ಕಾವ್ಯ ಸಂಗಾತಿ
ಎಸ್. ಆರ್. ಆರ್. ವಿಜಯಲಕ್ಷ್ಮಿ
“ನೀಲ ನಭದೊಳಗಣ ಮುಗಿಲ ದಿಬ್ಬಣ”


ನೀಲ ನಭದೊಳಗಣ
ಮುಗಿಲ ದಿಬ್ಬಣ.
ನೀಲ ನಭ ದೊಳಗಣ
ಮುಗಿಲ ಮೇಘಗಾನ
ಸೋಜಿಗದ ಸೊಬಗು
ಸೃಜಿಸಿದೆ ರಿಂಗಣ
ಬಂಗಾರ ವರ್ಣದ
ಬಾಂದಳದೊಡೆಯ
ಭಾಸ್ಕರನ ಶೃಂಗಾರ
ಕಲ್ಪಲೀಲಾ ಮಗದೊಮ್ಮೆ
ಮರು ಹುಟ್ಟು ಪಡೆದಿದೆ
ಮುಸ್ಸಂಜೆ ಯು ರವಿಯ
ರಶ್ಮಿ ಯೊಳಗೆ ಮಿಂದೆದ್ದ
. ಉಷೆಯ ಉಸುಕು
ರಂಗೇರಿ ಮೇಘ ತರಂಗಗಳ
ಹಣೆಗೆ ಕೆಂಪಿನ ತಿಲಕ ವಿಟ್ಟಂತೆ
ಇಲ್ಲೊಂದು. ಗಾಂಧಾರ
ಲೋಕ ವರಳಿಸಿದೆ
ಜಗ ತನ್ನಿರುವ ಮರೆತಿರುವಂತೆ
ಮೆಲ್ಲ ನೆಲ್ಲೋ ಬಾನಾಡಿ. ಗರಿ ಗೆದರಿ
ನಭ ನೋಡಿ ನಕ್ಕಂತೆ
ಭ್ರಮರವಿದೋ. ಮೆಲು ಹೂವು ಸ್ಪರ್ಶಿಸಿ
ಮಧುವ ಹೀರಿ ಸಂಭ್ರಮಿಸುವಂತೆ
ಮೇಲ್ ಮುಗಿಲು
ನೀಲಿ ಕಂಗಳ ತೆರೆದು
ಧರಣಿ ಯನ್ನೊಮ್ಮೆ ಬಳಿ ಕರೆದು
ಅವಳ ಕರಿ ಮುಂಗುರಳ
ತೆರೆ ಸರಿಸಿದಂತೆ
ಅಲ್ಲಲ್ಲಿ. ರಂಗೇರಿದ
ಕೆಂದಾವರೆಯ ಕೆನ್ನೆ ಯ
ನಾಚಿಕೆಯ ಕೆಂಪು
ಎಲ್ಲೆಡೆ ಪಸರಿಸಿ ದಂತೆ
ಆಮುಗಿಲ. ಸೌಂದರ್ಯ ದ
ಸಾರವನ್ನೆಲ್ಲ ತನ್ನೊಡಲೊಳಗಿನ
ಕಡಲಿನೊಳಗಿರಿಸಿ.
ಛಾಯೆಯಾಗಿಸಿ
ದೃಷ್ಟಿ ಬೊಟ್ಟಿನಂತೆ.
ಪ್ರತಿ ಬಿಂಬಿಸಿ
ನಭದ ನಕ್ಷೆ ಯಲ್ಲಿ
ಚಿತ್ತಾರ.
ಬರೆದ
ಜಗದ ಸೃಷ್ಟಿ ಯ
ಸಾಕ್ಷಾತ್ಕಾರ,
ಎಸ್. ಆರ್. ಆರ್. ವಿಜಯಲಕ್ಷ್ಮಿ




Super