ಜೀವನ
ಕವಿತೆ ಜೀವನ ಭಾರತಿ ರವೀಂದ್ರ ನೋವು ನಲಿವುಗಳನೆರಳು ಬೆಳಕಿನ ಜೋಕಾಲಿ ಈ ಜೀವನ. ಹುಣ್ಣಿಮೆಯ ಕಂಡುಉಕ್ಕಿ ಬರುವ ಸಾಗರ ದಷ್ಟೇ ಅಗಾಧ ಈ ಜೀವನ. ಸುರಿಯೋ ಸೋನೆಗೆಹೆಜ್ಜೆ ಹಾಕೋ ನವಿಲಿನಕಾಲ್ಗೆಜ್ಜೆಯ ದನಿಯ ಹಾಗೆಸದ್ದೇ ಇಲ್ಲದ ಹೆಜ್ಜೆಯಸಂಗೀತ ದಂತೆ ಈ ಜೀವನ. ಬಡತನದ ಬೇಗೆ ಇರಲಿಸಿರಿತನದ ಸೊಬಗಿರಲಿಪ್ರೀತಿಯ ಹೊನಲಾಗಲಿಈ ಜೀವನ. ಸಂತೃಪ್ತಿಯ ಮನಕೆಸಿರಿತನದ ಸೋಗು ಇರದು ಒಲವೇ ನಲಿವುಈ ಜೀವನ **********************************
ಗಜಲ್
ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, […]
ಕಾವ್ಯಯಾನ
ಮತ್ತೆ ನೆನಪಾಗುತ್ತಿದೆ ಚಂದ್ರು ಪಿ ಹಾಸನ್ ಮತ್ತೆ ನೆನಪಾಗುತ್ತಿದೆ, ನನ್ನ ಬಾಲ್ಯದೊಳುಕಳೆದ ದಿನಗಳು ಸುಂದರ ಆ ಮಧುರ ಕ್ಷಣಗಳುಕೆದಕಿದೆನು ನಾ ಇಂದು ಒಂದೊಂದು ಮನದೊಳುಚಿತ್ರಿಸಲೊರಟೆ ಸಾಲುಗಳಲ್ಲಿ ಆಕ್ಷಣಗಳ ಮುದದೊಳು ಮತ್ತೆ ನೆನಪಾಗುತ್ತಿದೆ, ನಾಲ್ಕೆಜ್ಜೆಯ ಮುಗ್ದ ಸಾಲುಅಮ್ಮನ ತೋಳು ಅದು ಸಂತಸದ ಸಾಲುರಾಜ ಸಿಂಹಾಸನ ನನ್ನ ತಾಯಿಯ ಮಡಿಲುಕುಣಿದು ಕುಪ್ಪಳಿಸಿದೆ ಪಡೆದೆ ಕೈತುತ್ತು ಅಲ್ಲಿ ನೆನಪಾಗುತ್ತಿದೆ ವಿದ್ಯಾರ್ಜನೆಯ ಆರಂಭಪ್ರಾಥಮಿಕ ಶಾಲೆಯ ಗಂಟೆ ಸದ್ದುಕೇಳಿದೊಡನೆ ಅಡ್ಡಗದ್ದೆ ಬಯಲಲ್ಲಿಓಡುತ್ತಿದ್ದೆವು ಗುಂಪಾಗಿ ಎದ್ದು-ಬಿದ್ದು ಮತ್ತೆ ನೆನಪಾಗುತ್ತಿದೆ, ಶಾಲೆಯ ಸಂಜೆಗಳುಅಣ್ಣನ ತೋಳು ಪ್ರತಿಸಂಜೆ ನಾ […]
ಪ್ರವಾಸ ಕಥನ
ಜಾರಕಬಂಡೆಕಾವಲ್ ವೃಕ್ಷ ಉದ್ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ ನಿಸರ್ಗಾರಾಧಕರಿಗೆ […]
ಅಂಕಣ ಬರಹ ಸುಜಾತಾ ಎನ್. ರವೀಶ್ ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ. ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ […]