Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು

ಗುಡಿಹಳ್ಳಿಗೆ ರಂಗಭೂಮಿ ಬಗ್ಗೆ ವಿಶೇಷ ಒಲವು ಆಸಕ್ತಿ. ವೃತ್ತಿ ಹಾಗೂ ಹವ್ಯಾಸಿ ನಡುವೆ ಕೊಂಡಿಯಾಗಿ ಬರಹ ಬರೆದ. ಹೆಚ್ವು ವೃತ್ತಿ ಕಲಾವಿದರ ಕಡೆಯೇ ವಾಲಿದ್ದ. ಹತ್ತಾರು ಆ ವೃತ್ತಿ ಕಲಾವಿದರ ಜೀವನಚರಿತ್ರೆ, ಪರಿಚಯ, ವಿಶ್ಲೇಷಣೆಯ ಕೃತಿ ಹೊರ ತಂದ.

ದಾರಾವಾಹಿ ಆವರ್ತನ ಅದ್ಯಾಯ-29 ಅಂದು ಸುಮಿತ್ರಮ್ಮನ ಮನೆಯಲ್ಲಿ ನಾಗದೋಷ ನಿವಾರಣೆಯ ಅಂಗವಾಗಿ ನಡೆದ ಚರ್ಚಾಕೂಟದಲ್ಲಿ ಗೋಪಾಲ ದಂಪತಿಯ ಮೇಲಿನ ಹಗುರಭಾವನೆಯನ್ನು, ಅವರಿಂದ ಮುಂದೆ ಕೋಳಿಯ ಲಾಭವನ್ನು ಪಡೆಯಲಿದ್ದವರು ಮಾತ್ರವೇ ಬದಲಾಯಿಸಿಕೊಂಡರು. ಆದರೆ ವಠಾರದವರೆದುರು ಮುಖಭಂಗವಾಗುವಂತೆ ಮಾತಾಡಿದ ಅವರ ಮೇಲೆ ಸುಮಿತ್ರಮ್ಮ ಮಾತ್ರ ಒಳಗೊಳಗೇ ಕುದಿಯುತ್ತಿದ್ದರು. ಹಾಗಾಗಿ ಅವರು ತಮ್ಮ ಕೋಪವನ್ನು ತೀರಿಸಿಕೊಳ್ಳಲು ಬೇರೊಂದು ದಾರಿಯನ್ನು ಹಿಡಿದರು. ಮರುದಿನದಿಂದಲೇ ರಾಜೇಶನಂಥ ಆಪ್ತ ನೆರೆಕರೆಯ ಮನೆಗಳಿಗೆ ಹೋಗುತ್ತ ಅವರ ಅಂಗಳ ಮತ್ತು ಪಾಗಾರದ ಹೊರಗಡೆ ನಿಂತುಕೊಂಡು ಒಂದಿಷ್ಟು ಸುಖಕಷ್ಟ ಮಾತಾಡುತ್ತ […]

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು

ಆರೂ ಕವನ ಸಂಕಲನದ ಕವನಗಳು ಓದುಗರ ಮನದ ಮಾತಾಗಿವೆ. ಈಗ ಎಲ್ಲರ ಮನಕುಣಿಸುತಿರುವ ಪ್ಯಾರಿ ಪದ್ಯ ಸಂಕಲನವು..ಅನೇಕ ಹೊಸ ಗುಣಲಕ್ಷಣಗಳಿಂದ ಚರ್ಚೆಯಲ್ಲಿದೆ. ಹೊಸ ನೋಟ, ಹೊಸ ರೂಪ, ಪುಟ್ಟ ಹನಿಗಳಲ್ಲಿ ಜೇನೊಸರುವ ಮಾಧುರ್ಯ.. ಈ ಪ್ಯಾರಿಯನ್ನು ಕಂಡವರೆಲ್ಲಾ..ಪ್ಯಾರ್ಗೇ ಆಗಬುಟ್ಟೈತೆ..ಎಂದು ಪ್ಯಾರಿಯ ಹಿಂದೆ ಮುಂದೆ ಸುಳಿದಾಡುವ ದೃಶ್ಯ.. ಈಗ ಎಲ್ಲೆಲ್ಲೂ ಕಂಡುಬರುತ್ತಿದೆ. ಆ ಸಾಲಿನಲ್ಲಿ ನಾನು ಕೂಡ ಮುಂಚೂಣಿಯಲ್ಲಿರುವೆ.

