ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ದುಃಖವ ನೇವರಿಸುವೆನೊಮ್ಮೆ ನಾಗರಾಜ್ ಹರಪನಹಳ್ಳಿ ನಿನ್ನ ಬೆರಳ ಹಿಡಿದು ಮಾತಾಡಿಸುವೆಅವುಗಳಿಗೆ ಅಂಟಿದ ದುಃಖವಸಂತೈಸಿ ನೇವರಿಸುವೆನೊಮ್ಮ ಉಸಿರೇ ನೀ ನನ್ನವಳು ನಿನ್ನ ಮುಂಗುರುಳ ಮೂಗಿನ ಮೇಲಿಂದ ಹಿಂದೆ ಸರಿಸಿ, ಕಿವಿಯ ಸಂದಿಯಲಿ ಸಿಕ್ಕಿಸಿ, ತಂಟೆ ತಕರಾರು ಮಾಡಬೇಡಿ ಎಂದು ವಿನಂತಿಸುವೆನಾವಿಬ್ಬರೂ ಮಾತಾಡುವಾಗ ಬೆಳಕೇ ನೀ ನನ್ನವಳು ನಿನ್ನ ಕಿವಿಯೋಲೆಯ ವೈಯ್ಯಾರವ-ನೊಮ್ಮೆ ಹಿಡಿದು ಮಾತಾಡಿಸುವೆನಮ್ಮಿಬ್ಬರ ಮಾತಿನ ಮಧ್ಯೆನೀವೇಕೆ ಇಣುಕುವುದೆಂದುಜೋರು ಮಾಡುವೆ ..ನಾವಿಬ್ಬರೂ ಪಿಸುಮಾತುನಾಡುವ ಮಧ್ಯೆಅವುಗಳ ಪ್ರಶ್ನಿಸುವೆ ಒಲವೇ ನೀ ನನ್ನವಳು ನಿನ್ನ ಕೈ ಬಳೆ ಸದ್ದಿಗೆ ಪ್ರೀತಿಯಿಂದ ಎಚ್ಚರಿಸುವೆಅಪ್ತ ಮಾತಿನ ಮಧ್ಯೆಎಂಥ ಸದ್ದು ನಿಮ್ಮದು ??ಸುಮ್ಮನಿರೆಂದು ವಿನಂತಿಸುವೆ ಮೌನವೇ ನೀ ನನ್ನವಳು ಕಾಲಗೆಜ್ಜೆಗೆ ಬೆರಳಿಟ್ಟುನಮಿಸುವೆ , ನಾವು ಗಾಢ ಚುಂಬನದಲ್ಲಿರುವಾಗಸದ್ದು ಮಾಡಿ, ಜಗಕೆ ಗುಲ್ಲು ಎಬ್ಬಿಸಬೇಡಿರೆಂದು …ಕಾರಣ ಪ್ರೀತಿಯೆಂಬುದು ಗುಟ್ಟು ಜೀವದ್ರವ್ಯವೇ ನೀ ನನ್ನವಳೆಂದು *********************************************

ಕಾವ್ಯಯಾನ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಇಂತಹ ಅಗಾಧತೆಯಲ್ಲಿ ಸೂಜಿ ಮೊನೆಯ ಮಿದುಳಿನ ಮನುಷ್ಯ ಮತ್ತು ಆತನ ಮನಸ್ಸು, ತಾನು ಮಾತ್ರ ಜೀವಿ, ಇನ್ನುಳಿದ ಕಲ್ಲು, ಭೂಮಿ, ನಕ್ಷತ್ರ, ಆಕಾಶಗಳು ನಿರ್ಜೀವಿ ಎಂದು ನಿರ್ಧರಿಸುವಾಗ, ಆ ಪ್ರಜ್ಞೆ ಎಷ್ಟು ಸ್ವಕೇಂದ್ರಿತವಲ್ಲವೇ?.

Read Post »

You cannot copy content of this page

Scroll to Top