ಮಗಳು ಬಂದಳು ಮನೆಗೆ
ಮಗಳು ಬಂದಳು ಮನೆಗೆ ಅರುಣ್ ಕೊಪ್ಪ ಒಡಲಾಳದ ಅಳುವನ್ನು ಜಗದೆಡೆಗೆ ಪಸರಿಸಿದಳು ,ಅಮ್ಮನ ಕಂಕುಳದಲಿ ಕಸವು ಹಚ್ಚಿ, ಬೇನೆ ಸೋನೆಗಳ ಸುಮ್ಮನಿರಿಸಿಮಿಡುಕಾಡಿದಳು ಹೊರಗೂ ಒಳಗೂಜಗದ ಕಣ್ಣಾಗುವಳು ಇಂದು ಮುಂದೂ ಎಂದೆಂದೂ ಆರತಿಗೊಬ್ಬಳು ಆಸರೆ ಇವಳು ಹುಸಿಯನ್ನೆಲ್ಲ ಹೊಸೆತಳುಕೀರ್ತಿಗೊಬ್ಬನ ಕಿವಿಯಲ್ಲೇ ಧೈರ್ಯದುಂಬಿ ಬಂಧ ಬೆಸೆವಳುನನ್ನವಳ ಉದರದಲ್ಲೇ ನನ್ನವಳ ಆಗಮನ ಹೆಣ್ಣು ಇವಳುಧೈರ್ಯದಲಿ ಮಿಗಿಲು ಸಂಭ್ರಮಿಸುವದು ಕೂಡ ಮುಗಿಲು ಗುರುವಾರದ ಅಧಿಕ ಸೀಗಿ ಹುಣ್ಣಿಮೆಯ ಪವಿತ್ರ ಗಳಿಗೆಪುಣ್ಯ ದಿನವೂ ಸಿಕ್ಕಿ ಆನಂದ ಭಾಷ್ಪ ಉಕ್ಕಿ ನಮಗೆಹೆಣ್ಣಿಲ್ಲದ ಮನೆಯಿಲ್ಲ ಇದ್ದೂ ಸಿರಿಯಿಲ್ಲಜಗ […]
ಸಾಮಗಾನ
ಕವಿತೆ ಸಾಮಗಾನ ಪವಿತ್ರ. ಎಂ ಕವಲೊಡೆದ ಗಳಿಗೆಧನಿ ಕಳೆದು ದಾರಿ ಕಾಣದಾಗಿಕಾಯುತಿದೆ ಸಹಯಾತ್ರಿಗಾಗಿಸಹನೆ ಕೈಜಾರಿ ಜರಿಯುವ ಜಗದಜಂಜಡಕಂಜಿ ಕಮರಿಬಿರಿಯುವ ಕಮಲ ಮಡುವಲೇ ಮುದುಡಿ. ಬಾನಾಡಿ ಹಾಡುತಲಿತ್ತುಬಾನಸವಿಸ್ತಾರದ ನಾದ ಗುನುಗಿಗಳಗಳನೆ ಸುರಿವ ಮಳೆಅಶ್ರುವದ ಮರೆಮಾಚಿ ತೋಯ್ದುದಿಟದ ಗಟ್ಟಿತನವ ಪಣಕಿಟ್ಟು ಕುಹಕವಾಡಿಗಹಗಹಿಸಿ ನಕ್ಕವರ ನೆಲಕುರುಳಿಸಿ. ಮೊಳೆತ ಜೀವ ಜಾತು ಮರೆತಿಹಸಾಮರಸ್ಯಕೆಳೆಸಲೆಂದೇಜೀವ ನಿಯಮವನೆಂದು ಮೀರಿಪೆಅಣಕಿಸಲು ಅಡಿಯಿಟ್ಟ ಕರೋನಅಹಮಿಕೆಯ ಅಜ್ಙಾನದಂಧಕಾರಅರಗಿನರಮನೆ ಬರಿಯ ಭ್ರಮೆ. ಭಾನ ಸ್ಪರುಷದ ಸುಖವತರುತೀಡ್ವ ಗಾಳಿಗಂಧಅವಳೊದ್ದ ಪಚ್ಚಹಸಿರ ಸಖವಉಲಿದು ನಲಿವ ಆ ಗಾನದಿಂಚರಕೆಕಿವಿಯಾಗಿ,ಕಣ್ಣಾಗಿ ಅವರಲ್ಲೊಂದಾಗಿಸಾಮಗಾನದ ಚೆಲುವಾಗು ಬಾ. ***********************************
ನವರಾತ್ರಿ ಶಕ್ತಿ