ಮಳೆ ಕವಿತೆಗಳಿಗೆ ಆಹ್ವಾನ

ಮಳೆ ಕವಿತೆಗಳಿಗೆ ಆಹ್ವಾನ ಮಳೆಯ ಕವಿತೆಗಳಿಗೆ ಆಹ್ವಾನ ಇದೀಗ ಮಳೆಯ ಕಾಲ! ಈ ಮಳೆ ನೂರಾರು ವರ್ಷಗಳಿಂದಲೂ  ಕವಿತೆ ಬರೆಸಿಕೊಳ್ಲುತ್ತಲೇ ಬರುತ್ತಿದೆ. ಕೆಲವು ಮಳೆ ತರುವ ಹರುಷವನ್ನು, ಜೀವ ಚೈತನ್ಯವನ್ನು ಹಾಡಿದರೆ ಮತ್ತೆ ಕೆಲವು ಇದು ತರುವ ವಿಪತ್ತನ್ನು ವಿಪ್ಲವವನ್ನು ಪಾಡಿವೆ.ಒಟ್ಟಿನಲ್ಲಿ ಮಳೆಗೆ ಬೆರಗಾಗದ ಬರೆಯದ ಕವಿ ಇಲ್ಲವೇ ಇಲ್ಲವೆನ್ನಬಹುದು. ನಿಮ್ಮನ್ನು ಈ ಮಳೆ ಬೇರೆ ಬೇರೆ ರೂಪದಲ್ಲಿ ಕಾಡಿರಬಹುದು-ಹಾಡಾಗಿರಬಹುದು. ನೀವು  ಜನ ಓದಬಲ್ಲಂತಹ ಮಳೆಯ ಕವಿತೆ ಬರೆದಿದ್ದರೆ ನಮಗೆ ಕಳಿಸಿ.ನಾವೆಲ್ಲ ಕವಿತೆಯ ಮಳೆಯಲ್ಲಿ ಮೀಯೋಣ. ಉತ್ತಮವಾದ […]

ಮೊದಲ ಮಳೆಯ ಜಿನುಗು

ಸುರಿಯುತ್ತಿದ್ದ ಮಳೆಯೊಂದು ಯಾವುದೋ ಅಡ್ಡ ಗಾಳಿಯ ನೆವಕೆ ಹಾರಿಯೇ ಬಿಟ್ಟಿತು. ಅವಳ ಸಂಬಂಧಿಗಳು ಊರು ಖಾಲಿ ಮಾಡಿ ಆ ಊರ ನೆಂಟಸ್ತಿಕೆ ತಪ್ಪಿ ಹೋಯಿತು. ಅವ ಓದಲಿಕ್ಕೆ ಮತ್ತೆಲ್ಲಿಗೋ ಹೋದ.ದಾರಿಗಳು ಹೇಳದೆ ಕೇಳದೆ ದಾರಿ ಬದಲಿಸಿದವು.

