Day: December 24, 2020

ಇಬ್ಬನಿಯ ಹನಿಗಳು

ಇಬ್ಬನಿಯ ಹನಿಗಳು ನಾಗರಾಜ ಹರಪನಹಳ್ಳಿ. -1-ರಂಗೇರಿತು ಕೆನ್ನೆನೀ ಬಂದಸುಳಿವು ಸಿಕ್ಕಿರಬೇಕುಒಲವಿಗೆ -2-ಎಲೆ ಅಲುಗುತ್ತಿಲ್ಲಕತ್ತಲ ಆವರಣಭೂಮಿಒಬ್ಬಂಟಿಯಾಗಿದೆ -3-ಹೆಜ್ಜೆಗಳಿಗೆಎದೆಗೊಟ್ಟಿದೆದಾರಿಒಲವಿಲ್ಲದ ಬದುಕುಮೌನ ಇರುಳು -4-ಹಕ್ಕಿಗಳ ಕೊರಳಒಲವುಂಡಮರ ಧನ್ಯತೆಅನುಭವಿಸಿತುಒಲವ ಗಾಳಿತಲೆದೂಗಿತು -5- ಉಸಿರು ಕದ್ದವಳೇಎಲ್ಲಿಹೋದೆಉಸಿರುಬೆಸೆಯಬೇಕಿದೆಇಲ್ಲಿಇಲ್ಲೇ ಪಕ್ಕದಲ್ಲಿಪಾರಿವಾಳಗಳುಚಳಿಗೆ ಗುಟುರುಹಾಕಿಬೆಸೆದುಕೊಂಡಿವೆ -6-ಚಳಿಗೆದಾರಿ ಸಹಮುದುಡಿಕೊಂಡಿದೆಉರಿವ ಒಲೆಯಮುಂದೆಹೊಸೆವ ಕೈಗಳುವಿರಹಗೊಂಡಿವೆ -7-ಕೆನ್ನೆಯಮೇಲಿನ ಕೈ ಬೆರಳುಬಿಸಿ ಉಸಿರನೆನೆದುಪಿಸು ಮಾತಬಯಸಿತು… -8-ಬೆಳಗ್ಗೆ ಕೆನ್ನೆಗೆತಾಗಿದ ತಣ್ಣೀರುಎಳೆ ಬಿಸಿಲಸ್ಪರ್ಶಆಕೆಯನೆನಪಿಸಿದವು -9- ಕಪ್ಪು ಆಗಸದಿಬೆಳುದಿಂಗಳಹಾಸಿಗೆಆಕೆಯ ಸೆರಗು -10- ಬಿಸಿ ಬಿಸಿಚಹಾ ದೊಂದಿಗೆಎದೆಗೆ ಬಿತ್ತುಸಾಂಸ್ಕೃತಿಕ ಕಣ್ಣು ***********************

ನಿರಾಕಾರ ಶಕ್ತಿ

ನಿರಾಕಾರ ಶಕ್ತಿ ಮಾಲಾ.ಮ.ಅಕ್ಕಿಶೆಟ್ಟಿ. ವಿಘ್ನಗಳ ನಾಶ,ಸುಖ ದುಃಖ ಕೊಡುವಪರೀಕ್ಷೆ ನಡೆಸುವ, ಸಕಲ ಪೊರೆವಶ್ರೇಷ್ಠ ದೇವ ದೇವತೆಗಳು ಅನಂತದಲಿ ಹುಲುಮಾನವನ ಬುದ್ಧಿ ನಿನ್ನ ಸೃಷ್ಟಿಕೈಚಳಕ ನಿಮಗೊಂದು ಆಕಾರದ ಕೊಡುಗೆಬಿಂಕದಲಿ ಬೀಗುವ ನಿಮ್ಮನ್ನು ನೋಡಿ ಅಭಯ ಹಸ್ತ ಸದಾ ನಮಗೆಹಣೆ ಪಟ್ಟಿ ಮೂರ್ಖರುಬಟ್ಟೆ ಬರೆಗಳಿಂದ,ಬಂ‌ಗಾರ ಬೆಳ್ಳಿಯಿಂದವಿಶಾಲ ಎಕರೆಯಲ್ಲಿ ದೊಡ್ಡ ಗುಡಿ ಕಟ್ಟಿಸಿಭಾರೀ ವಜ್ಜನಿನ ಕೀಲಿ ಹಾಕಿ, ಕಾವಲುಗಾರ ನೇಮಿಸಿನಾವೇ ನಿನ್ನನ್ನು ರಕ್ಷಿಸಿದ್ದೇವೆಂದರೆ ದೇವರು ದಿನ್ನರುಗಳು ಕಪೋಲಕಲ್ಪಿತವಾದಗಳು ಹೆಚ್ಚುಇರಲಿ, ಕಾಣದ ಶಕ್ತಿ ಜಗತ್ತಿನಲ್ಲಿನಿನ್ನ ರೂಪದಲ್ಲಿ ಇರಬಾರದೇಕೆ? ರಕ್ಷಿಸುಸದಾ ನಮ್ಮನ್ನು ಹೀಗೆಯೇನಿರಾಕಾರ ಶಕ್ತಿಗೆ […]

ಗಜಲ್

ಗಜಲ್ ಅರುಣಾ ನರೇಂದ್ರ ನೀ ಹಚ್ಚಿಕೊಳ್ಳುವ ಅತ್ತರಿನದೆ ವಾಸನೆ ಬರುತಿದೆ ಎಲ್ಲಿರುವಿಮೋಹಬ್ಬತ್ತಿನ ಈ ಹಾಡಲ್ಲಿ ನಿನ್ನದೇ ಧ್ವನಿ ಕೇಳುತಿದೆ ಎಲ್ಲಿರುವಿ ಮುಂಜಾನೆಯ ಮಂಜಿನ ಹನಿಗೂ ಕಣ್ಣ ಕನಸುಗಳಿವೆಆಗಸದ ಹಾಳೆಯಲಿ ನೀ ಬರೆದ ಚಿತ್ರ ಕಾಣುತಿದೆ ಎಲ್ಲಿರುವಿ ಮುಂಗುರುಳ ತೀಡುವ ತಂಗಾಳಿ ಇಂದೇಕೋ ಹಠ ಮಾಡುತಿದೆಇಲ್ಲಿ ನೀ ನಡೆದಾಡಿದ ಹೆಜ್ಜೆಗಳ ಗುರುತಿದೆ ಎಲ್ಲಿರುವಿ ಧುಮ್ಮಿಕ್ಕುವ ಪ್ರವಾಹಕ್ಕೆ ಗೋಡೆ ಕಟ್ಟಲಾಗುತ್ತಿಲ್ಲನಿನ್ನ ನಗೆಯ ಅಲೆ ಎದೆಗೆ ಅಪ್ಪುತಿದೆ ಎಲ್ಲಿರುವಿ ಎದುರಿನಲಿ ಸಿಕ್ಕು ಬಿಡು ಒಮ್ಮೆ ಹೀಗೇಕೆ ಹಿಂಬಾಲಿಸುತ್ತಿಅರುಣಾಳ ಅಂತರಾತ್ಮ ನಿನ್ನನ್ನೇ ಧ್ಯಾನಿಸುತಿದೆ […]

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು ಸರಿತಾ ಮಧು ಚುನಾವಣೆಗಳೆಂದರೆ ಹಬ್ಬಪ್ರಜಾಪ್ರಭುತ್ವದ್ದೂ , ಜನಗಳದ್ದೂಪ್ರತಿವರ್ಷವೂ ಆಚರಣೆಯೇಗ್ರಾಮ, ತಾಲ್ಲೂಕು, ಜಿಲ್ಲೆಗಳೂಹೊರತಲ್ಲ ಒಂದಾಗಿದ್ದ ಊರೊಳಗೆ ಜಾತಿಯ ತಂದಿಟ್ಟುಭಿನ್ನತೆಯ ಪ್ರತೀಕವಾದರು ನಮ್ಮವರು , ನಮ್ಮ ಜನಗಳು ಹೆಂಡ ಹಣದ ಹೊಳೆಯಲಿಮುಳುಗೆದ್ದರು , ಮೈಮರೆತರುಹಗಲು ಇರುಳುಗಳ ಲೆಕ್ಕಿಸದೆನಮ್ಮವರು , ನಮ್ಮ ಜನಗಳು ಆಮಿಷವೋ, ಮತ್ತೊಂದೋಮತಗಳು ಬಿಕರಿ ಮಾಡಿಯೇ ಬಿಟ್ಟರುಚುನಾವಣಾ ಸಂತೆಯಲ್ಲಿನಮ್ಮವರು, ನಮ್ಮ ಜನಗಳು ಯಾವುದಕ್ಕಾಗಿ ಹೋರಾಟಈ ಹಾರಾಟ, ಮಾರಾಟತಮ್ಮತನವ ಅಡವಿಟ್ಟು ನಿಂತರಲ್ಲನಮ್ಮವರು, ನಮ್ಮ ಜನಗಳು ಮುಸುಕಿನೊಳಗಿನ ಗುದ್ದಾಟನಗೆಯ ಮರೆಯಲ್ಲಿ ಹಗೆಯಹೊಗೆಯಾಟಮನದೊಳಗೆ ಮತ್ಸರದ ಅಗ್ನಿಪರ್ವತದ ಪ್ರತೀಕವಾದರುನಮ್ಮವರು, […]

ನೆತ್ತರಿನ ಮಳೆ ಬಿದ್ದು….

ನೆತ್ತರಿನ ಮಳೆ ಬಿದ್ದು…. ಅಲ್ಲಾಗಿರಿರಾಜ್ ಕನಕಗಿರಿ ನೆತ್ತರಿನ ಮಳೆ ಬಿದ್ದುಮೈ ಮನಸು ಕೆಂಪಾದವೋ. ಕಪ್ಪಾದ ಮೋಡದಲ್ಲಿಕೆಂಪಾದ ಮಿಂಚೊಂದು ಹರಿದು.ಊರು ಕೇರಿ ಕೆಂಪಾದವೋ. ಬಿಸಿಲುಂಡ ನೆಲದಾಗ ನದಿಯೊಂದುಕೆಂಪಾಗಿ ಕಾಡು ಮೇಡು ಕೆಂಪಾದವೋ. ಬರಗಾಲಕ್ಕೆ ಹುಟ್ಟಿದ ಕೂಸುಎದೆಯ ರಕುತ ಕುಡಿದುತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ. ದಿಲ್ಲಿ ಗಡಿಗಳಲ್ಲಿಕೊರೆಯುವ ಚಳಿ ಬಿಸಿಯಾಗಿರೈತರ ಹೊಲಗದ್ದೆಗಳು ಕೆಂಪಾದವೋ. ಬಿಳಿ ಹಾಳೆಯ ಮೇಲೆ ಕವಿಯಅಕ್ಷರದ ಸಾಲುಗಳು ಹಸಿದವರದನಿ ಕೇಳಿ ಕೆಂಪಾದವೋಎಲ್ಲ ಕೆಂಪಾದವೋ……… **********************************

ನಮ್ಮ ರೈತ

ಭಾಮಿನಿ ಷಟ್ಪದಿ ನಮ್ಮ ರೈತ ಅಭಿಜ್ಞಾ ಪಿ ಎಮ್ ಗೌಡ ಲೋಕ ಬೆಳಗುವ ದಿವ್ಯ ಮೂರ್ತಿಯುನಾಕ ಮಾಡುತ ಧರೆಯ ಮಡಿಲನುದೇಕುತಿರುತಿಹ ನಿತ್ಯ ಹೊಲದಲಿದಣಿದ ಜೀವವಿದು|ನೂಕು ನುಗ್ಗಲು ಜನರ ಗುಂಪಲುಬೇಕು ಬೇಡುವನರಿತು ಸಾಗುವಬಾಕಿಯುಳಿಸದೆ ಭುವಿಯ ಕಾರ್ಯವಮಾಡೊ ನಿಸ್ವಾರ್ಥಿ|| ಹಸಿರ ಸೇಚಿಸಿ ಚಂದ ಗೊಳಿಸುತನಸುಕು ಕಾಲದೊಳೆದ್ದು ದುಡಿಯುತಕೆಸರು ಧರಣಿಗೆ ಚೆಲುವ ಮಾಡಿನಿಂತು ನೋಡಿಹನು|ಸಸಿನೆಯಿಂದಲೆ ಹಸನು ಮಾಡಿಸಿಬೆಸೆದ ಬಂಧವ ಗಟ್ಟಿಗೊಳಿಸುತತಸಕುಗೊಳ್ಳುವ ಪಾಪ ರೈತನುನಿತ್ಯ ಮರುಗುವನು|| ಭವದ ಭಯವನು ಸಹಿಸಿಕೊಳ್ಳುತದವನ ಸೂಸುವ ಬೆಳೆಯ ಬೆಳೆಯುತಸವಿದ ಭಾವದ ದಿವ್ಯ ಹೂರಣಮೆಚ್ಚಿ ನಡೆಯುವನು|ತವಕದಿಂದಲೆ ಕುಗ್ಗಿ ಹೋಗುವಬೆವರ […]

ಆಲದ ಮರದ ಅಳಲು

ಕವಿತೆ ಆಲದ ಮರದ ಅಳಲು ನೂತನ ದೋಶೆಟ್ಟಿ ನಾನೊಂದು ಆಲದ ಮರ ಅಜ್ಜ ನೆಟ್ಟಿದ್ದಲ್ಲಬಿಳಲ ಬಿಟ್ಟು ಬೆಳೆದೆ, ಹರಡಿದೆ ಬಯಲ ತುಂಬ ನಾನು ಬೆರಳ ಚಾಚಿ ನಿಂತಿದ್ದೇನೆಅದರ ದಿಕ್ಕು ಬಯಲಿನಾಚೆಗಿದೆ!ಆ ಬೆರಳ ತುದಿಯವರೆಗೆ ನೋಡಿದಿರಿ, ನಡೆದಿರಿಅಲ್ಲೇ ಗುಂಪಾದಿರಿಓಟವಿನ್ನೂ ಮುಗಿದಿಲ್ಲಇದು ದೂರದಾರಿ ಗೆಳೆಯರೆ ಗಡಿರೇಖೆಗಳ ಅಳಿಸಿದಾಗನಾನು ಒಬ್ಬನೇ ಇದ್ದೆಬುದ್ಧನಿಗೆ ಹತ್ತಿರವಾದೆಅವನೂ ಆಲೂ ತಾನೆ? ನಾನು , ಬುದ್ಧ ಕೇಳಬೇಕಿದೆ ನಿಮ್ಮನ್ನುನಮ್ಮ ಬಿಳಲುಗಳ ಅಂಟಿಕೊಂಡಿರಿನೀವೇಕೆ ಆಲವಾಗಲಿಲ್ಲ? ಸಂವಿಧಾನವ ಕೇಳಿ ನೋಡಿನಾನು ಹೋರಾಡಿದ್ದುಕರ್ತವ್ಯ ಮಾಡುತ್ತಕಾಯಕ ದೇವರು ನನಗೆದೇವರ ಮರೆತ ಹಕ್ಕಿಗೆ ಯಾವ […]

ಗೊಲ್ಲರ ರಾಮವ್ವ

ಅನುವಾದಿತ ಕಥೆ ಗೊಲ್ಲರ ರಾಮವ್ವ(ಭಾಗ- ಒಂದು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಪಿ.ವಿ.ನರಸಿಂಹರಾವ್ ತಮ್ಮ ಮಾತೃಭಾಷೆಯಾದ ತೆಲುಗಿನಲ್ಲೇ ಅಲ್ಲದೇ ಹಿಂದಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ತೆಲುಗಿನಲ್ಲಿ ಜ್ಞಾನ ಪೀಠ ಪ್ರಶಸ್ತಿ‌ ಪಡೆದ ವಿಶ್ವನಾಥ ಸತ್ಯನಾರಾಯಣ ಅವರವೇಯಿ ಪಡಗಲು (ಸಾವಿರ ಹೆಡೆ) ಕಾದಂಬರಿಯನ್ನು ಹಿಂದಿಗೆ “ಸಹಸ್ರ ಫಣ್” ಎಂಬ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಮತ್ತೆ ಮರಾಠಿಯ ಹರಿನಾರಾಯಣ ಆಪ್ಟೆಯವರ ” ಪಣ್ ಲಕ್ಷ್ಯತ್ ಕೋಣ್ ಘೇತೊ ಕಾದಂಬರಿಯನ್ನು ತೆಲುಗಿಗೆ […]

ಉಳಿದ ಸಾರ್ಥಕತೆ!

ಕವಿತೆ ಉಳಿದ ಸಾರ್ಥಕತೆ! ಸುಮನಸ್ವಿನಿ ನೀ ಅರ್ಧ ನಕ್ಕು ಉಳಿಸಿದಸಣ್ಣನಗು ನಾನು,ಸ್ವಲ್ಪ ಓದಿ ಕಿವಿ ಮಡಚಿಟ್ಟಹಳೇ ಪುಸ್ತಕ.. ನೀ ಅಷ್ಟುದ್ದ ನಡೆದು ಮಿಗಿಸಿದಕಾಲುಹಾದಿ ನಾನು,ಚೂರೇ ಅನುಭವಿಸಿ ಎದ್ದುಹೋದಸಂಜೆ ಏಕಾಂತ.. ನೀ ತುಸು ಹೊತ್ತೇ ಕೈಯಲಿಟ್ಟುನಲಿದ ಹೂ ನಾನು,ತೃಪ್ತಿಯಾದಷ್ಟು ಸವಿದು ಇರಿಸಿದದೇವಳದ ಪ್ರಸಾದ. ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂದಾರಿಬದಿಯ ಮೈಗಲ್ಲಿನಂತೆಮಿಕ್ಕುಳಿದ ಸಾರ್ಥಕತೆಯತುಂಬಿಕೊಳುವ ನಿರೀಕ್ಷೆಯಲಿ! ****************

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ […]

Back To Top