ಮೋಹದ ಕಡಲಲ್ಲಿ…
ಕವಿತೆ ಮೋಹದ ಕಡಲಲ್ಲಿ… ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಅಂಗ ಸಂಗವ ಜರೆದುಅರಿವೆ ಹಂಗನು ತೊರೆದುಬೆತ್ತಲಾದ ಅಕ್ಕಯ್ಯನಿಗೂಆತ್ಮ ಸಂಗಾತದ ಮೋಹ..! ಮಾಯೆಯ ಜಗದೊಳಗೆಈಸಿ ಗೆದ್ದ ಅಲ್ಲಮನಿಗೂಲಿಂಗದಾಲಿಂಗನದ ಮೋಹ…! ಕಾನನದ ಕಾರ್ಪಣ್ಯಗಳಅರಿವಿದ್ದೂ ಸೀತೆಯ ಬಿಡದಬಂಗಾರದ ಮೋಹ…! ಬಸುರಿ ಹೆಂಡತಿಯಕಾಡಿಗಟ್ಟಿದ ಪುರುಷೋತ್ತಮನಜನಪದದ ಮೋಹ..! ಮಡದಿಯ ಅಡವಿಟ್ಟೂಮಾತುತಪ್ಪದ ಹರೀಶ್ಚಂದ್ರನಸತ್ಯನಿಷ್ಠೆಯ ಮೋಹ..! ಗೆದ್ದ ರಾಜ್ಯವ ಒದ್ದುತಪೋನಿರತನಾದವನಿಗೂಜಿತನಾಗುವ ಮೋಹ…! ಸಾವಿನ ಬಾಗಿಲಿನಲಿ ನಿಂತಅರಿವಿದ್ದೂ ಫಣಿಕೇತನನಿಗೆಛಲಮೆರೆವ ಮೋಹ..! ತುಂಡು ಅರಿವೆಯ ಮಂಡಿಯ ಮೇಲೆಸುತ್ತಿಕೊಂಡ ಫಕೀರನಿಗೆಮುಕ್ತಿ ಕೊಡಿಸುವ ಮೋಹ…! ಮೋಹವ ಗೆದ್ದೂ ಗೆಲ್ಲದನಿರ್ಮೋಹಿಗಳೂಮೋಹದ ಕಡಲೊಳಗಿನಆಣಿಮುತ್ತುಗಳಾದರು….!! **************************************
ಅವ್ಯಕ್ತ
ಕವಿತೆ ಅವ್ಯಕ್ತ ಡಾ.ಪ್ರೀತಿ. ಕೆ. ಎ ಹೇಳಿಬಿಡಬಹುದಿತ್ತು ನಾನುನಿನ್ನ ಪ್ರತಿಯೊಂದು ಮಾತುನನ್ನಲ್ಲಿ ಅನುರಾಗದ ಅಲೆಗಳನ್ನುಎಬ್ಬಿಸುವುದೆಂದು ನಿನ್ನ ಸಾಮೀಪ್ಯವು ನನಗೆಎಷ್ಟೊಂದು ಮುದನೀಡುವುದೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಹೊಗಳಿಕೆಯೊಂದುಇಂದಿಗೂ ಕೂಡನನ್ನ ಕೆನ್ನೆಯ ರಂಗೇರಿಸುವುದೆಂದು ನನ್ನ ನಗೆಯ ಹಿಂದಿನಕಾರಣವು ನೀನಷ್ಟೇಆಗಿರುವೆಯೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಒಂದೇ ಒಂದು ಸ್ಪರ್ಶನನ್ನೊಳಗಿನ ಭಾವ ತಂತಿಯನ್ನುಮೀಟುವುದೆಂದು ನಿನ್ನ ಬಾಹುಗಳಲ್ಲಿನನ್ನನ್ನೇ ನಾನುಕಳೆದುಕೊಳ್ಳುತ್ತೇನೆಂದು ಹೇಳಿಬಿಡಬಹುದಿತ್ತು ನಾನುನೀನು ನನ್ನೊಡನಿದ್ದ ಕ್ಷಣನನಗೆ ಮತ್ತೇನೂನೆನಪಾಗುವುದಿಲ್ಲವೆಂದು ಎದೆ ಬಡಿತ ನಿಲ್ಲುವ ತನಕನನ್ನ ಹೃದಯ ನಿನ್ನ ಹೆಸರನ್ನಷ್ಟೇಕೂಗುವುದೆಂದು ಆದರೂ ಹೇಳಲಿಲ್ಲಏಕೆಂದರೆ ನನಗೆ ಗೊತ್ತುನಿನ್ನೆಡೆಗಿನ ನನ್ನ ಪ್ರೀತಿಹೇಳಿದರಷ್ಟೇ ನಿನಗೆ ಗೊತ್ತಾಗುವಷ್ಟುಬಲಹೀನವಲ್ಲವೆಂದು […]
ಅವಲಕ್ಕಿ ಪವಲಕ್ಕಿ
ಮಕ್ಕಳ ಕಥೆ ಅವಲಕ್ಕಿ ಪವಲಕ್ಕಿ ಗಿರೀಶ ಜಕಾಪುರೆ – ಅವಲಕ್ಕಿ ಪವಲಕ್ಕಿ ಕಾಂಚಣ, ಮಿಣಮಿಣ ಡಾಮ್ ಡೂಮ್ ಟಸ್ ಪುಸ್ಸ ಕೋಯ್ ಕೊಟಾರ್ ಅವಲಕ್ಕಿ ಪವಲಕ್ಕಿ ‘ಸಿರಿ ಟೀಚರ್ ಬಹಳ ಚೆಂದ ಹಾಡು ಹೇಳ್ತಾರೆ’ ಎಂದ ಚಿಂಟೂ ರಮಿಯತ್ತ ನೋಡುತ್ತ. ‘ಅಷ್ಟೇ ಅಲ್ಲ ಮಾರಾಯಾ, ಎಷ್ಟು ಚೆಂದ ಡಾನ್ಸ್ ಹೇಳಿಕೊಡ್ತಾರೆ, ನೋಡು’ ಎಂದ ರಮಿ. ವಿಷಯ ಉತ್ಸಾಹದ್ದಾಗಿದ್ದರೂ ಅವನ ದನಿ ಏಕೋ ಸಪ್ಪಗಿತ್ತು. ಚಿಂಟೂಗೆ ಅವಲಕ್ಕಿ […]
ಅಂಕಣ ಬರಹ ಕತೆಗಾರ್ತಿ ಆಶಾ ಜಗದೀಶ್ಮುಖಾಮುಖಿಯಲ್ಲಿ “ಹೆಣ್ಣು ನನ್ನ ಬರಹದ ಮೂಲ ಕಾಳಜಿ” ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ. ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ […]