ಇಬ್ಬನಿಯ ಹನಿಗಳು

ಇಬ್ಬನಿಯ ಹನಿಗಳು

Selective Focus Photo of Dew of Water on Plant

ನಾಗರಾಜ ಹರಪನಹಳ್ಳಿ.

-1-
ರಂಗೇರಿತು ಕೆನ್ನೆ
ನೀ ಬಂದ
ಸುಳಿವು ಸಿಕ್ಕಿರಬೇಕು
ಒಲವಿಗೆ

-2-
ಎಲೆ ಅಲುಗುತ್ತಿಲ್ಲ
ಕತ್ತಲ ಆವರಣ
ಭೂಮಿ
ಒಬ್ಬಂಟಿಯಾಗಿದೆ

-3-
ಹೆಜ್ಜೆಗಳಿಗೆ
ಎದೆಗೊಟ್ಟಿದೆ
ದಾರಿ
ಒಲವಿಲ್ಲದ ಬದುಕು
ಮೌನ ಇರುಳು

Green Grass and Water Droplet

-4-
ಹಕ್ಕಿಗಳ ಕೊರಳ
ಒಲವುಂಡ
ಮರ ಧನ್ಯತೆ
ಅನುಭವಿಸಿತು
ಒಲವ ಗಾಳಿ
ತಲೆದೂಗಿತು

-5-

ಉಸಿರು ಕದ್ದವಳೇ
ಎಲ್ಲಿಹೋದೆ
ಉಸಿರು
ಬೆಸೆಯಬೇಕಿದೆ
ಇಲ್ಲಿ
ಇಲ್ಲೇ ಪಕ್ಕದಲ್ಲಿ
ಪಾರಿವಾಳಗಳು
ಚಳಿಗೆ ಗುಟುರು
ಹಾಕಿ
ಬೆಸೆದುಕೊಂಡಿವೆ

-6-
ಚಳಿಗೆ
ದಾರಿ ಸಹ
ಮುದುಡಿಕೊಂಡಿದೆ
ಉರಿವ ಒಲೆಯ
ಮುಂದೆ
ಹೊಸೆವ ಕೈಗಳು
ವಿರಹಗೊಂಡಿವೆ

-7-
ಕೆನ್ನೆಯ
ಮೇಲಿನ ಕೈ ಬೆರಳು
ಬಿಸಿ ಉಸಿರ
ನೆನೆದು
ಪಿಸು ಮಾತ
ಬಯಸಿತು…

-8-
ಬೆಳಗ್ಗೆ ಕೆನ್ನೆಗೆ
ತಾಗಿದ ತಣ್ಣೀರು
ಎಳೆ ಬಿಸಿಲ
ಸ್ಪರ್ಶ
ಆಕೆಯ
ನೆನಪಿಸಿದವು

-9-

ಕಪ್ಪು ಆಗಸದಿ
ಬೆಳುದಿಂಗಳ
ಹಾಸಿಗೆ
ಆಕೆಯ ಸೆರಗು

-10-

ಬಿಸಿ ಬಿಸಿ
ಚಹಾ ದೊಂದಿಗೆ
ಎದೆಗೆ ಬಿತ್ತು
ಸಾಂಸ್ಕೃತಿಕ ಕಣ್ಣು

***********************

Leave a Reply

Back To Top