ಅಂಕಣ ಬರಹ ನರವಾನರ ನರವಾನರಮರಾಠಿ ಮೂಲ : ಶರಣಕುಮಾರ ಲಿಂಬಾಳೆಕನ್ನಡಕ್ಕೆ : ಪ್ರಮೀಳಾ ಮಾಧವಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ. ೧೬೫ಪುಟಗಳು : ೧೯೨ ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ ವಿರುದ್ಧ ಸಮರ ಸಾರಿದರು. ಇಂಥ ಹಿಂದೂ ಸಮುದಾಯದಲ್ಲಿ ತಾನೆಂದೂ ಇರಲಾರೆ ಎಂದು ಬೌದ್ಧಧರ್ಮಕ್ಕೆ ಮತಾಂತರ ಹೊಂದಿ ಇತರರಿಗೂ ಕರೆಯಿತ್ತರು. ಆದರೆ ಆ ಮಹನೀಯರು ಮರಣ ಹೊಂದಿದ ನಂತರ ದಲಿತ ಚಳುವಳಿಯ ನೇತೃತ್ವ ವಹಿಸುವವರು ಯಾರೂ ಇಲ್ಲದೆ ದಲಿತರು ಅಸಹಾಯಕರಾದರು. ಆ ವಿಚಾರದಲ್ಲಿ ದೇಶದಾದ್ಯಂತ ಬಿಕ್ಕಟ್ಟುಗಳು ತಲೆದೊರಿದವು. ಜಗಳಗಳಾದವು. ಹಲವಾರು ಪಕ್ಷ- ಪಂಗಡಗಳು ಹುಟ್ಟಿಕೊಂಡವು. ಎಲ್ಲರೂ ‘ನಿಜವಾದ ಆಂದೋಲನ ನಮ್ಮದು’ಎಂದು ಕೂಗೆಬ್ಬಿಸ ತೊಡಗಿದವು. ಪ್ರಜಾಪ್ರಭುತ್ವದ ಹೆಸರಿನಲ್ಲಿ ದಲಿತ ಪ್ರತಿನಿಧಿಗಳನ್ನು ರಾಜಕೀಯ ಪಕ್ಷಗಳು ತಮ್ಮೆಡೆಗೆ ಸೆಳೆಯ ತೊಡಗಿದವು. ಈ ಕಾದಂಬರಿ ಇದೇ ವಿಷಯವನ್ನು ಕುರಿತು ಚರ್ಚಿಸುತ್ತದೆ. ಮೊದಲ ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಡ ಯುವಕ ಅನಿರುದ್ಧ ಕಾಲೇಜಿಗೆ ಸೇರಿದಾಗ ಅವನಿಗೆ ದಲಿತ ಯುವಕರಿದ್ದ ರೂಮಿನಲ್ಲಿ ಸೀಟು ಸಿಗುತ್ತದೆ. ಅವನು ದಲಿತ ಗೆಳೆಯರ ಸಂಕಷ್ಟಗಳನ್ನು ನೋಡಿ ಮರುಗುತ್ತ ಸಾವಿರಾರು ವರ್ಷಗಳಿಂದ ಅವರನ್ನು ಶೋಷಿಸುತ್ತ ಬಂದ ತನ್ನ ಬ್ರಾಹ್ಮಣ ಸಮುದಾಯವನ್ನು ಬಿಟ್ಟು ದಲಿತನಾಗುತ್ತಾನೆ. ಇನ್ನೊಂದು ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯದ ಹುಡುಗಿ ದಲಿತನನ್ನು ಮದುವೆಯಾಗುತ್ತಾಳೆ. ದಲಿತ ಚಳುವಳಿ ಪ್ರಬಲವಾಗುತ್ತ ಹೊಗುತ್ತದೆ. ದಲಿತ ಪ್ಯಾಂಥರ್ ಮತ್ತು ರಿಪಬ್ಲಿಕನ್ ಪಾರ್ಟಿ ಎಂಬ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಸಂಘರ್ಷಗಳ ಮೂಲಕ ದಲಿತ ಚಳುವಳಿ ವ್ಯವಸ್ಥೆಯ ಒಂದು ಭಾಗವಾಗಿ ಹೋಗುತ್ತದೆ. ದಲಿತ ಸಾಹಿತ್ಯ ಮತ್ತು ದಲಿತ ರಾಜಕೀಯಗಳು ಈ ಚಳುವಳಿಯ ಉತ್ಪನ್ನಗಳಾಗುತ್ತವೆ. ಹೀಗೆ ಕಾದಂಬರಿಯ ವಸ್ತು ಇಂದಿನ ವ್ಯವಸ್ಥೆಯ ಜ್ವಲಂತ ಚಿತ್ರಣವಾಗಿದ್ದು ಅತ್ಯಂತ ಪ್ರಸ್ತುತವಾಗಿದೆ. ಪ್ರಮೀಳಾ ಅವರ ಅನುವಾದದ ಶೈಲಿ ಸುಂದರವಾಗಿದೆ ಮತ್ತು ಸುಲಲಿತವಾಗಿದೆ. *************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಮಣ್ಣಿನ ಕಣ್ಣು ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು ರೈತರ ಆತ್ಮಹತ್ಯೆ: ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ! ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ ಚೆಕ್ ನೀಡಿ ಮುಂದಿನ ಚುನಾವಣೆಗೆ ಒಂದಿಷ್ಟು ಮತಗಳು ನಿಕ್ಕಿಯಾದವೆಂದು ಸಂಭ್ರಮಿಸುತ್ತಾರೆ. ಸರಕಾರವೂ ಒಂದಿಷ್ಟು ಪರಿಹಾರ ಘೋಷಿಸಿ ತನಿಖೆಗೆ ಒಂದು ಸಮಿತಿ ನೇಮಿಸಿ ಮುಂದಿನ ವರ್ಷ ಇಂತಹ ಆತ್ಮಹತ್ಯೆಗಳು ನಡೆಯದಂತೆ ನೋಡಿಕೊಳ್ಳುವುದು ತಮ್ಮ ಉದ್ದೇಶವೆಂದೆ ಘೋಷಿಸಿ ಮತ್ತೆ ಮಲಗುತ್ತವೆ.ಪ್ರತಿ ವರ್ಷ ಇಂತಹ ರಾಜಕೀಯ ಕೃಪಾಪೋಷಿತ ನಾಟಕಗಳು ನಡೆಯುತ್ತಲೇ ಇರುತ್ತವೆ. ನಾವೂ ಕೂಡ ಯಾವುದೋ ನಾಟಕದ ಪ್ರೇಕ್ಷಕರಂತೆ ನೋಡುತ್ತ ಕೂರುತ್ತೇವೆ. ತೊಂಭತ್ತರ ದಶಕದವರೆಗೂ ರೈತರ ಆತ್ಮಹತ್ಯೆಗಳು ವಿರಳವಾಗಿದ್ದವು. ಆದರೆ ಜಾಗತೀಕರಣದ ನಂತರ ನಮ್ಮ ಪ್ರಗತಿಯ ಹಾದಿಯನ್ನು ಬದಲಾಯಿಸಿಕೊಂಡ ನಾವು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟೆವು. ಇದರ ಪರಿಣಾಮವಾಗಿ ಮೊದಲು ಶೇಕಡಾ 72ರಷ್ಷಟಿದ್ದ ನಮ್ಮ ಕೃಷಿ ಆದಾಯ ಇದೀಗ ಕೇವಲ ಶೇಕಡಾ 12ಕ್ಕೆ ಇಳಿಯುವಂತಾಗಿದೆ. ಕೈಗಾರಿಕೆಗಳಿಗೆ ನೀಡುವ ಯಾವ ಸೌಲಭ್ಯವೂ ಕೃಷಿ ಕ್ಷೇತ್ರಕ್ಕೆ ದೊರೆಯದಂತಾಗಿ ಈ ಕ್ಷೇತ್ರ ಸೊರಗತೊಡಗಿದೆ. ಸಮಯಕ್ಕೆ ಸರಿಯಾಗಿಬರದ ಮಳೆ, ಒಮ್ಮೆಲೆ ಬಂದೆರಗುವ ಅತಿವೃಷ್ಠಿ, ದೊರೆಯದ ಬ್ಯಾಂಕುಗಳ ಸಾಲ, ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳ ಕೊರತೆ, ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಮಾರುಕಟ್ಟೆ ಬೆಲೆಗಳು ರೈತನನ್ನು ಅಸಹಾಯಕತೆಯಿಂದ ಹತಾಶೆಗೆ ದೂಡಿ ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿವೆ. ಇವೆಲ್ಲವುಗಳ ಅರಿವಿದ್ದೂ ಸರಕಾರಗಳು ರೈತರ ಬಗ್ಗೆ ಕಾಳಜಿ ತೋರದೆ ದಪ್ಪ ಚರ್ಮವನ್ನು ಬೆಳೆಸಿಕೊಂಡು ಅವನನ್ನು ಮತ್ತಷ್ಟು ಹತಾಶೆಗೆ ದೂಡುತ್ತಿವೆ. ಪ್ರತಿವರ್ಷ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಆದ್ದರಿಂದ ಇಂತಹದೊಂದು ಸಮಸ್ಯೆಗೆ ಸರಕಾರ ಒಂದು ಶಾಶ್ವತವಾದ ನೀತಿಯೊಂದನ್ನು ಅಳವಡಿಸಿಕೊಂಡು ಮುಂದುವರೆದರೆ ಮಾತ್ರ ಭವಿಷ್ಯದಲ್ಲಿ ರೈತನ ಆತ್ನಹತ್ಯೆಗಳನ್ನು ತಡೆಯಬಹುದು ಜೊತೆಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ಸರಕಾರವೊಂದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಒಂದಿಷ್ಟು ಸಲಹೆ ಸೂಚನೆಯನ್ನು ಈ ಲೇಖನದ ಮೂಲಕ ನೀಡಲು ಪ್ರಯತ್ನಸಿದ್ದೇನೆ. ಬೆಳೆ ವಿಮೆ ಯೋಜನೆ: ಈಗಿರುವ ಬೆಳೆ ವಿಮಾ ಯೋಜನೆ ಯಾವುದೇ ವೈಜ್ಞಾನಿಕ ಮಾನದಂಡವನ್ನೂ ಹೊಂದಿಲ್ಲ ಮತ್ತು ಇಂತಹ ವಿಮೆಯ ಬಗ್ಗೆ ರೈತರಿಗೂ ಸಂಪೂರ್ಣ ಅರಿವಿಲ್ಲ. ಆದ್ದರಿಂದ ಬೆಳೆಯುವ ಬೆಳೆಯ ಆಧಾರದಲ್ಲಿ ಇಡೀ ರಾಜ್ಯವನ್ನು ಒಂದಷ್ಟು ವಿಭಾಗಗಳಾಗಿ ವಿಂಗಡಿಸಬೇಕು. ಆಯಾ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಯ ಬಗ್ಗೆ ತಜ್ಞರು ಅದ್ಯಯನ ಮಾಡಿ ಒಂದು ಏಕರೆಯಲ್ಲಿ ಆ ಬೆಳೆ ಬೆಳೆಯಲು ತಗುಲಬಹುದಾದ ಅಂದಾಜು ವೆಚ್ಚವನ್ನು ಮತ್ತು ಬರಬಹುದಾದ ಆದಾಯದ ಪ್ರಮಾಣವನ್ನು ನಿಗದಿ ಪಡಿಸಬೇಕು. ತದನಂತರ ಒಂದು ಏಕರೆಗೆ ಇಷ್ಟು ಎಂದು ವಿಮಾಕಂತನ್ನು ನಿಗದಿಪಡಿಸಬೇಕು. ಹೀಗೆ ನಿಗದಿಪಡಿಸುವ ಮೊತ್ತ ರೈತನಿಗೆ ಹೊರೆಯಾಗುವಂತಿರಬಾರದು. ಆಯಾ ಪಂಚಾಯಿತಿ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರಸಂಘ(ಸೊಸೈಟಿ)ಗಳಲ್ಲಿ ಗ್ರಾಮಲೆಕ್ಕಿಗರ ಮೇಲುಸ್ತುವಾರಿಯಲ್ಲಿ ರೈತರು ವಿಮಾ ಕಂತು ಪಾವತಿ ಮಾಡುವ ಮತ್ತು ಹಾಗೆ ಕಂತು ಪಾವತಿ ಮಾಡಿದ 24 ಗಂಟೆಗಳ ಒಳಗೆ ಕೃಷಿಬಾಂಡ್ ನೀಡುವ ವ್ಯವಸ್ಥೆ ಮಾಡಬೇಕು. ಸಣ್ಣ ರೈತರಿಗೆ ಈ ವಿಮಾ ಮೊತ್ತವನ್ನು ಕಟ್ಟುವುದು ಹೊರೆಯಾಗುವುದರಿಂದ ಗುರುತಿಸಿದ ಸಣ್ಣ ರೈತರ ವಿಮಾ ಮೊತ್ತವನ್ನು ಸರಕಾರದ ಕೃಷಿ ಇಲಾಖೆಯೇ ಭರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತಿ ಬಜೆಟ್ಟಿನಲ್ಲೂ ಸದರಿ ಇಲಾಖೆಗೆ ಇಂತಿಷ್ಟೆಂದು ಅನುದಾನ ಬಿಡುಗಡೆ ಮಾಡಬೇಕು. ಇಂತಹ ಬೆಳೆ ವಿಮೆಯನ್ನು ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು.ಅಕಸ್ಮಾತ್ ಬೆಳೆ ನಾಶವಾದರೆ ವಿಮೆಯ ಪರಿಹಾರ ಮೊತ್ತವನ್ನು ಮೊದಲೇ ಅಂದಾಜಿಸಿದರೀತಿಯಲ್ಲಿ ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಬೇಕು. ಬೆಳೆನಷ್ಟದ ಬಗ್ಗೆ ಅಧಿಕೃತವಾಗಿ ಪ್ರಮಾಣ ಪತ್ರ ನೀಡುವುದಕ್ಕೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಜ್ಞರುಗಳ ಒಂದು ಸಮಿತಿ ಮಾಡಿ ಗರಿಷ್ಠ ಮೂರುದಿನಗಳಲ್ಲಿ ಈ ವರದಿ ನೀಡುವ ಕಾನೂನು ಜಾರಿಗೊಳಿಸಬೇಕು. ಹೀಗೆ ವರದಿ ನೀಡಲು ವಿಫಲವಾದರೆ ಆ ಸಮಿತಿಗಳವರೆ ಪರಿಹಾರದ ಹಣವನ್ನು ನೀಡಬೇಕೆನ್ನುವ ಷರತ್ತನ್ನು ವಿದಿಸಬೇಕು. ಅಂತಹ ಸಮಿತಿಯಲ್ಲಿ ಸ್ಥಳೀಯ ಗ್ರಾಮಲೆಕ್ಕಿಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳ ಮುಖ್ಯಸ್ಥರು ಇರುವಂತೆ ನೋಡಿಕೊಂಡು ತಹಶೀಲ್ದಾರ್ ಇಂತಹ ಸಮಿತಿಯ ಅದ್ಯಕ್ಷರಾಗಿರುವಂತೆ ನಿಯಮ ರೂಪಿಸಬೇಕು.ಹೀಗೆ ಬೆಳೆ ನಷ್ಟದ ಪರಿಹಾರ ನೀಡಲು ಬೇಕಾದ ಮೊತ್ತವನ್ನು ವಿಮಾ ಕಂತುಗಳಿಂದ ಸಂಗ್ರಹಿಸುವುದರ ಜೊತೆಗೆ ಸರಕಾರವೂ ಆಯವ್ಯಯದಲ್ಲಿ ಸಾಕಷ್ಟು ಅನುದಾನ ಒದಗಿಸ ಬೇಕು. ಅಗತ್ಯವೆನಿಸಿದರೆ ಕೃಷಿ ಇಲಾಖೆಯಲ್ಲಿಯೇ ಇದಕ್ಕೊಂದು ಪ್ರತ್ಯೇಕ ವಿಭಾಗವನ್ನು ರಚಿಸಿ, ಕೃಷಿಯಲ್ಲಿ ಪಧವೀದರರಾಗಿರುವವರನ್ನು ನೇಮಕ ಮಾಡಬಹುದು. ತನ್ಮೂಲಕ ಕೃಷಿ ಪಧವೀದರರಿಗೆ ಉದ್ಯೋಗಾವಕಾಶವನ್ನೂ ಒದಗಿಸಬಹುದಾಗಿದೆ. ಇಂತಹದೊಂದು ಬೆಳೆವಿಮಾ ಯೋಜನೆಯನ್ನು ಜಾರಿಗೆ ತಂದಲ್ಲಿ ಶೇಕಡಾ ತೊಂಭತ್ತೈದರಷ್ಟು ಆತ್ಮಹತ್ಯೆಗಳನ್ನು ನಿಲ್ಲಿಸಬಹುದಾಗಿದೆ. ಇಲ್ಲಿ ನಾನು ಪ್ರಸ್ತುತ ಪಡಿಸಿದ ಯೋಜನೆಯ ವಿವರಗಳಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳು ಇರಬಹುದಾರೂ ತಜ್ಞರುಗಳ ಸಮಿತಿಯೊಂದು ಇಂತಹ ಯೋಜನೆಯನ್ನು ಇನ್ನೂ ಸರಳೀಕರಿಸಿ ತಳಮಟ್ಟದಲ್ಲಿ ಜಾರಿಗೆ ತರಬಹುದಾಗಿದೆ.ಇದಕ್ಕಾಗಿ ಸರಕಾರ ಕೃಷಿಯನ್ನು ನಿಜವಾದ ಅರ್ಥದಲ್ಲಿ ಅದ್ಯಯನ ಮಾಡಿರುವ ವಿದ್ವಾಂಸರುಗಳನ್ನು, ವಿಮಾ ಕ್ಷೇತ್ರದಲ್ಲಿನ ಅನುಭವಿಗಳನ್ನು, ರೈತ ಮುಖಂಡರುಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಇಂತಹದೊಂದು ಬೆಳೆವಿಮೆಯ ಯೋಜನೆಯನ್ನು ರೂಪಿಸಿಕೊಡುವಂತೆ ಹೇಳಬಹುದಾಗಿದೆ. ಒಂದು ಪ್ರಜಾಸತ್ತಾತ್ಮಕ ಸರಕಾರಕ್ಕೆ ಇದೇನು ತೀರಾ ದೊಡ್ಡವಿಚಾರವಲ್ಲ, ನಿಜ. ಆದರೆ ನಮ್ಮ ಸರಕಾರಗಳನ್ನು ನೆಸುವ ರಾಜಕಾರಣಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಇರಬೇಕಾಗುತ್ತದೆ. ರೈತರಿಗೆ ನೀಡುವ ಬೆಳೆಸಾಲ ಇವತ್ತು ನಮ್ಮ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಖಾಸಗಿಯವರಿಂದ ಪಡೆದ ಸಾಲದ ಬಡ್ಡಿ ಕಟ್ಟಲಾಗದೆ ಹೋಗುವುದಗಿದೆ. ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಸರಕಾರವೇ ಮುಂದೆ ನಿಂತು ರೈತರ ಬೆಳೆವಿಮೆಯಿಂದ ಸಿಗಬಹುದಾದ ಪರಿಹಾರವನ್ನು ಅದು ನೀಡುವ ಸಾಲಕ್ಕೆ ಗ್ಯಾರಂಟಿಯಾಗಿ ನೀಡುವ ಪದ್ದತಿಯನ್ನು ಅಳವಡಿಸಿಕೊಂಡು ಈ ಬಗ್ಗೆ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಎಷ್ಟು ಸಾಲ ನೀಡಬೇಕು ಎನ್ನುವುದರ ಬಗ್ಗೆಯೂ ಬೆಳೆವಿಮೆ ಮಾಡುವಾಗ ಅಂದಾಜಿಸಿದ್ದ ವೆಚ್ಚದ ಆಧಾರದ ಮೇಲೆಯೇ ಬ್ಯಾಂಕುಗಳು ಸಾಲ ನೀಡುವುದನ್ನು ಕಡ್ಡಾಯಗೊಳಿಸಬೇಕು. ಹೀಗೆ ನೀಡುವ ಸಾಲಗಳು ಸದುಪಯೋಗವಾಗುವಂತೆ ರೈತರು ಖರೀಧಿಮಾಡುವ ಬೀಜ ಗೊಬ್ಬರಗಳನ್ನು ಪೂರೈಸುವವರಿಗೆ ಚೆಕ್ ರೂಪದಲ್ಲಿಯೇ ಬ್ಯಾಂಕಿನಿಂದ ಹಣ ಸಂದಾಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ರೈತರು ದೊರೆತ ಹಣವನ್ನು ಬೇರೆ ಉದ್ದೇಶಗಳಿಗೆ ವ್ಯಯಿಸುವುದು ತಪ್ಪಿದಂತಾಗುತ್ತದೆ. ಇವೆಲ್ಲವುಗಳಿಗೆ ಪೂರಕವಾಗುವಂತೆ ಪ್ರತಿ ಗ್ರಾಮದ ಕೃಷಿ ಸಹಕಾರ ಸಂಘಗಳಲ್ಲಿಯೂ ರೈತರ ಭೂಮಿ ಬೆಳೆ ಇತ್ಯಾದಿಗಳನ್ನು ಕಂಪ್ಯೂಟರಿಕರಣಗೊಳಿಸಬೇಕು. ಸ್ಥಳೀಯವಾಗಿ ಕಂಪ್ಯೂಟರ್ ಕಲಿತ ಯುವಕ ಯುವತಿಯರನ್ನು ಇದಕ್ಕೆ ನೇಮಕ ಮಾಡಿಕೊಳ್ಳುವುದರಿಂದ ರೈತರ ನಿರುದ್ಯೋಗ ನಿವಾರಣೆಯು ನಿವಾರಣೆಯಾದಂತಾಗುತ್ತದೆ. ರೈತರ ಆತ್ಮಹತ್ಯೆ ತಪ್ಪಿಸಲು ನಾನು ಹೇಳಿದ ಮೇಲಿನ ಅಂಶಗಳಿಂದಲೇ ಸಾದ್ಯವಿಲ್ಲವಾದರೂ, ರೈತರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಂತೂ ಆಗುವುದರಲ್ಲಿ ಅನನುಮಾನವಿಲ್ಲ. ನಮ್ಮ ರೈತ ಸಂಘಟನೆಗಳು ಇಂತಹ ಯೋಜನೆಗಳ ಬಗ್ಗೆ ಕರಡು ಪ್ರತಿಯೊಂದನ್ನು ರಚಿಸಿ ಸರಕಾರದ ಮುಂದಿಟ್ಟು ಅದನ್ನು ಅನುಷ್ಠಾನಗೊಳಿಸುವಂತೆ ಹೋರಾಡಬೇಕಿದೆ. ಈ ವಿಚಾರದಲ್ಲಿಯಾದರು ನಮ್ಮ ರೈತ ಮುಖಂಡರುಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಒಂದಾಗಿ ಹೋರಾಡಬೇಕಾಗಿದೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ರೈತ ಹೋರಾಟಗಳೆಂದರೆ ಜನರ ದೃಷ್ಠಿಯಲ್ಲಿ ಅಣಕು ಪ್ರದರ್ಶನಗಳಾಗಿ ಪರಿವರ್ತನೆಗಳಾಗಲಿವೆ. ಸರಕಾರಗಳು ಅಷ್ಟೆ ಅನ್ನ ನೀಡುವ ರೈತರನ್ನು ನಿರ್ಲಕ್ಷಿಸದೆ ಇಂತಹ ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯೋಚಿಸಬೇಕಾಗಿದೆ. ********* ಕುಸಮ
ಎರಡು ಪತ್ರಗಳು
ಎರಡು ಪತ್ರಗಳು ಪತ್ರ ಒಂದು [6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ…. ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು.. ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು .ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ ಅವನ ಬರಹ ಓದಿದೆ. ವಿಳಾಸ ಹುಡುಕಿದೆ. ಮೋಹನ್ ನನಗೆ ಸಂಗಾತಿಯ ಪರಿಚಯಿಸಿದ. ಹಾಗೂ ಮಧುಸೂದನ್ ಸರ್ ನಂಬರ್ ಪಡೆದು ಕವಿತೆ ಕಳಿಸಲು ಪ್ರಾರಂಭಿಸಿದೆ. ನಂತರ ನಮ್ಮ ಸ್ನೇಹ ಗಾಢವಾಯಿತು.ಚರ್ಚೆಗಳಾದವು. ರಹಮತ್ ತರಿಕೆರೆ ಸರ್ ಅವರನ್ನು ಕರೆತಂದೆವು. ನಂತರ ” ದುರಿತಕಾಲದ ದನಿ ” ತಲುಪಿತು. ಅದನ್ನು ಓದಿದ ಮೇಲೆ ಕನ್ನಡದ ಸಾಂಸ್ಕೃತಿಕ ಲೋಕ ಮಧುಸೂದನ್ ಅವರಂತಹ ಆಗ್ನಿ ಕುಂಡದ ಕವಿಯನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿರುವುದು ತಿಳಿಯಿತು. ನಂತರ ನನ್ನ ಕಾಯಕ ನಾ ಮಾಡುತ್ತಲೇ…ಮಧುಸೂದನ್ ಸರ್ ಮತ್ತೂ ಹತ್ತಿರವಾದರು. ಮುಖಾಮುಖಿ ಅಂಕಣ ಪ್ರಾರಂಭಿಸಲು ಅವಕಾಶ ನೀಡಿದರು. ಕವಿಗಳ ಮನಸ್ಥಿತಿ, ಅವರ ಒಲವು ನಿಲುವು ನಿಷ್ಠುರತೆ ತಿಳಿಯಲು ಮುಖಾಮುಖಿ ಸಹಾಯವಾಯಿತು. ಇದರಿಂದ ಸಂಗಾತಿಗೆ ಕನ್ನಡ ಕಾವ್ಯಲೋಕದ ನಡೆ ಏನು ಎತ್ತ ಎಂದು ಅರಿಯಲು ಸಹಾಯ.ಮುಂದೆ ಸಾಹಿತ್ಯದ ವಿದ್ಯಾರ್ಥಿಗಳು ನಮ್ಮ ಕವಿಗಳ ರಾಜಕೀಯ ನಿಲುವು ಏನು? ಅವರಿಗೆ ದೇವರು ಧರ್ಮ ದೇಶ ಜನರ ಬಗ್ಗೆ ಏನು ನಿಲುವು ಇದ್ದವು ಎಂಬ ಸಂಗತಿ ಅಧ್ಯಯನ ಮಾಡಿದರೆ ಸಂಗಾತಿ ವೆಬ್ ಹುಡುಕಬೇಕು. ಇದು ನಮ್ಮ ಉದ್ದೇಶ. ಸಂಗಾತಿ ಸಂಪಾದಕರು ಈ ಸೂಕ್ಷ್ಮ ಅರಿತೇ ಈ ಅಂಕಣಕ್ಕೆ ಅವಕಾಶ ನೀಡಿದರು ಎಂಬುದು ನನ್ನ ಗ್ರಹಿಕೆ.ಸಂಗಾತಿ ನೂರಾರು ಹೊಸ ಲೇಖಕರಿಗೆ ವೇದಿಕೆಯಾಗಿದೆ. ಎಲ್ಲ ಪಂಥದವರು ಇದ್ದಾರೆ. ಜೀವವಿರೋಧಿ ನಿಲುವು ಬಿಟ್ಟು ಉಳಿದೆಲ್ಲಾ ಬರಹ ಇಲ್ಲಿ ಪ್ರಕಟವಾಗಿವೆ. ಆಗುತ್ತಿವೆ. ಅದೇ ಸಂಗಾತಿ ವೆಬ್ ಹೆಚ್ಚುಗಾರಿಕೆ. ಇದನ್ನು ವಿನಯದಿಂದ ಇಲ್ಲಿ ಸ್ಮರಿಸುವೆ. ಸಂಗಾತಿ ವೆಬ್ ಕನ್ನಡ ಸಾಹಿತ್ಯ ಲೋಕದ ಬೆಳಕಾಗಲಿ. ———————————————-ನಾಗರಾಜಹರಪನಹಳ್ಳಿ ಪತ್ರ-ಎರಡು ಪ್ರೀತಿಯ ಕ.ಮ.ಮಧುಸೂದನ್ ಸರ್ ಅವರಿಗೆ ನಮಸ್ಕಾರ..ಮೊದಲಿಗೆ ಯಶಸ್ವಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ನಮ್ಮೆಲ್ಲರ ಹೆಮ್ಮೆಯ “ಸಂಗಾತಿ” ಗೆ ಅದರ ಸಾರಥ್ಯ ವಹಿಸಿರುವ ಮಧುಸೂದನ್ ಸರ್ ಅವರಿಗೂ ಅಭಿನಂದನೆಗಳು.ಗೆಳೆಯ ಮೋಹನ್ ಗೌಡ ಹೆಗ್ರೆ ಅವರ ಮೂಲಕ ಪರಿಚಯವಾದ ‘ಸಂಗಾತಿ’ ನಮ್ಮ ಮನಸು ಭಾವನೆಗಳ ಭಾಗವಾಗಿ ನಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯಾಯಿತು.ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ (ಪ್ರಜಾವಾಣಿ ಹೊರತು ಪಡಿಸಿ) ನಿಂತು ಹೋಗಿ ಕವಿತೆಗಳು ಪ್ರಕಟವಾಗುವುದೆಲ್ಲಿ ಎಂದು ಯೋಚಿಸುತ್ತಿರುವಾಗ ಓಯಾಸಿಸ್ ನಂತೆ ಬಂದು ನಮ್ಮೆಲ್ಲರ ಆವರಿಸಿಕೊಂಡು ನಮ್ಮ ಸಾಹಿತ್ಯದ ಅಂತರ್ಜಲ ಬತ್ತದಂತೆ ಜೀವಂತವಾಗಿರಿಸಿದ್ದು ನಮ್ಮ ಸಂಗಾತಿ ಎಂದರೆ ಅತಿಶಯೋಕ್ತಿಯಲ್ಲ.ಈ ಮೂಲಕ ಹಲವಾರು ಹೊಸ ಕವಿಗಳು ಉದಯವಾದರು.ಕನ್ನಡದ ಪ್ರಬುದ್ಧ ವಿಮರ್ಶಕರಾದ ರಹಮತ್ ತರಿಕೆರೆಯಂತವರು ಬರೆಯಲು ತೊಡಗಿ ನಮಗೆ ಇನ್ನಷ್ಟು ಸುಪರಿಚಿತವಾಯಿತು.ಆಮೇಲೆ ಮಧುಸೂದನ್ ಸರ್ ಅವರ ಅದ್ಭುತ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವ ಅವಕಾಶ ನನಗೆ ಸಿಕ್ಕಿತು. ಒಬ್ಬ ಸಂಪಾದಕರಾಗಿ ತಮ್ಮ ಕವಿತೆಗಳನ್ನು ಪ್ರಕಟಿಸಿ ವೈಭವೀಕರಿಸದೇ ಗ್ರೂಪ್ನಲ್ಲಿ ಓದುವ ಅವಕಾಶ ನೀಡಿದ್ದು ನಿಮ್ಮ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.’ಸಂಗಾತಿ’ ಯನ್ನು ನಿರ್ವಹಿಸಿದ ರೀತಿ ನಿಜಕ್ಕೂ ಓದುಗರ ಮೆಚ್ಚುಗೆ ಪಡೆಯಿತು.ಈ ಒಂದು ವರ್ಷದ ನೆನಪಿಗೆ ಪತ್ರಿಕೆಯ ಓದುಗರಿಗಾಗಿ ಕವನ,ಕಥಾ ಸ್ಪರ್ಧೆ ಮಾಡವಹುದೇನೋ..ವೈಶಿಷ್ಟ್ಯಪೂರ್ಣ ಚಿತ್ರ ಲೇಖನಗಳು,ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ವೈವಿಧ್ಯಗಳು,ವೈಜ್ಞಾನಿಕ,ವೈಚಾರಿಕ ಲೇಖನಗಳನ್ನು ಹಿರಿಯ ಲೇಖಕರಿಂದ ಆಹ್ವಾನಿಸಿ ಪತ್ರಿಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ನನ್ನ ಪ್ರೀತಿಯ ಸದಾಶಯ..’ಸಂಗಾತಿ’ಗೆ ಅಭಿನಂದನೆಗಳು ಫಾಲ್ಗುಣ ಗೌಡ ಅಚವೆ
ನಿಮ್ಮೊಂದಿಗೆ
ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ ಮಾಲತಿ ಯವರವರೆಗು ಹರಡಿದ ವಿಶಾಲ ಬರಹಗಾರರ ದಂಡು ಕನ್ನಡ ಸಾಹಿತ್ಯಕ್ಕೆ ಸಂಗಾತಿ ನೀಡಿದ ಅಲ್ಪ ಕೊಡುಗೆ. ಇದರಲ್ಲಿ ನಿಮ್ಮ ಪಾಲೇ ಅಧಿಕ.. ಸಂಪಾದಕ ನೆಪ ಮಾತ್ರ! *** ಮುಖ್ಯವಾಗಿ ಸಂಗಾತಿಗೆ——– ಜಾತಿ-ದರ್ಮಗಳಿಲ್ಲ, ಗುಂಪುಗಳ ಗೊಡವೆಯಿಲ್ಲ, ಅರಗಿಸಿಕೊಳ್ಳಲಾಗದಂತಹ ಸಿದ್ದಾಂತಗಳ ಹೆಣಬಾರವಿಲ್ಲ, *** ಸಂಗಾತಿಗಿರುವುದು- ಕನ್ನಡ ಸಾಹಿತ್ಯದ ಜೀವನದಿಗೆ ಸಂಗಾತಿಯ ಪುಟ್ಟಪುಟ್ಟ ಝರಿಗಳು ಸೇರಿ ಸಂಗಾತಿಯ ಸ್ರಮ ಸಾರ್ಥಕವಾಗಬೇಕು *** ಹೆಚ್ಚೇನು ಹೇಳಲಿ? ಮುಂದಿನ ದಿನಗಳಲ್ಲಿಯೂ ಸಂಗಾತಿಯ ಜೊತೆ ನೀವಿರುತ್ತೀರಿ ಎಂಬ ನಂಬಿಕೆ ನನ್ನದು. *** ಇಷ್ಟು ದಿನಗಳ ನಿಮ್ಮ ಪ್ರೀತಿಗೆ ಶರಣು *************************************************
ಹಸಿವು
ಕವಿತೆ ಹಸಿವು ಗಂಗಾಧರ ಬಿ ಎಲ್ ನಿಟ್ಟೂರ್ ಹಸಿದು ಬಸವಳಿದವರಿಗೆ ಪ್ರಾಣ ಹೋಗುವ ಸಂಕಟ ಉಳ್ಳವರಿಗೆ ಬರೀ ಚೆಲ್ಲಾಟ ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ ಎದೆಯೊಳಗೆ ನಡುಕ ಕರುಳು ಹಿಂಡುವ ಕಥನ ಜಗದಿ ಹಸಿವಿನ ಮರಣ ಮೃದಂಗ ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ ನಿತ್ಯ 20 ಸಾವಿರಕೂ ಅಧಿಕ ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ ಎಂಥಾ ವಿಚಿತ್ರ ಬದುಕಿದು ದೇವಾ ಬಡತನ ಮುಕ್ತ ದೇಶದ ಪುಕಾರು ತುತ್ತು ಬಾಯಿಗಿಡುವ ಭರಾಟೆಯೂ ಜೋರು ತಿಂದು ತೇಗಿ ರಸ್ತೆಗಿಳಿವ ಸುದ್ದಿ ಶೂರರ ಗಡಿಪಾರು ಆದಾಗ ಲಭ್ಯ ನಿಜ ಸೂರು ********************************
ಮತ್ತೆ ಹುಟ್ಟಲಿ ದುರ್ಗಿ…
ಕವಿತೆ ಮತ್ತೆ ಹುಟ್ಟಲಿ ದುರ್ಗಿ… ಮಹಿಷನ ಪೂಜಿಸಿದರೇನಂತೆತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲಬ್ರಹ್ಮನಿಂದ ವರಪಡೆದರೇನಂತೆಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲಹುಣ್ಣಿಮೆಯೋ ಮಹಾಲಯವೋಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ ,ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲಕೊನೆಗೆಮಹಿಳೆಯೋರ್ವಳ ರೋಷಕ್ಕೆಪುರುಷನೊಬ್ಬನ ಅಹಂಕಾರಕ್ಕೆಅಲಂಕಾರಿಕ ಅಂತ್ಯ…ಕರುಳು ಚೆಲ್ಲಿತ್ತು ತ್ರಿಶೂಲ ಹೊಕ್ಕಿತ್ತುಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆಮಹಿಷಾಸುರನ ಪ್ರಾಣ ಹಾರಿತ್ತು…. ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?ಬಣ್ಣ,ವೇಷ, ವಾಸನೆಗಳ ಈಜಗ?ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆಮತ್ತೆ ಮತ್ತೆ ನಗ್ನವಾಗುತ್ತಲೇ ಇದೆಪುರುಷನೊಳಗಿನಮೃಗಮರಳಿ ಬಾ ದುರ್ಗಾಮಾತೆ …ರಕ್ತ ಬೀಜಾಸುರರಿವರುಅಬಲೆಯರ ಹುಡುಕುವರುಹೇಡಿಗಳಂತೆ ಹೊಂಚುವರು,ಒಬ್ಬಳ ಮೇಲೆ ಹಲವು ಹತ್ತು ಜನರುಕಾಮಾಂಧರಾಗಿ ಎರಗಿ ಭೋಗಿಸಿಸಾಯಿಸಿ,ಅಡಗುತ್ತ ತೇಕುವರುಕಾಲ ಇಂದಿಗೂ ಬದಲಾಗಿಲ್ಲ… ಉಧ್ಬವಿಸಲಿ ಸಾವಿರದಿ ಕಾಳಿಯರು,ದುರ್ಗೆಯರು,ಶುಭಾಂಕರಿಯರುರಕ್ಕಸರಠಕ್ಕತೆಗೆ ಆಗಿಉತ್ತರಮೀರಿಜಗದೆತ್ತರಮಾಟದಮೈಯಕೋಮಲಾಂಗಿಯರುಹಣೆತುಂಬರಕ್ತಕಾರಿಬಿರುಬಿರುಸಿನಕೇಶಕೆದರಿಸಾವಿರ ಮಹಿಷರ ಮರ್ದನಕ್ಕೆ ನಾಂದಿ ಹಾಡಿಕತ್ತಲೆಗೆ-ಬೆಳಕಿನ ದಾರಿತೋರಿ ದುರ್ಗೆಯಾಗಲಿ ಇಂದಿನಮಹಿಳೆ ( ಮಹಿಷಾಸುರ ಮಹಿಷ ದೇವರನ್ನು ಪೂಜಿಸುತ್ತಿದ್ದ ಅಸುರ.ಆತನಿಗೆ ಕೋಣನ (ಮಹಿಷ) ತಲೆಯಿದೆಯಿತ್ತು ಎನ್ನಲಾಗಿದೆ.ಭ್ರಮ್ಹನಿಂದ ವರವನ್ನು ಪಡೆದಿದ್ದವನು). ************************** ಡಾ.ಪ್ರೇಮಲತ ಬಿ.
ಮತ್ತೆ ಹುಟ್ಟಲಿ ದುರ್ಗಿ… Read Post »
ಇಲ್ಲೆ ಎಲ್ಲಾ..
ಕವಿತೆ ಇಲ್ಲೆ ಎಲ್ಲಾ.. ಜ್ಯೋತಿ ಡಿ.ಬೊಮ್ಮಾ ಬಿಡು ಮನವೆ ಕೊರಗುವದುನಿನಗಾರಿಲ್ಲ ಇಲ್ಲಿ ಆಪ್ತ ನಿನಗೆ ನೀನೆ ಶತ್ರು ನಿನಗೆ ನೀನೆ ಮಿತ್ರನಿನಗೆ ನೀನೆ ಆಗು ಪರಮಾಪ್ತ ಆಪೇಕ್ಷಿಸಿ ಕಾತರಿಸಿದಷ್ಟು ಹೆಚ್ಚುವದು ದುಃಖನೀರಿಕ್ಷಿಸದಿರು ಯಾರಿಂದ ಎನನ್ನೂ ,ಅದೇ ಸುಖ ಅಲೆಯದಿರು ಹುಡುಕುತ್ತಾ ಹೊರಗೆಲ್ಲೂ ಮುಕ್ತಿಬಾಹ್ಯದಲ್ಲೆಲ್ಲೂ ದೊರಕದದು ಅರಿ ನೀ, ಅದೇ ಯುಕ್ತಿ ನೆಮ್ಮದಿಯ ಬೆಂಬತ್ತಿ ಓಡೋಡದಿರುದ್ಯಾನದಲ್ಲೆ ಅಡಗಿರುವದದು ಮರೆಯದಿರು ಕೋಪ ಅಸೂಯೆಗಳು ಚಿಗುರದಂತೆ ತಡೆಪ್ರೀತಿ ಕರುಣೆಗಳು ಹಂಚುತ್ತ ನಡೆ ಸ್ವರ್ಗ ನರಕಗಳು ಮತ್ತೆಲ್ಲೂ ಇಲ್ಲತನ್ನ ತಾ ಅರಿತವನಿಗೆ ಇಲ್ಲೆ ಎಲ್ಲಾ.. ****************************** ಜ್ಯೋತಿ ಡಿ.ಬೊಮ್ಮಾ.
ನಡುವೆ ಸುಳಿಯುವ ಆತ್ಮ!
ಕವಿತೆ ನಡುವೆ ಸುಳಿಯುವ ಆತ್ಮ! ನಡುವೆ ಸುಳಿಯುವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲ!ಜೇಡರ ದಾಸಿಮಯ್ಯ ನೆನಪಾದ…ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚಲೊಚಗುಟ್ಟಿತುಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿಥತ್! ಅಪಶಕುನ! ಎಂದಳು.ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತಹೆಣ್ಣು ಜೇಡವುಗೋಡೆಯ ಮೇಲಿಂದವರಹಾವತಾರ ಕ್ಯಾಲೆಂಡರಿನ ಭೂಮಂಡಲದಮರೆಗೆ ಸರಿಯಿತು! ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆವೇದಿಕೆಯಲ್ಲಿ!ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿಬಾಯಿ ಮುಚ್ಚಿಕೊಂಡೇ ಹೆಂಡತಿಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತುಬೆಂತರಾದಅವನ ಶರ್ಟ್ ಪ್ಯಾಂಟು ಬನಿಯನ್ನು ನಿಕ್ಕರನ್ನುಅವನೇ ಎಂಬಂತೆಬಟ್ಟೆಯೊಗೆಯುವ ಕಲ್ಲಿಗೆ ರಪರಪನೆ ಬಡಿದುಕೈ ಕಾಲುಗಳಲ್ಲಿ ಹಿಡಿದುಕರುಳನ್ನು ಹಿಂಡಿ ಹಿಪ್ಪೆ ಮಾಡಿನೇಲೆಹಗ್ಗದಲ್ಲಿ ಸುಡುಸುಡುವ ಸೂರ್ಯನಡಿಯಲ್ಲಿಒಣಗಲು ಹಾಕಿಉರಿಯುತ್ತ ಬೆವರಲ್ಲಿ ಮೀಯುತ್ತಾಳೆತಾನೇ ಒಣಗಿ!ಸ್ತ್ರೀಪರ ಭಾಷಣಗಾರನ ಹೆಂಡತಿ ಇವಳು! ಲಕ್ಕಿ!ಎಂದು ಬೆಟ್ಟು ತೋರಿದಾಗನಡು ಸಂತೆಯಲ್ಲೇ ಬತ್ತಲಾದವಳಂತೆಓಡಿ ಬರುತ್ತಾಳೆ ಅವಳು! ಅವಲಕ್ಕಿ ಕಟ್ಟನ್ನು ಎದೆಗೊತ್ತಿಕೊಂಡೇ! ಕಡ್ಡಿಗಳು ಮುರಿದುಬೆನ್ನುಮೂಳೆ ಬಾಗಿ ಸುಕ್ಕು ತೊಗಲು ಬಟ್ಟೆ ಹರಿದು ಅವನುಮುಲ್ಲೆಗೆ ಬಿಸಾಕಿರುವ ಕೊಡೆಯ ಪಳೆಯುಳಿಕೆಯಂತಹ ಅಮ್ಮಗಂಡನಿಗೆ ತೆರೆದುಕೊಳ್ಳದೆಗಾಳಿಯಲ್ಲಿ ಆಕಾಶಕ್ಕೆ ತಿರುವುಮುರುವಾಗಿಗರಿಬಿಚ್ಚಿ ಹಾರಿದ ‘ಸಿರಿ’ ಭೂತದ ಕ್ಷಣಗಳನ್ನುಮೆಲುಕು ಹಾಕುತ್ತ ತನ್ನಸೊಸೆಯು ಕರಿಮಣಿ ಹರಿದು ಹಿಡಿಸೂಡಿಗೆ ಕಟ್ಟುವಗಳಿಗೆಗಾಗಿ ಮೈಯೆಲ್ಲ ಕಣ್ಣಾಗಿ ಕುಳಿತಿದ್ದಾಳೆ!ಗಂಡು ಪ್ರಾಣಿಯ ತಲೆತುದಿ ಕಂಡರೆ ಸಾಕು…ಈ ಹಳೇಕೊಡೆಯು ನಾಗರಹಾವಾಗಿ ಸುಯುಂಪಿಭುಸುಗುಟ್ಟುತ್ತದೆ ಮಲಗಿದಲ್ಲೇ ಹೆಡೆ ಅರಳಿಸಿ! ಕೈಗೆ ಮೈಕ ಸಿಕ್ಕಿದರೆ ಸಾಕು ಅದಕ್ಕೇಹೆಬ್ಬಾವಿನಂತೆ ಸುತ್ತಿಕೊಂಡು ಸ್ತ್ರೀಯರನ್ನೇ ನುಂಗುವಂತೆ ನೋಡುತ್ತಎಂಜಲು ಮಾತುಗಳನ್ನು ಕಕ್ಕುವ ಈ ಮಾರಾಯಕರಿಮಣಿ ಎಂಬ ಉರುಳು ಕಟ್ಟಿತವರಿನ ಹಟ್ಟಿಯನ್ನು ಬಿಟ್ಟು ಬರಲಾರೆ ಎಂದುಕಣ್ಣೀರಿಡುತ್ತಿದ್ದ ಎಳೆ ಪ್ರಾಯದ ಕನ್ನೆಯನ್ನು ಹೆಂಡತಿಯೆಂದುಎಳೆದುಕೊಂಡೇ ಬಂದು… ಅವಳುನಿತ್ಯದಂತೆ ಅಳದಿದ್ದರೆ… ಸಂಶಯದಲ್ಲೇ ಅಳೆದು ಅಳೆದುಅವಳು ಹೆತ್ತ ಹೆಣ್ಣು ಕೂಸಲ್ಲಿ ಯಾರ್ಯಾರದ್ದೋಕಣ್ಣು ಮೂಗನ್ನು ಹುಡುಕುತ್ತಾನೆ! ಭಾಷಣ ಕೇಳಿ…ಅಬ್ಬಾ… ಹೆಣ್ಣುಹೃದಯವೇ! ಅಂದುಕೊಂಡುಅವನಲ್ಲಿ ನೀನು ಅಣ್ಣನೋ ತಮ್ಮನೋ ಗೆಳೆಯನೋಅಂದುಕೊಂಡು…ಸೆಕ್ಸ್ ಒಂದನ್ನು ಬಿಟ್ಟುಹೆಣ್ಣುದೇಹದ ಮುಟ್ಟು ಮಾಸಿಕ ಬಸಿರು ಬಾಣಂತನಮಲಮೂತ್ರ ನೆತ್ತರು ಸತ್ತರು… ಲಂಗು ಪುಸ್ಕುಕಷ್ಟ ಸುಖ ಮಾತಾಡಿ ನೋಡಂತೆ ಹಗಲು!ಆ ಅವನಿಗೆ ಮೈಲಿಗೆಯಾಗಿಬಿಡುತ್ತದೆಒಂದು ಕೆಜಿ ಹುಣಸೆಹುಳಿ ಕಿವುಚಿದ ಮುಖದಲ್ಲೇಆಕಾಶದಿಂದ ದೇವರ ಮೂಗಿಂದಲೇಉದುರಿದ ದೇವಪಾರಿಜಾತದಂತೆಮೈಗೆ ಅತ್ತರು ಬಳಿದುಕೊಳ್ಳುತ್ತಾನೆಮನಸ್ಸು ಕೊಳೆತು ನುಸಿ ಹಾರುತ್ತಿರುತ್ತದೆ!ಆ ರಾತ್ರಿಯೇ ತೀರ್ಥದಲ್ಲಿ ಮಿಂದುನಿನಗೆ ಸೆಕ್ಸ್ ಮೆಸ್ಸೇಜ್ ಕಳುಹಿಸಿಹಾಸಿಗೆಗೆ ಬರುತ್ತೀಯ? ಅನ್ನುತ್ತಾನೆ…ನೀನು ಥೂ! ಅನ್ನುತ್ತೀಯ… ಅವನ ಮುಖಕ್ಕೇಉಗುಳುವ ಧೈರ್ಯ ಸಾಲದೆ!ನಿನ್ನ ಉಗುಳು ನಿನ್ನ ಮುಖಕ್ಕೇ ಬೀಳುವ ಭಯದಲ್ಲಿ!ಅವನ ಬಾರ್ ಗೆಳೆಯರು ಬರೋಬ್ಬರಿ ನಗುವಲ್ಲಿತೇಲಿ ಮುಳುಗಿ ಕೊಚ್ಚಿಕೊಂಡು ಹೋಗುತ್ತಿರುತ್ತಾರೆಅದುವರೆಗೂ ಅವರು ನೋಡಿಯೇ ಇರದನಿನ್ನ ಅಂಗಾಂಗಗಳ ವರ್ಣನೆಯಲ್ಲೇನಿನಗೆ ಆಕಾರ ಕೊಡುತ್ತ…ಬಟ್ಟೆ ತೊಡಿಸಿ ಒಂದೊಂದ್ಶಾಗಿ ಬಿಚ್ಚುತ್ತ…ತಥ್! ಹಗುರವಾಗಲು ಅವಳಲ್ಲಿ ಹೇಳಿಯೇಬಿಟ್ಟಿಯಾ?ಎಲ್ಲ ಹೇಳಿಬಿಟ್ಟೆಯಾ? ಸರಿ, ಅನುಭವಿಸು ಇನ್ನು!ಕಿವಿಗಳಿಗೆರಡು ಹೂ ಸಿಕ್ಕಿಸಿಕೊಂಡ ಆ ಮಡಿಬೆಕ್ಕುಮಿಡಿನಾಗಿಣಿಯಂತೆ“ಮಿಡಿ ಧರಿಸಿಕೊಂಡವರು ಮಡಿವಂತರಲ್ಲ…ಇಡಿಧರಿಸಲಿಕ್ಕೇನು ಧಾಡಿ? ಅವನನ್ನು ಬುಟ್ಟಿಗೆ ಹಾಕಿಕೊಳ್ಳಲುನೋಡಿ ಸೋತು… ಅಪಪ್ರಚಾರ ಮಾಡುತ್ತಿದ್ದಾಳೆ ಈ ಹಡಬೆ!”ಎಂದು ಗೋಡೆಗೋಡೆಗಳಿಗೂ ಇಲ್ಲದ್ದನ್ನು ಉಸುರಿಬಿಲ ಸೇರಿ ಭುಸುಗುಡುತ್ತಿರುತ್ತಾಳೆ…ಥೇಟ್ ಧಾರವಾಹಿಯ ನೀಲಿ ರೆಪ್ಪೆಯಮೀಡಿಯಾಳ ಹಾಗೆ!ಒಳಗೊಳಗೇ ಸಂಚು ಮಾಡುವ ಗುಳ್ಳೆನರಿಯಂತೆಮುಖ ತೋರಿಸದೆ ಓಡಾಡುತ್ತಾಳೆ!ಪ್ಚ್ ಪ್ಚ್!ತನ್ನ ಬಲೆಯಲ್ಲಿತಾನೇ ಸಿಕ್ಕಿಹಾಕಿಕೊಂಡ ಜೇಡನಂತೆ…ತನ್ನ ಮಾನಕ್ಕೆ ತಾನೇ ಬಟ್ಟೆ ಹೆಣೆಯುತ್ತ ಹೆಣೆಯುತ್ತನೆತ್ತರ ಕೊನೆಯ ಬಿಂದು ಕಾಲಿಯಾಗುವವರೆಗೂದೇಹವನ್ನು ಮಡಿಬಲೆಗೇ ಸುತ್ತಿಕೊಳ್ಳುತ್ತ ಸುತ್ತಿಕೊಳ್ಳುತ್ತಅವಳು ಈಗ ಈಗ ಸತ್ತಳು! ಮುಚ್ಚಿದ ಬಾಗಿಲೊಳಗೆಸೀರೆ ಸೆರಗಿನ ಅಂಚಿಗೆ ಬೆಂಕಿ ಭಗ್ಗೆಂದು ಹಿಡಿದುಕೆಂಪು ಕೆಂಪು ಗೆಣಸಿನಂತೆ ಭಗಭಗ ಮೈ ಬೇಯುವಾಗಲೂಕಿಟಕಿಯಿಂದ… “ ಸೀರೆ ಕಿತ್ತು ಬಿಸಾಡು! “ಎಂದು ಅರಚುವ ಗಂಡಸರಮುಂದೆಸೀರೆ ಕಳಚಿ ಎಸೆದು ಬತ್ತಲಾಗಿ ಜೀವ ಉಳಿಸಿಕೊಳ್ಳಲು ನಾಚಿ! ಛೆ!ಆತ್ಮಕ್ಕಂಟಿಕೊಂಡ ಹೆಣ್ಣುಮೈಯನ್ನು ಕಳಚಿ ಎಸೆಯಲಾಗದ ಸಂಕಟಕ್ಕೆಸುಟ್ಟು ಬೂದಿಯಾಗಿಬಿಟ್ಟಳು! ಗಂಡುಸಂತೆಯಲ್ಲಿ ಬಣ್ಣಬಣ್ಣದ ಶೀಲ ತುಂಬಿಕೊಂಡಉರುಟು ಚೌಕ ಆಯತ ತ್ರಿಕೋನ… ಆಕಾರ ಆಕಾರಗಳ ಹೆಣ್ಜುಕುಪ್ಪಿಬಾಟಲಿಗಳು ಮಾನದಲ್ಲೇ ಹರಾಜಾಗುತ್ತಿರುತ್ತವೆಮಾನ ಕಳಕೊಂಡು ಬೇಲಿಯ ಅಂಚಲ್ಲೇ ಒಡೆದುಖಾಲಿ ಬಿದ್ದಿರುತ್ತವೆ!ಅಡುಗೆ ಮನೆಯಲ್ಲಿ ಬೋಳಜ್ಜಿನಿರಾಕಾರದ ಹಿಟ್ಟನ್ನು ನಾದಿ ನಾದಿಆಕಾರದ ರೊಟ್ಟಿ ಕಾಯಿಸುತ್ತಹಿಟ್ಟಿನ ಮುದ್ದೆಯಂತೆ ಒಲೆ ಮುಂದೆಕಾಯುತ್ತಿರುತ್ತಾಳೆ ಅಜ್ಜನನ್ನು! ಅಜ್ಜ ನೆಟ್ಟ ಆಲದಮರದ ಬೇರಿಗೆಒಂದು ಹೂವಿಟ್ಟು ಅರಶಿನ ಕುಂಕುಮ ಬಳಿದುಊದುಬತ್ತಿಕಡ್ಡಿ ಹಚ್ಚಿ ದಿನಾ ನೂರ ಎಂಟು ಸುತ್ತು ಹಾಕದಿದ್ದರೆಮದುವೆಯಾಗುವುದಿಲ್ಲ ಮಕ್ಕಳಾಗುವುದಿಲ್ಲಬಂಜೆಗೊಡ್ಡಾಗುತ್ತಿ ಎಂದು ಸಹ್ಸ್ರನಾಮಾರ್ಚನೆ ಮಾಡುಮಾಡುತ್ತಲೇಸತಿ ಹೋದ ಆ ಅಜ್ಜಿಯ ನೆನಪಲ್ಲೇ ಉದ್ದಲಂಗದ ಮಗಳುಜೀವಮಾನವಿಡೀ ಮರಕ್ಕೆ ಸುತ್ತು ಹೊಡೆಯುತ್ತಲೇ ಇರುತ್ತಾಳೆಕುಪ್ಪಸದ ಬೆನ್ನು ಹೊಕ್ಕಳು ಹೊಟ್ಟೆಯ ಚರ್ಮಸುಕ್ಕಾಗಿಮೊಲೆಗಳು ಜೋತುಬೀಳುವವರೆಗೂಮೆದುಳನ್ನೇ ಕೊಂಬಚೇಳು ಕಚ್ಚಿಹಿಡಿದಾಗದೇವರಕಿಂಡಿಗೆ ಹಣೆ ಚಚ್ಚಿಕೊಳ್ಳುತ್ತಾಳೆ ಆಗ…ಜೇಡರ ದಾಸಿಮಯ್ಯ ಹೇಳಿದಗಂಡೂ ಅಲ್ಲದ ಹೆಣ್ಣೂ ಅಲ್ಲದ ಆತ್ಮವನ್ನುದೇವರು ಹುಡುಕಲು ಹೊರಡಬೇಕೆಂದುಕೊಳ್ಳುತ್ತಾನೆಶರ್ಟ್ ತೊಡಲೇ ಸೀರೆ ಉಡಲೇ!ಎಂದು ಕನ್ನಡಿಯ ಮುಂದೆ ಬತ್ತಲೆ ನಿಂತುತಲೆ ಕೆರೆದುಕೊಳ್ಳುತ್ತ! ********************************** ಕಾತ್ಯಾಯಿನಿ ಕುಂಜಿಬೆಟ್ಟು
ನಡುವೆ ಸುಳಿಯುವ ಆತ್ಮ! Read Post »
ಹೊರಗೋಡೆ
ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು ನಂಬಲು ಅವರುಗಳು ಕಟ್ಟಿ, ಬಿಟ್ಟು ಹೋಗಿರುವ ಗೋಡೆಗಳೇ ಸಾಕ್ಷಿ. ಅಂತೆಯೇ ಶತಮಾನಗಳೇ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವಂಥಹ ಗೋಡೆಗಳಿಗೆ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು, ಸಾವಿರಾರು ವರ್ಷಗಳಷ್ಟು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿರುವುದು ಮಾತ್ರ ಒಟ್ಟೊಟ್ಟಿಗೇ ಭೂಮಿಯ ಗುಣ ಹಾಗೂ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಅನ್ಯರಿಗೆ ಕಾಣಿಸುವ ಅಗತ್ಯವಿಲ್ಲದಾಗ ಸುರಕ್ಷತೆಯ ಹಾಗೂ ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಗೋಡೆಗಳನ್ನು ಕಟ್ಟಿರುವ ಸಾಕ್ಷಿ ಇಂದಿಗೂ ಹರಪ್ಪಾ ಹಾಗೂ ಮೊಹಾಂಜದಾರೋ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ ಎನ್ನುವುದು, ಮಾನವರಿಗೆ ಗೋಡೆಗಳ ಅಗತ್ಯ ಹಾಗೂ ಅವರುಗಳು ಅನಾದಿಕಾಲದಿಂದಲೂ ಗೋಡೆಗಳಿಗೆ ನೀಡುತ್ತಿದ್ದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಅರಿಯಲು ಸಹಕಾರಿಯಾಗಿದೆ. ಅಂತೆಯೇ ಕೋಟೆಯ ಗೋಡೆಗಳೂ ಸಹ ಸಾವಿರಾರು ವರ್ಷಗಳೇ ಕಳೆದರೂ, ಕೆಲವು ಅವಶೇಷ ಸ್ಥಿತಿ ತಲುಪಿ ಇಂದಿಗೂ ನೋಡಬಹುದಾದ ಗೋಡೆಗಳು ಎಂಥಹವರಲ್ಲೂ ಭೂಮಿಯ ಮೇಲೆ ಬಾಳಿ, ಆಳಿದ ನಂತರ ಅಳಿದ ಪ್ರತಿಯೊಂದು ಪರಂಪರೆಯನ್ನು ನಮ್ಮ ಕಣ್ಮುಂದೆ ತರುವ ಒಂದು ಅದ್ಭುತವೇ ಸರಿ. ಈಜಿಪ್ಟಿನ ಪೂರ್ವಜರು ನಿರ್ಮಿಸಿರುವ ಪಿರಾಮಿಡ್ಡುಗಳೂ, ಚೈನಾ ಗೋಡೆಗಳೂ ಸಹ ಇದನ್ನು ಸಾಕ್ಷೀಕರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಯಾವುದೋ ಕಾಲದಲ್ಲಿ ಕಟ್ಟಿದ ಗೋಡೆಯನ್ನು ಇಂದಿಗೂ ಹೊಡೆದುಹಾಕುವುದೋ ಅಥವಾ ಇನ್ನಷ್ಟು ಬೆಳೆಸುವುದೋ ಸಾಧ್ಯವಾಗದೇ ಯಥಾಸ್ಥಿತಿ ಕಾಪಾಡಿಕೊಂಡು, ಇಂದು ದೇಶ ದೇಶಗಳ ನಡುವೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿಯೂ ಉಳಿದುಕೊಂಡು ಬಂದಿರುವ ಅನೇಕ ಉದಾಹರಣೆಗಳು ಸಹಾ ಇಲ್ಲದೆ ಇಲ್ಲ. ವೈರಿಗಳು ಗಡಿ ನುಸುಳದಂತೆ ಹಾಗೂ ಒಂದು ದೇಶದಲ್ಲಿ ನಡೆಯುವ ವಿಷಯಗಳನ್ನು ಗುಟ್ಟಾಗಿಡುವ ಉದ್ದೇಶದಿಂದ ಯಾವ ದೇಶವೇ ಗೋಡೆಯನ್ನು ಕಟ್ಟಿದರೂ, ಉಭಯ ದೇಶಗಳಿಗೂ ಗೋಡೆಯಾಚಿನ ಪ್ರದೇಶ “ಹೊರಗೋಡೆ” ಆಗಿರುತ್ತದೆ. ಇಂದಿಗೂ ನೋಡಲು ಲಭ್ಯವಿದ್ದು, ಗೋಡೆಗಳೇ ಹೇಳುವ ಕಥೆಯನ್ನು ತಿಳಿಯುತ್ತಲೇ, ಪ್ರಸ್ತುತ ನಾಗರೀಕರು ಗೋಡೆಯನ್ನು ಕಟ್ಟುವ ಹಾಗೂ ನಿರ್ವಹಿಸುವ ಅದರಲ್ಲಿಯೂ ಹೊರಗೋಡೆಯ ಬಗ್ಗೆ ತಿಳಿಯಬೇಕಾಗುತ್ತದೆ. ಬಹುತೇಕ ಹೊರ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುವ ಗೋಡೆಗಳು ಕೆಲವರಿಗೆ ಸ್ವಂತದ್ದಾದರೆ ಹಲವರಿಗೆ ಬಾಡಿಗೆ ಅಥವಾ ಭೋಗ್ಯದವು. ಗೋಡೆಗಳನ್ನು ಕೂಡಿಸಿ, ಕೋಣೆಗಳನ್ನು ಬೇರ್ಪಡಿಸಿದ ಮನೆಗೆ ಸೇರಿಕೊಂಡು ಬಾಗಿಲು ಹಾಕಿದರೆ ಗೋಡೆಯಾಚೆ ನಡೆಯಬಹುದಾದ, ನಡೆದುಹೋದ ಹಾಗೂ ನಡೆಯುತ್ತಿರುವ ಎಷ್ಟೋ ವಿಷಯಗಳು ತಮ್ಮ ಗಣನೆಗೆ ಬರುವುದಾಗಲೀ ಅಥವಾ ತಮ್ಮ ಕಲ್ಪನೆಗೆ ಎಟುಕುವುದಾಗಲೀ ಸಾಧ್ಯವೇ ಇರುವುದಿಲ್ಲ. ಒಬ್ಬ ಕಳ್ಳನು ಕದ್ದ ವಸ್ತುಗಳನ್ನು ತಂದು ಒಂದು ಬಂಗಲೆಯ ಹಿಂಭಾಗದಲ್ಲಿ ಶೇಖರಿಸಿಟ್ಟು, ಗೋಡೆಗೆ ಒಲೆ ನಿರ್ಮಿಸಿ, ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದ ಘಟನೆಯು ಒಂದೊಮ್ಮೆ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯ ನಾಗರಿಕರ ನಿದ್ದೆ ಕೆಡುವಂತೆ ಮಾಡಿತ್ತು. ಆ ಮಟ್ಟಿಗೆ ನಮ್ಮದೇ ಮನೆಯ ಹೊರಗೋಡೆಯಲ್ಲಿ ನಡೆಯುವ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ ಎನ್ನುವುದು ವಿಪರ್ಯಾಸ. ಮೊದಲೆಲ್ಲಾ ನಮ್ಮ ಹೊರ ಗೋಡೆಯಲ್ಲಿ ನಡೆಯುವ ಹಲವಾರು ಘಟನೆಗಳು ಬೇರೆಯವರಿಗೆ ಕಾಣಬಹುದಿತ್ತಾಗಲೀ, ನಮಗೆ ತಿಳಿಯಬೇಕಿದ್ದರೆ, ಸ್ವತಃ ನಾವು ಹೊರ ಬಂದು ನೋಡಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮದೇ ಗೋಡೆಯಾಚೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಮನೆಯೊಳಗೆ ಕುಳಿತು ಯಾರಾದರೂ ಗೋಡೆ ಹತ್ತಿ ಮಹಡಿ ತಲುಪುವುದನ್ನೂ ತಿಳಿದುಕೊಳ್ಳುವಷ್ಟು ಬೆಳೆದಿದೆ. ಮನೆಯ ಹೊರಗೋಡೆಗೆ ವಿಶೇಷವಾದ ಹೆಸರಿರುವುದಿಲ್ಲವಾಗಿ, ಕಟ್ಟಿಗೆ ಒಟ್ಟಿದ್ದರೆ ಕಟ್ಟಿಗೆಗೋಡೆ, ಹಿತ್ತಲಿಗೆ ತೆರೆದುಕೊಂಡಿದ್ದರೆ ಹಿತ್ತಲಗೋಡೆ, ಬೀದಿಕಡೆಗಿದ್ದರೆ ಬೀದಿಗೋಡೆ, ಅಡಿಗೆಮನೆಯ ಹೊರಗೋಡೆ ಹೀಗೆ ಕರೆಯುವುದು ಸಾಮಾನ್ಯ. ಕಾಂಪೌಂಡಿನ ಹೊರ ಗೋಡೆಯಾದರಂತೂ ನಾವೇ ಕಟ್ಟಿಸಿದ ಗೋಡೆಯನ್ನೇ ಅಕ್ಕಪಕ್ಕದವರ ಮನೆಯವರ ಹೆಸರಿನೊಂದಿಗೆ ಗುರುತಿಸುತ್ತೇವೆ. “ಮಾಚಿ ಮನೆ ಕಂಪೌಂಡಿನ ಒಳಗೆ ಇಲಿ ಸತ್ತುಹೋಗಿದೆ” ಅನ್ನುವುದು. ಅಥವಾ “ಮಂಜು ಮನೆ ಕಂಪೌಂಡಿನಲ್ಲಿ ಮಲ್ಲಿಗೆ ಹೂ ಬಿಟ್ಟಿದೆ” ಎಂದು ಆ ಬದಿ ಯಾರಿದ್ದರೆ ಅವರದೇ ಹೆಸರಿನೊಂದಿಗೆ ಕಂಪೌಂಡಿನ ಹೊರಗೋಡೆಗೆ ನಾಮಕರಣವಾಗುತ್ತದೆ. ಅಥವಾ ಪಕ್ಕದ ಮನೆಯವರು ಹಣ ಖರ್ಚು ಮಾಡಿ ಕಂಪೌಂಡ್ ಕಟ್ಟಿಸಿದ್ದರೂ ನಮ್ಮನ್ನು ಕುರಿತು “ರೀ ನಿಮ್ಮ ಕಂಪೌಂಡ್ ಒಳಗೆ ನಮ್ಮ ಬಟ್ಟೆ ಬಿದ್ದಿದೆ” ಅನ್ನುವುದೋ ಅಥವಾ “ಪೋಸ್ಟ್ ಮಾಸ್ಟರ್ ಲೆಟರನ್ನ ನಿಮ್ಮ ಕಂಪೌಂಡ್ ಕಡೆ ಹಾಕಿದ್ದಾನೆ” ಎಂದು ಅವರು ಕಟ್ಟಿಸಿದ ಕಂಪೌಂಡಿಗೆ ನಮ್ಮನ್ನು ಒಡೆಯರನ್ನಾಗಿಸುತ್ತಾರೆ. ಹೀಗೆ ಹೊರಗೋಡೆಯು ಒಬ್ಬರಿಂದ ಖರ್ಚುಮಾಡಿಸಿ ಮತ್ತೊಬ್ಬರಿಗೆ ರಕ್ಷಣೆ ಹಾಗೂ ಒಡೆತನವನ್ನು ನೀಡುತ್ತದೆ. ಇದು ಹೊರಗೋಡೆಗಲ್ಲದೆ ಭೂಮಿ ಮೇಲಿನ ಯಾವುದೇ ಮಾನವ ರಚನೆಗೆ ಸಾಧ್ಯವಿರಲಾರದು ಎನ್ನುವುದು ಇಲ್ಲಿ ಪ್ರಸ್ತುತ. ಸಾಮಾನ್ಯವಾಗಿ ಮನೆ ಕಟ್ಟುವವರು, ತಮ್ಮ ಮನೆಯನ್ನು ಎಲ್ಲರಿಗಿಂತಲೂ ವಿಶೇಷ ಹಾಗೂ ಪ್ರತ್ಯೇಕವಾಗಿ ಕಾಣಿಸುವ ದಿಸೆಯಲ್ಲಿ ಬೀದಿಗೆ ಕಾಣುವ ಹೊರಗೋಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಗರದಲ್ಲಿಯ ಸ್ಥಿತಿವಂತರ ಮನೆಯ ಹೊರಗೋಡೆಗಳು ಮನೆಯಿಂದ ಮನೆಗೆ ಸಾಧ್ಯವಾದಷ್ಟು ವಿಭಿನ್ನ ಅಭಿರುಚಿಯಿಂದ ಕೂಡಿದ್ದು, ತಮ್ಮ ವಿಚಾರಧಾರೆಗೆ ತಕ್ಕಂತೆ ವಿನ್ಯಾಸಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗೆ ನಗರೇತರ ಪ್ರದೇಶಗಳಲ್ಲಿಯೂ ಹೊರಗೋಡೆಗಳನ್ನು ಅಂದಗಾಣಿಸುವ ಹವ್ಯಾಸ ಬೆಳೆಯುತ್ತಿದೆ. ಹೊರಗೋಡೆಗೆ ಹೆಚ್ಚಿನ ಆಸಕ್ತಿ ತೋರುವ ಮಾಲೀಕರು ತಮ್ಮದೇ ಮನೆಯ ಅಕ್ಕಪಕ್ಕದ ಗೋಡೆಗಳನ್ನು ಚೂರುಪಾರು ಅಲಂಕರಿಸಿದರೆ, ಹಿಂದಿನ ಗೋಡೆಯದಂತೂ ಗೌಣಗಣನೆ ಅಂತೆಯೇ ಅದನ್ನು ಅಂದಗೊಳಿಸುವ ಅಗತ್ಯವೂ ಇರುವುದಿಲ್ಲ. ವಿನ್ಯಾಸಕಾರರ ವಿಶೇಷತೆ ಹಾಗೂ ನಿರಂತರ ಆವಿಷ್ಕಾರದೊಂದಿಗೆ ಅರಳುವ ಮನೆಯ ಮುಂದಿನ ಹೊರಗೋಡೆ ವಿನ್ಯಾಸವನ್ನು ನೋಡಿಯೇ ರಸ್ತೆಯಲ್ಲಿ ಓಡಾಡುವ ಜನರು, ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಹಾಗೂ ಅಭಿರುಚಿಯನ್ನು ಅಳಿಯಬಹುದಾಗಿದೆ. ಇಂತಿರುವ ಹೊರಗೋಡೆಯ ಪುರಾಣವು ಇಲ್ಲಿಗೇ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸರಕಾರೀ ಕಟ್ಟಡಗಳು, ಸಮುದಾಯ ಭವನಗಳು, ಸರಕಾರಿ ಸಿಬ್ಬಂದಿ ಕ್ವಾರ್ಟರ್ಸಿನ ಗೋಡೆಗಳಲ್ಲಿ ಮೊದಲೇ ಕಳಪೆ ಕಾಮಗಾರಿಯಿಂದ ಹಲವೆಡೆ ಹೊರಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೆ, ಅದೇ ಗೋಡೆಯಲ್ಲಿ ಜೇಡರಬಲೆ ಜಾಳುಜಾಳಾಗಿ ನೇತಾಡುವುದನ್ನು ಕಾಣಬಹುದು. ಆಲ, ಗಸಗಸೆ, ಔದಂಬರ, ಅರಳಿ, ಕ್ಯಾಕ್ಟಸ್ ಹಾಗೂ ಮುಂತಾದ ಗಿಡಗಳು ಹುಟ್ಟಿ ಮರವಾಗುವ ಹಂತ ತಲುಪಿದ್ದರೂ ಅದನ್ನು ಕಿತ್ತೆಸೆಯುವ ಗೋಜಿಗೇ ಹೋಗದೇ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ವರ್ತಿಸಿ, ಸಾರ್ವಜನಿಕರ ಹಣವನ್ನು ಪೋಲು ಮಾಡುವುದರಲ್ಲಿ ಹಲವರ ಉದಾಸೀನ ಭಾವನೆ ಎದ್ದು ಕಾಣುತ್ತದೆ. ನೌಕರರು ಬಿಟ್ಟಿಯಾಗಿರಲು ಕಟ್ಟಿದ ಕಟ್ಟಡವೆಂದು ಸರ್ಕಾರವೂ, ತಾವು ಕೇವಲ ತಂಗುವವರು ಮಾತ್ರವಾದ್ದರಿಂದ ನಿರ್ವಹಣೆಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿ ಎನ್ನುವ ಧೋರಣೆ ತೋರುವ ನಿವಾಸಿಗಳು, ಹೀಗೆ ಹಲವರ ತಾಕಲಾಟದಲ್ಲಿ ಹೊರ ಗೋಡೆಯಿಂದ ಹಾಳಾಗಳಾರಂಭಿಸಿ ಪೂರ್ತಿ ಕಟ್ಟಡವೇ ಪಾಳು ಬೀಳುವ ಹಂತದಲ್ಲಿರುವ ಅಸಂಖ್ಯಾತ ಕಟ್ಟಡಗಳನ್ನು ನಾವು ನಮ್ಮ ಅಕ್ಕಪಕ್ಕದಲ್ಲಿಯೇ ಕಾಣಬಹುದು. ಸರ್ಕಾರಿ ಕಟ್ಟಡಗಳಲ್ಲಿ ತಾನಾಗಿಯೇ ಗೂಡುಕಟ್ಟಿ ನೆಲೆ ನಿಂತು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಹಲವು ಹಕ್ಕಿಗಳು, ಈಗೀಗ ಮಾಲೀಕರು ತಮ್ಮ ಮನೆಯ ಹೊರಗೋಡೆಯಲ್ಲಿ ಹಕ್ಕಿಗಳಿಗಾಗಿಯೇ ನಿರ್ಮಿಸಿರುವ ಗೂಡುಗಳಲ್ಲಿ ಸೇರಿಕೊಂಡು ಚಿಲಿಪಿಲಿಗುಟ್ಟುತ್ತಿವೆ. ******************************* ಶಾಂತಿವಾಸು
ಮರ ಕಡಿಯುವಾ ನೋಟ
ಅನುವಾದಿತ ಕವಿತೆ ಮರ ಕಡಿಯುವಾ ನೋಟ ಇಂಗ್ಲೀಷ್ ಮೂಲ: Clifford Dymont ಕನ್ನಡಕ್ಕೆ: ಗಣೇಶ್ ವಿ. ನೂರಾರು ವರುಷಗಳ ಹಿರಿದಾದ ಮರವನ್ನುಕಡಿಯುತಿಹ ಕಟುಕನನು ನೋಡುತ್ತ ನಿಂತೆಥಳಥಳನೆ ಹೊಳೆಯುವ ಆ ಕತ್ತಿಯ ಅಲಗುಮರದ ಮರ್ಮಕ್ಕೆ ನಾಟಿತ್ತು ಕಡಿತದ ರಭಸಕ್ಕೆ ಗಡಗಡ ನಡುಗುವ ಮರದ ಬುಡದಿಂದಚಕ್ಕೆಗಳು ಚಿಮ್ಮಿದವು ಸಕಲ ದಿಕ್ಕುಗಳಲಿಗಾಳಿಯಲಿ ತಿರುಗಿದವು ಬುಗುರಿಯಾಕಾರದಲಿಮರವು ರೋದಿಸುತಲಿತ್ತು ಸಾವಿನಾ ಸಮಯದಲಿ ಕಟುಕನಾ ಹೊಡೆತಕ್ಕೆ ಮರ ಉರುಳಿ ಬಿದ್ದಿತ್ತುಕೊಡಲಿಯಾ ಆರ್ಭಟಕೆ ಜಯಭೇರಿ ಎಂಬಂತೆನೋಡನೋಡುತಿರುವಂತೆ ಬೆಳೆದಿದ್ದ ಆ ಮರವುಜನಸಾಗರದಾ ನಡುವೆ ಹೆಣವಾಗಿ ಬಿದ್ದಿತ್ತು. ತೂಗಾಡುವಾ ಕತ್ತಿ ಜನರನ್ನು ಸೆಳೆಯುವುದುಮರ ಕಡಿಯುವಾ ನೋಟದ ಚೆಂದವ ನೋಡಲುನೂರಾರು ಜನರು ಬಂದು ಸೇರಿಕೊಳ್ಳುವರುತುಂಬಲಾರದ ನಷ್ಟ ಅರಿಯದಿಹ ಮೂರ್ಖರು ನಮ್ಮ ಹಿರಿಯರು ಬೆಳಸಿ ಉಳಿಸಿದ್ದ ನಾಡಸಿರಿಮುಂದಿನಾ ಪೀಳಿಗೆಗೆ ಹಸಿರಾಗಿ ಉಳಿಯಲಿಇದನರಿಯದಿರೆ ನಾವು ಮೂರ್ಖರಾಗುವೆವುನಮ್ಮ ಸಮಾದಿಯನು ನಾವೇ ಕಟ್ಟಿಕೊಂಡಂತೆ ********************** ಗಣೇಶ್.ವಿ