ನಮ್ಮ ನಿಷ್ಠೆ ಓದುಗರೆಡೆಗಿರಬೇಕು

ಸಂಪಾದಕೀಯ ಯಾವ ಪತ್ರಿಕೆಯೂ ಲೇಖಕನನ್ನು ಬೆಳೆಸುವುದಿಲ್ಲ- ಹಾಗೆಯೇ ಯಾವ ಲೇಖಕನೂಪತ್ರಿಕೆಯನ್ನು ಬೆಳೆಸಲಾಗುವುದಿಲ್ಲ ಆದರೆ ಪತ್ರಿಕೆ ಮತ್ತು ಲೇಖಕ, ಇಬ್ಬರನ್ನೂ ಬೆಳೆಸುವುದು ಓದುಗ ಮಾತ್ರ ಹಾಗಾಗಿ ಪತ್ರಿಕೆ-ಬರಹಗಾರ ಇಬ್ಬರ ನಿಷ್ಠೆಯೂ ಓದುಗರೆಡೆಗಿರಬೇಕು ಓದುಗನಿಗೆ ಪ್ರಾಮಾಣಿಕವಾಗಿ ಬರೆಯಬೇಕು,,ಪ್ರಕಟಿಸಬೇಕು. ನನ್ನ ಮಾತಿನರ್ಥ ತೀರಾ ಸರಳವಾದುದು: ಜೀವ ವಿರೋಧಿಯಾದ ಯಾವುದನ್ನು ನಾವು ಓದುಗನಿಗೆ ಉಣಿಸಬಾರದು ಸಂಗಾತಿ ಬಳಗದ ಸಿದ್ದಾಂತವೇ ಇದು!! ಇದು ನಿಮ್ಮ ಸಿದ್ದಾಂತವೂ ಆಗಲೆಂಬುದು ನನ್ನ ಆಶಯವಾಗಿದೆ ನಿಮ್ಮ ಸಂಗಾತಿ ಕು.ಸ.ಮಧುಸೂದನ ರಂಗೇನಹಳ್ಳಿ

ತರಹಿ ಗಜಲ್

ಗಜಲ್ ತರಹಿ ಗಜಲ್ ಅರುಣಾ ನರೇಂದ್ರ ಸಾನಿ ಮಿಸ್ರಾ: ಡಾ.ಮಲ್ಲಿನಾಥ ತಳವಾರ ಸಾವು ಬದುಕಿನ ನಡುವೆ ಜೀವಗಳು ಸೆಣಸುತ್ತಿವೆಕಾಳಸಂತೆಯಲ್ಲಿ ಹಾಸಿಗೆಗಳು ಬಿಕರಿಯಾಗುತ್ತಿವೆ ಬದುಕಿಗಾಗಿ ಬೊಗಸೆಯೊಡ್ಡಿ ಉಸಿರು ಬಿಕ್ಕುತ್ತಿದೆಶ್ವಾಸದ ಏರಿಳಿತವನ್ನು ನೋಟುಗಳು ನಿರ್ಧರಿಸುತ್ತಿವೆ ದೇಶ ದಳ್ಳುರಿಯಲ್ಲಿ ಒದ್ದಾಡುತ್ತಿದೆ ಹೇ ಖುದಾಉಳುವಿಗೆಲ್ಲಿದೆ ಜಾಗ ಸಂಬಂಧಗಳು ಕಣ್ಣೀರಿಡುತ್ತಿವೆ ಊರು ಕಿರಿದಾಗಿದೆ ಸ್ಮಶಾನ ಹಿರಿದಾಗಿದೆದಫನ್ ಮಾಡಲಾಗದೆ ಹೆಣಗಳು ನಾರುತ್ತಿವೆ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವರೇ ಅರುಣಾದೇಶವಾಳುವ ದೊರೆಗೆ ಆತ್ಮಗಳು ಕಾಡುತ್ತಿವೆ ****************************************

ಆ ಪ್ರೀತಿಯನ್ನು

ಕವಿತೆ ಆ ಪ್ರೀತಿಯನ್ನು ಮೀನಾಕ್ಷಿ ಹರೀಶ್ ಅವ್ಯಕ್ತ ವಾದ ಇಚ್ಛೆ ಇದ್ದರೂವ್ಯಕ್ತ ಮಾಡದೆ, ಕ್ಷಣ ಕ್ಷಣಕ್ಕೂ ಮುಗುಳು ನಗುತ್ತಲೇದಿನಗಳು ಸವೆದವು ನಿರ್ಲಿಪ್ತತೆ ಯಿಂದ ಹಗಲಲ್ಲಿ ಮುಗುಳು ನಗುಇರುಳಲ್ಲಿ ಮೌನದ ನಗುಪ್ರೀತಿಗಾಗಿ ಹುಡುಕಿದವು ಕಣ್ಣುಗಳುನಿಂತಲ್ಲೇ ಕಡಲನಿರೀಕ್ಷೆಯೊಳು ಕಾಯುತ್ತಸರಿದು ಹೋದವು ಹಲವಾರು ವಸಂತಗಳು ಕಂಗಳು ತುಂಬಿದವು ಸೋಲಿನ ಹನಿಯಿಂದಮತ್ತೆ ಮತ್ತೆ ಸೋಲುತ್ತ ನಿರಾಸೆಯಲಿಹೃದಯದೆಲ್ಲಇಷ್ಟಗಳು ಕಷ್ಟಗಳಾದವುಕಾಮನೆಗಳು ವೈರಾಗ್ಯಕ್ಕೆ ವಾಲಿದವು ಅಂಗಳದಲ್ಲಿ ನೂರಾರು ದೀಪಗಳು ಒಮ್ಮೆಲೆ ಬೆಳಗಿದವುತಾಳದಾಯಿತು ಆ ವೈರಾಗ್ಯಕ್ಕೆ ಆ ಬೆಳಕು,ಹೋಗಿಬಿದಲೇ ಆ ಒಲವಿನತ್ತಬಿಗುಮಾನ ಬಿಟ್ಟುನಿಂತುಬಿಡಲೇ ಎನಿಸಿತು ಆ ಪ್ರೀತಿಯ ಉಸಿರಿನತ್ತಬಿಡಲೋಲ್ಲದು […]

