ಕಾವ್ಯ ಸಂಗಾತಿ
ರಮೇಶ್ ಅಂಬಳಿ
ನಾನು


ನಾನು, ಯಾರು ಈ ನಾನು?..
ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಅಡಗಿ
ಕುಳಿತಿರುವನು ಈ ನಾನು,
ಇವನಿಂದ ಎಲ್ಲಿಯೂ ಶಾಂತಿ ಇಲ್ಲ, ಎಲ್ಲಿಯೂ ಸಮಾಧಾನವಿಲ್ಲ,
ಶಾಂತಿಗೆ ಭಂಗ ತರುವುದೇ ಈ ನಾನು ಕೆಲಸ,
ಯಾರು ಈ ನಾನು?..
ಇವನಿದ್ದ ಕಡೆಯಲ್ಲಾ ಬರೀ ಹೊಡೆದಾಟ ಬಡಿದಾಟ,
ಇವನಿದ್ದ ಕಡೆಯಲ್ಲಾ ನಾನು ಹೆಚ್ಚು, ನೀನು ಕೀಳು,
ಇವನಿದ್ದಕಡೆಯಲ್ಲಾ ಬೇಧಾ ಬಾವ,
ಇವನಿದ್ದಕಡೆಯಲ್ಲಾ ಜಾತಿ ಮತಗಳ ಗಲಭೆ
ಇವನಿದ್ದಕಡೆಯಲ್ಲಾ ಹಿಂಸೆ, ಶಾಂತಿಗೆ ಇವನ ಬಳಿ ಸ್ಥಳವೇ ಇಲ್ಲ, ಯಾರು ಈ ನಾನು ?..
ಪ್ರೀತಿ ಎಂದರೆ ಇವನಿಗೆ ವಾಕರಿಕೆ, ಸ್ನೇಹಕ್ಕೆ ಇವನಲ್ಲಿ ಬೆಲೆಯೇ ಇಲ್ಲಾ, ಇವನದು ಯಾವಾಗಲೂ ತರ್ಲೆ,
ಇವನು ವಾಸಿಸುವ ಕುಟುಂಬದಲ್ಲಿ ಕಲಹಾ,
ಇವನಿರುವ ಸಂಘ ಸಂಸ್ಥೆಗಳಲ್ಲಿ ಕಲಹಾ,
ಇವನು ನಡೆದಾಡುವ ಸ್ಥಳದಲ್ಲೆಲ್ಲಾ ಕಲಹಾ,
ಇವನೇ ಯಾಕೆ ಹೀಗೆ ?.. ಯಾರು ಈ ನಾನು?..
ಈ ನಾನು, ಲೋಕವನ್ನು ಬಿಟ್ಟು ತೊಲಗಲಿ,
ಈ ನಾನು ಕುಟುಂಬವನ್ನು ಬಿಟ್ಟು ತೊಲಗಲಿ,
ಈ ನಾನು ಸಮಾಜವನ್ನು ಬಿಟ್ಟು ತೊಲಗಲಿ,
ಈ ನಾನು ನನ್ನನ್ನು ಬಿಟ್ಟು ತೊಲಗಲಿ,
ಈ ನಾನು ನಿನ್ನನ್ನು ಬಿಟ್ಟು ತೊಲಗಲಿ,
ಆಗ ಸಮಾಜದಲ್ಲಿ ಶಾಂತಿ, ಕುಟುಂಬದಲ್ಲಿ ಶಾಂತಿ,
ನಿನ್ನಲ್ಲಿ ಶಾಂತಿ, ನನ್ನಲ್ಲಿ ಶಾಂತಿ, ಲೋಕವೆಲ್ಲಾ ಶಾಂತಿ ಯಿಂದ ತುಂಬುವುದು ನೋಡಾ ಮನುಜಾ..!!
ರಮೇಶ್ ಅಂಬಳಿ



