Month: September 2020

ಕ್ಷಮಿಸು ಮಗಳೇ,

ಕವಿತೆ ಕ್ಷಮಿಸು ಮಗಳೇ, ಬಾಲಾಜಿ ಕುಂಬಾರ ಕ್ಷಮಿಸು ಮಗಳೇ,ನಿನಗೆ ನಾಲಿಗೆ ಕತ್ತರಿಸಿದಾಗನಮಗೂ ನಾಲಿಗೆ ಮೇಲೆ ಗಾಯವಾಗಿದೆ,ಆದರೆ ಮಾತನಾಡಲು ಆಗಲಿಲ್ಲ.ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ, ಕ್ಷಮಿಸು ಮಗಳೇ,ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗಕಾಲುಗಳಿಗೆ ನೋವಾಗಿದೆ,ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆನಿನ್ನ ‘ಜೀವ’ ಕಳೆದುಕೊಂಡು,ಮತ್ತದೇ ಸೂತಕದ ಮನೆಯಲ್ಲಿ, ಕ್ಷಮಿಸು ಮಗಳೇ,ಇದು ‘ರಾಮರಾಜ್ಯ’ ಇಲ್ಲಿ ಸ್ವಾತಂತ್ರ್ಯವಾಗಿತಿರುಗಾಡುವಂತೆ ಹೇಳಿದ್ದೇವೆ, ಆದರೆರಾಮರಾಜ್ಯದ ಕೀಚಕರ ಕೈಯಿಂದ ನಿನ್ನನ್ನುರಕ್ಷಿಸಲು ಆಗದೇ, ನಾವು ಅಪರಾಧಿಗಳಾಗಿದ್ದೇವೆ. ಕ್ಷಮಿಸು ಮಗಳೇ,ಈಗ ಕೌರ್ಯ ಮೆರೆಯುತ್ತಿದೆ, ನ್ಯಾಯ ಗಂಟಲಲ್ಲಿ ಉಸಿರುಗಟ್ಟಿದೆ, ಇನ್ನು ಮನುಷ್ಯತ್ವ ಎಂಬುದು ಮರೀಚಿಕೆಯಾಗಿದೆ, […]

ಗಝಲ್

ಕವಿತೆ ಗಝಲ್ ರತ್ನರಾಯ ಮಲ್ಲ ಒರಟಾದ ಅಧರಗಳಲಿ ನುಲಿಯುತಿದೆ ನಿನ್ನದೆ ಹೆಸರುಎದೆಯ ಎಡ ಭಾಗದಲ್ಲಿ ಕುಣಿಯುತಿದೆ ನಿನ್ನದೆ ಉಸಿರು ಹಗಲಿರುಳು ಕಳೆಯುತಿರುವೆ ನಿನ್ನಯ ಕನವರಿಕೆಯಲ್ಲಿಕನಸುಗಳೆಂಬ ಹೆಪ್ಪಿನಿಂದ ಭಾವವು ಆಗಿದೆ ಮೊಸರು ಈ ರಾತ್ರಿಯು ಹರಿಯುತಿದೆ ನಿದ್ರೆಯ ಆಲಿಂಗನವಿಲ್ಲದೆಹಾಸಿಗೆಯ ತುಂಬೆಲ್ಲ ಬರಿ ನಿನ್ನ ಮಾದಕತೆಯ ಒಸರು ಗಾಳಿ ಬೀಸುತಿದೆ ಅನುರಾಗದ ಕಡಲು ಭೋರ್ಗರೆಯಲುಕಂಗಳ ಬಾಯಾರಿಕೆಯಲ್ಲಿ ಬರಿ ನಿನ್ನ ಬಿಂಬದೆ ಕೊಸರು ‘ಮಲ್ಲಿ’ಯ ಈ ಬಿಳಿ ಬಾಹುಗಳು ನಿನ್ನನ್ನೇ ಹುಡುಕುತಿವೆಅಂತರವನ್ನು ಮುಗಿಸಲು ಅನುವಾಗಿದೆ ಪ್ರಣಯದ ಕೆಸರು ********************************

ಭಯ

ಕಥೆ ಭಯ ಲಕ್ಷ್ಮೀದೇವಿ ಪತ್ತಾರ ಸಂಜನಾ ಬೆಳಗ್ಗೆದ್ದ ತಕ್ಷಣ ಪಾರಿಜಾತದ ಗಿಡದತ್ತ ಹೂ ತರಲು ಹೋದಳು. ಹೊತ್ತಾದರೆ ಹೂಗಳು ನೆಲಕ್ಕುರುಳಿ ಬಿಳುವುದೆಂದು ಹೂಬುಟ್ಟಿ ಹಿಡಿದು ಗಿಡದ ಬಳಿ ಹೋದಳು. ಆ ಹೂವೆ ಹಾಗೆ. ಅತಿಸೂಕ್ಷ್ಮವೂ ಅತ್ಯಾಕರ್ಷಕವೂ ಅಲ್ಲದೆ ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ನೆಲಕ್ಕೆ ಅಲಂಕಾರ ಮಾಡಿದಂತೆ ನೆಲದ ತುಂಬಾ ಅರಳಿ ಬೀಳುತ್ತಿದ್ದವು. ಕೆಲವಷ್ಟು ಗಿಡದ ಮೇಲೆಯೂ ಇರುತ್ತಿದ್ದವು. ಇನ್ನು ಪೂರ್ಣ ಬೆಳಕು ಹರಿಯುವ ಮುನ್ನವೇ ಅವನು ತಂದು ಬಿಡುತ್ತಿದ್ದಳು ಸಂಜನಾ. ಅಂದು ಸ್ವಲ್ಪ ಲೇಟಾಗಿ ಎದ್ದಿರುದರಿಂದ ದೌಡಾಯಿಸಿ […]

ಸೌಹಾರ್ದ

ಕವಿತೆ ಸೌಹಾರ್ದ ರೇಷ್ಮಾ ಕಂದಕೂರು ಜಾತಿಮತದ ಭೇದಾಗ್ನಿ ಮನೆ ಮನಗಳಲಿ ಆಗ್ನಿಸ್ಪರ್ಷ ಗೈದಿದೆಪ್ರೀತಿ ವಿಶ್ವಾಸದ ದ್ವಂಸವಾಗುತ ನೀತಿ ನಿಯಮ ಸಾಯುತಿದೆ ನೂರು ಮತಗಳ ಸಾರ ಒಂದೇ ತಿಳಿಯದ ಗಾಂಪರೊಡೆಯನಂತಿದೆಭ್ರಾಂತಿ ಮೋಹಗಳು ದೇಶಪ್ರೇಮ ನೆಮ್ಮದಿಗೆ ಭೀತಿ ಹಬ್ಬಿಸುತಿದೆ ಕೋಮು ಸೌಹಾರ್ಧವನು ಕ್ರೋದಾಗ್ನಿಯಲಿ ತಳ್ಳುತಲಿದೆಸದ್ಗುಣಗಳು ಕ್ಷಾಮಕೆ ತುತ್ತಾಗಿ ಮಾನವೀಯತೆ ಬೆಂದಾಗಿದೆ ಜಾತಿ ಜಂಜಡದಲಿ ನೀತಿಯನು ಬಲಿಕೊಟ್ಟು ಗಹಗಹಿಸುತಿದೆಕುಟಿಲತೆ ವರ್ಧಿಸಿ ಭಾವೈಕ್ಯತೆಗೆ ಮಸಿಬಳಿದಂತಾಗಿದೆ ದಯೆ ಪ್ರೇಮ ಗುಣ ಬೆಳೆಸಿಬಿದ್ದವರನೆತ್ತಿ ಪೋಷಿಸುವಂತಾಗಬೇಕಿದೆಸ್ನೇಹ ಸೌಗಂಧವ ತಾಗಿ ಸಿಪ್ರೀತಿರಸ ಉಣಿಸುವಂತಾಗಬೇಕಿದೆ ************************

ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಮತ್ಲಾಸಾನಿ /ಹುಸ್ನೆಮತ್ಲಾ ಗಜಲ್ ಕಂಡ ಕನಸೆಲ್ಲವೂ ಗುರಿಯ ಮುಟ್ಟವು ಕೇಳುನಡೆದ ಘಟನೆಯೆಲ್ಲವೂ ನನಸಾಗವು ಕೇಳು ವನದ ಸುಮವೆಲ್ಲವೂ ಗುಡಿಯ ಸೇರವು ಕೇಳುಬೀರಿದ ಕಂಪೆಲ್ಲವೂ ಸುಗಂಧ ದ್ರವ್ಯವಾಗವು ಕೇಳು ಅವನಿಯೆದೆಯ ಗೂಡ ಸ್ಪರ್ಶಿಸುವುದು ವರ್ಷಧಾರೆಬಿದ್ದ ಹನಿಗಳೆಲ್ಲವೂ ಸ್ವಾತಿಯ ಮುತ್ತಾಗವು ಕೇಳು ಬಯಲ ಭೂಮಿಯನ್ನೆಲ್ಲ ಹಸನು ಮಾಡಿ ಉಳಬಹುದುಬಿತ್ತಿದ ಬೆಳೆಗಳೆಲ್ಲವೂ ಫಲವ ನೀಡವು ಕೇಳು ಭವದ ಸಾಗರವು ವಿಸ್ತಾರವಾಗಿರುವುದು ಈ ಜಗದಲ್ಲಿಹೊರಟ ನಾವೆಗಳೆಲ್ಲವೂ ದಡವ ಸೇರವು ಕೇಳು ಸಪ್ತ ವರ್ಣಗಳ ಮೂಲವು ಶ್ವೇತವೇ ಆಗಿರುವುದುನೋಡಿದ ಬಿಳುಪೆಲ್ಲವೂ […]

ಅಂತರಂಗದ ಆಲಾಪ ಕವಿತೆಗಳು

ಪುಸ್ತಕ ಪರಿಚಯ ಅಂತರಂಗದ ಆಲಾಪ   ಕವಿತೆಗಳು ಅಂತರಂಗದ ಆಲಾಪ   ಕವಿತೆಗಳು ಸುಜಾತಾ ಎನ್        ” ಬೆಚ್ಚನೆಯ ಕೌದಿಯ ತುಂಡುಗಳು”             ಸುಜಾತಾ ಎನ್ ಮೈಸೂರಿನವರು. ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ. ಕಾಲೇಜು ದಿನಗಳಲಿ ಬರವಣಿಗೆ ಇದ್ದರೂ ಎಲ್ಲವನೂ ಬಿಟ್ಟು ನೌಕರಿ, ಸಂಸಾರದಲ್ಲಿ ನೆಲೆನಿಂತು ವಾತಾವರಣಕ್ಕೆ ತಕ್ಕಂತೆ ಕಳೆದ ಮೂರ್ನಾಲ್ಕು  ವರ್ಷಗಳಿಂದ ಮತ್ತೆ ಬರವಣಿಗೆಯಲಿ ನಿರತರಾಗಿರುವರು. ಕಥೆ,ಕವಿತೆ, ವಿಮರ್ಶೆ ,ಲೇಖನಹೀಗೆ ಎಲ್ಲ ಪುಟಗಳನ್ನೂ ತಿರುವಿ ನೋಡಿದವರೇ. ಫೇಸ್ಬುಕ್ , ವಾಟ್ಸಪ್ ಗುಂಪುಗಳ ಮೂಲಕ ತಮ್ಮದೇ ಆದ ವಿಶಿಷ್ಟ […]

ಅವರೆಲ್ಲ ಎಲ್ಲಿ ಹೋದರು?

ಕವಿತೆ ಅವರೆಲ್ಲ ಎಲ್ಲಿ ಹೋದರು? ಜಯಶ್ರೀ ಭ.ಭಂಡಾರಿ. ಹದಿಹರೆಯದ ದಿನಗಳಲ್ಲಿನಮಲೆನಾಡಿನ ಮೂಲೆಯಅಜ್ಜಿಯ ನೆನಪುಸೌದೆ ಒಲೆ ಮೇಲೆಕಾದ ಹಂಡೆ ನೀರುತಲೆಗೆ ಮೈಗೆಎಣ್ಣೆ ಪೂಸಿಆರೈಕೆ ಬೆರೆತ ಅಭ್ಯಂಜನರುಚಿ ರುಚಿ ಊಟಬೆಳಕಿಲ್ಲದ ಕೋಣೆಯಲ್ಲಿಕುಲಾಯಿ ಕಟ್ಟಿಕೊಂಡುಹಾಯಾಗಿ ನಿದ್ರಿಸುವ ಸುಖಪ್ರಕೃತಿ ಹಸಿರು ಸುವ್ವಲಾಲಿಹಾಡಿ ಮಲಗಿಸುತ್ತಿತ್ತುಬಸಿರು ಬಾಣಂತನದಲ್ಲಿ ತಿಂಗಳುಗಟ್ಟಲೆಉಪಚರಿಸುತ್ತಿದ್ದ ತಾಯಿಅಕ್ಕ ಭಾವನ ಸದಾ ಎದಿರುನೋಡುತ್ತಿದ್ದ ಒಲವಿನ ಸಹೋದರಿಯರುಮದುವೆಯಾಗಿ ತಂಗಿ ತವರನಿಂದದೂರಾಗ್ತಾಳೆ ಅಂತ ಕೊರಗುತ್ತಿದ್ದ ಅಣ್ಣಇವರೆಲ್ಲ ಈಗೆಲ್ಲಿ ಹೋದರು? ತಂಗೀನ ಕರೆಯದೆ ಜಾತ್ರೆ ಮಾಡುವ ಅಣ್ಣಅಕ್ಕನ ಕರಿದರೆ ಕಿರಿಕಿರಿ ಎನ್ನುವ ತಮ್ಮಸತಿಮಣಿಯೇ ರ‍್ವಸ್ವ ಎನ್ನುವರಲ್ಲವೃದ್ಧಾಪ್ಯದಲ್ಲಿ ತಂದೆ ತಾಯಿಗಳು […]

ಬುಡಬುಡಿಕೆ’ ಮಕ್ಕಳ ಕವನ ಸಂಕಲನ

ಪುಸ್ತಕ ಪರಿಚಯ ಬುಡಬುಡಿಕೆ’ ಮಕ್ಕಳ ಕವನ ಸಂಕಲನ `ಬುಡಬುಡಿಕೆ’ ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ರವಿಕಾಣದ್ದನ್ನು ಕವಿಕಂಡ ಎಂಬAತೆ ಲೇಖಕರು ತಮ್ಮ ವೃತ್ತಿವಲಯದಲ್ಲಿ ಸುತ್ತಮುತ್ತಲೂ ಕಂಡ ಪರಿಸರದಲ್ಲಿ ಸಿಕ್ಕ ಕಾವ್ಯವಸ್ತುಗಳನ್ನು ಕಾಪಿಟ್ಟುಕೊಂಡು ಅವುಗಳಿಗೆ ಅಕ್ಷರ […]

ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು        (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ )           ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ  ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ  ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ […]

ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ  :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ           :ನನ್ನೊಳಗೆ ನುಸುಳುವ […]

Back To Top