ಹೊಸಬರ ಎರಡುಕವಿತೆಗಳು

ಕವಿತೆ ವೈಷ್ಣವಿ ವಿನಯ್ ತಾಯಿ ಪ್ರತಿ ಹೆಣ್ಣಿನಲ್ಲೂ ಮಾತೃತ್ವಪ್ರೀತಿ ಇರುವುದುಕಷ್ಟಗಳನ್ನು ಮರೆತುಮಕ್ಕಳ ಸುಖ ಕಾಣುವಳು!!! ಕರುಳಿನ ಬಳ್ಳಿಯ ಸೃಷ್ಟಿಕರ್ತೆ ಅಮ್ಮಕಲ್ಪವೃಕ್ಷವಾಗಿ ನಿಂದಿಹಳು ಅಮ್ಮಹೊತ್ತು ಹೆತ್ತ ತಾಯಿಯನ್ನುಎಂದೆಂದು ಸ್ಮರಿಸಬೇಕು!!! ಅಳುವ ಕಂದನ ಕೊರಳಿನ ಧ್ವನಿಯಲ್ಲಿಮಧುರ ನುಡಿಯ ಸಿಂಚನದಲ್ಲಿಜೋಗುಳ ಹಾಡಿದತ್ಯಾಗ ಮೂರ್ತಿ “ಅಮ್ಮ”!!! ******************************* ನಗು ನಗುತಿರು ನೀನುನಗಿಸುತಿರುವೆ ನಾನುಆರೋಗ್ಯದ ಗುಟ್ಟು ನಗುಅಲಂಕಾರ ಎಷ್ಟಿದ್ದರೇನುನಗುತ ನಗಿಸುತ ಬಾಳೋಣ!!! ಚೆಲುವೆಯ ಮುಗ್ದ ನಗುವಿಗೆನಗಲು ಬೇಕಿಲ್ಲ ಕಾರಣನಗು ತುಂಬಿರಲಿ ಹೂವಿನ ಸುಗಂಧದಂತೆಅರಳಿದ ಗುಲಾಬಿ ಹೂವಿನಂತೆನಗುವೇ ನಿಮ್ಮ ಮೊಗದ ಆಭರಣವಾಗಲಿಸದಾ ನಗುವನ್ನು ಸ್ವಾಗತಿಸಲುಜಗವು ಕಾಯುತ್ತಿದೆ […]

ಮುಟ್ಟು .. ಮುಟ್ಟು.. ಮುಟ್ಟು..

ವಿಶೇಷ ಲೇಖನ ಮುಟ್ಟು .. ಮುಟ್ಟು.. ಮುಟ್ಟು.. ಚಂದ್ರಪ್ರಭ ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, ವೀರ್ಯಾಣು, ಗರ್ಭಧಾರಣೆ, ಋತುಚಕ್ರಗಳ ಕುರಿತು ಇದ್ದ ಅಧ್ಯಾಯವನ್ನು ಮಕ್ಕಳೆದುರು ಪಾಠ ಮಾಡಲು ಶಿಕ್ಷಕಿಯರೇ ಹಿಂದೇಟು ಹಾಕುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿರುವೆ. ಅದೊಂದು ನಿಸರ್ಗ […]

Back To Top