ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ ಆಫೀಸ್ ಪ್ರಯಾಣವಾಗಿದ್ದುದು ಈಗ ಎರಡು ಗಂಟೆಗೆ ಬಂದಿರುವುದು ನಿರಾಳವಾಗಿತ್ತು. ಬೆಳಗಿನ ಒಂಭತ್ತರ ಆಫೀಸ್ ಕೆಲಸಕ್ಕೆ ಆರೂವರೆ -ಏಳರ ಹೊತ್ತಿಗೆ ಬೈಕನ್ನು ಹೊಸ್ತಿಲಿನಾಚೆ ಎಳೆದು ರಸ್ತೆಯಲ್ಲಿ ಜಾಗ ಹಿಡಿದುಬಿಡಬೇಕಿತ್ತು. ರಸ್ತೆ ಸೇರುವಾಗ ಹಿಡಿದ ಜಾಗದಿಂದ ಪಟ್ಟುಬಿಡದೇ ಮುಂದೆ ಮುಂದೆ ಹೋಗಿಸಿಲ್ಕ್ಬೋರ್ಡ್ಸರ್ಕಲ್ಲಿನಾಚೆಫ್ಲೈಓವರ್ ಸೇರುವ ಹೊತ್ತಿಗೆ ಆತುರದಲ್ಲಿ ಆದ ಕಾಫಿ, ತಿಂಡಿಯೆಲ್ಲ ಈಗ ಜೀರ್ಣ ಆಗಬಹುದಾ! ಅನ್ನುತ್ತಲೇ ಅನ್ನಚೀಲದೊಳಗೆ ಕುಲುಕುತ್ತಾ ಇರುತ್ತಿತ್ತು. ದಾರಿಮಧ್ಯೆ ಅದೇ ಕೆಲವು ಹಳೆಮುಖಗಳು, ಮತ್ತ್ಯಾವುದೋ ಲಗ್ಗೇಜುಗಾಡಿ, ಕೆಲವೊಮ್ಮೆ ಬಿಎಂಟಿಸಿಯ ಬಸ್ಸುಗಳು, ಟ್ರಾಫಿಕ್ಕುಗಳನ್ನು ಆಗ್ಗಾಗ್ಗೆ ಕೆದಕುತ್ತಾ ಮುಂದೆ ತಳ್ಳುವುದಕ್ಕೆ ಹಾವಿನಾಕಾರದಲ್ಲಿ ಹೊರಳಿಕೊಂಡು ಹೋಗುವ ಸ್ಕೂಟಿಗಳು. ಆಟೋ, ಟ್ಯಾಕ್ಸಿಗಳು. ಹೀಗೆಆವಾಹನದಟ್ಟಣೆಯದೀರ್ಘನೋಟ ಒಂದು ರೀತಿಯ ಹಲಬಗೆಯ ವಾಹನಗಳ ಸೂಪರ್ಮಾರ್ಕೆಟ್ಟಿನ ಹಾಗೆ ಕಾಣುತ್ತಿತ್ತು. ತರಹೇವಾರಿ ಹೊಗೆಪೈಪುಗಳಲ್ಲಿ ಪೆಟ್ರೋಲ್ & ಡೀಸೆಲ್ ಉರಿದುಗುಳುವ ದಟ್ಟಹೊಗೆ ಆ ಓಪನ್ಮಾರ್ಕೆಟ್ನಿಂದ ಸೂಸುವ ಘಾಟಿನಂತಿರುತ್ತಿತ್ತು. ಅದೊಂದು ದಿನ ಮೋಡ ಕವಿದ ವಾತಾವರಣ, ಇನ್ಯಾವ ಕ್ಷಣದಲ್ಲಾದರೂ ಮಳೆ ಬಂದು ಬಿಡಬಹುದು ಅನಿಸುತ್ತಿದ್ದರಿಂದ ರೈನ್ಕೋಟ್ಹಿಡಿದೇ ಬೈಕ್ ಏರಿದ ಸತೀಶ. ನಿಧಾನವಾಗಿ ದಾರಿ ಮಧ್ಯದಲ್ಲಿ ಟ್ರಾಫಿಕ್ಕಿನಲ್ಲಿ ತನ್ನೆರಡೂ ಕಾಲುಗಳನ್ನು ಬೈಕಿನ ಹೆಚ್ಚುವರಿ ಚಕ್ರಗಳ ಹಾಗೆ ಉಜ್ಜುತ್ತಾ ಎಳೆಯುತ್ತಾ ಕೆಲವೊಮ್ಮೆನಾಲ್ಕು ಚಕ್ರ ಕೆಲವೊಮ್ಮೆ ಮೂರು ಮತ್ತೆ ಎರಡು ಹೀಗೆ ಚಕ್ರಗಳ ಬಹುಕೃತ ವೇಷವನ್ನು ಬದಲಾಯಿಸುತ್ತಿರುವಾಗ ಪಕ್ಕದಲ್ಲೇ ಬಂದು ಬೈಕ್ನ ಮುಂದೆ ಮುದ್ದಾದ ಹಾಲುಗಲ್ಲದ ಮಗು, ಅದಕ್ಕೆ ತಕ್ಕನಾದ ಪುಟ್ಟ ಹೆಲ್ಮೆಟ್ಟು ಹೊದ್ದು ಇನ್ನೇನು ನಿದ್ರೆ ಹತ್ತೀತೇನೋ ಅನ್ನುವಂತೆ ತಲೆತೂಗುತ್ತಿತ್ತು. “ಸಾರ್, ಮಗು ತೂಕಡಿಸೋ ತರ ಕಾಣ್ತಿದೆ ಎಚ್ಚರ ಮಾಡಿ” ಅಂದ ಸತೀಶ. “ನೋ! ಐ ಆಮ್ಜಸ್ಟ್ಟಯರ್ಡ್” ಅನ್ನುತ್ತಾ ತೊದಲುವ ಮುಖ ನೋಡಿ, ಚೆಂದದ ನಗೆ ಬೀರಿ ಬಲಗೈ ಹೆಬ್ಬೆರಳಿನ ಲೈಕ್ ಒತ್ತುತ್ತಾ ಹಾಗೇ ನೋಡುತ್ತಾ ನಿಂತ. “ಏನ್ಮಾಡೋದುಸಾರ್… ಈ ಹಾಳಾದ್ಟ್ರಾಫಿಕ್ಕಲ್ಲಿ ನಾನು ಬೇಯೋದಲ್ಲದೇ ದಿನಾವಇವನ್ನೂ ಬೇಯಿಸ್ಕೊಂಡೇ ಹೋಗ್ಬೇಕು. ಬೇರೆ ದಾರಿ ಇಲ್ಲ. ಪಾಪ, ದಿನಾ ಇದೇ ನೋಡಿ ನೋಡಿ ಇದಕ್ಕೇ ಹೊಂದ್ಕೊಂಡಿದ್ದಾನೆ” ಮಗು ಎಡಕ್ಕೆ ಓರೆಯಾಗುತ್ತ “ಯೆಸ್ಸ್” ಅನ್ನುತ್ತಾ ಕಣ್ಣುಗುಡ್ಡೆ ಮೇಲು ಮಾಡಿ ಬೇಸರಿಸಿಕೊಂಡಿದ್ದರೂ, ಕೈಬೆರಳುಗಳನ್ನು ಪಾರ್ಲೆ ಬಿಸ್ಕೆಟ್ಪ್ಯಾಕ್ನ ಬೇಬಿಯ ಹಾಗೆ ಕಾಣಿಸಿ ಮತ್ತಷ್ಟು ಮುಗ್ಧತೆಯನ್ನು ಹೊರಸೂಸಿತು. “ಅಯ್ಯೋ ಕಂದಾ! ಕನ್ನಡ ಅರ್ಥಆಗ್ತದೇನೋ? ಎಷ್ಟು ರಿಯಾಕ್ಟ್ ಮಾಡ್ತಾನೆ ನೋಡಿ ! ಎಷ್ಟ್ವಯಸ್ಸು ಸಾರ್?ಎನ್ನುತ್ತಾ ಮುಂದೆ ಸರಿಯುತ್ತಿದ್ದ ಟ್ರಾಫಿಕ್ಕಿಗೆ ಎರಡೂ ಬೈಕುಗಳು ನಿಧಾನವಾಗಿ ಹೊಂದಿಕೊಂಡು ಸಂಭಾಷಣೆ ಮುಂದುವರಿದೇ ಇತ್ತು. “ನಾವು ಮೈಸೂರ್ನವರು ಕನ್ನಡ ಅರ್ಥ ಆಗತ್ತೆ. ಬಾಡಿಗೆಮನೆ ನೈಬರ್ಸು, ಡೇಕೇರು ಎಲ್ಲಾ ಸೇರಿ ಇಂಗ್ಲೀಷ್ಮಯ ಆಗಿದೆ. ಅಲ್ಲದೇ ನಾವೂ ಏನು ಕಡಿಮೆಯಾ? ಬೆಳಿಗ್ಗೆ ಬರೋ ಪೇಪರಿಂದ ಹಿಡಿದು ಆಫೀಸ್ಕೆಲಸದಲ್ಲೆಲ್ಲ ಇಂಗ್ಲೀಷಿನವರೇ ಆಗಿ ಹೋಗಿದ್ದೀವಿ, ಎಳೆವಯಸ್ಸಿನಲ್ಲಿ ಹೀಗೇನೇ ಅಲ್ವಾ ಕಲಿಯೋದು”? ಅನ್ನುತ್ತಾ ಬೇಸರದ ಬೆಳಗಿಗೊಂದಿಷ್ಟು ತಿಳಿಯೆನಿಸುವ ಆಪ್ತತೆಯನ್ನು ತೋರಿದರು ತಂದೆ. ಅಷ್ಟೂ ಹೊತ್ತು ಚಿಂತಾಕ್ರಾಂತನಾಗಿದ್ದ ಪುಟ್ಟಮಗು ಅಚಾನಕ್ಕಾಗಿ ಸಿಕ್ಕ ಸತೀಶನತ್ತ ಹೊರಳಿದ್ದೇ ಅವನ ನವಿರಾದ ಮಾತಿಗೆ ಕಿವಿಗೊಡುತ್ತಾ ಕಣ್ಣು ಹೊರಳಿಸುತ್ತಾ ಪರಿಚಯ ಬೇಕು ಅನ್ನುವಂತೆ “ನೀಯಾರು” ಅಂತು. ” ನಾನೂ ನಿಮ್ಮ ಅಪ್ಪನ ಹಾಗೇ, ನಿತ್ಯ ಟ್ರಾಫಿಕ್ಕಿನೊಳಗೆ ಬೇಯೋವ್ನು” ನಮ್ಮೂರು ಹಳೆಬೀಡು ಹತ್ರ ಹಳ್ಳಿ. ನಿನ್ನಂಗಿದ್ದಾಗ ನಮ್ಮ ಹಳ್ಳಿಯಲ್ಲಿ ಹೇಗಿತ್ತು ಗೊತ್ತಾ ಪುಟ್ಟಾ?” ಅನ್ನುವಷ್ಟರಲ್ಲಿ “ನೈಸ್ ಟಾಕಿಂಗ್ಟುಯೂ ರೀ ನೆಕ್ಸ್ಟ್ಟರ್ನಲ್ಲಿ ಡೇಕೇರ್ಗೆ ಬಿಟ್ಟು ಮತ್ತೆ ಈ ರೋಡ್ನೇ ಸೇರ್ಕೊಬೇಕು” ಅನ್ನುತ್ತಾ ಅಪ್ಪ ಗಾಡಿಯನ್ನು ಬಲಕ್ಕೆ ಹೊರಳಿಸುವುದಕ್ಕೆ ನೋಡುತ್ತಿದ್ದಂತೆ, ಮಗುವಿಗೆ ಮತ್ತೆ ಬೇಸರ ಮಡುಗಟ್ಟಿ “ಐ ವಾಂಟು ಟಾಕ್ಮೋರ್” ಅನ್ನುತ್ತಾ ಗೊಣಗಿದ. ನಿದ್ರೆ ಬಂದೇ ಬಿಟ್ಟಿತು ಅನ್ನುವಂತೆ ತೂಗುತ್ತಲಿದ್ದವನು ಇದ್ದಕ್ಕಿದ್ದ ಹಾಗೆ ಚುರುಕಾಗಿದ್ದು ಕಂಡು, “ನೋಡಿ, ಏನೋ ಪರಿಚಯಕ್ಕೆ ಸಿಕ್ಕರೆ ಸಾಕು, ತಲೆತಿಂತಾನೆ! ಈಗ ನಿದ್ರೆಮಾಡಿಯಾನು ನೋಡಿ ಅಂದಿದ್ದು ನಿಮ್ಮದೇ ತ ಪ್ಪೇನೋ ಅನ್ನೋ ಹಾಗೆ ಮಾಡಿಬಿಟ್ಟಾನು”. ಅನ್ನುತ್ತಾ ಅಪ್ಪ ತಮಾಷೆ ಮಾಡಿದ. ಇರಲಿ ಬಿಡಿ ಸಾರ್.ಅರ್ಥ ಆಗತ್ತೆ. ಮಕ್ಕಳನ್ನು ಬೆಳೆಸೋಕೆ ಜಾಗ ಅಲ್ಲ ಇದು. ಏನ್ಮಾಡೋದು, ಲೈಫ್ಸ್ಟೈಲೇ ಹಾಗಾಗಿದೆ. ನಮ್ಮ ಕಾಲ ನಮ್ಮ ಮಕ್ಕಳಿಗೆ ಇಲ್ಲ. ಇನ್ನು ಮುಂದೆ ಹೇಗೋ ಎನ್ನುತ್ತಾ ಕಣ್ಣು ಮೇಲು ಮಾಡುವ ಸರದಿ ಈಗ ಸತೀಶನದ್ದಾಗಿತ್ತು. ರೈಟ್ .ಯಾಕಾದ್ರೂ ಈ ಎಂಜಿನಿಯರಿಂಗ್ ಮಾಡಿದೆನೋ ಅನ್ಸುತ್ತೆ ರೀ ಒಂದೊಂದ್ಸಾರ್ತಿ. ಅಂದ್ಹಾಗೆ ನನ್ನ ಹೆಸರು ಅವಿನಾಶ್, ಇಲ್ಲೇ ವಿಪ್ರೋದಲ್ಲಿರೋದು ಅನ್ನುತ್ತಾ ಬಲಗೈ ಚಾಚಿದರು. ನಾನು ಸತೀಶ್, ಹನಿವೆಲ್ಲು ಬಟ್ನಾಟ್ಸೋವೆಲ್ಲ್ . ಊರು ನೆನಪಾದ್ರೆ ಎಲ್ಲಾ ಬಿಟ್ಹಾಕಿ ಹೊರಟ್ಹೋಗೋಣ ಅನ್ಸುತ್ತೆ ಏನ್ಮಾಡೋದೇಳಿ ಫಜೀತಿ. ಈಗ ಅಲ್ಲೂ ಏನೂ ಸುಲಭ ಅಲ್ಲ. ಕರೆಕ್ಟ್.ನಮ್ಮದೂ ಮೈಸೂರ್ಹತ್ರ ಸ್ವಲ್ಪ ಜಮೀನಿದೆ. ನಮ್ಮ ತಾತ ಮಾಡಿಸ್ತಿದ್ರು. ನಾವೆಲ್ಲ ಹುಟ್ಟಿ ಬೆಳೆದಿದ್ದು ಮೈಸೂರಲ್ಲೇ. ಹಳ್ಳಿ ಅಲ್ಲದಿದ್ರೂ, ಇಷ್ಟು ಕೆಟ್ಟ ಪಟ್ಟಣ ಆಗಿರ್ಲಿಲ್ಲ ಬಿಡಿ. ಅನ್ನುತ್ತಾ ಹಳೆಯ ಮೈಸೂರಿನ ನೆನಪಿಗಿಳಿದ ಅವಿನಾಶ್, ನಮ್ಮ ಪುಟ್ಟಂಗೆ ಇವತ್ತು ನಿಮ್ಮ ಜೊತೆ ಮಾತಾಡೋ ಮನಸಾಗಿದೆ. ನೆಕ್ಸ್ಟ್ಕ್ರಾಸ್ತೊಗೊಳ್ತೀನಿ. ಅರ್ಧಗಂಟೆ ಆಗತ್ತೆ ಮಿನಿಮಮ್. ಅಷ್ಟರಲ್ಲೆಲ್ಲ ತೊಂದ್ರೆ ಕೊಟ್ಬಿಡಪ್ಪಾ ಸತೀಶ್ ಅವ್ರಿಗೆ” ಅಂದು ಮತ್ತೆನ ಕ್ಕರು. ಮಗು ಹಿಗ್ಗಿದ. ” ಇರಲಿ ಬಿಡಿ ಸಾರ್.ಇದರಲ್ಲಿ ತೊಂದ್ರೆ ಏನಿದೆ. ಆದರೆ ರಸ್ತೆಯಲ್ಲಿ ಹೀಗೆ ಟೈಮ್ಪಾಸ್ಮಾಡೋದಕ್ಕೆ ನಗೋದೋ ಅಳೋದೋ ಗೊತ್ತಾಗಲ್ಲ” ಅನ್ನುತ್ತಾ ಮಗುವಿನ ಮುಗ್ಧಮುಖ ನೋಡುತ್ತಾ ಟ್ರಾಫಿಕ್ಕಿನ ಧಾರುಣತೆಯನ್ನೆಲ್ಲವನ್ನು ಇಲ್ಲವಾಗಿಸಿ ಮಗುವಿನೊಂದಿಗೆ ಸಂಭಾಷಣೆಗಿಳಿದ. ಸಮರ್ಥ್. ಏನ್ಮಾಡ್ತೀಯಾ ಡೇಕೇರಲ್ಲಿ? ತಿಂಡಿ ಆಯ್ತಾ? ಲಂಚ್ಬಾಕ್ಸ್ನಲ್ಲಿ ಏನಿದೆ? ಓಯೆಸ್.ಇಡ್ಲಿವಿತ್ಸಕ್ರೆ ಚಟ್ನಿ. ಲಂಚ್ಬಾಕ್ಸ್ನಲ್ಲೂ ಅದೇ. ನಂಗ್ಬೇಕಿತ್ತಲ್ಲ. ನನ್ನಲಂಚ್ಬಾಕ್ಸ್ತಂದಿಲ್ಲ. ತೊಗೊಳ್ಳಲಾ ಅನ್ನುತ್ತಾ ಕೈಚಾಚಿದ. “ಹ್ಹಿಹಿ…. ಇದುಸ್ಮಾಲ್ಬಾಕ್ಸ್….” ಅನ್ನುತ್ತಾ ಬ್ಯಾಗನ್ನು ಗಟ್ಟಿಯಾಗಿ ಹಿಡಿದು, ಸಮಾಧಾನಕ್ಕೆನ್ನುವಂತೆ “ಡ್ಯಾಡಿದೂ ಇಲ್ಲ”. ಅಂದ. ಮಾತು ಹಾಗೇ ಮುಂದುವರಿದು ಹೆಚ್ಚಿನವಪರಿಚಯ ಹೇಳಿಕೊಳ್ಳುತ್ತಾ, ಹಳೆಬೀಡಿನ ನೆನಪುಗಳನ್ನೆಲ್ಲ ಹೊಸದೆನ್ನುವಂತೆ ಮಾಡಿಕೊಂಡು ತನ್ನ ಬಾಲ್ಯದ ಕೆಲವು ತುಣುಕುಗಳನ್ನೆಲ್ಲ ಮಗುವಿನೊಂದಿಗೆ ಹಂಚಿಕೊಳ್ಳುತ್ತಾ, ತನ್ನ ಹಳೆಯ ಗೋಲಿಯಾಟ, ಮರಕೋತಿಆಟ, ಹಳ್ಳಿ, ಹೊಸ, ಮರ, ಹಸು ಹಕ್ಕಿ ಇತ್ಯಾದಿ ಹೊಸಲೋಕವನ್ನೇ ಅವಸರವಸರವಾಗಿ ತೆರೆದಿಡುತ್ತಾ ಸರಿಯುತ್ತಿದ್ದ. ಪರಿಚಯ ಆಗಿದ್ದು ಖುಷಿಯಾಯ್ತು ಸಾರ್.ನಾನು ಜೆಪಿನಗರದಿಂದ ಹೊರಡೋದು ದಿನಾ… ಮತ್ತೆ ಯಾವಾಗಲಾದರೂ ಸಿಗೋಣ. ಮುಂದಿನ ಕ್ರಾಸ್ಬಂದೇ ಬಿಡ್ತು. ಇಫ್ಯುಡೋಂಟ್ಮೈಂಡ್, ಫೋನ್ನಂಬರ್ಶೇರ್ಮಾಡಿ. ನನ್ನದು ನೈನ್ಡಬಲ್ಎಂಟ್ ಎನ್ನುತ್ತಾ ಒಂದರ ಮಗ್ಗಿ ಶುರು ಮಾಡಿದ. ‘ಶ್ಯೂರ್ಶ್ಯೂರ್ʼ ನಮ್ರೂಮ್ಕೂಡ ಅಲ್ಲೇ ಜೆಪಿನಗರ. ಖಂಡಿತಾ ಸಿಗೋಣ. ಬಾ ಇಂಟರೆಸ್ಟಿಂಗ್ ಇದಾನೆ ಮಗ ಅಂದು ತನ್ನ ಮೊಬೈಲ್ತೆಗೆದು ಅವಿನಾಶ್ಹೇಳಿದ ಒಂದರವಮಗ್ಗಿ ಒತ್ತಿಟ್ಟುಕೊಳ್ಳುತ್ತಾ, ಒಂದುರಿಂಗ್ಮಾಡಿ, ಮಿಸ್ಡ್ಕಾಲ್ ಇದೆ ನೋಡಿ ನಂದು ಅನ್ನುತ್ತಾ ಮಗುವಿಗೆ “ಬಾಯ್!” ಅನ್ನುತ್ತಲೇ… ಅವನನ್ನು ಅಣಕಿಸುವಂತೆ ಮಗು “ಅಂಕಲ್!” ಅಂದ. ಎಲಾ ಇವನಾ? ಒಂದರ್ಧ ಗಂಟೆ ಮಾತಿಗೆ ಎಷ್ಟು ಪರಿಚಯದವನ ಹಾಗೆ ಆಗಿಬಿಟ್ಟ ಅಂದುಕೊಳ್ಳುತ್ತಲೇ ಸತೀಶ ಟ್ರಾಫಿಕ್ಕಿನ ಉದ್ದನೆಯ ಸಾಲಿನತ್ತ ದೃಷ್ಟಿ ನೆಟ್ಟ. ಆ ದಿನ ಸಂಜೆ ಮನೆಗೆ ಬರುವಾಗಲೂ ಮತ್ತೆ ಅದೇ ಸಾಲುಗಟ್ಟಿದ ವಾಹನಗಳ ನಡುವೆ ಬೇಯುತ್ತಾ ಬರುವ ದಾರಿಯಲ್ಲಿ ಸಿಕ್ಕ ಪುಟ್ಟ ಗೆಳೆಯನ ನೆನಪು ಮಾಡಿಕೊಳ್ಳುತ್ತಾ ಇನ್ನಷ್ಟು ಬೇಸರವಾದ. ಆ ರಾತ್ರಿ ಆ ಮಗುವಿನ ನೆನಪಾಗಿ ತಾನು ಮೊದಲು ಕಂಡ ಆ ತೂಕಡಿಸುವಂತಹ ಮುಗ್ದ ಮುಖ ಮತ್ತೆ ದಿಟ್ಟಿಸಿದ ಹಾಗನಿಸಿ ಕಸಿವಿಸಿಗೊಂಡು ದೀರ್ಘವಾಗಿ ಯೋಚನೆಗಿಳಿದ. ನನ್ನ ಬಾಲ್ಯದ ದಿನಗಳಿಗೂ, ಈ ಮಗುವಿನ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ… ನಮಗೆ ನಿದ್ರೆ ಮಾಡಿಸುವುದಕ್ಕೆ ಮನೆಯಲ್ಲಿ ಹರಸಾಹಸ ಪಡಬೇಕಾಗುತ್ತಿತ್ತು. ಮನೆಯಲ್ಲಿ ಇರಿಸಿಕೊಳ್ಳುವುದೇ ಕಷ್ಟವಾಗಿರುತ್ತಿದ್ದು ಸದಾ ಅಂಗಳ ಬೀದಿ ಹೊಲಗದ್ದೆಗಳ ಕಡೆಯೇ ಆಟವಾಡುತ್ತಾ, ಇದ್ದ ಆ ಹಳ್ಳಿಗೂ, ಬೆಳಗಾದರೆ ಟ್ರಾಫಿಕ್ಕಿನ ಸುಪ್ರಭಾತ, ಮತ್ತೆ ಸಂಜೆ ಅದೇ ಟ್ರಾಫಿಕ್ಕಿನ ಮಂಗಳಾರತಿಯ ನಡುವೆ ಈ ಹೊಸ ತಲೆಮಾರಿನ ಬದುಕು ಎಷ್ಟೊಂದು ವಿಚಿತ್ರವಾಯಿತಲ್ಲ, ಇದಕ್ಕೆ ತಾನೂ ಒಬ್ಬ ಕಾರಣನಾದನಲ್ಲ ಅನಿಸುವಂತಾಯಿತು. ಟ್ರಾಫಿಕ್ಕು , ಜನಜಂಗುಳಿ ನಗರದ ದಟ್ಟಣೆಗಳೆಲ್ಲವೂ ನಾವೇ ಜನರೇ ಮಾಡಿಕೊಂಡಿರುವ ಸ್ವಯಂಕೃತ ಸಮಸ್ಯೆಗಳಲ್ಲವೇ? ಎಲ್ಲರಿಗೂ ಚಂದದ ಬಾಲ್ಯಬೇಕು ಅನ್ನುತ್ತಾ ಇನ್ನೂ ಹಳ್ಳಿ ಯನ್ನೇ ಅವಲಂಬಿಸಿದರೆ ಊರಿನಲ್ಲಿ ಸವಲತ್ತುಗಳೇನೇನೂ ಇಲ್ಲ. ಸವಲತ್ತುಗಳನ್ನು ಸೃಷ್ಟಿಸಿಕೊಳ್ಳುವ ಧಾವಂತದಲ್ಲಿ ಚದುರಿಹೋಗಿದ್ದ ಸಣ್ಣಊರುಗಳನ್ನೆಲ್ಲ ಕಲೆಹಾಕಿ ಮಹಾನಗರಗಳನ್ನಾಗಿ ಬೆಳೆಸಿಕೊಂಡು, ಅಲ್ಲಿ ಒಂದಿಷ್ಟು ಆಸ್ತಿ, ಸೈಟು, ಅಪಾರ್ಟ್ಮೆಂಟುಗಳನ್ನೆಲ್ಲ ಮಾಡಿಕೊಂಡು, ಹಣದ ಒಟ್ಟು ಮೊತ್ತವನ್ನು ಮನಸ್ಸಿನಲ್ಲೇ ಲೆಕ್ಕಮಾಡಿಕೊಂಡು ಪ್ರತಿವರ್ಷ ಐಟಿ ಟ್ಯಾಕ್ಸ್ಕಟ್ಟುವಾಗ ಆ ಲೆಕ್ಕ ಮರುಪರಿಶೀಲನೆಯನ್ನೂ ಮಾಡಿಕೊಂಡು ವಿಚಿತ್ರ ಅಂಕಿಸಂಖ್ಯೆಯ ಲೆಕ್ಕದಲ್ಲಿ ಸಿರಿವಂತಿಕೆಯ ನೆಮ್ಮದಿಯೊಳಗೆ ಮುಳುಗಿ ನಿಜದ ನೆಮ್ಮದಿಯ ನೆನಪೂ ಇಲ್ಲದ ಹಾಗಾಗಿದೆ. ಎಷ್ಟು ಹೊತ್ತು ಯೋಚಿಸಿದರೂ ನಿದ್ರೆ ಹತ್ತದೆ ಹಾಗೇ ಕೂತಲ್ಲೇ ಕೂತಿದ್ದವನಿಗೆ ಊಟ ಮಾಡಿಲ್ಲವೆನ್ನುವುದು ಗೊತ್ತಾಗಿ, ಈಗ ಒಲೆ ಹೊತ್ತಿಸುವ ಮನಸ್ಸಿಲ್ಲದ್ದಕ್ಕೆ ಮನೆಯ ಪಕ್ಕದ ಬೀದಿಯ ಬೇಕರಿ ಬಾಗಿಲು ಮುಚ್ಚುವ ಮೊದಲೇ ಏನಾದರೂ ಸಿಕ್ಕೀತು ಅಂದುಕೊಂಡು ದಾಪುಗಾಲಿಡುತ್ತಾ ಗೇಟು ದಾಟಿದ. ರಾತ್ರಿ ಒಂದರ ನಂತರವೂ ನಿದ್ರೆ ಬಾರದವನಾಗಿ ತನ್ನ ಬಾಲ್ಯವನ್ನೇ ಮತ್ತೆ ಮೆಲುಕು ಹಾಕಿಕೊಂಡು ಒಂದಿಷ್ಟು ಸಂತೊಷಪಟ್ಟುಕೊಳ್ಳುತ್ತಾ, ಬೆಳಗಿನ ಟ್ರಾಫಿಕ್ಕಿನ ಬಗ್ಗೆ ಮಾಮೂಲಿನಂತೆ ಅಲ್ಲದೇ ಏನೋ ವಿಚಿತ್ರ ಆಯಾಸದ ಭಾವನೆ ಮೂಡಿ ಬೆಳಗಿನ ಆ ಮುಗ್ದ ಮಗುವಿನ ತೂಕಡಿಕೆಗೆ ಪ್ರತಿಕ್ರಯಿಸುವವನಂತೆ ತಾನೂ ತೂಕಡಿಸುತ್ತಾ ಕೂತ. ಮಾರನೆಯ ದಿನ ಟ್ರಾಫಿಕ್ಕಿನೊಳಗೆ ಬೈಕನ್ನು ಈಜಿಸಿಕೊಂಡು ಆಫೀಸೆಂಬೋ ದಡ ಮುಟ್ಟಿದರೂ ಈ ನೆನಪಿನ ಗುಂಗಿನಿಂದ ಸತೀಶ ಹೊರಬಂದಿರಲಿಲ್ಲ. ಹಿನ್ನೆಲೆಯಲ್ಲಿ ಯೋಚನೆ ಮುಂದುವರಿದೇ ಇತ್ತು. ಸಮಸ್ಯೆ ಎಲ್ಲಾಗ್ತಾ ಇದೆ? ನಾವೆಲ್ಲ ವ್ಯವಸ್ಥೆಯನ್ನ ಬೆನ್ನುಹತ್ತಿ ವ್ಯವಸ್ಥೆಯೂ ಇಲ್ಲ, ಕಡೆಗೆ ಹಳ್ಳಿಯ ಸಮೃದ್ಧತೆಯೂ ಇಲ್ಲ ಅನಿಸುವಂತೆ ಎಲ್ಲರೂ ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಹಣಜಮಾವಣೆಯ ವ್ಯಾಪಾರಕ್ಕಿಳಿದು ಬಿಟ್ಟೆವೇ? ಪುಟ್ಟಪಟ್ಟಣಗಳನ್ನು, ನಗರಗಳನ್ನು ಮಹಾನಗರಗಳನ್ನಾಗಿ ದೈತ್ಯಾಕಾರಕ್ಕೆ ಬೆಳೆಸಿದ ಆ ಆಸಕ್ತಿ ಹಳ್ಳಿಗಳನ್ನೂ, ಅಲ್ಲಿನ ಸುತ್ತಲಿನ ಸಣ್ಣಪಟ್ಟಣಗಳನ್ನೂ ವ್ಯವಸ್ಥಿತಗೊಳಿಸಿಕೊಳ್ಳುವುದು ಅಷ್ಟೊಂದುಕಷ್ಟವೇ? ಇಲ್ಲಿ ನಗರಗಳಲ್ಲಿ ನೋಡಿದರೆ ಎಲ್ಲರೂ ಎಲ್ಲರನ್ನೂ ಬೈದುಕೊಳ್ಳುತ್ತಾ, ಕಾರ್ಪೊರೇಷನ್ನವರಿಗೊಂದಿಷ್ಟು ದೂರುತ್ತಾ ಇದ್ದುಬಿಡುತ್ತೇವೆ. ಹೇಗೋ ದೈನಂದಿನ ಸಾಮಾನ್ಯ ವ್ಯವಸ್ಥೆಗಳ ಏರ್ಪಾಡಿಗಾದರೂ ಕಾರ್ಪೊರೇಷನ್ನು, ಎಸ್ಕಾಮ್, ವಾಟರ್ಬೋರ್ಡ್ಗಳೆಲ್ಲ ನೀರು, ವಿದ್ಯುತ್ತು, ಚರಂಡಿ, ಕಸ ವಿಲೇವಾರಿಗಳನ್ನಂತೂ ಹೇಗೋ ಹಾಗೆ ತೂಗಿಸಿ, ಕೊಟ್ಟ ತೆರಿಗೆಗೆ ತಿಪ್ಪೆ ಸಾರಿಸ್ತಾರೆ. ನಮ್ಮ ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಜಾತಿಜಾಡ್ಯದಿಂದ ಹಿಡಿದು, ಶೀತಕೆಮ್ಮಿಗೂ ಒಂದು ಆಸ್ಪತ್ರೆಗೆ ಹತ್ತಾರು ಮೈಲಿಯಾಚೆಯ ಪಟ್ಟಣಕ್ಕೆ ಹೋಗಿ ಟೋಕನ್ಹಿಡಿದುಕೊಳ್ಳಬೇಕಾದ; ಪ್ರಾಥಮಿಕ ಮಾಧ್ಯಮಿಕ ಶಾಲೆಗಳೆಲ್ಲವಕ್ಕೂ ಹಳದಿವ್ಯಾನುಗಳನ್ನು ಅವಲಂಬಿಸಿಕೊಂಡು, ಅದಕ್ಕೆ ಫೀಸು ಕಟ್ಟುವುದಕ್ಕೆಂದು ತಿಣುಕಾಡುವ; ಬೆಳೆಹೊತ್ತಿನಲ್ಲಿ ಮಳೆಯಿಲ್ಲದೆ ಕೊಯ್ಲಿನ ಹೊತ್ತಿಗೆ ನೆರೆ ಬರುವಂತಹ ಪರಿಸ್ಥಿತಿಯಿದ್ದರೂ, ಹೇಗೋ ಹಾಗೆ ಬೆಳೆದಿದ್ದ ಫಸಲಿಗೂ ಎಷ್ಟೋ ಸಿಕ್ಕಷ್ಟು ಅನ್ನುವ ಹಾಗೆ ಸಂಪಾದನೆ ಮಾಡಿಕೊಂಡು ಪ್ರತಿವರ್ಷ ಮುಂದಿನ ಬೆಳೆ ಸಾಲ, ಅದನ್ನ ಮನ್ನಾ ಮಾಡಬೇಕಾದ ಸರ್ಕಾರ, ಅದರಲ್ಲಿ ಕಮೀಷನ್ನು; ಈ ರೀತಿಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದ ಸತೀಶನ ತಲೆಭಾರವಾಗಿತ್ತು. ಬ್ರೇಕ್ಹೊತ್ತಿನಲ್ಲಿ ಒಂದು ಕಾಫಿ ಹೀರುತ್ತಾ, ಕಳೆದ ತಿಂಗಳಷ್ಟೇ ಅಮೇರಿಕಾದ ಆನ್ಸೈಟ್ಕೆಲಸದಿಂದ ಮರಳಿದ್ದ ಸಹೋದ್ಯೋಗಿ