ್ದು ಒಂದೊಂದು ದಿನಕಳೆದಂತೆ ಒಂದೊಂದು ಗೋರಿಗಳು ಬಾಯಿಮುಚ್ಚುತ್ತವೆ ಎನ್ನುವ ಅನುಭವಿಕ ಮಾತು ತಾಯ್ತನದ ಹೊಸ ದಿನಗಳಲ್ಲಿ  ತಾಯಿ ಮತ್ತು ಹಸುಗೂಸಿನ ಸೂಕ್ಷ್ಮ ಆರೋಗ್ಯ ಮತ್ತು ಮನಸ್ಥಿತಿಯನ್ನು ತೆರೆದಿಡುತ್ತದೆ. ದೇಹ ಮತ್ತು ಮನಸ್ಸುಗಳು ಸ್ವಸ್ಥಗೊಳ್ಳುವವರೆಗೂ ಪತಿಯ ಸಂಪರ್ಕದಿಂದ ದೂರವಿರುವ,ಮುಂದಿನ ದಿನಗಳಲ್ಲಿಯೂ ಆರೋಗ್ಯಯುತ ಬದುಕಲು ಇನ್ನಿತರ ಸಮುದಾಯಗಳ ಸ್ತ್ರೀಯರು ಅನುಸರಿಸುವ ಪದ್ಧತಿಗಳ ಕುರಿತು ತಾಯಿ ಕಿವಿ ಮಾತು ಹೇಳುವ ವಿವರಗಳು ಜೀನತ್ ನ ಮೂಲಕ ಓದುಗರನ್ನು ತಲುಪುತ್ತವೆ. ಹೆಂಡತಿಯ ಸಾವು ಗಂಡನಿಗೆ ಮೊಣಕೈಗೆ ಬಡಿಯುವ ಬಲವಾದ ಏಟಿನಿಂದಾಗುವ ನೋವಿನ ಸಂವೇದನೆ ಮಾತ್ರ ಎನ್ನುವ ಮಾತು ಹೆಣ್ಣಿನ ಅಂತರಾಳದ ಅನುಭವದ ಮಾತು. ನಮ್ಮಲ್ಲಿ ಈಗಲೂ ಒಂದು ಮಾತಿದೆ “ಮಗ ಸತ್ತ ಮನೆ ಮಸoಟಿಗಿ ಸೊಸೆ ಸತ್ತ ಮನೆಗೆ ಸೋಬಾನ” ಇದರರ್ಥ ಮಗ ಮರಣಿಸಿದ ಮನೆ ಆತನ ದುಡಿಮೆ,ಆದಾಯ,ನೆಮ್ಮದಿ,ಆಸರೆ ಎಲ್ಲವನ್ನೂ ಕಳೆದುಕೊಂಡು ಸ್ಮಶಾನದ ರೀತಿ ನೀರವತೆಯನ್ನ ಹಾಸಿ ಹೊದ್ದುಕೊಂಡರೆ,ಸೊಸೆ ಮರಣಿಸಿದ ಮನೆಯಲ್ಲಿ ಅನಂತರದ ಕ್ರಿಯಾ ಕಾರ್ಯಗಳು ಮುಗಿಸಿ ಕೆಲವು ದಿನಗಳ ನಂತರ ಮತ್ತೊಂದು ಹೆಣ್ಣನ್ನು ಮದುವೆ ಮಾಡಿ ಕರೆತರಲಾಗುತ್ತದೆ.ಇದು ಗಂಡಿನ ಜೀವನದಲ್ಲಿ ಹೆಂಡತಿಯ ಸಾವು ಅವನಿಗೆ ಮರು ಮದುವೆಯ ಅವಕಾಶದ ಬಾಗಿಲು ತೆರೆದೆ ಇಟ್ಟರೆ,ಹೆಣ್ಣಿಗೆ ಅದು

“ಎದೆಯ ಹಣತೆಯ ಅಂತರಂಗ” ಬೂಕರ್‌ ಪ್ರಶಸ್ತಿ ವಿಜೇತ ಬಾನುಮುಷ್ತಾಕ್‌ ಅವರಕೃತಿ ʼಎದೆಯ ಹಣತೆʼ ಕಥಾ ಸಂಕಲನದ ಓಂದು ಓದುಮತ್ತು ವಿಶ್ಲೇಷಣೆ ಜ್ಯೋತಿ.ಬಿ.ದೇವಣಗಾoವ್ ಅವರಿಂದ Read Post »

ಪುಸ್ತಕ ಸಂಗಾತಿ

ತ್ಯಾಗರಾಜ್‌ ಮಟ್ಟನಹಳ್ಳಿ ಅವರ ಕೃತಿ “ಚಾರಣದ ಸ್ಮರಣೆಗಳು”ಅವಲೋಕನ ಗೊರೂರು ಅನಂತರಾಜು

“ಚಾರಣದ ಸ್ಮರಣೆಗಳು”

ಗೊರೂರು ಅನಂತರಾಜು

ತ್ಯಾಗರಾಜ್‌ ಮಟ್ಟನಹಳ್ಳಿ

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ
ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ. ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ

ತ್ಯಾಗರಾಜ್‌ ಮಟ್ಟನಹಳ್ಳಿ ಅವರ ಕೃತಿ “ಚಾರಣದ ಸ್ಮರಣೆಗಳು”ಅವಲೋಕನ ಗೊರೂರು ಅನಂತರಾಜು Read Post »

You cannot copy content of this page

Scroll to Top