ಕವಿತೆ ನವರಾತ್ರಿ ಶಕ್ತಿ ಶಾಂತಲಾ ಮಧು ಚಿತ್ರ ಕೃಪೆ- ಶಾಂತಲಾ ಮಧು ಬಿರುಕು ಬಿಟ್ಟಗೋಡೆಗಳುಶಿಥಿಲ ಗೊಂಡಕಿಟಕಿ ಬಾಗಿಲುಮಾನವೀಯ ಮನುಷ್ಯತ್ವದಅಂತಕರಣದ ಒಂದೊಂದುಕಲ್ಲುಗಳು ಪುಡಿಪುಡಿಯಾಗಿಬಟಂಬಯಲಾಗಿಬಯಲ ನಡುವೆಚೀತ್ಕಾರ ರಕ್ತ ಬಸಿಯುವಕಣ್ಣಿನಲಿ ಅದೊಂದೆೇ ಆಸೆ ದಯತೋರಿ ದಯತೋರಿರಕ್ಷಿಸೀ ಈ ರಾಕ್ಷಸರಿಂದಅಮ್ಮಗಳಿರ ಅಕ್ಕಗಳಿರನನ್ನೀ ಸಬಲ ಅಣ್ಣ ತಮ್ಮಗಳಿರರಕ್ಷಿಸೀ ಅಬಲೆಯರಬೆಟ್ಟದಷ್ಟು ಆಕಾಶ ಭೂಮಿಯಷ್ಟುಕನಸ ಕಂಡಿಹೆ ನಾನುಬಿಟ್ಟು ಬಿಡಿ ಎನ್ನ ದಮ್ಮಯ್ಯ ಪುತ್ರಿಯಾಗಿ ತಾಯಿ ತಂಗಿಸಖಿಯಾಗಿ ಪತ್ನಿಯಾಗಿಬಂಧುಬಳಗವಾಗಿದೀಪವಾಗಿಮನ ಮನೆಗಳಬೆಳಗುವೆ ನಾಹೊಸಕಿ ಹಾಕದಿರು ಎನ್ನನಿನ್ನೀ ಕ್ಷಣಿಕ ಕಾಮತೃಷೆಗೆಅಂಗಲಾಚಿ ಬೇಡುವೆನುಬಿಟ್ಟುಬಿಡು ದಮ್ಮಯ್ಯ ಮಾನಸಿಕ ರೋಗ ಎನಲೆರಾಕ್ಷಸೀ ದ್ವೇಷ ಎನಲೆತುತ್ತಿಟ್ಟ ತಾಯಿ […]
ಮೌನ’ದ್ವನಿ’
ಕವಿತೆ ಮೌನ’ದ್ವನಿ’ ರೇಖಾ ಭಟ್ ರಕ್ಕಸರು ಸುತ್ತುವರೆದುಕತ್ತಲಾಗಿದೆಹೆಜ್ಜೆ ಹೊರಗಿಡಲೂ ಭಯವಿಕೃತಿಗೆ ಸಜ್ಜಾಗಿ ನಿಂತಿದೆದುಶ್ಯಾಸನನ ಸಂತತಿ ಬರೀ ಸೀರೆ ಸೆಳೆಯುವುದಿಲ್ಲ ಈಗಮೌನದೇವಿಯನಾಲಿಗೆಯೂ ಬೇಕುಮಾಂಸ ಮಜ್ಜೆಯ ಹರಿದು ತಿನ್ನುವವರಿಗೆ ಕೇವಲ ಕಾಮುಕರೆನ್ನಲಾಗದುಇವರಧರಿಸಲು ಹೇಗೆ ಬಂದಾವುಅರ್ಥಕೋಶದ ಪದಗಳುಹೇಸಿಕೊಳ್ಳುತ್ತಿವೆ ಸ್ತ್ರೀ ಅಸ್ಮಿತೆ ನರನಾಡಿಗಳುಒಳಗೊಳಗೆ ಕುದಿಯುತ್ತಿವೆರೋಷದ ಲಾವಾಗ್ನಿಚಿಮ್ಮಿದರೆದೂಷಿಸಬೇಡಿ ನೀವು ****************
ಅಂಕಣ ಬರಹ ಒಂದು ಹೃದ್ಯ ಕಾವ್ಯ ರಂಗಮ್ಮಹೊದೇಕಲ್ ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ! ಕವಿತೆ ಹುಟ್ಟುವ ಕ್ಷಣ ಯಾವುದು ? ಕರುಳು ಕಲಕುವ ಯಾವುದೇ ಸಂಕಟವೂ […]